Sign In

By signing in or creating an account, you agree with Associated Broadcasting Company's Terms & Conditions and Privacy Policy.

Rupee Plunges: ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ: ಒಂದು ಡಾಲರ್​ ಈಗ 82.33 ರೂಪಾಯಿ

ಈ ವರ್ಷದಲ್ಲಿ ಭಾರತದ ರೂಪಾಯಿ ಅಮೆರಿಕದ ಡಾಲರ್ ಎದುರು ಒಟ್ಟಾರೆ ಶೇ 10ರಷ್ಟು ಮೌಲ್ಯ ಕಳೆದುಕೊಂಡಿದೆ.

Rupee Plunges: ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ: ಒಂದು ಡಾಲರ್​ ಈಗ 82.33 ರೂಪಾಯಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 07, 2022 | 10:17 AM

ಮುಂಬೈ: ಜಾಗತಿಕ ಕರೆನ್ಸಿ ವಹಿವಾಟಿನಲ್ಲಿ (Global Currency Market) ಭಾರತದ ರೂಪಾಯಿ ಮೌಲ್ಯವು  (Indian Rupee) ಅಮೆರಿಕದ ಡಾಲರ್ (US Dollor) ಎದುರು ಮತ್ತೊಮ್ಮೆ ದಾಖಲೆ ಮಟ್ಟಕ್ಕೆ ಕುಸಿದಿದೆ. ಶುಕ್ರವಾರ ಮುಂಜಾನೆ (ಅ 7) ಅಮೆರಿಕದ ಡಾಲರ್ ಡಾಲರ್​ ಎದುರು ರೂಪಾಯಿ 16 ಪೈಸೆ ಮೌಲ್ಯ ಕಳೆದುಕೊಂಡು, ₹ 82.33ಕ್ಕೆ ವಹಿವಾಟಾಗುತ್ತಿತ್ತು. ಒಪೆಕ್ ದೇಶಗಳ ಕಚ್ಚಾತೈಲ ಉತ್ಪಅದನೆ ಕಡಿತದ ಘೋಷಣೆ ಹಾಗೂ ಅಮೆರಿಕದ ಕೇಂದ್ರೀಯ ಬ್ಯಾಂಕ್ ‘ಫೆಡರಲ್ ರಿಸರ್ವ್​’ ಬಡ್ಡಿ ಹೆಚ್ಚಳ ಪ್ರಕ್ರಿಯೆ ಮುಂದುವರಿಸಬಹುದೆಂಬ ನಿರೀಕ್ಷೆ ಇದಕ್ಕೆ ಮುಖ್ಯ ಕಾರಣ. ವಿಶ್ವದ ಬಹುತೇಕ ದೇಶಗಳಲ್ಲಿ ಸುರಕ್ಷಿತ ಕರೆನ್ಸಿ ಎಂದು ಅಮೆರಿಕದ ಡಾಲರ್ ಖರೀದಿಗೆ ಹಲವು ದೇಶಗಳು ಮುಂದಾಗಿರುವುದರಿಂದ ಇತರ ದೇಶಗಳ ಕರೆನ್ಸಿಯೊಂದಿಗೆ ಭಾರತದ ಕರೆನ್ಸಿಯೂ ಮೌಲ್ಯ ಕಳೆದುಕೊಳ್ಳುತ್ತಿದೆ.

ಈ ವರ್ಷದಲ್ಲಿ ಭಾರತದ ರೂಪಾಯಿ ಅಮೆರಿಕದ ಡಾಲರ್ ಎದುರು ಒಟ್ಟಾರೆ ಶೇ 10ರಷ್ಟು ಮೌಲ್ಯ ಕಳೆದುಕೊಂಡಿದೆ. ಕರೆನ್ಸಿಯ ಮೌಲ್ಯ ಕಾಪಾಡಲು ಭಾರತೀಯ ರಿಸರ್ವ್​ ಬ್ಯಾಂಕ್ (ಆರ್​ಬಿಐ)​ ವಿದೇಶಿ ಮೀಸಲು ಮಾರಾಟಕ್ಕೆ ಮುಂದಾಗಿದೆ. ಆದರೂ ಅದರಿಂದ ಅಂಥ ಪ್ರಯೋಜನವಾಗುತ್ತಿಲ್ಲ.

ಇತ್ತೀಚೆಗಷ್ಟೇ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದ ಆರ್​ಬಿಐ, ಸತತ ನಾಲ್ಕನೇ ಬಾರಿಗೆ ಬಡ್ಡಿದರಗಳನ್ನು ಹೆಚ್ಚಿಸಿತ್ತು. ಬಡ್ಡಿದರ ಹೆಚ್ಚಳದಿಂದ ಉದ್ಯಮಿಗಳಿಗೆ ಸಾಲ ಲಭ್ಯತೆ ಕಠಿಣವಾಗುವುದರೊಂದಿಗೆ ಪಡೆದ ಬಂಡವಾಳಕ್ಕೆ ಪಾವತಿಸಬೇಕಾದ ಬಡ್ಡಿಯೂ ಹೆಚ್ಚಾಗುತ್ತಿದೆ. ಆಮದು ಮತ್ತು ರಫ್ತು ವಹಿವಾಟುಗಳಲ್ಲಿ ಅಂತರ ಹೆಚ್ಚಾಗುತ್ತಿದ್ದು, ರಫ್ತು ಪ್ರಮಾಣ ಕುಂಠಿತವಾಗುತ್ತಿರುವುದರಿಂದ ವಿದೇಶಿ ಮೀಸಲು ಸಂಗ್ರಹ ಕರಗುತ್ತಿದೆ. ಇದರ ಜೊತೆಗೆ ಒಟ್ಟಾರೆ ಅಂತರರಾಷ್ಟ್ರೀಯ ಆರ್ಥಿಕ ಪರಿಸ್ಥಿತಿಯಲ್ಲಿಯೇ ನಿಸ್ತೇಜ ವಾತಾವರಣ ಮೂಡಿದ್ದು, ಹಿಂಜರಿತದ ಭೀತಿ ವ್ಯಕ್ತವಾಗುತ್ತಿದೆ. ಭಾರತದ ಕರೆನ್ಸಿ ಮೌಲ್ಯ ಕುಸಿಯುವುದರ ಹಿಂದೆ ಈ ಎಲ್ಲ ಅಂಶಗಳೂ ಕೆಲಸ ಮಾಡಿವೆ.

Published On - 10:17 am, Fri, 7 October 22