AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC: ಷೇರುಪೇಟೆಯಲ್ಲಿ ಎಲ್​ಐಸಿಗೆ 1 ವರ್ಷ; ಷೇರು ಬೆಲೆ ಆಗೆಷ್ಟಿತ್ತು, ಈಗೆಷ್ಟಿದೆ?

1 Year Of LIC Stock: ಅಬ್ಬರದಿಂದ ಐಪಿಒಗೆ ಇಳಿದ ಎಲ್​ಐಸಿ ಷೇರು ಒಂದು ವರ್ಷದಲ್ಲಿ 300 ರುಪಾಯಿಗೂ ಹೆಚ್ಚು ಮೊತ್ತದಷ್ಟು ಕಡಿಮೆ ಬೆಲೆಗೆ ಬಿಕರಿ ಆಗುತ್ತಿದೆ. ಸರಿಯಾಗಿ ಒಂದು ವರ್ಷದ ಹಿಂದೆ ಎಲ್​ಐಸಿ ಷೇರು ಮಾರುಕಟ್ಟೆಯಲ್ಲಿ 867 ರುಪಾಯಿಗೆ ಲಿಸ್ಟ್ ಆಗಿತ್ತು.

LIC: ಷೇರುಪೇಟೆಯಲ್ಲಿ ಎಲ್​ಐಸಿಗೆ 1 ವರ್ಷ; ಷೇರು ಬೆಲೆ ಆಗೆಷ್ಟಿತ್ತು, ಈಗೆಷ್ಟಿದೆ?
ಎಲ್​ಐಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 17, 2023 | 5:38 PM

Share

ನವದೆಹಲಿ: ಭಾರತದ ಅತಿದೊಡ್ಡ ವಿಮಾ ಸಂಸ್ಥೆ ಎನಿಸಿದ ಮತ್ತು ಯಾವತ್ತೂ ನಷ್ಟವನ್ನೇ ಕಾಣದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (LIC) ಷೇರುಪೇಟೆಗೆ ಪ್ರವೇಶ ಮಾಡಿದರೆ ಹೇಗಿದ್ದೀತು. ಧಾಮ್ ಧೂಮ್ ನಿರೀಕ್ಷಿಸುವುದು ಸಹಜ. ಒಂದು ವರ್ಷದ ಹಿಂದೆ ಎಲ್​ಐಸಿ ಐಪಿಒಗೆ ಬಂದಾಗ ಆಗಿದ್ದು ಇದೇ ಧಾಮ್ ಧೂಮ್ ಆಟ. ಬರೋಬ್ಬರಿ 21,000 ಕೋಟಿ ರುಪಾಯಿಯ ಐಪಿಒ. ಇದು ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಕಂಡಿರುವ ಅತಿದೊಡ್ಡ ಐಪಿಒ. ಅಬ್ಬರದಿಂದ ಐಪಿಒಗೆ ಇಳಿದ ಎಲ್​ಐಸಿ ಷೇರು ಒಂದು ವರ್ಷದಲ್ಲಿ 300 ರುಪಾಯಿಗೂ ಹೆಚ್ಚು ಮೊತ್ತದಷ್ಟು ಕಡಿಮೆ ಬೆಲೆಗೆ ಬಿಕರಿ ಆಗುತ್ತಿದೆ.

ವರ್ಷದ ಹಿಂದೆ ಎಲ್​ಐಸಿ ಐಪಿಒನಲ್ಲಿ ಜನರು ಮುಗಿಬಿದ್ದು ಷೇರುಗಳನ್ನು ಖರೀದಿಸಿದರು. ಇದು ನಿರೀಕ್ಷಿತವೇ. ಆದರೆ, ಅಚ್ಚರಿ ಎದುರಾಗಿದ್ದು ಅದಾದ ಬಳಿಕವೇ. ಐಪಿಒಗೆ ಭರ್ಜರಿ ಸ್ಪಂದನೆ ಪಡೆದ ಎಲ್​ಐಸಿ ಷೇರುಮಾರುಕಟ್ಟೆಗಳಲ್ಲಿ ಲಿಸ್ಟ್ ಆಗುವಾಗ ಅಚ್ಚರಿ ಶುರುವಾಗಿದ್ದು. ಐಪಿಒ ಬೆಲೆಗಿಂತ ಶೇ. 8ರಷ್ಟು ಕಡಿಮೆ ಬೆಲೆಯಲ್ಲಿ ಎಲ್​ಐಸಿ ಷೇರುಗಳು ಲಿಸ್ಟ್ ಆದವು.

ಎಲ್​ಐಸಿ ಷೇರು ಲಿಸ್ಟ್ ಆಗಿದ್ದು ಯಾವಾಗ, ಯಾವ ಬೆಲೆಗೆ?

ಭಾರತೀಯ ಜೀವ ವಿಮಾ ನಿಗಮದ ಐಪಿಒಗೆ ಆಫರ್ ಮಾಡಲಾಗಿದ್ದ ಷೇರುಗಳಿಗೆ 3 ಪಟ್ಟು ಹೆಚ್ಚು ಬೇಡಿಕೆ ಇತ್ತು. 949 ರುಪಾಯಿ ಬೆಲೆಗೆ ಐಪಿಒನಲ್ಲಿ ಖರೀದಿಸಲಾಯಿತು. ಆದರೆ, 2022 ಮೇ 17ರಂದು ಬಿಎಸ್​ಇ ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡುವಾಗ ಎಲ್​ಐಸಿ ಷೇರುಬೆಲೆ ಶೇ. 8.62ರಷ್ಟು ಕಡಿಮೆ ಆಯಿತು. 949 ರೂ ಬದಲು 867.20 ರೂ ಬೆಲೆಗೆ ಲಿಸ್ಟ್ ಆಯಿತು.

ಇದನ್ನೂ ಓದಿAdani: ಆರಲ್ಲ, ಮೂರು ತಿಂಗಳು ಮಾತ್ರ ಟೈಮ್; ಅದಾನಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೆಬಿಗೆ ಆಗಸ್ಟ್ 14 ಗಡುವು

ಎಲ್​ಐಸಿ ಷೇರು ಬೆಲೆ ಈಗ ಎಷ್ಟಿದೆ?

ಷೇರು ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿ ಮಕಾಡೆ ಮಲಗಿದ ಪ್ರಮುಖ ಕಂಪನಿಗಳಲ್ಲಿ ಪೇಟಿಎಂ ಇತ್ಯಾದಿ ಸಾಲಿನಲ್ಲಿ ಎಲ್​ಐಸಿಯೂ ಇದೆ. 867 ರುಪಾಯಿಗೆ ಲಿಸ್ಟ್ ಆಗಿದ್ದ ಇದರ ಷೇರುಬೆಲೆ ಮೇ 17 ಬುಧವಾರ ಬೆಳಗಿನ ವಹಿವಾಟಿನಲ್ಲಿ 567 ರುಪಾಯಿಗೆ ಬಂದಿಳಿದಿತ್ತು. ಒಂದು ವರ್ಷದಲ್ಲಿ ಬರೋಬ್ಬರಿ 300 ರೂನಗಳಷ್ಟು ಬೆಲೆ ಕುಸಿತ ಕಂಡಿದೆ ಎಲ್​ಐಸಿ ಷೇರು.

ಎಲ್​ಐಸಿ ಐಪಿಒದಲ್ಲಿ ಇದ್ದ 949 ರೂ ದರಕ್ಕೆ ಹೋಲಿಸಿದರೆ 382 ರುಪಾಯಿಯಷ್ಟು ಬೆಲೆ ಕಡಿಮೆ ಆಗಿದೆ. ಈ ಒಂದು ವರ್ಷದ ಅವಧಿಯಲ್ಲಿ ಎಲ್​ಐಸಿ ಷೇರು ಬೆಲೆ 918.95 ರೂಗಳ ಗರಿಷ್ಠ ಮಟ್ಟ ಮುಟ್ಟಿತ್ತು. ಹಾಗೆಯೇ 530 ರುಪಾಯಿಗೂ ಕುಸಿದಿತ್ತು. ಇಂದು ಮೇ 17 ಬುಧವಾರ ಸಂಜೆ ವೇಳೆಗೆ ಎಲ್​ಐಸಿ ಷೇರು ಬೆಲೆ ತುಸು ಹಿಗ್ಗಿ 570 ರುಪಾಯಿಗೆ ಹೋಗಿದೆ. ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದರಿಂದ ಎಲ್​ಐಸಿ ಷೇರುಬೆಲೆ ಈ ವರ್ಷ 565 ರುಪಾಯಿಯವರೆಗೆ ಮಾತ್ರ ಹೋಗಬಹುದು ಎಂದು ತಜ್ಞರು ಏಪ್ರಿಲ್ ತಿಂಗಳಲ್ಲಿ ಅಂದಾಜು ಮಾಡಿದ್ದರು. ಆದರೆ, ಆ ಲೆಕ್ಕಾಚಾರ ಮೀರಿ ಈಗ 570 ರುಪಾಯಿಗೆ ಹೋಗಿ ಮುಟ್ಟಿದೆ. ಮುಂದಿನ ದಿನಗಳಲ್ಲಿ ಷೇರುಪೇಟೆಯಲ್ಲಿ ಎಲ್​ಐಸಿ ಎಷ್ಟು ವೇಗವಾಗಿ ವೃದ್ದಿ ಕಾಣುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ