Bank Interest: ಬಡ್ಡಿದರ ಹೆಚ್ಚಿಸಿದ ಐಸಿಐಸಿಐ ಬ್ಯಾಂಕ್, ಪಿಎನ್​ಬಿ, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್

MPC: ಕೆನರಾ ಬ್ಯಾಂಕ್ ತನ್ನ ರೆಪೊ ರೇಟ್​ ಅನ್ನು 50 ಮೂಲಾಂಶದಷ್ಟು ಹೆಚ್ಚಿಸಿದ್ದು ಶೇ 8.30ಗೆ ನಿಗದಿಪಡಿಸಿದೆ. ಆಗಸ್ಟ್ 7ರಿಂದ ಹೊಸ ದರಗಳು ಅನ್ವಯವಾಗುತ್ತವೆ.

Bank Interest: ಬಡ್ಡಿದರ ಹೆಚ್ಚಿಸಿದ ಐಸಿಐಸಿಐ ಬ್ಯಾಂಕ್, ಪಿಎನ್​ಬಿ, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 08, 2022 | 1:22 PM

ಬೆಂಗಳೂರು: ಭಾರತೀಯ ರಿಸರ್ವ್​ ಬ್ಯಾಂಕ್​ನ (Reserve Bank of India – RBI) ಹಣಕಾಸು ನಿರ್ವಹಣಾ ಸಮಿತಿ (Monetary Policy Committee – MPC) ರೆಪೊ ದರವನ್ನು 50 ಮೂಲಾಂಶಗಳಷ್ಟು (50 bps) ಹೆಚ್ಚಿಸಿದ ಬೆನ್ನಲ್ಲೇ ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಕೆನರಾ ಬ್ಯಾಂಕ್​ಗಳು ಸಾಲ ಮತ್ತು ಠೇವಣಿ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ರೆಪೊ ದರಗಳ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಲು ಈ ಬ್ಯಾಂಕ್​ಗಳುಕ್ರಮ ತೆಗೆದುಕೊಂಡಿವೆ.

ಬ್ಯಾಂಕ್ ಬರೋಡ ಚಿಲ್ಲರೆ ಸಾಲಗಳ ಬಡ್ಡಿದರವನ್ನು ಶೇ 7.95ಕ್ಕೆ ನಿಗದಿಪಡಿಸಿದೆ. ರೆಪೊ ದರದ ಶೇ 2.55ರಷ್ಟು ಹೆಚ್ಚಿನ ಮಟ್ಟದಲ್ಲಿ ಈ ಬಡ್ಡಿದರವಿದೆ. ಐಸಿಐಸಿಐ ಬ್ಯಾಂಕ್​ನ ಹೊರ ಸಾಲಗಳನ್ನು (ICICI Externatl Benchmark Lending Rate – I-EBLR) ಬೆಂಚ್​ಮಾರ್ಕ್​ ಸಾಲದ ದರಕ್ಕೆ ಶೇ 9.10ರ ಬಡ್ಡಿ ನಿಗದಿಪಡಿಸಿದೆ. ಆಗಸ್ಟ್ 5ರಿಂದಲೇ ಹೊಸ ದರಗಳು ಅನ್ವಯವಾಗಲಿವೆ ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ.

ಕೆನರಾ ಬ್ಯಾಂಕ್ ತನ್ನ ರೆಪೊ ರೇಟ್​ ಅನ್ನು 50 ಮೂಲಾಂಶದಷ್ಟು ಹೆಚ್ಚಿಸಿದ್ದು ಶೇ 8.30ಗೆ ನಿಗದಿಪಡಿಸಿದೆ. ಆಗಸ್ಟ್ 7ರಿಂದ ಹೊಸ ದರಗಳು ಅನ್ವಯವಾಗುತ್ತವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಂದು ವರ್ಷದ ಸಾಲಕ್ಕೆ ಶೇ 7.40 ನಿಗದಿಪಡಿಸಿದ್ದರೆ, ಒಂದು ವರ್ಷಕ್ಕಿಂತ ಹೆಚ್ಚು ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಸಾಲಕ್ಕೆ ಶೇ 7.80 ಬಡ್ಡಿದರ ನಿಗದಿಪಡಿಸಿದೆ. ಮೂರರಿಂದ 5 ವರ್ಷಗಳ ಅವಧಿಯ ಸಾಲಕ್ಕೆ ಶೇ 8ರಿಂದ ಶೇ 8.40 ಬಡ್ಡಿದರ ಇರುತ್ತದೆ. ಐದು ವರ್ಷದಿಂದ 10 ಗಳ ಅವಧಿಗೆ ಶೇ 8.40ಯಿಂದ ಶೇ 8.80, 10ರಿಂದ 15 ವರ್ಷಗಳ ಅವಧಿಯ ಸಾಲಕ್ಕೆ ಶೇ 8.90ಯಿಂದ ಶೇ 9.30 ಬಡ್ಡಿದರಗಳನ್ನು ನಿಗದಿಪಡಿಸಲಾಗಿದೆ.

ಕಳೆದ ಏಪ್ರಿಲ್ 5ರಂದು ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನಿರ್ವಹಣಾ ಸಮಿತಿಯು ರೆಪೊ ರೇಟ್​ಗಳನ್ನು 50 ಮೂಲಾಂಶಗಳಿಂದ ಶೇ 5.4ರಷ್ಟು ಹೆಚ್ಚಿಸಲು ನಿರ್ಧರಿಸಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದು ಸತತ ಮೂರನೇ ಬಡ್ಡಿಹೆಚ್ಚಳವಾಗಿದೆ. ಪ್ರಸ್ತುತ ರೆಪೊದರಗಳು ಶೇ 5.4ರಷ್ಟು ಇದ್ದು, ಇದು ಕೊರೊನಾ ಪಿಡುಗು ಆವರಿಸಿಕೊಳ್ಳುವ ಮೊದಲು ದೇಶದಲ್ಲಿ ಚಾಲ್ತಿಯಲ್ಲಿದ್ದ ಶೇ 5.1ರ ಮೂಲದರಕ್ಕಿಂತಲೂ ಹೆಚ್ಚಿನದ್ದಗಿದೆ.

ಬ್ಯಾಂಕ್​ಗಳು ಸದೃಢ

ನೆರೆಯ ಶ್ರೀಲಂಕಾ, ನೇಪಾಳ ಮತ್ತು ಪಾಕಿಸ್ತಾನಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಭಾರತದ ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ಜನರಲ್ಲಿ ಆತಂಕ ಮೂಡಿತ್ತು. ಬಹುಶಃ ಇದನ್ನು ಗಮನದಲ್ಲಿ ಇರಿಸಿಕೊಂಡೇ ಇರಬಹುದು, ಆರ್​ಬಿಐ ಗವರ್ನರ್ ದೇಶದ ವಿದೇಶಿ ಮೀಸಲು ನಿಧಿಯ ಬಗ್ಗೆಯೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ‘ಭಾರತದ ಬ್ಯಾಂಕ್​ಗಳು ಸದೃಢವಾಗಿವೆ’ ಎಂದು ಘೋಷಿಸುವ ಮೂಲಕ ಭಾರತಕ್ಕೆ ತಕ್ಷಣದ ಆತಂಕ ಇಲ್ಲ ಎಂದು ಸಾರಿ ಹೇಳಿದ್ದಾರೆ. ಈ ಘೋಷಣೆಗಳು ದೇಶದ ಆರ್ಥಿಕ ವಲಯದಲ್ಲಿ ಆಶಾಭಾವನೆ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದವು.

ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನಿರ್ವಹಣಾ ಸಮಿತಿಯು ರೆಪೊ ದರಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ. ಈ ವಿಷಯವನ್ನು ರಿಸರ್ವ್​ ಬ್ಯಾಂಕ್ ಗವರ್ನರ್ ಶಕ್ತಿಕಾಂತ್​ ದಾಸ್ ಶುಕ್ರವಾರ (ಆಗಸ್ಟ್ 5) ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ರೆಪೊ ದರವನ್ನು 50 ಮೂಲಾಂಶಗಳಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಲೆಂಡಿಂಗ್ ದರವು ಶೇ 5.4ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ಸಮಗ್ರ ರಾಷ್ಟ್ರೀಯ ಉತ್ಪನ್ನದ (Gross Domestic Product – GDP) ಶೇ 7.2ರ ಬೆಳವಣಿಗೆಯ ನಿರೀಕ್ಷೆಯನ್ನು ಆರ್​ಬಿಐ ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಜಾಗತಿಕ ಆರ್ಥಿಕ ವಿದ್ಯಮಾನಗಳ ಪ್ರಭಾವ ಭಾರತವನ್ನು ಪ್ರಭಾವಿಸುತ್ತಿದೆ. ಈ ನಡುವೆಯೂ ಆರ್​ಬಿಐ ಉತ್ತಮ ಜಿಡಿಪಿ ಮುನ್ನೋಟದ ಸಾಧ್ಯತೆ ತೋರಿಸಿರುವುದು ಜನರಲ್ಲಿ ಆಶಾಭಾವನೆ ಹುಟ್ಟುಹಾಕಿದೆ.

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು