ಲೋನ್ ಪ್ರೀಪೇಮೆಂಟ್, ಎನ್​ಇಎಫ್​ಟಿ ಪಾವತಿ ಮಾರ್ಗಸೂಚಿಯಲ್ಲಿ ಬದಲಾವಣೆ, ಗಮನಿಸಿ

RBI MPC Meet: ಫಿಕ್ಸೆಡ್ ರೇಟ್​ನಲ್ಲಿ ಪಡೆದ ಸಾಲವನ್ನು ಮುಂಗಡವಾಗಿ ಪಾವತಿಸಿದರೆ ದಂಡ ತೆರಬೇಕಾಗುತ್ತದೆ. ಫ್ಲೋಟಿಂಗ್ ರೇಟ್​ನಲ್ಲಿ ವ್ಯಕ್ತಿಗಳು ಪಡೆದ ಸಾಲಕ್ಕೆ ಪ್ರೀಪೇಮೆಂಟ್ ಚಾರ್ಜ್ ಮತ್ತು ಫೋರ್​ಕ್ಲೋಷರ್ ಚಾರ್ಜ್​ಗಳಿಂದ ವಿನಾಯಿತಿ ಇರುತ್ತದೆ. ಈಗ ಸಣ್ಣ ಉದ್ದಿಮೆಗಳ ಸಾಲಕ್ಕೂ ಈ ವಿನಾಯಿತಿ ಅನ್ವಯ ಆಗುತ್ತದೆ.

ಲೋನ್ ಪ್ರೀಪೇಮೆಂಟ್, ಎನ್​ಇಎಫ್​ಟಿ ಪಾವತಿ ಮಾರ್ಗಸೂಚಿಯಲ್ಲಿ ಬದಲಾವಣೆ, ಗಮನಿಸಿ
ಸಾಲ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 09, 2024 | 1:56 PM

ನವದೆಹಲಿ, ಅಕ್ಟೋಬರ್ 9: ಮುಂಗಡವಾಗಿ ಸಾಲದ ಕಂತುಗಳನ್ನು ಕಟ್ಟಿದರೆ, ಅಥವಾ ಅವಧಿಗಿಂತ ಮುಂಚಿತವಾಗಿ ಸಾಲ ತೀರಿಸಿದರೆ ದಂಡ ವಿಧಿಸಲಾಗುತ್ತದೆ. ಫ್ಲೋಟಿಂಗ್ ರೇಟ್​ನಲ್ಲಿ ಪಡೆದ ಸಾಲಕ್ಕೆ ಪೆನಾಲ್ಟಿ ಚಾರ್ಜ್​ಗಳಿರುವುದಿಲ್ಲ. ಇದು ಬಿಸಿನಸ್ ಅಲ್ಲದ ಇತರ ವೈಯಕ್ತಿಕ ಗ್ರಾಹಕ ಲೋನ್​ಗಳಿಗೆ ಅನ್ವಯ ಆಗುತ್ತದೆ. ಈಗ ಈ ವಿನಾಯಿತಿ ಸೌಲಭ್ಯವನ್ನು ಸಣ್ಣ ಹಾಗೂ ಕಿರು ಉದ್ದಿಮೆಗಳಿಗೂ ವಿಸ್ತರಿಸಲಾಗಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ಇಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಗ್ರಾಹಕರ ಹಿತಾಸಕ್ತಿಗೆ ಅನುಗುಣವಾಗಿ ರಿಸರ್ವ್ ಬ್ಯಾಂಕ್ ಹಲವು ಕ್ರಮಗಳನ್ನು ಈ ಹಿಂದೆ ತೆಗೆದುಕೊಂಡಿದೆ. ಇದೇ ಹಾದಿಯಲ್ಲಿ ಒಂದಷ್ಟು ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಫ್ಲೋಟಿಂಗ್ ರೇಟ್ ಎಂದರೆ ಸಾಲದ ಅವಧಿಯಲ್ಲಿ ಬ್ಯಾಂಕಿನ ಬಡ್ಡಿದರ ಬದಲಾದರೆ, ಅದು ಸಾಲಕ್ಕೂ ಅನ್ವಯ ಆಗುತ್ತದೆ. ಫಿಕ್ಸೆಡ್ ರೇಟ್​ನಲ್ಲಿ ಸಾಲ ಪಡೆದಿದ್ದರೆ ಆರಂಭದಿಂದ ಹಿಡಿದು ಕೊನೆಯವರೆಗೂ ಏಕರೀತಿಯ ಬಡ್ಡಿ ಅನ್ವಯ ಆಗುತ್ತದೆ.

ಇದನ್ನೂ ಓದಿ: ಯುಪಿಐ123ಪೇನಲ್ಲಿ ವಹಿವಾಟು ಮಿತಿ 10,000 ರೂಗೆ ಏರಿಕೆ; ಯುಪಿಐ ಲೈಟ್ ವ್ಯಾಲಟ್ ಮಿತಿ 5,000 ರೂಗೆ ಏರಿಕೆ

ಆರ್​ಟಿಜಿಎಸ್, ಎನ್​ಇಎಫ್​ಟಿಯಲ್ಲಿ ಬೆನಿಫಿಶಿಯರಿ ಹೆಸರು ಪರಿಶೀಲನೆಗೆ ಅವಕಾಶ

ಯುಪಿಐ ಮತ್ತು ಐಎಂಪಿಎಸ್​ನಲ್ಲಿ ನೀವು ಯಾರಿಗಾದರೂ ಹಣ ಕಳುಹಿಸುವಾಗ ಅವರ ಬ್ಯಾಂಕ್ ಖಾತೆಯಲ್ಲಿರುವ ಹೆಸರನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬಹುದು. ಆದರೆ, ಆರ್​ಟಿಜಿಎಸ್ ಮತ್ತು ಎನ್​ಇಎಫ್​ಟಿ ಮೂಲಕ ಹಣ ವರ್ಗಾವಣೆ ಮಾಡುವಾಗ ವ್ಯಕ್ತಿಯ ಹೆಸರು ಮತ್ತು ಅಕೌಂಟ್​ ಅನ್ನು ಖಾತ್ರಿಪಡಿಸಿಕೊಳ್ಳುವ ಅವಕಾಶ ಇರಲಿಲ್ಲ. ಇದರಿಂದ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಆಗಿ ಹೋಗುವ ಸಂಭಾವ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಈಗ ಆರ್​ಟಿಜಿಎಸ್ ಮತ್ತು ಎನ್​ಇಎಫ್​ಟಿಯಲ್ಲೂ ಹೆಸರು ಪರಿಶೀಲಿಸುವ ಸೌಲಭ್ಯವನ್ನು ತರಲು ಆರ್​ಬಿಐ ನಿರ್ಧರಿಸಿದೆ.

ನೀವು ಹಣ ಪಾವತಿಸುವ ಮುನ್ನ ಬೆನಿಫಿಶಿಯರಿಯ ಹೆಸರನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಆಗುವುದು ತಪ್ಪುತ್ತದೆ.

ಇದನ್ನೂ ಓದಿ: ಆರ್​ಬಿಐ ಹಣಕಾಸು ನೀತಿ ನ್ಯೂಟ್ರಲ್​ಗೆ ಬದಲಾವಣೆ; ಅಕಾಮೊಡೇಶನ್ ನೀತಿ ಹಿಂತೆಗೆದದ್ದು ಯಾಕೆ? ಡಿಸೆಂಬರ್​ನಲ್ಲಿ ಬಡ್ಡಿ ಇಳಿಯುತ್ತಾ?

ನೀವು ಆರ್​ಟಿಜಿಎಸ್ ಅಥವಾ ಎನ್​ಇಎಫ್​ಟಿಯಲ್ಲಿ ಹಣ ಪಾವತಿಸುವಾಗ ವ್ಯಕ್ತಿಯ ಅಕೌಂಟ್ ನಂಬರ್ ಮತ್ತು ಐಎಫ್​ಎಸ್​ಸಿ ಕೋಡ್ ಅನ್ನು ನಮೂದಿಸಿದಾಗ, ಬ್ಯಾಂಕ್​ಗೆ ಜೋಡಿತವಾದ ಆ ವ್ಯಕ್ತಿಯ ಹೆಸರು ಕಾಣಿಸುತ್ತದೆ. ಇದರಿಂದ ಸರಿಯಾದ ವ್ಯಕ್ತಿಗೆ ಹಣ ಪಾವತಿ ಆಗುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದು. ಈ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ