LPG Price Hike: ಹೊಸ ವರ್ಷದ ಮೊದಲ ದಿನವೇ ಸಿಲಿಂಡರ್ ಬೆಲೆ ಏರಿಕೆಯ ಶಾಕ್, ನಿಮ್ಮ ನಗರದ ದರ ಪರಿಶೀಲಿಸಿ

ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂ.ವರೆಗೆ ಹೆಚ್ಚಿಸಲಾಗಿದೆ.

LPG Price Hike: ಹೊಸ ವರ್ಷದ ಮೊದಲ ದಿನವೇ ಸಿಲಿಂಡರ್ ಬೆಲೆ ಏರಿಕೆಯ ಶಾಕ್, ನಿಮ್ಮ ನಗರದ ದರ ಪರಿಶೀಲಿಸಿ
LPG Cylinder
Edited By:

Updated on: Jan 01, 2023 | 9:51 AM

ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂ.ವರೆಗೆ ಹೆಚ್ಚಿಸಲಾಗಿದೆ. ಆಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಮತ್ತು ಬೆಲೆ ಒಂದೇ ಆಗಿರುವುದು ಸಮಾಧಾನದ ಸಂಗತಿಯಾಗಿದೆ.

ವಾಣಿಜ್ಯ LPG ಸಿಲಿಂಡರ್ ಬೆಲೆಗಳು
OMC ಗಳು ಜನವರಿ 1, 2023 ರಿಂದ ವಾಣಿಜ್ಯ ಸಿಲಿಂಡರ್‌ಗಳ ದರವನ್ನು 25 ರೂ.ವರೆಗೆ ಹೆಚ್ಚಿಸುವ ಮೂಲಕ ದರವನ್ನು ಬದಲಾಯಿಸಿವೆ. ಈ ಕ್ರಮವು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಇತ್ಯಾದಿಗಳಿಗೆ ಹೊಡೆತ ಎಂದೇ ಹೇಳಬಹುದು.
ಆದಾಗ್ಯೂ, ಇದು ಸಾಮಾನ್ಯ ಜನರ ಬಜೆಟ್‌ನ ಬೆಲೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ದೇಶೀಯ LPG ಸಿಲಿಂಡರ್ ಬೆಲೆ ಬದಲಾಗದೆ ಹಾಗೆ ಉಳಿಯುತ್ತದೆ.

 

ನಾಲ್ಕು ಮಹಾನಗರಗಳಲ್ಲಿ ಗೃಹಬಳಕೆಯ LPG ಸಿಲಿಂಡರ್ ದರಗಳನ್ನು ಪರಿಶೀಲಿಸಿ:
ದೆಹಲಿ – 1053 ರೂ
ಮುಂಬೈ – 1052.5 ರೂ

ಕೋಲ್ಕತ್ತಾ – 1079 ರೂ

ಚೆನ್ನೈ – 1068.5 ರೂ

ಪಾಟ್ನಾ-1151

ಶಿಮ್ಲಾ – 1097.50

ಇಂದೋರ್ – 1081

ಅಹಮದಾಬಾದ್ – 1060

ಭೋಪಾಲ್ – 1058.50

ಜೈಪುರ – 1056. 50

ಬೆಂಗಳೂರು – 1055.50

OMC ಗಳು ಕಳೆದ ಬಾರಿ ಜುಲೈ 6 2022 ರಲ್ಲಿ ದೇಶೀಯ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ನಾಲ್ಕು ಬಾರಿ ಬೆಲೆ ಏರಿಕೆಯಾಗಿದೆ. OMC ಗಳು ಮೊದಲು ಮಾರ್ಚ್ 2022 ರಲ್ಲಿ 50 ರೂ. ಹೆಚ್ಚಿಸಿದ್ದವು, ನಂತರ ಅದು ಮತ್ತೆ 50ರೂ ಮತ್ತು 3.50 ರೂ. ಅನ್ನು ಮೇ ತಿಂಗಳಲ್ಲಿ ಹೆಚ್ಚಿಸಿತ್ತು.
ಅಂತಿಮವಾಗಿ, ಕಳೆದ ವರ್ಷ ಜುಲೈನಲ್ಲಿ ದೇಶೀಯ ಸಿಲಿಂಡರ್ ಬೆಲೆಯನ್ನು 50 ರೂ.ಗಳಿಗೆ ಹೆಚ್ಚಿಸಿತ್ತು.

 

ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ