Income Tax: ಮಕ್ಕಳ ಆದಾಯಕ್ಕೂ ತೆರಿಗೆ ಪಾವತಿಸಬೇಕೇ? ಇಲ್ಲಿದೆ ಮಾಹಿತಿ

Is Child’s Income Taxable? ಮಕ್ಕಳು ಸಂಪಾದಿಸುತ್ತಿರುವ ಹಣಕ್ಕೆ ಆದಾಯ ತೆರಿಗೆ ಇದೆಯೇ? ಈ ವಿಚಾರದಲ್ಲಿ ಆದಾಯ ತೆರಿಗೆ ಕಾಯ್ದೆ ಏನು ಹೇಳುತ್ತದೆ? ಮಕ್ಕಳು ಗಳಿಸುವ ಆದಾಯಕ್ಕೂ ತೆರಿಗೆ ಪಾವತಿಸಬೇಕೇ? ಈ ವಿಚಾರಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

Income Tax: ಮಕ್ಕಳ ಆದಾಯಕ್ಕೂ ತೆರಿಗೆ ಪಾವತಿಸಬೇಕೇ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Dec 31, 2022 | 6:05 PM

ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಕ್ಕಳು (Children) ಕೂಡ ಹಣ ಸಂಪಾದಿಸುವ (Income) ಅವಕಾಶಗಳು ಸೃಷ್ಟಿಯಾಗಿವೆ. ಹದಿಹರೆಯದ ಯುವಕ ಯುವತಿಯರು ಹಲವು ಮಾಧ್ಯಮಗಳ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ. ಅನೇಕರು ಚಿಕ್ಕ ವಯಸ್ಸಿನಲ್ಲಿ ಉದ್ಯಮಗಳನ್ನು ಸ್ಥಾಪಿಸಿ ಸಂಪಾದನೆ ಮಾಡುವ ಉದಾಹರಣೆಗಳು ಇವೆ. ಹೀಗೆ ಮಕ್ಕಳು ಸಂಪಾದಿಸುತ್ತಿರುವ ಹಣಕ್ಕೆ ಆದಾಯ ತೆರಿಗೆ ಇದೆಯೇ? ಈ ವಿಚಾರದಲ್ಲಿ ಆದಾಯ ತೆರಿಗೆ ಕಾಯ್ದೆ (Income Tax Act) ಏನು ಹೇಳುತ್ತದೆ? ಮಕ್ಕಳು ಗಳಿಸುವ ಆದಾಯಕ್ಕೂ ತೆರಿಗೆ ಪಾವತಿಸಬೇಕೇ? ಈ ವಿಚಾರಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

ಮಕ್ಕಳು ಗಳಿಸುವ ಆದಾಯದಲ್ಲಿ ಎಷ್ಟು ವಿಧ?

ಚಿಕ್ಕ ಮಕ್ಕಳು ಅಥವಾ ಹದಿಹರೆಯದವರು ಗಳಿಸುವ ಆದಾಯವನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ. ಅರ್ನ್ಡ್ ಮತ್ತು ಅನ್​ಅರ್ನ್ಡ್ ಎಂದು ಮಕ್ಕಳ ಆದಾಯವನ್ನು ವಿಂಗಡಿಸಲಾಗಿದೆ. ವಿವಿಧ ಸ್ಪರ್ಧೆಗಳು, ಕ್ರೀಡಾ ಚಟುವಟಿಕೆಗಳಲ್ಲಿ ಜಯಶಾಲಿಯಾಗಿ ಬಹುಮಾನವಾಗಿ ಪಡೆಯುವ ಹಣ, ಸಣ್ಣಪುಟ್ಟ ಉದ್ಯಮಗಳನ್ನು ನಡೆಸಿ ಕಳಿಸುವ ಹಣ, ಅಥವಾ ಅರೆಕಾಲಿಕ ಉದ್ಯೋಗ, ಕಲೆ ಅಥವಾ ಇನ್ನಿತರ ಪ್ರದರ್ಶನಗಳ ಮೂಲಕ ಗಳಿಸುವ ಹಣವನ್ನು ಅರ್ನ್ಡ್ ವಿಭಾಗದಲ್ಲಿ ಪರಿಗಣಿಸಲಾಗುತ್ತದೆ. ಹಿರಿಯರು, ಕುಟುಂಬದ ಸದಸ್ಯರು, ಸ್ನೇಹಿತರು, ಪಾಲಕರು ನೀಡುವ ಹಣವನ್ನು ಅನ್​ಅರ್ನ್ಡ್ ಎಂದು ಪರಿಗಣಿಸಲಾಗುತ್ತದೆ. ತಂದೆ ಅಥವಾ ತಾಯಿ ಮಗುವಿನ ಹೆಸರಿನಲ್ಲಿ ತೆರೆಯುವ ಉಳಿತಾಯ ಖಾತೆ ಅಥವಾ ಠೇವಣಿಗಳು ಕೂಡ ಇದೆ ವಿಭಾಗದಡಿ ಬರುತ್ತದೆ.

ಮಕ್ಕಳ ಆದಾಯಕ್ಕೆ ತೆರಿಗೆ ಇದೆಯೇ?

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 61 (1ಎ) ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಗಳಿಸುವ ಆದಾಯವನ್ನು ಪಾಲಕರ ಆದಾಯದ ಜೊತೆ ಲೆಕ್ಕ ಹಾಕಿ ಆದಾಯ ತೆರಿಗೆ ವಿಧಿಸಲಾಗುತ್ತದೆ. ಒಂದು ವೇಳೆ ಮಗುವಿನ ಅಪ್ಪ ಮತ್ತು ಅಮ್ಮ ಇಬ್ಬರೂ ಉದ್ಯೋಗಸ್ಥರಾಗಿದ್ದಲ್ಲಿ ಅವರ ಪೈಕಿ ಯಾರಿಗೆ ಹೆಚ್ಚು ವೇತನವಿದೆಯೋ ಅವರ ಆದಾಯದ ಜೊತೆ ಮಗುವಿನ ಆದಾಯವನ್ನು ವಿಲೀನಗೊಳಿಸಲಾಗುತ್ತದೆ. ಆದಾಗ್ಯೂ, ಅಂದಾಜು ತಲಾ 1.23 ಲಕ್ಷ ರೂ. ವರೆಗೆ ಇಬ್ಬರು ಮಕ್ಕಳಿಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ತಮ್ಮ ಆದಾಯಕ್ಕೆ ತೆರಿಗೆ ಪಾವತಿಸುವುದರ ಜತೆಗೆ ಮಕ್ಕಳ ಆದಾಯಕ್ಕೂ ಪಾಲಕರೇ ತೆರಿಗೆ ಪಾವತಿಸಬೇಕಾಗುತ್ತದೆ. ಒಂದು ವೇಳೆ ತಾಯಿ-ತಂದೆ ವಿವಾಹ ವಿಚ್ಛೇದನ ಮಾಡಿಕೊಂಡಿದ್ದಲ್ಲಿ ಯಾರ ಜತೆ ಮಕ್ಕಳು ಇರುತ್ತದೆಯೋ ಅವರೇ ತೆರಿಗೆ ಪಾವತಿಸಬೇಕಾಗುತ್ತದೆ. ಮಕ್ಕಳ ಅಂಗವೈಕಲ್ಯ ಪ್ರಮಾಣ ಶೇಕಡಾ 40ಕ್ಕಿಂತ ಹೆಚ್ಚಿದ್ದಲ್ಲಿ ಸೆಕ್ಷನ್ 80ಯು ಅಡಿ ತೆರಿಗೆ ವಿನಾಯಿತಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು