New Year Gift: ಹೊಸ ವರ್ಷಕ್ಕೆ ಗಿಫ್ಟ್; ಅಂಚೆ ಸೇರಿದಂತೆ ಹಲವು ಠೇವಣಿಗಳ ಬಡ್ಡಿ ದರ ಜನವರಿ 1ರಿಂದ ಹೆಚ್ಚಳ

ಒಟ್ಟಾರೆಯಾಗಿ ಎಲ್ಲ ಠೇವಣಿಗಳ ಮೇಲೆ ಶೇಕಡಾ 1.1ರಷ್ಟು ಬಡ್ಡಿ ದರ ಹೆಚ್ಚಾಗಲಿದೆ. ಆದರೆ, ಪಿಪಿಎಫ್​​ ಮತ್ತು ಹೆಣ್ಣುಮಕ್ಕಳ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿಯ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

New Year Gift: ಹೊಸ ವರ್ಷಕ್ಕೆ ಗಿಫ್ಟ್; ಅಂಚೆ ಸೇರಿದಂತೆ ಹಲವು ಠೇವಣಿಗಳ ಬಡ್ಡಿ ದರ ಜನವರಿ 1ರಿಂದ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Dec 31, 2022 | 12:47 PM

ನವದೆಹಲಿ: ಹೊಸ ವರ್ಷದಲ್ಲಿ ಉಳಿತಾಯ ಹೆಚ್ಚಿಸುವ ಉದ್ದೇಶದೊಂದಿಗೆ ಅಂಚೆ ಇಲಾಖೆಯ ಟರ್ಮ್ ಡಿಪಾಸಿಟ್ (post office term deposits), ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ (NSC), ಹಿರಿಯ ನಾಗರಿಕರ ಉಳಿತಾಯ ಯೋಜನೆಯ (senior citizen savings scheme) ಮೇಲಿನ ಬಡ್ಡಿ ದರವನ್ನು (Interest Rate) ಕೇಂದ್ರ ಸರ್ಕಾರ ಹೆಚ್ಚಿಸಿದೆ. ಜನವರಿ 1ರಿಂದ ಪರಿಷ್ಕೃತ ಬಡ್ಡಿ ದರ ಜಾರಿಗೆ ಬರಲಿದೆ. ಒಟ್ಟಾರೆಯಾಗಿ ಎಲ್ಲ ಠೇವಣಿಗಳ ಮೇಲೆ ಶೇಕಡಾ 1.1ರಷ್ಟು ಬಡ್ಡಿ ದರ ಹೆಚ್ಚಾಗಲಿದೆ. ಆದರೆ, ಪಿಪಿಎಫ್​​ ಮತ್ತು ಹೆಣ್ಣುಮಕ್ಕಳ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿಯ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಯಾವ ಠೇವಣಿಯ ಬಡ್ಡಿ ದರ ಎಷ್ಟು ಹೆಚ್ಚಾಯ್ತು?

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ ಅಥವಾ ಎನ್​ಎಸ್​ಸಿ ಬಡ್ಡಿ ದರ ಜನವರಿ 1ರಿಂದ ಶೇಕಡಾ 7ರಷ್ಟಾಗಲಿದೆ. ಸದ್ಯ ಇದು ಶೇಕಡಾ 6.8 ಇದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರ ಈಗ ಶೇಕಡಾ 7.6 ಇರುವುದು ಶೇಕಡಾ 8 ಆಗಲಿದೆ. 1ರಿಂದ 5 ವರ್ಷಗಳ ಅವಧಿಯ ಅಂಚೆ ಕಚೇರಿ ಟರ್ಮ್ ಡಿಪಾಸಿಟ್ ಬಡ್ಡಿ ದರ ಶೇಕಡಾ 1.1ರಷ್ಟು ಹೆಚ್ಚಿಸಲಾಗಿದೆ. ತಿಂಗಳ ಆದಾಯ ಯೋಜನೆಯ ಬಡ್ಡಿ ದರವನ್ನು ಶೇಕಡಾ 6.7ರಿಂದ ಶೇಕಡಾ 7.1ಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: India Post Payments Bank: ಅಂಚೆ ಇಲಾಖೆಯಿಂದ ಕೇವಲ 399 ರೂ.ಗೆ ಅಪಘಾತ ವಿಮೆ, 10 ಲಕ್ಷ ರೂ. ಕವರೇಜ್

ಅಂಚೆ ಇಲಾಖೆಯ ಟೈಮ್ ಡಿಪಾಸಿಟ್ ಸ್ಕೀಮ್ ಸ್ಥಿರ ಠೇವಣಿ ಯೋಜನೆ ಮೂಲಕ ಸರ್ಕಾರ ಈಗಾಗಲೇ ವಿವಿಧ ಬ್ಯಾಂಕ್​ಗಳ ಎಫ್​ಡಿ ಬಡ್ಡಿ ದರಕ್ಕಿಂತಲೂ ಹೆಚ್ಚಿನ ಬಡ್ಡಿ ನೀಡುತ್ತಿದೆ. ಟೈಮ್ ಡಿಪಾಸಿಟ್ ಸ್ಕೀಮ್ ಅಡಿ ಕನಿಷ್ಠ 1 ವರ್ಷ ಹಾಗೂ ಗರಿಷ್ಠ 5 ವರ್ಷಗಳ ವರೆಗೆ ಠೇವಣಿ ಇಡಬಹುದು. 200 ರೂ. ಮತ್ತು ಇದರ ಮಲ್ಟಿಪಲ್​ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಸಮೀಪದ ಅಂಚೆ ಕಚೇರಿಗೆ ತೆರಳಿ ಅಥವಾ ಆನ್​ಲೈನ್ ಮೂಲಕ ಠೇವಣಿ ತೆರೆಯಬಹುದಾಗಿದೆ. ವೈಯಕ್ತಿಕವಾಗಿ ಮತ್ತು ಜಂಟಿ ಖಾತೆಗಳನ್ನು ತೆರೆಯಲೂ ಅವಕಾಶವಿದೆ. ಬಡ್ಡಿಯನ್ನು ತಿಂಗಳಿಗೊಮ್ಮೆ, ತ್ರೈಮಾಸಿಕ ಅವಧಿಗೊಮ್ಮೆ, ಅರ್ಧ ವಾರ್ಷಿಕ ಹಾಗೂ ಮೆಚ್ಯೂರಿಟಿಗೆ ಪಡೆಯಲು ಅವಕಾಶವಿದೆ. ಬ್ಯಾಂಕ್​ ಎಫ್​​ಡಿಗಿಂತ ಹೆಚ್ಚು ಬಡ್ಡಿ ಈ ಯೋಜನೆಯಲ್ಲಿ ದೊರೆಯುತ್ತದೆ. ಬ್ಯಾಂಕ್​​ಗಳ ಎಫ್​ಡಿ ದರ ಸರಾಸರಿ ಶೇಕಡಾ 5.5ರಿಂದ 6.5ರ ವರೆಗೆ ಇದ್ದರೆ ಅಂಚೆ ಇಲಾಖೆ ಟೈಮ್ ಡಿಪಾಸಿಟ್ ಸ್ಕೀಮ್​ ಬಡ್ಡಿ ದರ ಸರಾಸರಿ ಶೇಕಡಾ 5.5ರಿಂದ 6.7ರ ವರಗೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Fri, 30 December 22

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ