ಕೇರಳ ಮತ್ತು ರಾಜಸ್ಥಾನ ಬಳಿಕ ಪೆಟ್ರೋಲ್​​, ಡೀಸೆಲ್​​ ಮೇಲಿನ ವ್ಯಾಟ್​​ ಕಡಿತ ಮಾಡಿದ ಮಹಾರಾಷ್ಟ್ರ

ಕೇರಳ ಮತ್ತು ರಾಜಸ್ಥಾನ ಬಳಿಕ ಪೆಟ್ರೋಲ್​​, ಡೀಸೆಲ್​​ ಮೇಲಿನ ವ್ಯಾಟ್​​ ಕಡಿತ ಮಾಡಿದ ಮಹಾರಾಷ್ಟ್ರ
ಸಾಂದರ್ಭಿಕ ಚಿತ್ರ

ಕೇಂದ್ರದ ಘೋಷಣೆಯ ನಂತರ ಮಹಾರಾಷ್ಟ್ರದ ಹೊರತಾಗಿ ಕೇರಳ ಮತ್ತು ರಾಜಸ್ಥಾನ ಕೂಡ ಇಂಧನದ ಮೇಲಿನ ತೆರಿಗೆಯಲ್ಲಿ ಕಡಿತವನ್ನು ಘೋಷಿಸಿತು

TV9kannada Web Team

| Edited By: Rashmi Kallakatta

May 22, 2022 | 8:56 PM

ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಮಹಾರಾಷ್ಟ್ರ (Maharashtra) ಸರ್ಕಾರ ಭಾನುವಾರ ಪೆಟ್ರೋಲ್ ಮೇಲಿನ ವ್ಯಾಟ್ (VAT) ಅನ್ನು ರೂ 2.08 ಮತ್ತು ಡೀಸೆಲ್ (diesel) ಮೇಲೆ ರೂ1.44 ರಷ್ಟು ಕಡಿತಗೊಳಿಸಿದೆ.  ಪೆಟ್ರೋಲ್ (Petrol) ಮೇಲಿನ ಅಬಕಾರಿ ಸುಂಕವನ್ನು ಅನುಕ್ರಮವಾಗಿ ಲೀಟರ್ ಗೆ 8ರೂ ಮತ್ತು ಡೀಸೆಲ್ ಲೀಟರ್‌ಗೆ 6ರೂ  ಕಡಿತಗೊಳಿಸುವ ಕೇಂದ್ರದ ಶನಿವಾರದ ಘೋಷಣೆಯನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದಾಗಿ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ರೂ 2,500 ಕೋಟಿ ನಷ್ಟ ಉಂಟಾಗಲಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿದ ನಂತರ ಮೊದಲಿನಿಂದ ಪ್ರತಿ ತಿಂಗಳ ಆದಾಯವು ರೂ80 ಕೋಟಿಗಳಷ್ಟು ಕಡಿಮೆಯಾದರೆ, ನಂತರದ ಆದಾಯದಿಂದ ರೂ125 ಕೋಟಿಗಳಷ್ಟು ಕಡಿಮೆಯಾಗುತ್ತದೆ. ಕೇಂದ್ರದ ಘೋಷಣೆಯ ನಂತರ ಮಹಾರಾಷ್ಟ್ರದ ಹೊರತಾಗಿ ಕೇರಳ ಮತ್ತು ರಾಜಸ್ಥಾನ ಕೂಡ ಇಂಧನದ ಮೇಲಿನ ತೆರಿಗೆಯಲ್ಲಿ ಕಡಿತವನ್ನು ಘೋಷಿಸಿತು. ಭಾನುವಾರದಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕ್ರಮವಾಗಿ ಲೀಟರ್ ಗೆ ರೂ 2.48 ಮತ್ತು ಲೀಟರ್ ಗೆ 1.16ಲೀಟರ್ ಕಡಿಮೆ ಮಾಡಿದೆ ಎಂದು ಟ್ವೀಟ್ ಮಾಡಿದ್ದರು. ಇದರಿಂದ ರಾಜ್ಯದಲ್ಲಿ ಪೆಟ್ರೋಲ್ ಲೀಟರ್ ಗೆ ರೂ10.48 ಮತ್ತು ಡೀಸೆಲ್ ಲೀಟರ್ ಗೆ 7.16 ಅಗ್ಗವಾಗಲಿದೆ ಎಂದು ಅವರು ಹೇಳಿದರು.

ಶನಿವಾರ ಕೇರಳ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ ರೂ 2.41/ಲೀಟರ್ ಮತ್ತು ರೂ 1.36/ಲೀಟರ್ ಕಡಿತವನ್ನು ಘೋಷಿಸಿತು. “ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೃಹತ್ ತೆರಿಗೆಯನ್ನು ಭಾಗಶಃ ಕಡಿತಗೊಳಿಸಿದೆ. ಕೇರಳ ಸರ್ಕಾರವು ಈ ನಿರ್ಧಾರವನ್ನು ಸ್ವಾಗತಿಸುತ್ತದೆ” ಎಂದು ಕೇರಳ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಂಧನ ತೆರಿಗೆಯಲ್ಲಿ ಮತ್ತಷ್ಟು ಕಡಿತವನ್ನು ತಮ್ಮ ಸರ್ಕಾರ ಪರಿಗಣಿಸಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿಯೂ ಹೇಳಿದ್ದಾರೆ. ಕೇಂದ್ರದ ನಿರ್ಧಾರ ಶನಿವಾರ ರಾತ್ರಿ ಬಂದಿದೆ ನೋಡೋಣ, ನಾವು ಪರಿಗಣಿಸುತ್ತೇವೆ ಎಂದು ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.

ಇದನ್ನೂ ಓದಿ

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada