ಬೆಂಗಳೂರು, ನವೆಂಬರ್ 27: ಬೆಂಗಳೂರು ಮೂಲದ ಫಿಟ್ನೆಸ್ ಸ್ಟಾರ್ಟಪ್ ತಗಡಾ ರಹೋಗೆ (Tagada Raho) ಮಾಜಿ ಟೀಮ್ ಇಂಡಿಯಾ ಕ್ರಿಕೆಟ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೂಡಿಕೆ ಮಾಡಿದ್ದಾರೆ. ತಗ್ಡಾ ರಹೋ ಸಾಂಪ್ರದಾಯಿಕ ಶೈಲಿಯ ದೈಹಿಕ ವ್ಯಾಯಾಮ ಪದ್ಧತಿಗೆ ಆಧುನಿಕ ಸ್ಪರ್ಶ ನೀಡುವ ಕಂಪನಿ. ಸಾಂಪ್ರದಾಯಿಕ ಗರಡಿ ಮನೆಗಳಲ್ಲಿರುವ ವ್ಯಾಯಾಮ ಸಲಕರಣೆಗಳನ್ನು ಬಳಸಿ ಫಿಟ್ನೆಸ್ ಕಲ್ಪಿಸಲಾಗುತ್ತದೆ. ಮನೀಶ್ ಮಲ್ಹೋತ್ರಾ ಅವರು ಸಂಸ್ಥಾಪಿಸಿದ ಈ ಫಿಟ್ನೆಸ್ ಸ್ಟಾರ್ಟಪ್ನ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ. ಡಗ್ ಔಟ್ ಎಂದು ಕರೆಯಲಾಗುವ ಇದರ ತರಬೇತಿ ಕೇಂದ್ರದಲ್ಲಿ ಬಹಳಷ್ಟು ಮಂದಿ ಟ್ರೈನಿಂಗ್ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಎರಡು ಕಡೆ ಇದರ ಟ್ರೈನಿಂಗ್ ಸೆಂಟರ್ಗಳಿವೆ. ಅಲಸೂರಿನ ಎಸ್ಯುಎಫ್ಸಿ ಗ್ರೌಂಡ್ಸ್ ಹಾಗೂ ಹೆಚ್ಎಸ್ಆರ್ ಲೇಔಟ್ನಲ್ಲಿ ಡಗ್ ಔಟ್ಗಳಿವೆ. ಇಲ್ಲಿ ಬೆಳಗ್ಗೆ 6:30ಕ್ಕೆ ಆರಂಭವಾಗಿ 10 ಗಂಟೆಯವರೆಗೆ ತೆರೆದಿರುತ್ತೆ. ಸಂಜೆ 5ರಿಂದ 9ರವರೆಗೂ ತೆರೆದಿರುತ್ತದೆ.
ಸಾಂಪ್ರದಾಯಿಕ ಉಪಕರಣದ ಜೊತೆ ಆಧುನಿಕ ತಂತ್ರವನ್ನು ಈ ಡಗ್ ಔಟ್ನಲ್ಲಿ ಕಲಿಸಿಕೊಡಲಾಗುತ್ತದೆ. ಬೆಂಗಳೂರಿನಲ್ಲಿ ಇದರ ಡಗ್ ಔಟ್ ಯಶಸ್ವಿಯಾಗಿದೆ. ಮಹಾರಾಷ್ಟ್ರದಲ್ಲಿ ತಗಡಾ ರಹೋ ಮೊದಲ ಡಗ್ ಔಟ್ ಮುಂದಿನ ತಿಂಗಳು ಆರಂಭವಾಗಲಿದೆ. ಮುಂದಿನ ವರ್ಷ 4-5 ರಾಜ್ಯಗಳಿಗೆ ಇದರ ಬಿಸಿನೆಸ್ ವಿಸ್ತರಣೆ ಆಗಲಿದೆ. ಇತರ ಹಲವು ಫಿಟ್ನೆಸ್ ಸೆಂಟರ್ಗಳಂತೆ ತಗಡಾ ರಹೋ ಕೂಡ ಫ್ರಾಂಚೈಸಿ ಬಿಸಿನೆಸ್ ಆಫರ್ ಮಾಡುತ್ತಿದೆ.
ಇದನ್ನೂ ಓದಿ: ಅದಾನಿ-ಹಿಂಡನ್ಬರ್ಗ್ ರಿಪೋರ್ಟ್, ಚೀನಾ ಬೆಂಬಲಿಗರ ಕರ್ಮಕಾಂಡ: ರಾಜ್ಯಸಭಾ ಸಂಸದ ಮಹೇಶ್ ಜೇಠ್ಮಲಾನಿ ಅರೋಪ
ತಗ್ಡಾ ರಹೋ ಫ್ರಾಂಚೈಸಿ ಪಡೆಯಬಹುದು. ಈ ಮುಂದಿನ ವೆಬ್ ವಿಳಾಸಕ್ಕೆ ಭೇಟಿ ನೀಡಿ: www.tagdaraho.in/contact-10
ಫೋನ್ ನಂ: 9972777744
ಅದರ ಇನ್ಸ್ಟಾಗ್ರಾಮ್ ಲಿಂಕ್ ಇಲ್ಲಿದೆ; www.instagram.com/tagdaraho
ಮಹೇಂದ್ರ ಸಿಂಗ್ ಧೋನಿ ಸ್ವತಃ ಆಂಟ್ರಪ್ರನ್ಯೂರ್ ಎನಿಸಿದ್ದಾರೆ. ಹಾಗೆಯೇ, ಹೊಸಬರನ್ನು ಉತ್ತೇಜಿಸುತ್ತಾರೆ. ವಿಶೇಷವಾದ ಸ್ಟಾರ್ಟಪ್ಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ತಗ್ಡಾ ರಹೋದಲ್ಲಿ ಅವರು ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ, ಆ ಸ್ಟಾರ್ಟಪ್ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಇಸ್ರೋ ಬಿಟ್ಟು ಹೊಸ ಕಂಪನಿ ಕಟ್ಟಿದ ಐಐಟಿ ಪದವೀಧರರು; ಇಲಾನ್ ಮಸ್ಕ್ ಹಾದಿಯಲ್ಲಿ ಇಬ್ಬರು ಭಾರತೀಯರು
‘ತಗ್ಡಾ ರಹೋ ಬಹಳ ಕುತೂಹಕಾರಿ ಎನಿಸುತ್ತದೆ. ಜನರು ಮರೆತೇಹೋದ ದೈಹಿಕ ಕಸರತ್ತನ್ನು ಮರಳಿ ತರುತ್ತಿದೆ’ ಎಂದು ಎಂಎಸ್ ಧೋನಿ ಹೇಳಿದ್ದಾರೆ.
ತಗ್ಡಾ ರಹೋ ಮಾದರಿಯ ತರಬೇತಿಯನ್ನು ಲಕ್ನೋ ಸೂಪರ್ ಜೇಂಟ್ಸ್, ಹರ್ಯಾಣ ಸ್ಟೀಲರ್ಸ್ ಕಬ್ಬಡಿ ತಂಡ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಳವಡಿಸಲಾಗಿದೆ. ಈ ಉಪಕರಣಗಳು ಅಥ್ಲೀಟ್ಗಳಿಗೆ ಗಾಯದ ಸಮಸ್ಯೆಯನ್ನು ನಿವಾರಿಸಬಲ್ಲುವು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ