Manipal Group & Byjus: ಬೈಜುಸ್ ಖರೀದಿಗೆ ಎರಡನೇ ಬಿಡ್ ಸಲ್ಲಿಸಿದ ಮಣಿಪಾಲ್ ಗ್ರೂಪ್
Manipal Group files second bid to acquire Byju's: ಪ್ರಮುಖ ಟ್ಯೂಶನ್ ಸಂಸ್ಥೆಯಾಗಿರುವ ಆಕಾಶ್ ಅನ್ನು ಖರೀದಿಸಲು ಮಣಿಪಾಲ್ ಗ್ರೂಪ್ ಪ್ರಯತ್ನ ಮುಂದುವರಿಸಿದೆ. ಆಕಾಶ್ ಎಜುಕೇಶನ್ ಸರ್ವಿಸ್ನ ಮಾಲಕಸಂಸ್ಥೆಯಾದ ಬೈಜೂಸ್ ಅನ್ನು ಖರೀದಿಸಲು ಮಣಿಪಾಲ್ ಗ್ರೂಪ್ ಎರಡನೇ ಬಿಡ್ ಸಲ್ಲಿಸಿದೆ. ದಿವಾಳಿ ತಡೆ ಕಾನೂನಿನ ಅಡಿಯಲ್ಲಿ ಬೈಜೂಸ್ ಅನ್ನು ಮಾರಲಾಗುತ್ತಿದೆ. ಅದಕ್ಕಾಗಿ ಮಣಿಪಾಲ್ ಗ್ರೂಪ್ ಬಿಡ್ ಸಲ್ಲಿಸಿರುವುದು.

ಬೆಂಗಳೂರು, ನವೆಂಬರ್ 14: ದಿವಾಳಿ ಎದ್ದಿರುವ ಬೈಜೂಸ್ ಅನ್ನು ಖರೀದಿಸುವ ಪ್ರಯತ್ನವನ್ನು ಮಣಿಪಾಲ್ ಗ್ರೂಪ್ ಮುಂದುವರಿಸಿದೆ. ಸಾಲ ತೀರುವಳಿ ನಿಯಮಗಳ (Insolvency process) ಅಡಿಯಲ್ಲಿ ಬೈಜೂಸ್ನ ಮಾತೃ ಸಂಸ್ಥೆಯಾದ ಥಿಂಕ್ ಅಂಡ್ ಲರ್ನ್ ಪ್ರೈ ಲಿ ಸಂಸ್ಥೆಯನ್ನು ಖರೀದಿಸಲು ಮಣಿಪಾಲ್ ಎಜುಕೇಶನ್ ಅಂಡ್ ಮೆಡಿಕಲ್ ಗ್ರೂಪ್ ಸಂಸ್ಥೆ ಎರಡನೇ ಬಾರಿ ಬಿಡ್ ಸಲ್ಲಿಸಿದೆ. ಬೈಜೂಸ್ನ ಸಂಕಷ್ಟ ಪರಿಹಾರಕರ (RP- Resolution Professional) ಬಳಿ ಇಒಐ (EoI- Expression of Interest) ದಾಖಲೆಗಳನ್ನು ಸಲ್ಲಿಸಿದೆ.
ರಂಜನ್ ಪೈ ಮಾಲಕತ್ವದ ಮಣಿಪಾಲ್ ಗ್ರೂಪ್ ಬೈಜೂಸ್ ಖರೀದಿಗೆ ಬಿಡ್ ಸಲ್ಲಿಸಿದ್ದು ಇದು ಎರಡನೇ ಬಾರಿ. ಬಿಡ್ಡರ್ಗಳ ಕೊರತೆಯಿಂದಾಗಿ ಆರ್ಪಿಯವರು ಹೊಸದಾಗಿ ಬಿಡ್ಗಳನ್ನು ಆಹ್ವಾನಿಸಿದ್ದರು. ಇದಕ್ಕೆ ನಿನ್ನೆ (ನ. 13) ಕೊನೆಯ ದಿನವಾಗಿತ್ತು. ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ ಪ್ರಕಾರ, ಬೈಜೂಸ್ ಖರೀದಿಗೆ ಬಿಡ್ ಸಲ್ಲಿರುವುದು ಮಣಿಪಾಲ್ ಗ್ರೂಪ್ ಮಾತ್ರವೇ. ಬೇರಾವುದೇ ಬಿಡ್ ಬಂದಿರುವುದು ಗೊತ್ತಾಗಿಲ್ಲ.
ಇದನ್ನೂ ಓದಿ: ನೀವು ಸ್ಮೋಕಿಂಗ್ ಬಿಟ್ಟರೂ ಕಡಿಮೆ ಆಗದು ಇನ್ಷೂರೆನ್ಸ್ ಪ್ರೀಮಿಯಮ್; ಕಾರಣ ಇದು
ಆಕಾಶ್ ಎಜುಕೇಶನ್ ಮೇಲೆ ಮಣಿಪಾಲ್ ಗ್ರೂಪ್ ಕಣ್ಣು
ಬೈಜೂಸ್ ಸಂಸ್ಥೆ ವಿಪರೀತ ಸಾಲ ಹೊಂದಿರುವ ಹಿನ್ನೆಲೆಯಲ್ಲಿ ಕೋರ್ಟ್ ನಿರ್ದೇಶನದ ಮೇರೆಗೆ ಮಾರ್ಗೋಪಾಯ ಹುಡುಕಲಾಗಿದೆ. ಅದರಂತೆ ಬೈಜೂಸ್ನ ಆಸ್ತಿಗಳನ್ನು ಮಾರಿ ಸಾಲ ತೀರಿಸಲು ರೆಸಲ್ಯೂಶನ್ ಪ್ರೊಫೆಷನಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರೇ ಈಗ ಬಿಡ್ಗೆ ಆಹ್ವಾನಿಸಿರುವುದು.
ಮಣಿಪಾಲ್ ಗ್ರೂಪ್ಗೆ ಬೈಜೂಸ್ಗಿಂತ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಯ ಮೇಲೆ ಕಣ್ಣು ನೆಟ್ಟಿದೆ. 2021ರಲ್ಲಿ ಆಕಾಶ್ ಸಂಸ್ಥೆಯನ್ನು ಬೈಜೂಸ್ ಖರೀದಿ ಮಾಡಿತ್ತು. ಕೋಚಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಆಕಾಶ್ ಸಂಸ್ಥೆಯನ್ನು ಖರೀದಿಸಲು ಮಣಿಪಾಲ್ ಗ್ರೂಪ್ ಆಸಕ್ತಿ ಹೊಂದಿದೆ. ಬೈಜೂಸ್ನ ಕೆಲ ಸಾಲವನ್ನು ರಂಜನ್ ಪೈ ಅವರು ತೀರಿಸಿದ್ದರು. ಅದಕ್ಕೆ ಪ್ರತಿಯಾಗಿ ಆಕಾಶ್ ಸಂಸ್ಥೆಯಲ್ಲಿ ಶೇ. 40ರಷ್ಟು ಪಾಲನ್ನು ಕೊಡಲಾಗಿದೆ.
ಇದನ್ನೂ ಓದಿ: ಕೋಟಿ ರೂ ಸಂಬಳ ಕೊಡ್ತೀನಂದ್ರೂ ಅಮೆರಿಕದಲ್ಲಿ ಸಿಗುತ್ತಿಲ್ಲ ಕೆಲಸಗಾರರು; ಮೆಕ್ಯಾನಿಕ್ಸ್ ಇತ್ಯಾದಿ ಕಾರ್ಮಿಕರಿಗೆ ಸಖತ್ ಬೇಡಿಕೆ
ಈಗ ಬೈಜೂಸ್ ಅನ್ನು ಖರೀದಿಸುವುದರಿಂದ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಯ ಪೂರ್ಣ ನಿಯಂತ್ರಣವು ಮಣಿಪಾಲ್ ಗ್ರೂಪ್ಗೆ ಸಿಗುತ್ತದೆ. ಸದ್ಯ ಅದರ ಖರೀದಿಗೆ ಏಕೈಕ ಬಿಡ್ಡರ್ ಕೂಡ ಆಗಿದೆ. ಆದರೆ, ಇದೊಂದೇ ಕಾರಣಕ್ಕೆ ಖರೀದಿಗೆ ಅವಕಾಶ ಸಿಗುತ್ತದೆ ಎಂದು ಖಾತ್ರಿ ಇಲ್ಲ. ಎಲ್ಲವೂ ಕೂಡ ಆರ್ಪಿ ವಿವೇಚನಾ ನಿರ್ಧಾರದ ಮೇಲೆ ನಿಲ್ಲಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




