WhatsApp New Updates: ವಾಟ್ಸ್​ಆ್ಯಪ್​ನಲ್ಲಿ ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಬಹುದು: ಬಂದಿದೆ ಹೊಸ ಆಯ್ಕೆ

ಇಲ್ಲಿ ಗಮನಿಸ ಬೇಕಾದ ಸಂಗತಿ ಎಂದರೆ, ವಾಟ್ಸ್​ಆ್ಯಪ್​ನಲ್ಲಿ ನೀವು ಮೆಸೇಜ್ ಅನ್ನು ಡಿಲೀಟ್ ಮಾಡಿದರೆ ಹೇಗೆ ಚಾಟ್​ನಲ್ಲಿ ಮಾಹಿತಿ ನೀಡುತ್ತದೆಯೊ ಅದೇರೀತಿ ಎಡಿಟ್ ಮಾಡಿದರೆ ಕೂಡ ಕಳುಹಿಸಿದವರಿಗೆ ತಿಳಿಯುತ್ತದೆ. ಈ ಎಡಿಟ್ ಬಟನ್ ವೈಶಿಷ್ಟ್ಯದ ಮೇಲೆ ವಾಟ್ಸ್​ಆ್ಯಪ್​​ ಐದು ವರ್ಷಗಳ ಹಿಂದೆಯೇ ಗಮನಹರಿಸಲು ಆರಂಭಿಸಿದ್ದರೂ ಟ್ವಿಟರ್​ನಲ್ಲಿ ಈ ಕುರಿತು ವರದಿ ಬಂದ ಬೆನ್ನಿಗೆ ಅದನ್ನು ಕೈಬಿಟ್ಟಿತ್ತು.

WhatsApp New Updates: ವಾಟ್ಸ್​ಆ್ಯಪ್​ನಲ್ಲಿ ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಬಹುದು: ಬಂದಿದೆ ಹೊಸ ಆಯ್ಕೆ
WhatsApp Edit Message
Edited By:

Updated on: Oct 08, 2026 | 12:32 PM

ಮುಖ್ಯಾಂಶಗಳು

  • ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಿ
  • ಇದಕ್ಕೆ 15 ನಿಮಿಷಗಳ ಕಾಲವಕಾಶ ಮಾತ್ರ ಇರುತ್ತದೆ
  • ವಾಟ್ಸ್​ಆ್ಯಪ್​ನಲ್ಲಿ ಬಂತು ಅಚ್ಚರಿಯ ಫೀಚರ್

ವಿಶ್ವದಲ್ಲಿ ಇಂದು ಅತಿ ಹೆಚ್ಚು ಜನರು ಉಪಯೋಗಿಸುತ್ತಿರುವ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ. ಈ ಆ್ಯಪ್​ಗೆ ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರಿದ್ದಾರೆ. ಕ್ಷಣಾರ್ಧದಲ್ಲಿ ಸಂದೇಶಗಳ ಮೂಲಕ ಮಾತುಕತೆ ನಡೆಸಲು ಉಪಯೋಗಿಸುವ ವಾಟ್ಸ್​ಆ್ಯಪ್​ ಸಾಲು ಸಾಲು ಫೀಚರ್​ಗಳನ್ನು ಕೂಡ ಪರಿಚಯಿಸುತ್ತದೆ. ಸಾಮಾನ್ಯವಾಗಿ ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾಡಬಹುದು ಆದರೆ, ಎಡಿಟ್ ಮಾಡುವಂತಹ ಆಯ್ಕೆ ಇಲ್ಲ. ಆದರೀಗ ಮೆಟಾ ಒಡೆತನದ ಈ ಆ್ಯಪ್ ”ಎಡಿಟ್ ಸೆಂಟ್ ಮೆಸೇಜ್” (Edit Sent Message) ಎಂಬ ನೂತನ ಅಪ್ಡೇಟ್ ಪರಿಚಯಿಸಿದೆ.

ಈ ಬಗ್ಗೆ ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ತಮ್ಮ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಎಡಿಟ್ ಸೆಂಟ್ ಮೆಸೇಜ್ ಆಯ್ಕೆಯ ಮೂಲಕ ಕಳುಹಿಸದ ಮೆಸೇಜ್ ಅನ್ನು ಎಡಿಟ್ (Edit Message) ಮಾಡಬಹುದಾಗಿದೆ. ಇದರ ಮೂಲಕ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ. ಆದರೆ, ಇದಕ್ಕೆ 15 ನಿಮಿಷಗಳ ಕಾಲವಕಾಶ ಮಾತ್ರ ಇರುತ್ತದೆ.

 

ಪ್ರಸ್ತುತ, ವಾಟ್ಸ್​ಆ್ಯಪ್​​ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್‌ ಮಾಡಲು ಸಾಧ್ಯವಿಲ್ಲ. ಈ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್‌ ಮಾಡಲು ಸಾಧ್ಯವಾಗಿಸುತ್ತದೆ.

ಇಲ್ಲಿ ಗಮನಿಸ ಬೇಕಾದ ಸಂಗತಿ ಎಂದರೆ, ವಾಟ್ಸ್​ಆ್ಯಪ್​ನಲ್ಲಿ ನೀವು ಮೆಸೇಜ್ ಅನ್ನು ಡಿಲೀಟ್ ಮಾಡಿದರೆ ಹೇಗೆ ಚಾಟ್​ನಲ್ಲಿ ಮಾಹಿತಿ ನೀಡುತ್ತದೆಯೊ ಅದೇರೀತಿ ಎಡಿಟ್ ಮಾಡಿದರೆ ಕೂಡ ಕಳುಹಿಸಿದವರಿಗೆ ತಿಳಿಯುತ್ತದೆ. ಈ ಎಡಿಟ್ ಬಟನ್ ವೈಶಿಷ್ಟ್ಯದ ಮೇಲೆ ವಾಟ್ಸ್​ಆ್ಯಪ್​​ ಐದು ವರ್ಷಗಳ ಹಿಂದೆಯೇ ಗಮನಹರಿಸಲು ಆರಂಭಿಸಿದ್ದರೂ ಟ್ವಿಟರ್​ನಲ್ಲಿ ಈ ಕುರಿತು ವರದಿ ಬಂದ ಬೆನ್ನಿಗೆ ಅದನ್ನು ಕೈಬಿಟ್ಟಿತ್ತು.

ಚಾಟ್ ಲಾಕ್ ಹಾಗೂ ಹೈಡ್ ಮಾಡುಬಹುದು:

ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ (Hide) ಮಾಡಬಹುದು ಎಂದು ಹೇಳಿದೆ. ಈ ಆಯ್ಕೆ ಚಾಟ್​ನ ಕಾಂಟೆಕ್ಟ್ ಅಥವಾ ಗ್ರೂಪ್​ನ ಇನ್​ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್​ಗೆ ಹೋಗುತ್ತದೆ. ಸದ್ಯಕ್ಕೆ ಈ ಫೀಚರ್ಸ್‌ ಅಭಿವೃದ್ಧಿ ಹಂತದಲ್ಲಿದೆ. ಆಂಡ್ರಾಯ್ಡ್ ಬೀಟಾ ಆವೃತ್ತಿಯ 2.23.8.2 ಅಪ್ಡೇಟ್​ನಲ್ಲಿ ಪರೀಕ್ಷಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರು ಈ ಫೀಚರ್ಸ್‌ ಅನ್ನು ಬಳಕೆ ಮಾಡಬಹುದು ಎಂದು ತಿಳಿದುಬಂದಿದೆ.

 

Published On - 10:24 am, Tue, 23 May 23

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us