BSE Record: ಭಾರತದ ಒಟ್ಟು ಷೇರುಸಂಪತ್ತು 292 ಲಕ್ಷ ಕೋಟಿ ರೂಗೆ ಏರಿಕೆ; ಇದು ಹೊಸ ದಾಖಲೆ

|

Updated on: Jun 15, 2023 | 12:30 PM

All Time High Market Capitalization: ಬಾಂಬ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಒಟ್ಟಾರೆ ಷೇರುಸಂಪತ್ತು 291.89 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.

BSE Record: ಭಾರತದ ಒಟ್ಟು ಷೇರುಸಂಪತ್ತು 292 ಲಕ್ಷ ಕೋಟಿ ರೂಗೆ ಏರಿಕೆ; ಇದು ಹೊಸ ದಾಖಲೆ
ಷೇರುಮಾರುಕಟ್ಟೆ
Follow us on

ನವದೆಹಲಿ: ಭಾರತದ ಅತಿದೊಡ್ಡ ಷೇರುಮಾರುಕಟ್ಟೆ ಎನಿಸಿದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ (BSE- Bombay Stock Exchange) ಹೊಸ ದಾಖಲೆ ಸ್ಥಾಪನೆ ಆಗಿದೆ. ಬಿಎಸ್​ಇ ಪ್ಲಾಟ್​ಫಾರ್ಮ್​ನಲ್ಲಿ ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಒಟ್ಟಾರೆ ಷೇರುಸಂಪತ್ತು (Market Capitalization) 293.89 ಲಕ್ಷ ಕೋಟಿ ರುಪಾಯಿಗೆ ಏರಿದೆ. ಇದು ಜೂನ್ 15, ಗುರುವಾರ ಬೆಳಗಿನ ವಹಿವಾಟಿನಲ್ಲಿ ಏರಿಕೆಯಾದ ಮೊತ್ತ. ಇದು ಸಾರ್ವಕಾಲಿಕವಾದ ದಾಖಲೆ ಎಂದು ಪರಿಗಣಿಸಲಾಗಿದೆ. 2022ರ ಡಿಸೆಂಬರ್ ತಿಂಗಳಲ್ಲಿ ಬಿಎಸ್​ಇನಲ್ಲಿ ಒಟ್ಟಾರೆ ಷೇರುಸಂಪತ್ತು 291.25 ಲಕ್ಷ ಕೋಟಿ ರೂ ಆಗಿದ್ದುದು ದಾಖಲೆಯಾಗಿತ್ತು. ಈಗ ಅದನ್ನೂ ಮೀರಿಸಿ ಹೆಚ್ಚು ಮೊತ್ತ ಸೇರ್ಪಡೆಯಾಗಿದೆ.

ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕು ಈ ವರ್ಷ ಎರಡು ಬಾರಿ ಬಡ್ಡಿ ದರ ಹೆಚ್ಚಳ ಮಾಡುವುದಾಗಿ ಹೇಳಿದ್ದು ಷೇರುಪೇಟೆಯ ಮಂದಿಯ ಉತ್ಸಾಹ ಕುಂದಿಸಿದ್ದು ಹೌದು. ಇದರ ಪರಿಣಾಮವಾಗಿ ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ 150 ಅಂಕಗಳನ್ನು ಕಳೆದುಕೊಂಡಿತ್ತು. ಆದರೆ, ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ನಿರೀಕ್ಷೆಮೀರಿ ವೃದ್ಧಿ ಸಾಧಿಸಿವೆ. ಎರಡೂ ಕೂಡ ಸಾರ್ವಕಾಲಿಕ ಎತ್ತರಕ್ಕೆ ಹೋಗಿವೆ. ಹೀಗಾಗಿ, ಬಾಂಬೆ ಸ್ಟಾಕ್ ಎಕ್ಸ್​ಚೇಂಜನ್​ನಲ್ಲಿರುವ ಒಟ್ಟು ಷೇರುಸಂಪತ್ತಿನಲ್ಲಿ ಏರಿಕೆ ಆಗಲು ಸಾಧ್ಯವಾಗಿದೆ.

ಇದನ್ನೂ ಓದಿUS Rates: ಈ ಬಾರಿ ಬಡ್ಡಿದರ ಹೆಚ್ಚಳ ಇಲ್ಲ: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಅನಿರೀಕ್ಷಿತ ನಿರ್ಧಾರ; ಚಿನ್ನ ಮತ್ತು ತೈಲ ಬೆಲೆಗಳಲ್ಲಿ ವ್ಯತ್ಯಯ

ಮಾರ್ಚ್ 28ರ ಬಳಿಕ ಷೇರುಪೇಟೆಯ ಅಮೋಘವಾಗಿ ಬೆಳೆಯುತ್ತಾ ಬಂದಿದೆ. 2022ರ ಡಿಸೆಂಬರ್​ನಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಿದ್ದ ಬಿಎಸ್​ಇ ಷೇರುಸಂಪತ್ತು ಕ್ರಮೇಣ ಕುಸಿತ ಕಂಡು 2023ರ ಮಾರ್ಚ್ ತಿಂಗಳಲ್ಲಿ 255 ಲಕ್ಷ ಕೋಟಿ ರೂ ಮಟ್ಟಕ್ಕಿಂತ ಕೆಳಗೆ ಹೋಗಿತ್ತು. ಹಿಂಡನ್ಬರ್ಗ್ ವರದಿ ಫಲವಾಗಿ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಕುಸಿತಕಂಡಿದ್ದು ಷೇರಸಂಪತ್ತು ಸಾಕಷ್ಟು ಕರಗಲು ಪ್ರಮುಖ ಕಾರಣವಾಗಿತ್ತು. ಆದರೆ, ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕದಲ್ಲಿ ಒಟ್ಟಾರೆ ಆರ್ಥಿಕತೆ ಸಕಾರಾತ್ಮಕವಾಗಿ ತೋರತೊಡಗಿದ ಬಳಿಕ ಷೇರುಪೇಟೆಯಲ್ಲಿ ಉತ್ಸಾಹ ಹೆಚ್ಚಿಸತೊಡಗಿತ್ತು. 2-3 ತಿಂಗಳಲ್ಲಿ ಬಿಎಸ್​ಇ ಷೇರುಸಂಪತ್ತು ಗಣನೀಯವಾಗಿ ಹೆಚ್ಚಿದೆ. ಮಾರ್ಚ್ 28ರ ಬಳಿಕ ಷೇರುಸಂಪತ್ತು ಶೇ. 16ರಷ್ಟು ಹೆಚ್ಚಿರುವುದು ಸಾಮಾನ್ಯ ಸಂಗತಿ ಅಲ್ಲ.

ಬಿಎಸ್​ಇ ಮತ್ತು ಎನ್​ಎಸ್​ಇ

19ನೇ ಶತಮಾನದಲ್ಲಿ ಸ್ಥಾಪನೆಯಾದ ಬಿಎಸ್​ಇ ಷೇರುಪೇಟೆಯಲ್ಲಿ ಸದ್ಯ 7,000ಕ್ಕೂ ಹೆಚ್ಚು ಕಂಪನಿಗಳು ಲಿಸ್ಟ್ ಆಗಿವೆ. ಇದರಲ್ಲಿ ಬಿಎಸ್​ಇ ವಿವಿಧ ಸೂಚ್ಯಂಕಗಳನ್ನು ರಚಿಸಿದೆ. ಅದರಲ್ಲಿ ಸೆನ್ಸೆಕ್ಸ್ ಒಂದು. ಈ ಸೆನ್ಸೆಕ್ಸ್​ನಲ್ಲಿ ಆಯ್ದ 30 ಕಂಪನಿಗಳು ಲಿಸ್ಟ್ ಆಗುತ್ತವೆ. ಈ ಕಂಪನಿಗಳ ಷೇರುಮೌಲ್ಯ ಏರಿಳಿತದ ಮೇಲೆ ಸೆನ್ಸೆಕ್ಸ್ ಅಂಕಗಳಲ್ಲಿ ವ್ಯತ್ಯಯವಾಗುತ್ತಿರುತ್ತದೆ. ಮಿಡ್ ಕ್ಯಾಪ್ ಇಂಡೆಕ್ಸ್​ನಲ್ಲಿ ಮಧ್ಯಮ ಪ್ರಮಾದ ಷೇರುಸಂಪತ್ತು ಹೊಂದಿರುವ ಕೆಲ ಕಂಪನಿಗಳನ್ನು ಲಿಸ್ಟ್ ಮಾಡಲಾಗಿರುತ್ತದೆ. ಸ್ಮಾಲ್ ಕ್ಯಾಪ್ ಎಂದರೆ ಕಡಿಮೆ ಷೇರುಸಂಪತ್ತು.

ಇದನ್ನೂ ಓದಿMultibagger: ರಾಜ್ ರೇಯಾನ್- ಇದಪ್ಪಾ ಮಲ್ಟಿಬ್ಯಾಗರ್ ಷೇರು; 1 ಲಕ್ಷಕ್ಕೆ ಎರಡೇ ವರ್ಷದಲ್ಲಿ 4.45 ಕೋಟಿ ರೂ ಲಾಭ

ಬಿಎಸ್​ಇ ಜೊತೆಗೆ ಎನ್​ಎಸ್​ಇ ಷೇರುಪೇಟೆಯೂ ಇದೆ. ಇದರಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಸಂಖ್ಯೆ ಕಡಿಮೆ ಆದರೂ ಬಿಎಸ್​ಇಗಿಂತ ಇದು ದೊಡ್ಡದು ಎನ್ನಲಾಗುತ್ತದೆ. ಇದು ಹೆಚ್ಚು ಆಧುನಿಕ ಮತ್ತು ಸುಲಭ ವಹಿವಾಟಿಗೆ ಅನುವು ಮಾಡಿಕೊಡುವ ತಂತ್ರಜ್ಞಾನ ಹೊಂದಿದೆ. ಇಲ್ಲಿಯೂ ನಿಫ್ಟಿ50, ಬ್ಯಾಂಕ್ ನಿಫ್ಟಿ ಇತ್ಯಾದಿ ವಿವಿಧ ಸೂಚ್ಯಂಕಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ