ಭಾರತದಲ್ಲಿ ಮತ್ತು ವಿಶ್ವದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಯಾವುವು? ಇಲ್ಲಿದೆ ಪಟ್ಟಿ

|

Updated on: Oct 13, 2024 | 2:32 PM

Highest selling cars in India and world: ಸೆಪ್ಟೆಂಬರ್​ನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಬ್ರೆಜ್ಜಾವನ್ನು ಮಾರುತಿ ಎರ್ಟಿಗಾ ಹಿಂದಿಕ್ಕಿದೆ. ಸೆಪ್ಟೆಂಬರ್ ತಿಂಗಳಲ್ಲಿ 17,441 ಎರ್ಟಿಗಾ ಕಾರುಗಳು ಸೇಲ್ ಆಗಿವೆ. ಮಾರುತಿ ಸ್ವಿಫ್ಟ್, ಹ್ಯುಂಡೈ ಕ್ರೆಟಾ, ಮಾರುತಿ ಬ್ರೆಜ್ಜಾ, ಮಹೀಂದ್ರ ಸ್ಕಾರ್ಪಿಯೋ ಟಾಪ್-5 ಪಟ್ಟಿಯಲ್ಲಿರುವ ಇತರ ಕಾರುಗಳು. ಜಾಗತಿಕವಾಗಿ ಫೋರ್ಡ್ ಎಫ್ ಸರಣಿಯ ಕಾರುಗಳು ಅತಿಹೆಚ್ಚು ಮಾರಾಟವಾಗಿವೆ.

ಭಾರತದಲ್ಲಿ ಮತ್ತು ವಿಶ್ವದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಯಾವುವು? ಇಲ್ಲಿದೆ ಪಟ್ಟಿ
ಕಾರು
Follow us on

ನವದೆಹಲಿ, ಅಕ್ಟೋಬರ್ 13: ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಪ್ರಾಬಲ್ಯ ಮುಂದುವರಿದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 15 ಕಾರುಗಳಲ್ಲಿ ಮಾರುತಿ ಕಂಪನಿಯದ್ದೇ ಹೆಚ್ಚು. ಮಾರುತಿ ಎರ್ಟಿಗಾ ಸೆಪ್ಟೆಂಬರ್​ನಲ್ಲಿ ಅತಿಹೆಚ್ಚು ಸೇಲ್ ಆದ ಕಾರಾಗಿದೆ. ಸೆಪ್ಟೆಂಬರ್​ನಲ್ಲಿ 17,441 ಎರ್ಟಿಗಾ ಕಾರುಗಳ ಮಾರಾಟವಾಗಿದೆ. ಮಾರುತಿ ಸುಜುಕಿಯ ಸ್ವಿಫ್ಟ್ ಕಾರುಗಳು 16,241 ಯೂನಿಟ್ ಮಾರಾಟವಾಗಿವೆ. ಟಾಪ್ 15 ಪಟ್ಟಿಯಲ್ಲಿ ಮಾರುತಿ ಸುಜುಕಿಯ 9 ಮಾಡಲ್​ಗಳು ಸೇರಿವೆ. ಇನ್ನು, ಜಾಗತಿಕವಾಗಿ ಅತಿಹೆಚ್ಚು ಮಾರಾಟವಾದ ಕಾರೆಂದರೆ ಫೋರ್ಡ್ ಎಫ್ ಸೀರೀಸ್. ಬರೋಬ್ಬರಿ 5,28,028 ಕಾರುಗಳು ಜಾಗತಿಕವಾಗಿ ಸೇಲ್ ಆಗಿವೆ. ಆದರೆ ಇದು ಇಡೀ ವರ್ಷದಲ್ಲಿ ಆಗಿರುವ ಮಾರಾಟ.

ಭಾರತದಲ್ಲಿ ಮಾರುತಿ ಬಿಟ್ಟರೆ ಟಾಟಾ, ಹ್ಯುಂಡೈ ಮತ್ತು ಮಹೀಂದ್ರ ಕಾರುಗಳು ಹೆಚ್ಚು ಮಾರಾಟ ಕಂಡಿವೆ. ಟಾಪ್-15 ಕಾರುಗಳಲ್ಲಿ ಮಾರುತಿ ಸುಜುಕಿಯ 9 ಕಾರುಗಳಿವೆ. ಟಾಟಾ ಮತ್ತು ಹ್ಯುಂಡೈನ ಎರಡೆರಡು ಕಾರುಗಳಿವೆ. ಮಹೀಂದ್ರ ಮತ್ತು ಕಿಯಾದ ತಲಾ ಒಂದೊಂದು ಕಾರು ಈ ಪಟ್ಟಿಯಲ್ಲಿವೆ.

ಇದನ್ನೂ ಓದಿ: Best CNG Cars: ಬಜೆಟ್ ಬೆಲೆಗೆ ಭರ್ಜರಿ ಮೈಲೇಜ್ ನೀಡುವ ಟಾಪ್ 5 ಸಿಎನ್‌ಜಿ ಕಾರುಗಳಿವು!

2024ರ ಸೆಪ್ಟೆಂಬರ್​ನಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು

  1. ಮಾರುತಿ ಎರ್ಟಿಗಾ: 17,441 ಕಾರು ಮಾರಾಟ
  2. ಮಾರುತಿ ಸ್ವಿಫ್ಟ್: 16,241
  3. ಹ್ಯುಂಡೈ ಕ್ರೆಟಾ: 15,902
  4. ಮಾರುತಿ ಬ್ರೆಜ್ಜಾ: 15,322
  5. ಮಹೀಂದ್ರ ಸ್ಕಾರ್ಪಿಯೋ: 14,438
  6. ಮಾರುತಿ ಬಲೇನೋ: 14,292
  7. ಮಾರುತಿ ಫ್ರಾಂಕ್ಸ್: 13,874
  8. ಟಾಟಾ ಪಂಚ್: 13,711
  9. ಮಾರುತಿ ವ್ಯಾಗನ್ ಆರ್: 13,339
  10. ಮಾರುತಿ ಈಕೋ: 11,908
  11. ಟಾಟಾ ನೆಕ್ಸನ್: 11,470
  12. ಮಾರುತಿ ಡಿಜೈರ್: 10,853
  13. ಕಿಯಾ ಸೋನೆಟ್: 10,335
  14. ಮಾರುತಿ ಗ್ರ್ಯಾಂಡ್ ವಿಟಾರ: 10,267
  15. ಹ್ಯುಂಡೈ ವೆನ್ಯೂ: 10,259

ಇದನ್ನೂ ಓದಿ: ಭಾರತದ ‘ಮಹಾರತ್ನ’ ಪಟ್ಟ ಗಿಟ್ಟಿಸಿದ ಎಚ್​ಎಎಲ್; ಈ ಗೌರವ ಸಿಗಲು ಮಾನದಂಡಗಳೇನು..?

2024ರಲ್ಲಿ ಜಾಗತಿಕವಾಗಿ ಹೆಚ್ಚು ಮಾರಾಟವಾದ ಕಾರುಗಳು

  1. ಫೋರ್ಡ್ ಎಫ್ ಸೀರೀಸ್: 5,28,028 ಕಾರು
  2. ಶೆವ್ರೋಲೆ ಸಿಲ್ವರಾಡೋ: 3,99,604
  3. ಟೊಯೊಟಾ ಆರ್​ಎವಿ4: 3,50,331
  4. ಟೆಸ್ಲಾ ಮಾಡಲ್ ವೈ: 3,12,000
  5. ಹೊಂಡಾ ಸಿಆರ್-ವಿ: 2,98,164
  6. ರಾಮ್ ಪಿಕಪ್: 2,68,666
  7. ಜಿಎಂಸಿ ಸಿಯೆರಾ: 2,29,011
  8. ಟೊಯೊಟಾ ಕ್ಯಾಮ್ರಿ: 2,27,576
  9. ನಿಸಾನ್ ರೋಗ್: 1,89,156
  10. ಹೊಂಡಾ ಸಿವಿಕ್: 1,88,422

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Sun, 13 October 24