Best CNG Cars: ಬಜೆಟ್ ಬೆಲೆಗೆ ಭರ್ಜರಿ ಮೈಲೇಜ್ ನೀಡುವ ಟಾಪ್ 5 ಸಿಎನ್‌ಜಿ ಕಾರುಗಳಿವು!

Best CNG Cars: ದುಬಾರಿ ಇಂಧನ ಪರಿಣಾಮ ಮಾರುಕಟ್ಟೆಯಲ್ಲಿ ಸಿಎನ್​ಜಿ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆ ದಾಖಲಾಗುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಐದು ಅತ್ಯುತ್ತಮ ಸಿಎನ್ ಜಿ ಕಾರುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Best CNG Cars: ಬಜೆಟ್ ಬೆಲೆಗೆ ಭರ್ಜರಿ ಮೈಲೇಜ್ ನೀಡುವ ಟಾಪ್ 5 ಸಿಎನ್‌ಜಿ ಕಾರುಗಳಿವು!
ಸಿಎನ್‌ಜಿ ಕಾರುಗಳು
Follow us
Praveen Sannamani
|

Updated on: Sep 30, 2024 | 10:24 PM

ಕಾರು ಮಾರುಕಟ್ಟೆಯಲ್ಲಿ ಸದ್ಯ ಸಿಎನ್​ಜಿ (CNG) ಆವೃತ್ತಿಗಳ ಮಾರಾಟವು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಉತ್ಪಾದನಾ ಕಂಪನಿಗಳು ಹಲವಾರು ಹೊಸ ಕಾರು ಮಾದರಿಗಳಲ್ಲಿ ಸಿಎನ್​ಜಿ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಅತ್ಯುತ್ತಮ ಫೀಚರ್ಸ್ ಗಳನ್ನು ಹೊಂದಿವೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ಸದ್ಯ ಖರೀದಿಗೆ ಲಭ್ಯವಿರುವ ಬಜೆಟ್ ಬೆಲೆಯ ಸಿಎನ್ ಜಿ ಕಾರುಗಳು ಯಾವುವು? ಅವುಗಳ ವಿಶೇಷತೆಗಳೇನು? ಬೆಲೆ ಎಷ್ಟು? ಈ ಎಲ್ಲಾ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಮಾರುತಿ ಸುಜುಕಿ ಸೆಲೆರಿಯೊ

ಅತ್ಯುತ್ತಮ ಇಂಧನ ದಕ್ಷತೆಗೆ ಹೆಸರುವಾಸಿಯಾಗಿರುವ ಮಾರುತಿ ಸುಜುಕಿಯ ಬಹುತೇಕ ಕಾರುಗಳಲ್ಲಿ ಇದೀಗ ಪೆಟ್ರೋಲ್ ಜೊತೆಗೆ ಸಿಎನ್ ಜಿ ಆಯ್ಕೆ ಕೂಡಾ ಹೊಂದಿವೆ. ಇವುಗಳಲ್ಲಿ ಸೆಲೆರಿಯೊ ಬಜೆಟ್ ಬೆಲೆಯ ಹ್ಯಾಚ್ ಬ್ಯಾಕ್ ಸಿಎನ್ ಜಿ ಖರೀದಿಸುವ ಗ್ರಾಹಕರಿಗೆ ಉತ್ತಮ ಆಯ್ಕೆ ಎನ್ನಬಹುದು. 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಹೊಂದಿರುವ ಸೆಲೆರಿಯೊ ಕಾರು ಪ್ರತಿ ಕೆ.ಜಿ ಸಿಎನ್ ಜಿಗೆ 34.43 ಕಿ.ಮೀ ಮೈಲೇಜ್ ನೀಡುತ್ತದೆ. ಜೊತೆಗೆ ಇದು ಮಾರುತಿ ಸುಜುಕಿ ಇತರೆ ಬಜೆಟ್ ಹ್ಯಾಚ್ ಬ್ಯಾಕ್ ಕಾರುಗಳಿಂತಲೂ ಉತ್ತಮ ಫೀಚರ್ಸ್ ಹೊಂದಿದ್ದು, ಪೆಟ್ರೋಲ್ ಮಾದರಿಗಿಂತ ರೂ. 91 ಸಾವಿರದಷ್ಟು ದುಬಾರಿಯಾಗಿರುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್

ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿರುವ ಸ್ವಿಫ್ಟ್ ಕಾರಿನಲ್ಲಿ 1.2 ಲೀಟರ್ ಜೆಡ್12ಇ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಜೋಡಣೆ ಮಾಡಲಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ ಬರೋಬ್ಬರಿ 32.85 ಕಿ.ಮೀ ಮೈಲೇಜ್ ನೀಡುತ್ತದೆ. ಆಕರ್ಷಕ ಬೆಲೆ, ಸ್ಪೋರ್ಟಿಯಾಗಿರುವ ವಿನ್ಯಾಸ, ಅತ್ಯುತ್ತಮ ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿರುವ ಸ್ವಿಫ್ಟ್ ಕಾರು ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳೊಂದಿಗೆ ಮಾರಾಟಗೊಳ್ಳುತ್ತಿದೆ. ಹೊಸ ಸ್ವಿಫ್ಟ್ ಸಿಎನ್ ಜಿ ಮಾದರಿಯು ವಿಎಕ್ಸ್ಐ, ವಿಎಕ್ಸ್ಐ ಆಪ್ಷನ್ ಮತ್ತು ಜೆಡ್ಎಕ್ಸ್ಐ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 8.20 ಲಕ್ಷ, ರೂ. 8.47 ಲಕ್ಷ ಮತ್ತು ರೂ. 9.20 ಲಕ್ಷ ಬೆಲೆ ಹೊಂದಿವೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ..

ಮಾರುತಿ ಫ್ರಾಂಕ್ಸ್ ಮತ್ತು ಟೊಯೊಟಾ ಟೈಸರ್

ಮಾರುತಿ ಸುಜುಕಿಯ ಫ್ರಾಂಕ್ಸ್ ಮತ್ತು ಟೊಯೊಟಾ ಟೈಸರ್ ಮಾದರಿಗಳು ಒಂದೇ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ವಿವಿಧ ಬ್ರಾಂಡ್ ಗಳ ಅಡಿ ಬದಲಿ ಹೆಸರಿನಲ್ಲಿ ಮಾರಾಟವಾಗುತ್ತಿವೆ. ಫ್ರಾಂಕ್ಸ್ ಮತ್ತು ಟೈಸರ್ ಕಾರುಗಳಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಆಯ್ಕೆ ನೀಡಲಾಗಿದ್ದು, ಇದರಲ್ಲಿ ಸಿಎನ್ ಜಿ ಮಾದರಿಗಳು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ 28.51 ಕಿ.ಮೀ ಮೈಲೇಜ್ ನೀಡುತ್ತವೆ. ಹ್ಯಾಚ್ ಬ್ಯಾಕ್ ಗಿಂತಲೂ ಉತ್ತಮ ಡ್ರೈವ್ ಅನುಭವಿಸಬೇಕೆನ್ನುವ ಗ್ರಾಹಕರಿಗೆ ಫ್ರಾಂಕ್ಸ್ ಮತ್ತು ಟೈಸರ್ ಅತ್ಯುತ್ತಮ ಆಯ್ಕೆಯಾಗಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 8. 46 ಲಕ್ಷದಿಂದ ರೂ. 9.32 ಲಕ್ಷ ಬೆಲೆ ಅಂತರದಲ್ಲಿ ಖರೀದಿಗೆ ಲಭ್ಯವಿವೆ.

ಹ್ಯುಂಡೈ ಎಕ್ಸ್ ಟರ್

ಹ್ಯುಂಡೈ ಎಕ್ಸ್ ಟರ್ ಕಾರು ಸಿಎನ್‌ಜಿ ಆಯ್ಕೆ ಹೊಂದಿರುವ ಪ್ರಮುಖ ಕಾರು ಮಾದರಿಗಳಲ್ಲಿ ಒಂದಾಗಿದೆ. ಇದು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಹೊಂದಿದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ 27.1 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 8.50 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಇದನ್ನೂ ಓದಿ: ಹೊಸ ಕಾರು ಖರೀದಿಸುವಾಗ ಯಾವ ವೆರಿಯೆಂಟ್ ಗಳು ಖರೀದಿಗೆ ಬೆಸ್ಟ್?

ಟಾಟಾ ಪಂಚ್

ಟಾಟಾ ಹೊಸ ಪಂಚ್ ಅತ್ಯುತ್ತಮ ಸಿಎನ್ ಜಿ ಕಾರುಗಳಲ್ಲಿ ಒಂದಾಗಿದೆ. ಇದು ಎಕ್ಸ್ ಶೋರೂಂ ಪ್ರಕಾರ ಇದು ರೂ. 7.23 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಇದು 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಜೊತೆಗೆ ವಿಶೇಷ ತಂತ್ರಜ್ಞಾನ ಪ್ರೇರಿತ ಐಸಿಎನ್‌ಜಿ ಕಿಟ್ ಜೋಡಣೆ ಹೊಂದಿದೆ. ಇದರೊಂದಿಗೆ ಇದು ಮ್ಯಾನುವಲ್ ಗೇರ್ ಬಾಕ್ಸ್ ಮೂಲಕ ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 26.99 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್