Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ ಫೀಚರ್ಸ್ ಹೊಂದಿರುವ ಬಿಎಂಡಬ್ಲ್ಯು ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

BMW CE 02 Electric Scooter: ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ ತನ್ನ ಹೊಸ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಆಕರ್ಷಕ ಬೆಲೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಕಾರ್ ಫೀಚರ್ಸ್ ಹೊಂದಿರುವ ಬಿಎಂಡಬ್ಲ್ಯು ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಬಿಎಂಡಬ್ಲ್ಯು ಸಿಇ 02 ಎಲೆಕ್ಟ್ರಿಕ್ ಸ್ಕೂಟರ್
Follow us
Praveen Sannamani
|

Updated on: Oct 01, 2024 | 7:50 PM

ಐಷಾರಾಮಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ (BMW Motorrad India) ತನ್ನ ಬಹುನೀರಿಕ್ಷಿತ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಎಕ್ಸ್ ಶೋರೂಂ ಪ್ರಕಾರ ರೂ. 4.50 ಲಕ್ಷ ಬೆಲೆ ಹೊಂದಿದೆ. ಸಧಾರಿತ ತಂತ್ರಜ್ಞಾನದ ಜೊತೆಗೆ ಅತ್ಯುತ್ತಮ ಫೀಚರ್ಸ್ ಹೊಂದಿರುವ ಹೊಸ ಇವಿ ಸ್ಕೂಟರ್ ನೋಡಲು ಆಕರ್ಷಕವಾಗಿದ್ದು, ಮತ್ತೊಂದು ವಿಶೇಷವೆಂದರೆ ಹೊಸ ಇವಿ ಸ್ಕೂಟರ್ ಮಾದರಿಯು ಟಿವಿಎಸ್ ಮೋಟಾರ್ ಸಹಭಾಗಿತ್ವದೊಂದಿಗೆ ಭಾರತದಲ್ಲಿಯೇ ಉತ್ಪಾದನೆಗೊಳ್ಳಲಿದೆ.

ತಮಿಳುನಾಡಿನ ಹೊಸೂರಿನಲ್ಲಿರುವ ಟಿವಿಎಸ್ ದ್ವಿಚಕ್ರ ವಾಹನ ಉತ್ಪಾದನಾ ಘಟಕದಲ್ಲಿ ಹೊಸ ಇವಿ ಸ್ಕೂಟರ್ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್ ಫಾರ್ಮ್ ತೆರೆಯಲಾಗಿದ್ದು, ಇದು ಇವಿ ತಂತ್ರಜ್ಞಾನದಲ್ಲಿ ಮುಂದುವರೆದ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ. ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 3.92kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದು 11kW ಪವರ್ ಮತ್ತು 55 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ 108 ಕಿ.ಮೀ ಮೈಲೇಜ್ ನೀಡುತ್ತದೆ.

ಸಿಇ 02 ಸ್ಕೂಟರ್ ಒಟ್ಟು 142 ಕೆಜಿ ತೂಕದೊಂದಿಗೆ 160 ಸಿಸಿ ಬೈಕ್ ಮಾದರಿಗಳಿಗೆ ಸರಿಸಮನಾಗಿ ಪರ್ಫಾಮೆನ್ಸ್ ಹೊಂದಿದ್ದು, ಇದು ಪ್ರತಿ ಗಂಟೆಗೆ 95 ಕಿ.ಮೀ ಟಾಪ್ ಸ್ಪೀಡ್ ನೊಂದಿಗೆ ಕೇವಲ 3 ಸೆಕೆಂಡುಗಳಲ್ಲಿ ಸೊನ್ನೆಯಿಂದ 50 ಕಿ.ಮೀ ಸ್ಪೀಡ್ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇದು ನಗರಗಳಲ್ಲಿನ ಟ್ರಾಫಿಕ್ ದಟ್ಟಣೆಯ ನಡುವೆಯೂ ಅತ್ಯುತ್ತಮ ಪರ್ಫಾಮೆನ್ಸ್ ಗೆ ಸಹಕಾರಿಯಾಗಿದ್ದು, ಇದರಲ್ಲಿ ರೈಡಿಂಗ್ ಅನುಭವ ಹೆಚ್ಚಿಸಲು ಫ್ಲೋ, ಸರ್ಫ್ ಮತ್ತು ಫ್ಲ್ಯಾಶ್ ಎನ್ನುವ ಮೂರು ರೈಡಿಂಗ್ ಮೋಡ್ ಗಳನ್ನು ನೀಡಲಾಗಿದೆ.

ಜೊತೆಗೆ ಹೊಸ ಸ್ಕೂಟರಿನಲ್ಲಿ ಯುಎಸ್ ಬಿ ಸಿ ಟೈಪ್ ಚಾರ್ಜಿಂಗ್ ಸಾಕೆಟ್, 3.5 ಇಂಚಿನ ಮೈಕ್ರೊ ಟಿಎಫ್ ಟಿ ಡಿಸ್‌ಪ್ಲೇ ನೀಡಲಾಗಿದ್ದು, ಸವಾರರಿಗೆ ವಿವಿಧ ಮಾಹಿತಿಗಳೊಂದಿಗೆ ವೇಗ ಮತ್ತು ಬ್ಯಾಟರಿ ಚಾರ್ಜ್ ಸ್ಥಿತಿಯಂತಹ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ಭರ್ಜರಿ ಮೈಲೇಜ್ ನೀಡುವ ರಿವೋಲ್ಟ್ ಆರ್‌ವಿ1 ಇವಿ ಬೈಕ್ ಬಿಡುಗಡೆ

ಇನ್ನು ಹೊಸ ಇವಿ ಸ್ಕೂಟರ್ ನಲ್ಲಿ ಇನ್ನು ಹೆಚ್ಚಿನ ಫೀಚರ್ಸ್ ಮತ್ತು ಐಷಾರಾಮಿ ಸೌಲಭ್ಯಗಳನ್ನು ಬಯಸುವ ಗ್ರಾಹಕರಿಗಾಗಿ ಬಿಎಂಡಬ್ಲ್ಯು ಕಂಪನಿಯು ಹೈಲೈನ್ ಎನ್ನುವ ಆಕ್ಸೆಸರಿಸ್ ಪ್ಯಾಕೇಜ್ ಸಹ ಪರಿಚಯಿಸಿದ್ದು, ಇದರಲ್ಲಿ ಗ್ರಾಹಕರು ಹೆಚ್ಚುವರಿ ಹಣ ಪಾವತಿಯೊಂದಿಗೆ ಗೋಲ್ಡ್ ಆನೋಡೈಸ್ಡ್ ಫೋರ್ಕ್‌ಗಳು, ಡೈನಾಮಿಕ್ ಟೇಪ್ ವಿನ್ಯಾಸಗಳು, ಬ್ಲೂಟೂತ್ ಇಂಟರ್ಫೇಸ್, ಎಸ್ ಪಿ ಕನೆಕ್ಟ್ ಸ್ಮಾರ್ಟ್‌ಫೋನ್ ಹೋಲ್ಡರ್, ಹೆಚ್ಚುವರಿ ರೈಡಿಂಗ್ ಮೋಡ್‌ಗಳು, ತ್ವರಿತ ಚಾರ್ಜರ್, ಹಿಟೆಡ್ ಗ್ರೀಪ್ ಮತ್ತು ಮುಂತಾದ ಹೆಚ್ಚುವರಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ.