ಭಾರತದ ‘ಮಹಾರತ್ನ’ ಪಟ್ಟ ಗಿಟ್ಟಿಸಿದ ಎಚ್​ಎಎಲ್; ಈ ಗೌರವ ಸಿಗಲು ಮಾನದಂಡಗಳೇನು..?

HAL gets Maharatna status: ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆಯನ್ನು ‘ಮಹಾರತ್ನ’ ಪಟ್ಟಿಗೆ ಸೇರಿಸಲಾಗಿದೆ. ಇದರೊಂದಿಗೆ ಎಚ್​​ಎಎಲ್ ಭಾರತದ 14ನೇ ಮಹಾರತ್ನ ಸಂಸ್ಥೆಯಾಗಿದೆ. ವಾರ್ಷಿಕ ಆದಾಯ, ಲಾಭ, ಅಂತಾರಾಷ್ಟ್ರೀಯ ಉಪಸ್ಥಿತಿ ಇತ್ಯಾದಿ ನಿರ್ದಿಷ್ಟ ಮಾನದಂಡಗಳ ಪ್ರಕಾರ ಸಂಸ್ಥೆಗಳನ್ನು ವಿವಿಧ ರತ್ನಗಳಾಗಿ ವರ್ಗೀಕರಿಸಲಾಗುತ್ತದೆ. ಮಹಾರತ್ನ, ನವರತ್ನ ಮತ್ತು ಮಿನಿರತ್ನಗಳೆಂದು ವರ್ಗೀಕರಿಸಲಾಗುತ್ತದೆ.

ಭಾರತದ ‘ಮಹಾರತ್ನ’ ಪಟ್ಟ ಗಿಟ್ಟಿಸಿದ ಎಚ್​ಎಎಲ್; ಈ ಗೌರವ ಸಿಗಲು ಮಾನದಂಡಗಳೇನು..?
ಎಚ್​ಎಎಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 13, 2024 | 1:40 PM

ನವದೆಹಲಿ, ಅಕ್ಟೋಬರ್ 13: ಒಂದು ಸಮಯದಲ್ಲಿ ಮುಚ್ಚೇ ಹೋಗಬಹುದೇನೋ ಎನ್ನುವಂತಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆ ಇವತ್ತು ಭಾರತದ ವೈಭವದ ಕಥೆ ಹೇಳಲು ಮುಂಚೂಣಿಯಲ್ಲಿದೆ. ಭಾರತದ ಮಿಲಿಟರಿಗೆ ಎಚ್​ಎಎಲ್ ಹಲವು ಶಸ್ತ್ರಾಸ್ತ್ರಗಳನ್ನು ನಿರ್ಮಿಸಿಕೊಡುತ್ತಿದೆ. ಭಾರತದ ಅತ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಅದು ಒಂದಾಗಿದೆ. ಅಂತೆಯೇ, ಇದೀಗ ಎಚ್​ಎಎಲ್​ಗೆ ‘ಮಹಾರತ್ನ’ ಸ್ಥಾನಮಾನ ನೀಡಲಾಗಿದೆ. ಇದರೊಂದಿಗೆ ಎಚ್​ಎಎಲ್ ಭಾರತದ 14ನೇ ಮಹಾರತ್ನ ಸಂಸ್ಥೆಯಾಗಿದೆ. ಕೇಂದ್ರದ ಸಾರ್ವಜನಿಕ ವಲಯದ ಉದ್ದಿಮೆಗಳ ಇಲಾಖೆ ನಿನ್ನೆ (ಅ. 12) ಈ ವಿಚಾರವನ್ನು ಬಹಿರಂಗಪಡಿಸಿದೆ.

‘ನವರತ್ನ’ ಸ್ಥಾನ ಹೊಂದಿದ್ದ ಎಚ್​ಎಎಲ್ ಅನ್ನು ‘ಮಹಾರತ್ನ’ ಸ್ಥಾನಕ್ಕೇರಿಸಲು ಎರಡು ಉನ್ನತ ಮಟ್ಟದ ಸಮಿತಿಗಳು ಶಿಫಾರಸು ಮಾಡಿದ್ದವು. ಕೇಂದ್ರ ಹಣಕಾಸು ಕಾರ್ಯದರ್ಶಿ ನೇತೃತ್ವದ ಅಂತರ ಸಚಿವೀಯ ಸಮಿತಿ (ಐಎಂಸಿ), ಹಾಗೂ ಸಂಪುಟ ಕಾರ್ಯದರ್ಶಿ ನೇತೃತ್ವದ ಏಪೆಕ್ಸ್ ಸಮಿತಿಯಿಂದ ಶಿಫಾರಸು ಮಾಡಲಾಗಿತ್ತು.

ಮಹಾರತ್ನ ಸ್ಥಾನದಿಂದ ಏನು ಲಾಭ?

ಮಹಾರತ್ನ ಸ್ಥಾನಮಾನ ಪಡೆದ ಸರ್ಕಾರಿ ಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ ಕಡಿಮೆ ಇರುತ್ತದೆ. ಅದರ ಕಾರ್ಯಾಚರಣೆಯ ಸ್ವಾಯತ್ತತೆ ಹೆಚ್ಚಿರುತ್ತದೆ. ಅಂದರೆ, ಹೆಚ್ಚಿನ ಮೊತ್ತದ ವ್ಯವಹಾರಗಳನ್ನು ಸರ್ಕಾರದ ಅನುಮತಿ ಇಲ್ಲದೇ ಸ್ವತಂತ್ರವಾಗಿ ತೆಗೆದುಕೊಳ್ಳಬಹುದು. ಈಗ ಮಹಾರತ್ನ ಸ್ಥಾನ ಪಡೆದಿರುವ ಎಚ್​ಎಎಲ್ ಸಂಸ್ಥೆ ಹೆಚ್ಚು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು.

ಇದನ್ನೂ ಓದಿ: ಶ್ರೀಮಂತ ದೇಶಗಳಲ್ಲಿ ಹೆಲ್ತ್​ಕೇರ್ ಸಿಸ್ಟಂ ಹೇಗಿದೆ ಅಂತ ನೋಡಿದ್ದೇನೆ: ಭಾರತದ ವೈದ್ಯಕೀಯ ವ್ಯವಸ್ಥೆ ಪ್ರಶಂಸಿಸಿದ ರಾಧಿಕಾ ಗುಪ್ತಾ

ಮಹಾರತ್ನ ಸ್ಥಾನ ಪಡೆಯಲು ಅರ್ಹತೆಗಳೇನು?

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಅವುಗಳ ಕ್ಷಮತೆ ಮತ್ತು ವಿಶಾಲತೆಯ ಆಧಾರದ ಮೇಲೆ ಮಹಾರತ್ನ, ನವರತ್ನ, ಮಿನಿರತ್ನ 1, ಮಿನಿರತ್ನ 2 ಎಂದು ವರ್ಗೀಕರಿಸಲಾಗಿದೆ. ಮಹಾರತ್ನ ಎಂಬುದು ಅತ್ಯುಚ್ಚ ಮಟ್ಟದ್ದಾಗಿರುತ್ತದೆ. ಮಹಾರತ್ನ ಪಟ್ಟಿಯಲ್ಲಿ ಎಚ್​ಎಲ್ ಸೇರ್ಪಡೆ ಬಳಿಕ 14 ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿವೆ. ನವರತ್ನ ವಿಭಾಗದಲ್ಲಿ 24 ಸಂಸ್ಥೆಗಳಿವೆ. ಮಿನಿರತ್ನ-1 ಕೆಟಗರಿಯಲ್ಲಿ 51 ಕಂಪನಿಗಳಿದ್ದರೆ, ಮಿನಿರತ್ನ-2 ವಿಭಾಗದಲ್ಲಿ 11 ಸಂಸ್ಥೆಗಳಿವೆ. ಮಹಾರತ್ನ ಸ್ಥಾನ ಪಡೆಯಲು ಇರುವ ಮಾನದಂಡಗಳೇನು ಎಂಬ ವಿವರ ಇಲ್ಲಿದೆ:

  • ನವರತ್ನ ಸ್ಥಾನ ಹೊಂದಿರಬೇಕು
  • ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರಬೇಕು.
  • ಕಳೆದ ಮೂರು ವರ್ಷದಲ್ಲಿ ಕನಿಷ್ಠ 5,000 ಕೋಟಿ ರೂನಷ್ಟಾದರೂ ವಾರ್ಷಿಕ ಸರಾಸರಿ ನಿವ್ವಳ ಲಾಭ ಹೊಂದಿರಬೇಕು.
  • ಕಳೆದ ಮೂರು ವರ್ಷದಲ್ಲಿ ಸರಾಸರಿ ವಾರ್ಷಿಕ ವಹಿವಾಟು 25,000 ಕೋಟಿ ರೂ ಇರಬೇಕು.
  • ಜಾಗತಿಕವಾಗಿ ಅದು ಕಾರ್ಯಾಚರಿಸುತ್ತಿರಬೇಕು. ಅಂದರೆ, ಅಂತಾರಾಷ್ಟ್ರೀಯ ಉಪಸ್ಥಿತಿ ಇರಬೇಕು.

ಎಚ್​ಎಎಲ್ ಸಂಸ್ಥೆ 2023-24ರ ಹಣಕಾಸು ವರ್ಷದಲ್ಲಿ 28,162 ಕೋಟಿ ರೂ ಬಿಸಿನೆಸ್ ಪಡೆದಿದೆ. ನಿವ್ವಳ ಲಾಭ 7,595 ಕೋಟಿ ರೂ ಇದೆ.

ಇದನ್ನೂ ಓದಿ: ಕಳೆದ ಆರು ತಿಂಗಳಲ್ಲಿ ಇನ್ಕಮ್ ಟ್ಯಾಕ್ಸ್ ಸೇರಿದಂತೆ ಆದಾಯ ತೆರಿಗೆ ಸಂಗ್ರಹ 13 ಲಕ್ಷ ರೂ

ಮಹಾರತ್ನ ಸ್ಥಾನ ಪಡೆದ ಭಾರತದ ಸರ್ಕಾರಿ ಸಂಸ್ಥೆಗಳ ಪಟ್ಟಿ

  1. ಬಿಎಚ್​ಇಎಲ್
  2. ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್)
  3. ಕೋಲ್ ಇಂಡಿಯಾ
  4. ಜಿಎಐಎಲ್ ಇಂಡಿಯಾ
  5. ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್​ಪಿಸಿಎಲ್)
  6. ಇಂಡಿಯನ್ ಆಯಿಲ್ (ಐಒಸಿಎಲ್)
  7. ಎನ್​ಟಿಪಿಸಿ
  8. ಒಎನ್​ಜಿಸಿ
  9. ಪವರ್ ಫೈನಾನ್ಸ್ ಕಾರ್ಪೊರೇಶನ್
  10. ಪವರ್ ಗ್ರಿಡ್ ಕಾರ್ಪೊರೇಶನ್
  11. ಸ್ಟೀಲ್ ಅಥಾರಿಟಿ (ಎಸ್​ಎಐಎಲ್)
  12. ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಶನ್
  13. ಆಯಿಲ್ ಇಂಡಿಯಾ
  14. ಎಚ್​ಎಎಲ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ