Maruti Cars Price Hike: ಮಾರುತಿ ಕಾರುಗಳ ಎಲ್ಲ ಮಾಡೆಲ್ಗಳ ಬೆಲೆಯಲ್ಲಿ ಸೆಪ್ಟೆಂಬರ್ನಿಂದ ಆಗಲಿದೆ ಏರಿಕೆ
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ನಿಂದ ಎಲ್ಲ ಕಾರಿನ ಮಾಡೆಲ್ಗಳ ಬೆಲೆಯಲ್ಲಿ ಸೆಪ್ಟೆಂಬರ್ನಿಂದ ಏರಿಕೆ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ.
ಭಾರತದ ಅತಿದೊಡ್ಡ ಕಾರು ತಯಾರಕ ಕಂಪೆನಿ ಆಗಿರುವ ಮಾರುತಿ ಸುಜುಕಿಯಿಂದ ಸೆಪ್ಟೆಂಬರ್‌ನಲ್ಲಿ ಎಲ್ಲ ಮಾಡೆಲ್ಗಳ ಬೆಲೆಯನ್ನು ಹೆಚ್ಚಿಸಲಿದ್ದು, FY21-22ರಲ್ಲಿ ಇದು ಮೂರನೇ ಹೆಚ್ಚಳವಾಗಿದೆ. ದೆಹಲಿ ಮೂಲದ ಕಾರು ತಯಾರಕ ಕಂಪೆನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ನಿಂದ ಏಪ್ರಿಲ್ ಮತ್ತು ಜುಲೈನಲ್ಲಿ ಬೆಲೆಯನ್ನು ಹೆಚ್ಚಿಸಿತ್ತು. “ವಿವಿಧ ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಳೆದ ವರ್ಷದಲ್ಲಿ ಕಂಪೆನಿಯ ವಾಹನಗಳ ವೆಚ್ಚದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ನಿಮಗೆ ತಿಳಿಸಲು ಬಯಸುತ್ತೇವೆ. ಆದ್ದರಿಂದ ಬೆಲೆ ಏರಿಕೆಯ ಮೂಲಕ ಹೆಚ್ಚುವರಿ ವೆಚ್ಚದ ಅಲ್ಪ ಪ್ರಮಾಣದ ಭಾರವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ,” ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್) ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಹೇಳಿದೆ.
“ಎಲ್ಲ ಮಾಡೆಲ್ಗಳಲ್ಲೂ ಮಾದರಿಗಳಾದ್ಯಂತ ಸೆಪ್ಟೆಂಬರ್ 2021ರಲ್ಲಿ ಬೆಲೆ ಏರಿಕೆಯನ್ನು ಯೋಜಿಸಲಾಗಿದೆ,” ಎಂದು MSIL ತಿಳಿಸಿದೆ. ಆದರೂ ಕಂಪೆನಿಯು ಮುಂದಿನ ತಿಂಗಳಲ್ಲಿ ಮಾಡಲು ಯೋಜಿಸಿರುವ ಏರಿಕೆಯ ಪ್ರಮಾಣವನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ. ಸೆಪ್ಟೆಂಬರ್ 10ರಂದು ಗಣೇಶ ಚತುರ್ಥಿಯೊಂದಿಗೆ ಹಬ್ಬದ ಸೀಸನ್ ಆರಂಭವಾಗುವ ಮುನ್ನವೇ ಈ ಹೆಚ್ಚಳವು ಜಾರಿಗೆ ಬರಲಿದೆ.
ಟಾಟಾ ಮೋಟಾರ್ಸ್, ಹೋಂಡಾ ಕಾರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ರೆನಾಲ್ಟ್ ಮತ್ತು ಟೊಯೊಟಾ ಕಂಪೆನಿಯಿಂದ ಜುಲೈ- ಆಗಸ್ಟ್ ಅವಧಿಯಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿದೆ. ಉಕ್ಕು ಮತ್ತು ಇತರ ಬೆಲೆಬಾಳುವ ಲೋಹಗಳಂತಹ ಕಚ್ಚಾ ವಸ್ತುಗಳ ಬೆಲೆಯಲ್ಲಿನ ಹೆಚ್ಚಳವನ್ನು ಸರಿತೂಗಿಸಲು ಈ ಏರಿಕೆಯನ್ನು ಮಾಡಲಾಗಿದೆ. ICRA ರೇಟಿಂಗ್ ಮತ್ತು ಮಾರುಕಟ್ಟೆ ಗುಪ್ತಚರ ಕಂಪೆನಿ ಹಂಚಿಕೊಂಡ ವರದಿಯ ಪ್ರಕಾರ, ವರ್ಷದ ದ್ವಿತೀಯಾರ್ಧದಲ್ಲಿ ಕಡಿಮೆಯಾಗುವ ಮುನ್ನ, ಸರಕುಗಳ ಬೆಲೆಗಳು FY22ನ ಮೊದಲಾರ್ಧದಲ್ಲಿ ಬಹು ವರ್ಷದ ಗರಿಷ್ಠ ಮಟ್ಟದಲ್ಲಿ ಉಳಿಯುವ ನಿರೀಕ್ಷೆಯಿದೆ (FY22ರಲ್ಲಿ ಬಹು ವರ್ಷದ ಅಧಿಕ ಸರಾಸರಿ).
ಇದನ್ನೂ ಓದಿ: Maruti Suzuki India Limited: ಮಾರುತಿ ಸುಜುಕಿಗೆ 200 ಕೋಟಿ ರೂಪಾಯಿ ದಂಡ ವಿಧಿಸಿದ ಸಿಸಿಐ
(Maruti Suzuki India Limited To Hike All Model Car Prices From September 2021)
Published On - 1:47 pm, Mon, 30 August 21