Maruti Suzuki India Price Hike: ಮಾರುತಿ ಸುಜುಕಿ ಇಂಡಿಯಾದಿಂದ ಏಪ್ರಿಲ್ 1ರಿಂದ ವಾಹನಗಳ ಬೆಲೆ ಏರಿಕೆ

|

Updated on: Mar 23, 2021 | 2:06 PM

ಮಾರುತಿ ಸುಜುಕಿ ಇಂಡಿಯಾದಿಂದ ಏಪ್ರಿಲ್ 1, 2021ರಿಂದ ವಾಹನಗಳ ಬೆಲೆ ಏರಿಕೆ ಮಾಡಲಾಗುವುದು. ಇನ್​ಪುಟ್ ವೆಚ್ಚ ಹೆಚ್ಚಾಗುತ್ತಿರುವ ಕಾರಣಕ್ಕೆ ಅದನ್ನು ಸರಿತೂಗಿಸಲು ಈ ನಿರ್ಧಾರ ಮಾಡಲಾಗಿದೆ.

Maruti Suzuki India Price Hike: ಮಾರುತಿ ಸುಜುಕಿ ಇಂಡಿಯಾದಿಂದ ಏಪ್ರಿಲ್ 1ರಿಂದ ವಾಹನಗಳ ಬೆಲೆ ಏರಿಕೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್​ನಿಂದ ಎಲ್ಲ ವಾಹನಗಳ ದರವನ್ನು ಏಪ್ರಿಲ್ 1ನೇ ತಾರೀಕಿನಿಂದ ಏರಿಕೆ ಮಾಡಲಾಗುವುದು. ಉಕ್ಕು, ತಾಮ್ರ ಮತ್ತು ಕಚ್ಚಾ ತೈಲ ಬೆಲೆಯಲ್ಲಿ ಜಾಗತಿಕ ಮಟ್ಟದಲ್ಲೇ ಇನ್​ಪುಟ್ ವೆಚ್ಚ ಹೆಚ್ಚಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಇನ್​ಪುಟ್ ವೆಚ್ಚ ಹೆಚ್ಚಾಗುತ್ತಿರುವುದನ್ನು ಸರಿತೂಗಿಸಬೇಕು ಎಂಬ ಕಾರಣಕ್ಕೇ ಪ್ರಯಾಣಿಕರ ವಾಹನಗಳ ಉತ್ಪಾದನೆಯಲ್ಲಿ ದೇಶದ ಅತಿ ದೊಡ್ಡ ಕಂಪೆನಿಯಾದ ಮಾರುತಿಯಿಂದ ಕಳೆದ ಜನವರಿಯಲ್ಲಿ ದರ ಏರಿಕೆ ಮಾಡಲಾಗಿತ್ತು. ಕಚ್ಚಾ ವಸ್ತುಗಳ ಬೆಲೆ ಏರಿಕೆ ಆಗುತ್ತಾ ಸಾಗಿದರೆ ಮತ್ತೊಂದು ಸುತ್ತು ದರ ಹೆಚ್ಚಿಸುವ ಬಗ್ಗೆ ಆಡಳಿತ ಮಂಡಳಿ ಸೂಚಿಸಿತ್ತು.

ಇತರ ಕಾರು ತಯಾರಕರು ಸಹ ಮಾರುತಿ ಸುಜುಕಿಯನ್ನು ಅನುಸರಿಸುವ ಸಾಧ್ಯತೆ ಇದ್ದು, ತಮ್ಮ ಉತ್ಪನ್ನಗಳ ಬೆಲೆಯನ್ನು ಘೋಷಣೆ ಮಾಡಲಿವೆ. “ವಿವಿಧ ಇನ್​ಪುಟ್ ವೆಚ್ಚಗಳ ಏರಿಕೆಯಿಂದ ಕಳೆದ ಒಂದು ವರ್ಷದಿಂದ ಕಂಪೆನಿಯ ವಾಹನಗಳ ವೆಚ್ಚದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಿತ್ತು. ಆದ್ದರಿಂದ 2021ರ ಏಪ್ರಿಲ್​ನಿಂದ ಬೆಲೆ ಏರಿಕೆ ಮೂಲಕ ಮೇಲಿನ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವುದು ಅನಿವಾರ್ಯ. ಒಂದು ಮಾಡೆಲ್​ನಿಂದ ಮತ್ತೊಂದಕ್ಕೆ ಬೆಲೆ ಏರಿಕೆ ಪ್ರಮಾಣವು ಬದಲಾಗಲಿದೆ,” ಎಂದು ದೆಹಲಿ ಮೂಲದ ಕಂಪೆನಿಯು ರೆಗ್ಯುಲೇಟರಿ ಫೈಲಿಂಗ್​ನಲ್ಲಿ ತಿಳಿಸಿದೆ.

ವಾಹನಗಳ ಬೆಲೆ ಎಷ್ಟು ಏರಿಕೆ ಆಗುತ್ತದೆ ಎಂಬ ಬಗ್ಗೆ ಸುಜುಕಿ ಮೋಟಾರ್ ಕಾರ್ಪೊರೇಷನ್ ಸ್ಥಳೀಯ ಘಟಕವು ನಿರ್ದಿಷ್ಟವಾಗಿ ತಿಳಿಸಿಲ್ಲ. ಹಿರಿಯ ವಿಶ್ಲೇಷಕರ ಪ್ರಕಾರ, ಮೂರನೇ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಕಂಪೆನಿಯ ಆದಾಯ ಮತ್ತು ನಿವ್ವಳ ಲಾಭದಲ್ಲಿ ಎರಡಂಕಿಯ ಪ್ರಗತಿ ದಾಖಲಾಗಿದ್ದರೂ ಕಂಪೆನಿಯ ಆಪರೇಟಿಂಗ್ ಲಾಭ ಮತ್ತು ಮಾರ್ಜಿನ್ ಮುಂದಿನ ತ್ರೈಮಾಸಿಕ ಹಾಗೂ FY22ರಲ್ಲಿ ಕಡಿಮೆ ಇರಲಿದೆ. ಏಕೆಂದರೆ ವಸ್ತುಗಳು ಮತ್ತು ಇತರ ವೆಚ್ಚಗಳ ಏರಿಕೆಯನ್ನು ಸರಿತೂಗಿಸುವುದು ಕಷ್ಟವಾಗುತ್ತಿದೆ.

ಬೇಡಿಕೆ ವಾತಾವರಣ ಬಲವಾಗಿದ್ದು, ವೆಚ್ಚ ಪ್ರಮಾಣವು FY22ಕ್ಕೆ ನಿಧಾನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚಿನ ವೆಚ್ಚ, ಗಾತ್ರದಲ್ಲಿನ ಹೆಚ್ಚಳ, ಕಡಿಮೆ ಸವಕಳಿ ಮತ್ತು ಹೆಚ್ಚಿನ ಇತರ ಆದಾಯದ ಕಾರಣಕ್ಕೆ FY21E/FY22E ಇಪಿಎಸ್ ಶೇ 6/ಶೇ 2 ಕಡಿಮೆ ಆಗಬಹುದು ಎಂದು ಮೋತಿಲಾಲ್ ಓಸ್ವಾಲ್ ತಿಳಿಸಿದೆ.

ಇದನ್ನೂ ಓದಿ: ಹಣ ಕಡಿಮೆ, ಫೀಚರ್​ ಜಾಸ್ತಿ; 5 ಲಕ್ಷದೊಳಗೆ ಸಿಗೋ ಟಾಪ್​ 5 ಬಜೆಟ್​ ಫ್ರೆಂಡ್ಲಿ ಕಾರುಗಳು!

Published On - 2:05 pm, Tue, 23 March 21