AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಕಡಿಮೆ, ಫೀಚರ್​ ಜಾಸ್ತಿ; 5 ಲಕ್ಷದೊಳಗೆ ಸಿಗೋ ಟಾಪ್​ 5 ಬಜೆಟ್​ ಫ್ರೆಂಡ್ಲಿ ಕಾರುಗಳು!

ಕೆಲವರು ಹೊಸ ಕಾರು ಖರೀದಿ ಮಾಡುತ್ತಿದ್ದಾರೆ. ಹಾಗಾದರೆ ಐದು ಲಕ್ಷ ರೂಪಾಯಿ ಒಳಗೆ ಸಿಗುತ್ತಿರುವ ಟಾಪ್​ 5 ಕಾರುಗಳು ಯಾವವು? ಆ ಬಗ್ಗೆ ಇಲ್ಲಿದೆ ಮಾಹಿತಿ.

ಹಣ ಕಡಿಮೆ, ಫೀಚರ್​ ಜಾಸ್ತಿ; 5 ಲಕ್ಷದೊಳಗೆ ಸಿಗೋ ಟಾಪ್​ 5 ಬಜೆಟ್​ ಫ್ರೆಂಡ್ಲಿ ಕಾರುಗಳು!
ರಾಜೇಶ್ ದುಗ್ಗುಮನೆ
| Edited By: |

Updated on: Mar 15, 2021 | 8:21 AM

Share

ಕೊರೊನಾ ವೈರಸ್​ ಬಂದ ನಂತರ ಅನೇಕರು ಸ್ವಂತ ವಾಹನದ ಮೇಲೆ ಓಡಾಡೋಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದಕ್ಕಾಗಿಯೇ ಸ್ವಂತ ವಾಹನ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ, ಕೊರೊನಾ ನಂತರ ಕಾರು ಹಾಗೂ ಬೈಕ್​ಗಳ ಖರೀದಿ ನಿಧಾನವಾಗಿ ಹೆಚ್ಚುತ್ತಿದೆ. ಕೆಲವರು ಸೆಕೆಂಡ್​ ಹ್ಯಾಂಡ್​ ವಾಹನ ಖರೀದಿಸಿದರೆ ಇನ್ನೂ ಕೆಲವರು ಹೊಸ ವಾಹನಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇನ್ನೂ ಕೆಲವರು ಹೊಸ ಕಾರು ಖರೀದಿ ಮಾಡುತ್ತಿದ್ದಾರೆ. ಹಾಗಾದರೆ ಐದು ಲಕ್ಷ ರೂಪಾಯಿ ಒಳಗೆ ಸಿಗುತ್ತಿರುವ ಟಾಪ್​ 5 ಕಾರುಗಳು ಯಾವವು? ಆ ಬಗ್ಗೆ ಇಲ್ಲಿದೆ ಮಾಹಿತಿ.

ಡಸ್ಟನ್​ ರೆಡಿ-ಗೋ, ಬೆಲೆ- ₹ 2.83 ಲಕ್ಷ (ಎಕ್ಸ್​ ಶೋರೂಂ ಬೆಲೆ) ನಿಸ್ಸಾನ್​ ಒಡೆತನದ ಡಸ್ಟನ್​ ಇತ್ತೀಚೆಗೆ ಭಾರತದಲ್ಲಿ ರೆಡಿ-ಗೋ ಮಾಡೆಲ್​ ಕಾರನ್ನು ಪರಿಚಯಿಸಿದೆ. ಇದರ ಎಕ್ಸ್​ ಶೋರೂಂ ಬೆಲೆ ಕೇವಲ 2.83 ಲಕ್ಷ ರೂಪಾಯಿ. ಹೊಸ ರೆಡಿ-ಗೋ ಸಾಕಷ್ಟು ಹೊಸ ಫೀಚರ್​​ಗಳೊಂದಿಗೆ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಎಲ್-ಆಕಾರದ ಡೇಟೈಮ್ ರನ್ನಿಂಗ್ ಲೈಟ್ಸ್ (ಡಿಆರ್​​ಲ್), ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, ಡ್ಯುಯಲ್ ಟೋನ್ ವೀಲ್ ಕವರ್ ಹೊಂದಿರುವ 14 ಇಂಚಿನ ಚಕ್ರಗಳನ್ನು ಇದು ಹೊಂದಿದೆ.

ರೆನಾಲ್ಟ್ ಕ್ವಿಡ್, ಬೆಲೆ ₹ 2.92 ಲಕ್ಷ (ಎಕ್ಸ್​ ಶೋರೂಂ ಬೆಲೆ) ರೆನಾಲ್ಟ್ ಕ್ವಿಡ್​ ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರು. ಹೊಸ ಮಾಡೆಲ್​​ನಲ್ಲಿ  8.0 ಗಾತ್ರದ ಟಚ್​​ಸ್ಕ್ರೀನ್​ ಇದೆ. ಈ ಕಾರು 800 ಸಿಸಿ ಇಂಜಿಂನ್​ ಹೊಂದಿದೆ. ಹೀಗಾಗಿ, ಕಾರಿನ ಪಿಕಪ್​ ಕಡಿಮೆ. ಅಲ್ಲದೆ, ಹೆದ್ದಾರಿಗಳಲ್ಲಿ ತುಂಬಾನೇ ವೇಗವಾಗಿ ಹೋಗಲು ಸಾಧ್ಯವಿಲ್ಲ. ಆದರೆ, ಕಚೇರಿ ಬಳಕೆಗೆ ಈ ಕಾರು ಉತ್ತಮವಾಗಿದೆ. ಮೈಲೇಜ್​ 21-22 ಕಿ.ಮೀ ಇದೆ.

ಮಾರುತಿ ಸುಜುಕಿ ಆಲ್ಟೋ, ಬೆಲೆ ₹ 2.95 ಲಕ್ಷ (ಎಕ್ಸ್​ ಶೋರೂಂ ಬೆಲೆ) 800 ಸಿಸಿ ಮಾರುತಿ ಸುಜಕಿ ಆಲ್ಟೋ ಈ ಮೊದಲಿನಿಂದಲೂ ಮಧ್ಯಮವರ್ಗದವರ ಜನಪ್ರಿಯ ಕಾರು ಎಂದೇ ಖ್ಯಾತಿ ಪಡೆದಿದೆ. ಕಡಿಮೆ ಬೆಲೆಯಲ್ಲಿ ಜನರಿಗೆ ಲಭ್ಯವಾಗುತ್ತಿದೆ ಎನ್ನುವ ಕಾರಣಕ್ಕೆ ಈ ಕಾರನ್ನು ಜನರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಈ ಕಾರಿನ ಎಕ್ಸ್​ ಶೋ ರೂಂ ಬೆಲೆ 2.95 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತದೆ.

ಮಾರುತಿ ಸುಜುಕಿ ಎಸ್​ ಪ್ರೆಸ್ಸೊ, ಬೆಲೆ ₹ 3.71 ಲಕ್ಷ (ಎಕ್ಸ್​ ಶೋರೂಂ ಬೆಲೆ) ಎಸ್​ಯುವಿ ಮಾದರಿಯ ಮಾರುತಿ ಸುಜಕಿ ಎಸ್​ ಪ್ರೆಸ್ಸೊ ಎಕ್ಸ್​ ಶೋ ರೂಂ ಬೆಲೆ 3.71 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. ಈ ಕಾರಿನ ಮೈಲೇಜ್​ 21-31 ಕಿ.ಮೀ ಇದೆ ಅನ್ನೋದು ವಿಶೇಷ. ಕೆ-10 ಇಂಜಿನ್​ ಫೀಚರ್​ಗಳನ್ನು ಇದು ಹೊಂದಿದೆ.

ಹ್ಯುಂಡೈ ಸ್ಯಾಂಟ್ರೊ, ಬೆಲೆ ₹ 4.57 ಲಕ್ಷ (ಎಕ್ಸ್​ ಶೋರೂಂ ಬೆಲೆ) ಹೊಸ ಹ್ಯುಂಡೈ ಸ್ಯಾಂಟ್ರೊ ಕಾರಿನ ಎಕ್ಸ್ ಶೋರೂಂ ಬೆಲೆ 4.57 ಲಕ್ಷ ರೂಪಾಯಿ ಇದೆ. ಈ ಕಾರಿನಲ್ಲಿ ಆಡಿಯೋ-ವೀಡಿಯೋ ಸಿಸ್ಟಮ್​ ಕೂಡ ಇದೆ. ಪಾರ್ಕಿಂಗ್​ ಕ್ಯಾಮೆರಾ ಡಿಸ್​ಪ್ಲೇ ಆಯ್ಕೆ ಕೂಡ ಇದಕ್ಕೆ ಸಿಗಲಿದೆ.  ಟಾಟಾ ಟಿಯಾಗೋ, ಮಾರುತಿ ಸುಜಕಿ ವೇಗನ್​ ಕಾರುಗಳು ಹ್ಯುಂಡೈ ಸ್ಯಾಂಟ್ರೋ ಫೀಚರ್​ಗಳನ್ನೇ ಹೊಂದಿವೆ.

ಇದನ್ನೂ ಓದಿ: Darshan: ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಖರೀದಿಸಲಿರುವ ಐಷಾರಾಮಿ ಕಾರು ಯಾವುದು ಗೊತ್ತಾ?

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ