Price Hike: 14 ವರ್ಷದ ನಂತರ ಬೆಂಕಿಪೊಟ್ಟಣದ ಬೆಲೆಯಲ್ಲಿ ಹೆಚ್ಚಳ; ಡಿಸೆಂಬರ್ 1ರಿಂದ ಆಗಲಿದೆ ದುಪ್ಪಟ್ಟು

| Updated By: Srinivas Mata

Updated on: Oct 23, 2021 | 7:30 PM

ಬೆಂಕಿಪೊಟ್ಟಣದ ಬೆಲೆಯಲ್ಲಿ 14 ವರ್ಷದ ನಂತರ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಡಿಸೆಂಬರ್ 1, 2021ರಿಂದ ಅನ್ವಯ ಆಗುವಂತೆ ಇದು ಜಾರಿಗೆ ಬರಲಿದೆ.

Price Hike: 14 ವರ್ಷದ ನಂತರ ಬೆಂಕಿಪೊಟ್ಟಣದ ಬೆಲೆಯಲ್ಲಿ ಹೆಚ್ಚಳ; ಡಿಸೆಂಬರ್ 1ರಿಂದ ಆಗಲಿದೆ ದುಪ್ಪಟ್ಟು
ಸಾಂದರ್ಭಿಕ ಚಿತ್ರ
Follow us on

14 ವರ್ಷದ ನಂತರ ಡಿಸೆಂಬರ್ 1, 2021ರಿಂದ ಅನ್ವಯ ಆಗುವಂತೆ ಬೆಂಕಿಪೊಟ್ಟಣದ ಬೆಲೆ ರೂ. 1ರಿಂದ ಎರಡು ರೂಪಾಯಿಗೆ ಹೆಚ್ಚಳ ಆಗಲಿದೆ. ಕಚ್ಚಾವಷ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಲಿದೆ. ಐದು ಪ್ರಮುಖ ಬೆಂಕಿಪೊಟ್ಟಣ ಕೈಗಾರಿಕೆ ಕ್ಷೇತ್ರದ ಪ್ರತಿನಿಧಿಗಳು ಶಿವಕಾಶಿಯಲ್ಲಿ ಭೇಟಿ ಆಗಿದ್ದರು. ಮತ್ತು ಆ ನಂತರ ಬೆಂಕಿಪೊಟ್ಟಣದ ಗರಿಷ್ಠ ಮಾರಾಟ ಬೆಲೆ (MRP) ಹೆಚ್ಚಳ ಮಾಡುವುದಕ್ಕೆ ನಿರ್ಧರಿಸಿದೆ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಹದಿನಾಲ್ಕು ವರ್ಷದ ಅಂತರದ ಮೇಲೆ ಬೆಂಕಿಪೊಟ್ಟಣದ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಕಳೆದ ಬಾರಿ 2007ನೇ ಇಸವಿಯಲ್ಲಿ 50 ಪೈಸೆಯಿಂದ 1 ರೂಪಾಯಿಗೆ ಹೆಚ್ಚಳ ಮಾಡಲಾಗಿತ್ತು. ಉತ್ಪಾದಕರು ಹೇಳಿರುವಂತೆ, 14 ಕಚ್ಚಾ ವಸ್ತುಗಳ ಪೈಕಿ ಬಹುತೇಕ ಎಲ್ಲವೂ ಈಗ ಹೆಚ್ಚಳವಾಗಿದೆ.

ಕೆಂಪು ರಂಜಕ 425 ರೂಪಾಯಿಯಿಂದ 810 ರೂಪಾಯಿ ಆಗಿದೆ. ಮೇಣ 58 ರೂಪಾಯಿ ಬದಲಿಗೆ 80 ರೂಪಾಯಿ ಆಗಿದೆ. ಬಾಕ್ಸ್ ಬೋರ್ಡ್​ಗಳು, ಕಾಗದ, ಪೊಟ್ಯಾಷಿಯಂ ಕ್ಲೋರೇಟ್, ಸಲ್ಫರ್ ಹೀಗೆ ಇವುಗಳ ಬೆಲೆ ಕೂಡ ಅಕ್ಟೋಬರ್​ 10ರಿಂದ ಏರಿಕೆ ಆಗಿದೆ. ಈ ಮೇಲ್ಕಂಡದ್ದನ್ನು ಹೊರತುಪಡಿಸಿ ತೈಲ ಬೆಲೆ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಹೆಚ್ಚುವಂತಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಬೆಲೆ ಹೆಚ್ಚಳ ಮಾಡಬೇಕಿದೆ. ರಾಷ್ಟ್ರೀಯ ಸಣ್ಣ ಬೆಂಕಿಪೊಟ್ಟಣ ಉತ್ಪಾದಕರ ಒಕ್ಕೂಟದ ಕಾರ್ಯದರ್ಶಿ ವಿ.ಎಸ್. ಸೇತುರಥಿನಂ ಮಾತನಾಡಿ, ನಾವು 600 ಬೆಂಕಿಪೊಟ್ಟಣದ ಬಂಡಲ್ ಅನ್ನು 270ರಿಂದ 300 ರೂಪಾಯಿಗೆ ಮಾರುತ್ತಿದ್ದೇವೆ. “ನಾವು ಮಾರಾಟ ಬೆಲೆಯನ್ನು ಯೂನಿಟ್​ಗೆ ಶೇ 60ರಷ್ಟು ಏರಿಕೆ ಮಾಡಬೇಕು ಎಂದು ನಿರ್ಧರಿಸಿದ್ದು, ಒಂದು ಬಂಡಲ್​ಗೆ 430ರಿಂದ 480 ರೂಪಾಯಿ ಆಗುತ್ತದೆ. ಇದರಿಂದ ಶೇ 12ರಷ್ಟು ಜಿಎಸ್​ಟಿ ಮತ್ತು ಸಾರಿಗೆ ವೆಚ್ಚ ಒಳಗೊಂಡಿಲ್ಲ,” ಎಂದು ತಿಳಿಸಿದ್ದಾರೆ.

ಈ ಕೈಗಾರಿಕೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಮಿಳುನಾಡಿನಲ್ಲಿ 4 ಲಕ್ಷಕ್ಕೂ ಹೆಚ್ಚು ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಇದರಲ್ಲಿ ಕಾರ್ಮಿಕರಲ್ಲಿ ಅಸ್ಥಿರತೆ ಇದೆ. ಇದಕ್ಕೆ ಕಾರಣ ಏನೆಂದರೆ ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಅದಕ್ಕಿಂತ ಉತ್ತಮ ವೇತನ ದೊರೆಯುತ್ತದೆ ಎಂಬ ಕಾರಣಕ್ಕೆ ಅದಕ್ಕೆ ಆದ್ಯತೆ ನೀಡುತ್ತಾರೆ.

ಇದನ್ನೂ ಓದಿ: Tomato Price: ಟೊಮೆಟೊ ದರ 100 ರೂ. ಸಮೀಪ; ಬೆಲೆ ಏರಿಕೆಗೆ ಕಾರಣಗಳು ಏನೆಲ್ಲಾ ಗೊತ್ತಾ?

Published On - 7:24 pm, Sat, 23 October 21