Tomato Price: ಟೊಮೆಟೊ ದರ 100 ರೂ. ಸಮೀಪ; ಬೆಲೆ ಏರಿಕೆಗೆ ಕಾರಣಗಳು ಏನೆಲ್ಲಾ ಗೊತ್ತಾ?

Tomato Price: ಟೊಮೆಟೊ ದರ 100 ರೂ. ಸಮೀಪ; ಬೆಲೆ ಏರಿಕೆಗೆ ಕಾರಣಗಳು ಏನೆಲ್ಲಾ ಗೊತ್ತಾ?
ಟೊಮೆಟೊ

ಅಕಾಲಿಕ ಮಳೆಯಿಂದಾದ ಬೆಳೆ ನಷ್ಟ, ಮಾರುಕಟ್ಟೆ ಬರುತ್ತಿರುವ ಕಡಿಮೆ ಪ್ರಮಾಣದ ದಾಸ್ತಾನು ಈ ಎಲ್ಲ ಕಾರಣ ಸೇರಿಕೊಂಡು ಟೊಮೆಟೊ ಸಗಟು ಮತ್ತು ಚಿಲ್ಲರೆ ದರದಲ್ಲಿ ಭಾರೀ ಪ್ರಮಾಣದ ಏರಿಕೆ ಆಗಿದೆ.

TV9kannada Web Team

| Edited By: Srinivas Mata

Oct 19, 2021 | 2:59 PM

ಅಕಾಲಿಕ ಮಳೆಯಿಂದ ಆದ ಬೆಳೆ ಹಾನಿಯ ವರದಿಗಳ ಮಧ್ಯೆಯೂ ಮಂಡಿಗಳಿಗೆ ನಿಧಾನಗತಿಯಲ್ಲಿ ಬಂದಿದ್ದರಿಂದ ಸೋಮವಾರ ಟೊಮೆಟೊ ರೀಟೇಲ್ ಬೆಲೆ ಮೆಟ್ರೋಗಳಲ್ಲಿ ಪ್ರತಿ ಕೇಜಿಗೆ 93 ರೂಪಾಯಿ ಇತ್ತು, ಎಂದು ಸರ್ಕಾರದ ಅಂಕಿ- ಅಂಶಗಳಿಂದ ತಿಳಿದುಬಂದಿದೆ. ಮೆಟ್ರೋ ನಗರಗಳ ಪೈಕಿ ಕೊಲ್ಕತ್ತಾದಲ್ಲಿ ಟೊಮೆಟೊ ಪ್ರತಿ ಕೇಜಿಗೆ ರೂ. 93, ಚೆನ್ನೈನಲ್ಲಿ ರೂ. 60, ದೆಹಲಿಯಲ್ಲಿ ರೂ. 59 ಮತ್ತು ಚೆನ್ನೈನಲ್ಲಿ ರೂ. 53 ಎಂದು ಸೋಮವಾರದ ದತ್ತಾಂಶವು ತೋರಿಸಿದೆ. ಗ್ರಾಹಕರ ವ್ಯವಹಾರಗಳ ಸಚಿವಾಲಯವು ಟ್ರ್ಯಾಕ್ ಮಾಡಿದ 175ಕ್ಕೂ ಹೆಚ್ಚು ನಗರಗಳ ಪೈಕಿ 50ಕ್ಕೂ ಹೆಚ್ಚಿನ ಕಡೆ ಟೊಮೆಟೊ ಚಿಲ್ಲರೆ ಬೆಲೆ ಪ್ರತಿ ಕೇಜಿಗೆ 50 ರೂಪಾಯಿಗಿಂತ ಅಧಿಕವಾಗಿದೆ. ಸಗಟು ಮಾರುಕಟ್ಟೆಗಳಲ್ಲಿ ಕೂಡ ಟೊಮೆಟೊವನ್ನು ಕೋಲ್ಕತ್ತಾದಲ್ಲಿ ಪ್ರತಿ ಕೇಜಿಗೆ 84 ರೂಪಾಯಿ, ಚೆನ್ನೈನಲ್ಲಿ 52 ರೂಪಾಯಿ, ಮುಂಬೈನಲ್ಲಿ 30 ರೂಪಾಯಿ ಮತ್ತು ದೆಹಲಿಯಲ್ಲಿ ಪ್ರತಿ ಕೇಜಿಗೆ 29.50 ರೂಪಾಯಿಯಂತೆ ಮಾರಲಾಯಿತು. ಪ್ರಮುಖವಾಗಿ ಟೊಮೆಟೊ ಬೆಳೆಯುತ್ತಿರುವ ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯ ಮಧ್ಯೆ ಕಳಪೆ ಆಗಮನದಿಂದಾಗಿ ಟೊಮೆಟೊ ಬೆಲೆಗಳು ದೃಢವಾಗಿವೆ.

ಮುಂಬೈನಲ್ಲಿ ಅಕ್ಟೋಬರ್ 16ರಂದು 241 ಟನ್‌ಗಳಷ್ಟು ಟೊಮೆಟೊ ಆವಕ ಆಗಿತ್ತು. ಅದಕ್ಕೆ ಕೇವಲ ಒಂದು ವಾರದ ಹಿಂದೆ 290 ಟನ್‌ಗಳಿದ್ದವು. ಆದರೆ ಅದೇ ದಿನದಂದು ದೆಹಲಿಯಲ್ಲಿ 528.9 ಟನ್‌ಗಳು ಮತ್ತು ಕೋಲ್ಕತ್ತಾದಲ್ಲಿ 545 ಟನ್‌ಗಳಷ್ಟು ಆಗಮನವಾಗಿದೆ ಎಂದು ಸರ್ಕಾರದ ಮಾಹಿತಿ ತಿಳಿಸಿದೆ. ಆದರೆ ಈ ಮೂರು ಮೆಟ್ರೋಗಳಿಗೆ ಹೋಲಿಕೆ ಮಾಡುವಂಥ ಡೇಟಾ ಲಭ್ಯ ಇಲ್ಲ. “ಮಳೆಯಿಂದಾಗಿ ನಮಗೆ ಮಂಡಿಯಿಂದಲೇ ಉತ್ತಮ ಗುಣಮಟ್ಟದ ಟೊಮೆಟೊಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಒಳ್ಳೆಯದನ್ನು ಆರಿಸುತ್ತಾರೆ ಮತ್ತು ಕೊಳೆತವುಗಳು ಹಾಗೇ ಉಳಿದು, ನಮಗೆ ನಷ್ಟವಾಗಿದೆ. ಆದ್ದರಿಂದ ನಷ್ಟವನ್ನು ಸರಿತೂಗಿಸಲು ನಾವು ದರಗಳನ್ನು ಇರಿಸುತ್ತೇವೆ,” ಎಂದು ದೆಹಲಿಯ ಕರೋಲ್ ಬಾಗ್ ಕಾಲೋನಿಯಲ್ಲಿ ಮಾರಾಟ ಮಾಡುವ ತರಕಾರಿ ವ್ಯಾಪಾರಿಯೊಬ್ಬರು ಹೇಳಿದ್ದಾರೆ.

ಸದ್ಯಕ್ಕೆ ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಪ್ರಮುಖ ಬೆಳೆಯುತ್ತಿರುವ ರಾಜ್ಯಗಳಲ್ಲಿ ಟೊಮೆಟೊ ಕಟಾವು ನಡೆಯುತ್ತಿದೆ. ಕಳೆದ ವಾರ, ಅಜಾದ್‌ಪುರ್ ಟೊಮೆಟೊ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಕೌಶಿಕ್ ಮಾತನಾಡಿ, “ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಅಕಾಲಿಕ ಮಳೆಯು ಬೆಳೆ ಹಾನಿಗೊಳಗಾಯಿತು. ಇದರಿಂದಾಗಿ ದೆಹಲಿಯಂತಹ ಗ್ರಾಹಕ ಮಾರುಕಟ್ಟೆಗಳಿಗೆ ಪೂರೈಕೆಯು ಪರಿಣಾಮ ಬೀರಿದೆ. ಇದು ಸಗಟು ಮತ್ತು ಚಿಲ್ಲರೆ ಮಾರುಕಟ್ಟೆ ಎರಡೂ ಕಡೆ ಬೆಲೆಗಳ ಏರಿಕೆಗೆ ಕಾರಣವಾಗಿದೆ,” ಎಂದಿದ್ದಾರೆ ಟೊಮೆಟೊ ಬೆಳೆ ನೆಟ್ಟ ಸುಮಾರು 2-3 ತಿಂಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ. ಮಾರುಕಟ್ಟೆಯ ಅಗತ್ಯಕ್ಕೆ ಅನುಗುಣವಾಗಿ ಕಟಾವು ಮಾಡಲಾಗುತ್ತದೆ.

ನ್ಯಾಷನಲ್ ಹಾರ್ಟಿಕಲ್ಚರಲ್ ರಿಸರ್ಚ್ ಅಂಡ್ ಡೆವಲಪ್​ಮೆಂಟ್​ ಫೌಂಡೇಷನ್ ಪ್ರಕಾರ, ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಟೊಮೆಟೊ ಉತ್ಪಾದಕ ಭಾರತವು 7.89 ಲಕ್ಷ ಹೆಕ್ಟೇರ್ ಪ್ರದೇಶದಿಂದ ಸುಮಾರು 19.75 ಮಿಲಿಯನ್ ಟನ್ ಉತ್ಪಾದಿಸುತ್ತದೆ.

ಇದನ್ನೂ ಓದಿ: WPI: ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಸಗಟು ಹಣದುಬ್ಬರ ಸೆಪ್ಟೆಂಬರ್​ನಲ್ಲಿ ಶೇ 10.66ಕ್ಕೆ

Follow us on

Related Stories

Most Read Stories

Click on your DTH Provider to Add TV9 Kannada