AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Consumer Confidence: ಭಾರತ ನಗರಪ್ರದೇಶದ ಗ್ರಾಹಕರ ವಿಶ್ವಾಸದಲ್ಲಿ ಹೆಚ್ಚಳ; ನಿರುದ್ಯೋಗದ ಬಗ್ಗೆ ಹೆಚ್ಚಿದ ಆತಂಕ

ಸೆಪ್ಟೆಂಬರ್​ ತಿಂಗಳಿಗೆ ಹೋಲಿಸಿದಲ್ಲಿ ಅಕ್ಟೋಬರ್​ಗೆ ಗ್ರಾಹಕರ ವಿಶ್ವಾಸದಲ್ಲಿ ಹೆಚ್ಚಳವಾಗಿದೆ. ಆದರೆ ನಿರುದ್ಯೋಗದ ಬಗ್ಗೆ ಆತಂಕ ಹೆಚ್ಚಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Consumer Confidence: ಭಾರತ ನಗರಪ್ರದೇಶದ ಗ್ರಾಹಕರ ವಿಶ್ವಾಸದಲ್ಲಿ ಹೆಚ್ಚಳ; ನಿರುದ್ಯೋಗದ ಬಗ್ಗೆ ಹೆಚ್ಚಿದ ಆತಂಕ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Oct 18, 2021 | 6:57 PM

Share

ನಗರಪ್ರದೇಶದ ಭಾರತೀಯರಲ್ಲಿ ಸೆಪ್ಟೆಂಬರ್​ಗೆ ಹೋಲಿಸಿದರೆ ಅಕ್ಟೋಬರ್​ ತಿಂಗಳಲ್ಲಿ ಶೇ 1.9ರಷ್ಟು ವಿಶ್ವಾಸ ಹೆಚ್ಚಾಗಿದೆ ಎಂಬುದು RefinitivIpsos India Primary Consumer Sentiment Index (PCSI) ಸೋಮವಾರದಂದು ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ಗ್ರಾಹಕರ ಧೋರಣೆಗೆ ಸಂಬಂಧಿಸಿದಂತೆ ಸದ್ಯದ ಮತ್ತು ಭವಿಷ್ಯದ ಸ್ಥಳೀಯ ಆರ್ಥಿಕತೆಗಳು, ವಯಕ್ತಿಕ ಹಣಕಾಸು ಸನ್ನಿವೇಶ, ಉಳಿತಾಯ ಮತ್ತು ದೊಡ್ಡ ಹೂಡಿಕೆಗಳನ್ನು ಮಾಡುವುದಕ್ಕೆ ವಿಶ್ವಾಸ ಇವುಗಳನ್ನು ತಿಂಗಳೂ ತಿಂಗಳು ಪಿಎಸ್​ಸಿಐ ದಾಖಲಿಸುತ್ತದೆ. ಈ ಸೂಚ್ಯಂಕಗಳಲ್ಲಿ ನಾಲ್ಕು ಉಪ ಸೂಚ್ಯಂಕಗಳಾದ ಸದ್ಯದ ಸನ್ನಿವೇಶ ಸೂಚ್ಯಂಕ, ನಿರೀಕ್ಷೆ ಸೂಚ್ಯಂಕ, ಹೂಡಿಕೆ ಸೂಚ್ಯಂಕ ಮತ್ತು ಉದ್ಯೋಗ ಸೂಚ್ಯಂಕ ಒಳಗತೊಂಡಿರುತ್ತವೆ.

ಮಾಸಿಕ ಪಿಸಿಎಸ್​ಐ ಈ ನಾಲ್ಕು ಉಪ ಸೂಚ್ಯಂಕಗಳ ಸರಾಸರಿಯನ್ನು ಒಳಗೊಂಡಿರುತ್ತದೆ. ಅಕ್ಟೋಬರ್​ನಲ್ಲಿ ಕನಿಷ್ಠ ಮೂರು ಉಪ ಸೂಚ್ಯಂಕಗಳು ಚೇತರಿಕೆ ಕಂಡಿವೆ. ಕಳೆದ ತಿಂಗಳಿಗಿಂತ ಈ ಬಾರಿ ಚೇತರಿಕೆ ಕಂಡಿದೆ ಎಂದು Ipsos ಹೇಳಿದೆ. ಉದ್ಯೋಗದ ಸುತ್ತಲ ವಿಶ್ವಾಸ ಕಡಿಮೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದು, ಉದ್ಯೋಗ ಸೃಷ್ಟಿಗೆ ಇನ್ನಷ್ಟು ಅವಕಾಶ ಸಿಗಬೇಕು ಎನ್ನಲಾಗಿದೆ. ಪಿಸಿಎಸ್​ಐ ಉದ್ಯೋಗ ವಿಶ್ವಾಸ ಅಥವಾ ಉದ್ಯೋಗ ಉಪ-ಸೂಚ್ಯಂಕ ಶೇ 0.5ರಷ್ಟು ಕುಸಿದಿದೆ. ಪಿಸಿಎಸ್​ಐ ಸದ್ಯದ ವಯಕ್ತಿಕ ಹಣಕಾಸು ಪರಿಸ್ಥಿತಿಗಳು ಅಥವಾ ಸದ್ಯದ ಸನ್ನಿವೇಶದ ಉಪ- ಸೂಚ್ಯಂಕ ಶೇ 4.2ರಷ್ಟು ಮೇಲೇರಿದೆ.

ಪಿಸಿಎಸ್​ಐ ಹೂಡಿಕೆ ವಾತಾವರಣ ಉಪ ಸೂಚ್ಯಂಕವು ಶೇ 3.8ರಷ್ಟು ಜಿಗಿತವನ್ನು ವರದಿ ಮಾಡಿದೆ. ಇನ್ನು ಆರ್ಥಿಕ ನಿರೀಕ್ಷೆ ಉಪ ಸೂಚ್ಯಂಕವು ಶೇ 0.3ರಷ್ಟು ಮೇಲೇರಿದೆ ಎಂದು Ipsos ಹೇಳಿದೆ. ಭಾರತದಲ್ಲಿ ಹಬ್ಬದ ಸೀಸನ್​ನ ಬೇಡಿಕೆ ಜೋರಾಗಿರುವಾಗ ಈ ಅಂಕಿ- ಅಂಶಗಳು ಹೊರಬಿದ್ದಿವೆ. ಆದರೆ ಈಗಲೂ ಕೊರೊನಾ ಮೂರನೇ ಅಲೆಯ ಆತಂಕ ಇದ್ದೇ ಇದೆ. ಗ್ರಾಹಕ ಸಂಚಾರ ವ್ಯವಸ್ಥೆ ಸುಧಾರಿಸಿದೆ. “ಭವಿಷ್ಯಕ್ಕಾಗಿ ವಯಕ್ತಿಕ ಹಣಕಾಸು ಮತ್ತು ಹೂಡಿಕೆ ಈ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಗ್ರಾಹಕರ ವಿಶ್ವಾಸವು ಭವಿಷ್ಯಕ್ಕಾಗಿ ಅಕ್ಟೋಬರ್​ನಲ್ಲಿ ಹೆಚ್ಚಾಗಿದೆ. ಹಬ್ಬದ ಸಮಯದಲ್ಲಿ ಹಣ ಖರ್ಚು ಮಾಡುವುದಕ್ಕೆ ಹೆಚ್ಚು ಆಲೋಚಿಸಿಲ್ಲ. ಬದಲಿಗೆ ಹಬ್ಬವನ್ನು ಆನಂದಿಸಲು ಬಯಸುತ್ತಾರೆ,” ಎಂದು ಅಭಿಪ್ರಾಯ ಪಡುತ್ತಾರೆ Ipsos iಂಡಿಯಾ ಸಿಇಒ ಅಮಿತ್​ ಅದರ್ಕರ್.

ಆರ್ಥಿಕತೆಯ ಸುತ್ತಲ ವಿಶ್ವಾಸ ಸ್ವಲ್ಪ ಪ್ರಮಾಣದಲ್ಲಿ ಮೇಲೇರಿದೆ, ಎಂದು Ipsos ವರದಿ ಹೇಳಿದೆ. ಆದರೂ ಗ್ರಾಹಕರಿಗೆ ತಮ್ಮ ಉದ್ಯೋಗದ ಮೇಲಿನ ವಿಶ್ವಾಸ ಕಡಿಮೆ ಆಗಿದೆ. ಮಾಧ್ಯಮಗಳಲ್ಲಿ ವರದಿ ಆದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ದೆಹಲಿಯಲ್ಲಿ ನಿರುದ್ಯೋಗ ದರ ನಾಲ್ಕು ತಿಂಗಳ ಗರಿಷ್ಠ ಪ್ರಮಾಣದ ಶೇ 16.8ರಷ್ಟಿದೆ ಎಂದು ಸೆಂಟರ್​ ಫಾರ್​ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸೆಪ್ಟೆಂಬರ್​ ತಿಂಗಳ ಡೇಟಾದಲ್ಲಿ ತೋರಿಸಿದೆ.

ಇದನ್ನೂ ಓದಿ: ಭಾರತದ ಲಸಿಕೆ ಹಾಕುವ ದರವು ಆರ್ಥಿಕತೆಗೆ ಸಹಾಯಕ ಎಂದ ಐಎಂಎಫ್​ನ ಗೀತಾ ಗೋಪಿನಾಥ್