Matrimonial: ಡೇಟಿಂಗ್​ ಆ್ಯಪ್​ಗಳ ವಿರುದ್ಧ ಜಿದ್ದಿಗೆ ಬಿದ್ದ ಮ್ಯಾಟ್ರಿಮೋನಿಯಲ್ ವೆಬೈಸೈಟ್​ಗಳು

Marriage platforms: ಡೇಟಿಂಗ್ ಆ್ಯಪ್​ಗಳ ವಿರುದ್ಧ ಜಿದ್ದಿಗೆ ಬಿದ್ದ ಮ್ಯಾಟ್ರಿಮೋನಿಯಲ್ ಸೈಟ್​ಗಳು ಚಾಟ್ ವೈಶಿಷ್ಟ್ಯಗಳು, ವಿಡಿಯೋ ಚಾಟಿಂಗ್​ ಅನ್ನು ಸೇರಿಸುವುದರೊಂದಿಗೆ ಅದನ್ನು ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸಲು ಮುಂದಾಗಿದೆ.

Matrimonial: ಡೇಟಿಂಗ್​ ಆ್ಯಪ್​ಗಳ ವಿರುದ್ಧ ಜಿದ್ದಿಗೆ ಬಿದ್ದ ಮ್ಯಾಟ್ರಿಮೋನಿಯಲ್ ವೆಬೈಸೈಟ್​ಗಳು
ಮ್ಯಾಟ್ರಿಮೋನಿಯಲ್ ಸೈಟ್​ಗಳು ಚಾಟಿಂಗ್, ವಿಡಿಯೋ ಚಾಟಿಂಗ್​ ವೈಶಿಷ್ಟ್ಯಗಳನ್ನು ಸೇರಿಸುತ್ತಿವೆ
Follow us
TV9 Web
| Updated By: Rakesh Nayak Manchi

Updated on: Oct 03, 2022 | 10:57 AM

ಇತ್ತೀಚಿನದ ದಿನಗಳಲ್ಲಿ ತಂತ್ರಜ್ಞಾನಗಳು ವೇಗವಾಗಿ ಅಭಿವೃದ್ಧಿ ಹೊಂದಿದ ಹಿನ್ನೆಲೆ ಎ ಟು ಝಡ್ ಮಾಹಿತಿಗಳು ಕೈ ಬೆರಳ ತುದಿಯಲ್ಲೇ ಲಭ್ಯವಾಗುತ್ತಿವೆ. ಹಿಂದೆ ಬಾಳ ಸಂಗಾಯಿಯನ್ನು ಹುಡುಕಲು ಊರೂರು ಅಲೆಯಬೇಕಿತ್ತು. ಆದರೆ ಈಗ ತಂತ್ರಜ್ಞಾನದ ಅಭಿವೃದ್ಧಿಯಾಗಿ ಹೊಸಹೊಸ ಆವಿಷ್ಕಾರಗಳು ನಡೆದು ಮನೆಯಲ್ಲೇ ಕುಳಿತುಕೊಂಡು ತಮಗೆ ಹೊಂದಿಕೆಯಾಗುವ ಸಂಗಾತಿಯನ್ನು ಹುಡುಕಬಹುದು. ಇದಕ್ಕಾಗಿ Matrimony.com, ಪೀಪಲ್ ಗ್ರೂಪ್​ನ Shaadi.com ಮತ್ತು ಇನ್ಫೋ ಎಡ್ಜ್ ಘಟಕ Jeevansathi.com ವಿವಾಹ ಪ್ಲಾಟ್​ಫಾರ್ಮ್​ಗಳು ಲಭ್ಯವಿದೆ. ಇದರೊಂದಿಗೆ ಡೇಟಿಂಗ್ ಆ್ಯಪ್​​ಗಳು ಕೂಡ ಇವೆ. ಕಳೆದ ಏಳು ವರ್ಷಗಳಿಂದ ಇವುಗಳು ಬಳಕೆಯಲ್ಲಿದ್ದರೂ ಕೋವಿಡ್ ನಂತರದ ದಿನಗಳಿಂದ ಇವುಗಳ ಬಳಕೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಹೀಗಾಗಿ ಡೇಟಿಂಗ್ ಆ್ಯಪ್​ಗಳು (Dating Apps) ಮತ್ತು ಮ್ಯಾಟ್ರಿಮೋನಿಯಲ್​ ವೇದಿಕೆಗಳು (Matrimonial platforms) ಪರಸ್ಪರ ಪೈಪೋಟಿಗೆ ಬಿದ್ದಿವೆ. ಅದರಂತೆ ಡೇಟಿಂಗ್ ಆ್ಯಪ್​ಗಳನ್ನು ಹಿಂದಿಕ್ಕಲು ಮ್ಯಾಟ್ರಿಮೋನಿಯಲ್​ ಪ್ಲಾಟ್​ಫಾರ್ಮ್​ಗಳು ಚಾಟ್ ವೈಶಿಷ್ಟ್ಯಗಳು, ವಿಡಿಯೋ ಚಾಟಿಂಗ್​ ಅನ್ನು ಸೇರಿಸುವುದರೊಂದಿಗೆ ಅದನ್ನು ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸುತ್ತಿವೆ. ಕೋವಿಡ್ ಪ್ರೇರಿತ ಆನ್ಲೈನ್ ಡೇಟಿಂಗ್ ಹೆಚ್ಚಳದ ನಡುವೆ ಯುವ ಭಾರತೀಯ ಜನಸಂಖ್ಯೆಯನ್ನು ವೈವಿಧ್ಯಗೊಳಿಸಲು ಮತ್ತು ಆಕರ್ಷಿಸಲು ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸಲಾಗುತ್ತಿದೆ.

ಪ್ರಸ್ತುತ ಭಾರತದಲ್ಲಿ ಸುಮಾರು 800 ಕೋಟಿ ಡಾಲರ್ ಆನ್ಲೈನ್ ಮ್ಯಾಚ್ ಮೇಕಿಂಗ್ ಮಾರುಕಟ್ಟೆ, ವೈವಾಹಿಕ ವೆಬ್​ಸೈಟ್​ಗಳು ಸುಮಾರು ಶೇ 70 ರಷ್ಟು ಪ್ರಮುಖ ಪಾಲನ್ನು ಹೊಂದಿವೆ. ಉಳಿದ ಶೇ 30ರಷ್ಟು ಡೇಟಿಂಗ್ ಪ್ಲಾಟ್​ಫಾರ್ಮ್​ಗಳಿಗೆ ಸೇರಿವೆ. ಆದಾಗ್ಯೂ 2021ರ ಮಾರ್ಚ್​ನಿಂದ ಇದು ದ್ವಿಗುಣಗೊಂಡಿದೆ ಎಂದು ಐಸಲ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ ನಡೆಸುತ್ತಿರುವ ಡೇಟಿಂಗ್ ಪ್ಲಾಟ್ಫಾರ್ಮ್ ಐಸಲ್​ನ ಸ್ಥಾಪಕ ಮತ್ತು ಸಿಇಒ ಎಬಲ್ ಜೋಸೆಫ್ ಹೇಳಿದ್ದಾರೆ.

ಟಿಂಡರ್ ಮತ್ತು ಬಂಬಲ್ ನಂತರ ಭಾರತದಲ್ಲಿ ಮೂರನೇ ಅತಿದೊಡ್ಡ ಡೇಟಿಂಗ್ ಅಪ್ಲಿಕೇಶನ್ ಎಂದು ಪರಿಗಣಿಸಲಾದ ಐಸಲ್ ಈ ವರ್ಷದ ಆರಂಭದಲ್ಲಿ ಶೇ 79.22 ರಷ್ಟು ಪಾಲನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾದ ತನ್ನ ನಾಲ್ಕು ಸ್ಥಳೀಯ ಭಾಷೆಗಳ ಅಪ್ಲಿಕೇಶನ್​ಗಳೊಂದಿಗೆ ಹೆಚ್ಚಿನ ಆಕರ್ಷಣೆಯನ್ನು ಗಳಿಸಿದೆ. ಇತರ ಕೆಲವು ಸಕ್ರಿಯ ಡೇಟಿಂಗ್ ಅಪ್ಲಿಕೇಶನ್​ಗಳು (ಟಿಂಡರ್, ಬಂಬಲ್, ಟ್ರೂಲಿಮ್ಯಾಡ್ಲಿ ಮತ್ತು ಹಾಪ್ನ್) ಪ್ರತಿಕ್ರಿಯಿಸಲು ನಿರಾಕರಿಸಿದವು.

“ಡೇಟಿಂಗ್ ವೆಬ್​ಸೈಟ್​ಗಳನ್ನು ನಾವು ಗಂಭೀರ ಸ್ಪರ್ಧೆ ಎಂದು ನೋಡುವುದಿಲ್ಲ. ಅದು (ದಿ ಸ್ಪೇಸ್) ಸೀಮಿತ ಪ್ರೇಕ್ಷಕರನ್ನು ಹೊಂದಿದೆ ಮತ್ತು ವಿಭಿನ್ನ ವಯಸ್ಸಿನ ಗುಂಪುಗಳನ್ನು ಗುರಿಯಾಗಿಸುತ್ತದೆ. ಸುಮಾರು ಒಂದು ದಶಕದಿಂದ ಮಾರುಕಟ್ಟೆಯಲ್ಲಿದೆ. ಆದರೆ ಅವುಗಳಲ್ಲಿ ಯಾವುದೂ ಒಂದು ಮಿಲಿಯನ್ ಡಾಲರ್ ಬೆಳವಣಿಗೆಯನ್ನು ಸಹ ದಾಟಿಲ್ಲ. ಮದುವೆ ಪ್ಲಾಟ್​ಫಾರ್ಮ್​ಗಳು ಬಳಕೆದಾರರಿಗೆ ಮದುವೆಗೆ ಕಾರಣವಾಗುವ ಹೆಚ್ಚು ಗಂಭೀರ ಸಂಬಂಧಗಳನ್ನು ಹೊಂದಲು ಅನುವು ಮಾಡಿಕೊಡುತ್ತವೆ” ಎಂದು Matrimony.com ಅಧ್ಯಕ್ಷ ಮತ್ತು ಸಿಇಒ ಮುರುಗವೇಲ್ ಜಾನಕಿರಾಮನ್ ಹೇಳಿದರು.

“ಕೋವಿಡ್ ಸಮಯದಲ್ಲಿ ದುರ್ಬಲ ಕಾರ್ಯಕ್ಷಮತೆಯ ನಂತರ ಎರಡಂಕಿಯ ಬೆಳವಣಿಗೆಗೆ ಮರಳಿರುವ ಕಂಪನಿಯು, ಸ್ಥಳೀಯ ಭಾಷೆ ಮದುವೆ, ಮುಸ್ಲಿಂ ಮದುವೆ ಸೇರಿದಂತೆ ಹೊಸ ಉಪಕ್ರಮಗಳನ್ನು ಪ್ರಾರಂಭಿಸುತ್ತಿದೆ. ಇದು ರಾಜಸ್ಥಾನಿ ಮ್ಯಾಟ್ರಿಮೋನಿ, ಬಿಹಾರಿ ಮ್ಯಾಟ್ರಿಮೋನಿ, ಡಾಕ್ಟರ್ ಮ್ಯಾಟ್ರಿಮೋನಿ ಮತ್ತು IIMIIT Matrimony.com ಮುಂತಾದ ಪ್ರಾದೇಶಿಕ ಮತ್ತು ವೃತ್ತಿ ನಿರ್ದಿಷ್ಟ ವಿಭಾಗಗಳನ್ನು ಸಹ ಸ್ಥಾಪಿಸುತ್ತಿದ್ದೇವೆ. ನಾವು ಭಾರತದ ಒಳಗೆ ಮತ್ತು ಅದರಾಚೆಯ ಭೌಗೋಳಿಕ ಪ್ರದೇಶಗಳಿಗೆ ಮತ್ತು ಬಾಂಗ್ಲಾದೇಶಕ್ಕೆ ವಿಸ್ತರಿಸಿದ್ದೇವೆ. ಇದು ಪ್ರಸ್ತುತ ಶ್ರೀಲಂಕಾದಲ್ಲಿ ಬಿಕ್ಕಟ್ಟು ಸ್ಥಿತಿ ಇಲ್ಲದಿದ್ದರೆ ಅಲ್ಲಿಯೂ ವಿಸ್ತರಿಸುತ್ತಿದ್ದೆವು” ಎಂದು ಅವರು ಹೇಳಿದರು.

ಒಂದು ವರ್ಷದ ಪರೀಕ್ಷೆಯ ನಂತರ Shaadi.com ವಿಡಿಯೋ ಮತ್ತು ಚಾಟ್ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಅಂತೆಯೇ ನಾಲ್ಕು ಪ್ರತ್ಯೇಕ ಸ್ಥಳೀಯ ಭಾಷೆಗಳ ಅಪ್ಲಿಕೇಶನ್​ಗಳನ್ನು ನಡೆಸುತ್ತಿರುವ ಜೀವನ್​ಸಾಥಿ, ಬಲವಾದ ಗೌಪ್ಯತೆ ನಿಯಂತ್ರಣಗಳೊಂದಿಗೆ ತನ್ನ ಪ್ಲಾಟ್ಫಾರ್ಮ್​ನಲ್ಲಿ ಪಠ್ಯ ಚಾಟ್ ಮತ್ತು ಆಡಿಯೋ ಮತ್ತು ವಿಡಿಯೋ ಕರೆ ವೈಶಿಷ್ಟ್ಯಗಳನ್ನು ನೀಡುತ್ತಿದೆ. (ಮೂಲ: mint)

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು