MEIL: ಕರ್ನಾಟಕದ ಕೈಗಾದಲ್ಲಿ 2 ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ 12,800 ಕೋಟಿ ರೂ ಗುತ್ತಿಗೆ ಪಡೆದ ಎಂಇಐಎಲ್

Contracts for building Kaiga nuclear power units: ಹೈದರಾಬಾದ್ ಮೂಲದ ಎಂಇಐಎಲ್ ಸಂಸ್ಥೆ ಕರ್ನಾಟಕದ ಕೈಗಾದಲ್ಲಿ ಎರಡು ಪರಣಾಮ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ 12,800 ಕೋಟಿ ರೂ ಮೊತ್ತದ ಗುತ್ತಿಗೆ ಪಡೆದಿದೆ. ನ್ಯಾಷನಲ್ ಪವರ್ ಕಾರ್ಪೊರೇಶನ್ ಸಂಸ್ಥೆ ಈವರೆಗೆ ನೀಡಿದ ಅತಿದೊಡ್ಡ ಗುತ್ತಿಗೆ ಇದಾಗಿದೆ. ಮುಂಬೈನ ಎನ್​​ಪಿಸಿಐಎಲ್ ಕಚೇರಿಯಲ್ಲಿ ಗುತ್ತಿಗೆಯ ಪರ್ಚೇಸ್ ಆರ್ಡರ್ ಅನ್ನು ಎಂಇಐಎಲ್​​ನ ಅಧಿಕಾರಿಗಳಿಗೆ ನೀಡಲಾಗಿದೆ.

MEIL: ಕರ್ನಾಟಕದ ಕೈಗಾದಲ್ಲಿ 2 ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ 12,800 ಕೋಟಿ ರೂ ಗುತ್ತಿಗೆ ಪಡೆದ ಎಂಇಐಎಲ್
ಎಂಇಐಎಲ್

Updated on: Apr 23, 2025 | 5:14 PM

ಮುಂಬೈ, ಏಪ್ರಿಲ್ 23: ಮೇಘಾ ಎಂಜಿನಿಯರಿಂಗ್ ಅಂಡ್ ಇನ್​​ಫ್ರಾಸ್ಟ್ರಕ್ಚರ್ (ಎಂಇಐಎಲ್) ಸಂಸ್ಥೆ ಕರ್ನಾಟಕದ ಕೈಗಾರದಲ್ಲಿ 700 ಎಂವಿ ಸಾಮರ್ಥ್ಯದ ಎರಡು ಅಣುಸ್ಥಾವರಗಳನ್ನು ನಿರ್ಮಿಸುವ ದೊಡ್ಡ ಗುತ್ತಿಗೆಯನ್ನು ಪಡೆದಿದೆ. ಕೈಗಾದಲ್ಲಿ 5 ಮತ್ತು 6ನೇ ಅಣು ವಿದ್ಯುತ್ ಘಟಕಗಳ ಸ್ಥಾಪನೆಗೆ ಎಂಇಐಎಲ್​​ಗಗೆ 12,800 ಕೋಟಿ ರೂ ಇಪಿಸಿ ಗುತ್ತಿಗೆ ಸಿಕ್ಕಿದೆ. ನ್ಯಾಷನಲ್ ಪವರ್ ಕಾರ್ಪೊರೇಶನ್ (ಎನ್​​ಪಿಸಿಐಎಲ್) ಈ ಗುತ್ತಿಗೆಗೆ ಅಧಿಕೃತವಾಗಿ ಎಂಇಐಎಲ್​​ಗೆ ಪರ್ಚೇಸ್ ಆರ್ಡರ್ ನೀಡಿದೆ. ಮುಂಬೈನಲ್ಲಿರುವ ಎನ್​​ಪಿಸಿಐಎಲ್​​ನ ಮುಖ್ಯಕಚೇರಿಯಲ್ಲಿ ಗುತ್ತಿಗೆಯ ಪರ್ಚೇಸ್ ಆರ್ಡರ್ ಅನ್ನು ಎಂಇಐಎಲ್​ನ ಪ್ರಾಜೆಕ್ಟ್ ವಿಭಾಗದ ನಿರ್ದೇಶಕ ಸುಬ್ಬಯ್ಯ ಅವರಿಗೆ ಹಸ್ತಾಂತರಿಸಲಾಯಿತು.

ಎನ್​​ಪಿಸಿಎಲ್ ಸಂಸ್ಥೆ ಈವರೆಗೂ ನೀಡಿರುವ ಅತಿದೊಡ್ಡ ಗುತ್ತಿಗೆ ಇದು ಎಂದು ಹೇಳಲಾಗುತ್ತಿದೆ. ಎಂಜಿನಿಯರಿಂಗ್, ಕನ್ಸ್​​ಟ್ರಕ್ಷನ್, ವಾಹನ ಕ್ಷೇತ್ರದಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಮೇಘಾ ಎಂಜಿನಿಯರಿಂಗ್ ಇನ್​​ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಇದು ಪರಮಾಣ ಶಕ್ತಿ ಕ್ಷೇತ್ರದತ್ತ ಮೊದಲ ದೊಡ್ಡ ಹೆಜ್ಜೆಯಾಗಿದೆ. ಭಾರತದ ಇಂಧನ ಭದ್ರತೆ ದೃಷ್ಟಿಯಿಂದ ಈ ಯೋಜನೆಗಳು ಬಹಳ ಮಹತ್ವದ್ದಾಗಿದೆ. ಮಾಲಿನ್ಯರಹಿತವಾಗಿ ವಿದ್ಯುತ್ ಉತ್ಪಾದನೆ ಮಾಡಲು ಸಹಾಯವಾಗುತ್ತದೆ.

ಇದನ್ನೂ ಓದಿ: ಲಕ್ಷುರಿ ವಸ್ತುಗಳಿಗೆ ಟಿಸಿಎಸ್: ಅಧಿಸೂಚನೆ ಪ್ರಕಟ; ಇಲ್ಲಿದೆ ಐಷಾರಾಮಿ ವಸ್ತುಗಳ ಪಟ್ಟಿ

ಬಿಎಚ್​​ಇಎಲ್, ಎಲ್ ಅಂಡ್ ಟಿಯಂತಹ ಬಲಿಷ್ಠ ಸಂಸ್ಥೆಗಳನ್ನು ಸೋಲಿಸಿದ ಮೇಘಾ

ಕೈಗಾದಲ್ಲಿ ಎರಡು ಅಣುಘಟಕಗಳ ಸ್ಥಾಪನೆಯ ಯೋಜನೆಯನ್ನು ನೀಡಲು ಎನ್​​ಪಿಸಿಐಎಲ್ ಈ ಬಾರಿ ಬೇರೆಯೇ ವಿಧಾನ ಅನುಸರಿಸಿದೆ. ಗುಣಮಟ್ಟ ಮತ್ತು ವೆಚ್ಚ ಆಧಾರಿತವಾದ ಆಯ್ಕೆ ವಿಧಾನ (ಕ್ಯುಸಿಬಿಎಸ್) ಇದು. ಬಿಎಚ್​​ಇಎಲ್, ಎಲ್ ಅಂಡ್ ಟಿ ಮುಂತಾದ ದೊಡ್ಡ ಕಂಪನಿಗಳು ಈ ಯೋಜನೆ ಪಡೆಯಲು ಯತ್ನಿಸಿದ್ದವು. ಆದರೆ, ಮೇಘಾ ಇಂಜಿನಿಯರಿಂಗ್ ಇನ್​​ಫ್ರಾಸ್ಟ್ರಕ್ಚರ್ ಸಂಸ್ಥೆ ಈ ಯೋಜನೆಗೆ ಪ್ರಸ್ತಾಪಿಸಿದ ತಾಂತ್ರಿಕ ಅಂಶಗಳು ಹಾಗೂ ಸ್ಪರ್ಧಾತ್ಮಕ ಬೆಲೆಗಳು ಅದಕ್ಕೆ ಗೆಲುವು ತಂದುಕೊಟ್ಟಿವೆ.

ದೇಶದ ಇಂಧನ ಭದ್ರತೆಗೆ ಮಹತ್ವದ ಹೆಜ್ಜೆ ಇದು…

ಬೆಳೆಯುತ್ತಿರುವ ಭಾರತದ ಆರ್ಥಿಕತೆಗೆ ಮುಂದಿನ ದಿನಗಳಲ್ಲಿ ವಿದ್ಯುತ್​​ಗೆ ಬೇಡಿಕೆ ತೀವ್ರವಾಗಿ ಹೆಚ್ಚಲಿದೆ. ಅದರಲ್ಲೂ ಮಾಲಿನ್ಯರಹಿತ ವಿದ್ಯುತ್​​ನ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಸ್ವಚ್ಛ ಇಂಧನಗಳಲ್ಲಿ ಪರಮಾಣ ವಿದ್ಯುತ್ ಕೂಡ ಒಂದು. ಹೀಗಾಗಿ, ಕೈಗಾ ಸೇರಿದಂತೆ ದೇಶದ ವಿವಿಧೆಡೆ ಮತ್ತಷ್ಟು ಪರಮಾಣು ವಿದ್ಯುತ್ ಉತ್ಪಾದಕ ಘಟಕಗಳನ್ನು ಸರ್ಕಾರ ನಿರ್ಮಿಸುತ್ತಿದೆ. ಈ ಬಾಗವಾಗಿ ಕೈಗಾದಲ್ಲಿ 5 ಮತ್ತು 6ನೇ ಘಟಕವನ್ನು ನಿರ್ಮಿಸುವ ಗುತ್ತಿಗೆಯು ಮೇಘಾ ಎಂಜಿನಿಯರಿಂಗ್​​ಗೆ ಲಭಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Wed, 23 April 25