ನವದೆಹಲಿ: ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪಾನ್ ನಂಬರ್ (PAN number) ಈಗ ಬಹಳ ಅಗತ್ಯವಾಗಿರುವ ದಾಖಲೆಗಳಲ್ಲಿ ಒಂದು. ಹಣಕಾಸು ಚಟುವಟಿಕೆಗಳಿಗೆ ಇದು ಅತ್ಯವಶ್ಯಕ. ಒಬ್ಬ ವ್ಯಕ್ತಿ ಒಂದು ಪಾನ್ ಕಾರ್ಡ್ ಮಾತ್ರ ಹೊಂದಲು ಸಾಧ್ಯ. ಒಂದಕ್ಕಿಂತ ಹೆಚ್ಚು ಪಾನ್ ನಂಬರ್ ಹೊಂದುವುದು ಅಪರಾಧ. 10 ಅಕ್ಷರ ಅಂಕಿಗಳ ಸಂಯೋಗದ ಸಂಖ್ಯೆಯನ್ನು (10 digit Alpha-numberic number) ಪಾನ್ ನಂಬರ್ ಹೊಂದಿರುತ್ತದೆ. ಈಗ ಆಧಾರ್ ಕಾರ್ಡ್ಗೆ ಪಾನ್ ಸಂಖ್ಯೆಯನ್ನೂ ಜೋಡಿಸುವುದು ಕಡ್ಡಾಯ. ಈ ದಾಖಲೆಯನ್ನು ಜೋಪಾನವಾಗಿಟ್ಟುಕೊಳ್ಳುವುದು ಅಗತ್ಯ.
ಒಂದು ವೇಳೆ ಪಾನ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು? ನಿಮಗೆ ಪಾನ್ ನಂಬರ್ ಗೊತ್ತಿದ್ದರೆ ಸಾಕು ಪಾನ್ ಕಾರ್ಡ್ ಮರಳಿ ಪಡೆಯಬಹುದು. ಆನ್ಲೈನಲ್ಲೂ ನೀವು ಈ ಕೆಲಸ ಮಾಡಬಹುದು.
ಇದರ ವಿಧಾನಗಳು ಈ ಕೆಳಕಂಡಂತಿವೆ:
ಇದನ್ನೂ ಓದಿ: Wedding Insurance: ಮದುವೆಗೂ ಇನ್ಷೂರೆನ್ಸ್: ಏನು ಪ್ರಯೋಜನ? ಪ್ರೀಮಿಯಂ ಎಷ್ಟು? ಏನೇನೆಲ್ಲಾ ಕವರ್ ಆಗುತ್ತೆ? ವಿವರ ಇಲ್ಲಿದೆ
ಆನ್ಲೈನ್ನಲ್ಲಿ ಸಲ್ಲಿಸಲು:
ಇನ್ನು, ಆನ್ಲೈನ್ ಮೂಲಕವೇ ನೀವು ಅರ್ಜಿ ಸಲ್ಲಿಸಲು ನಿರ್ಧರಿಸಿದಲ್ಲಿ ಇದಕ್ಕೆ ಆಧಾರ್ ನಂಬರ್ ಬಳಸಬಹುದು. ಆಧಾರ್ಗೆ ನೀಡಲಾದ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ಗೆ ಬರುವ ಒಟಿಪಿ ಮೂಲಕ ಅರ್ಜಿ ವಿವರ ತುಂಬಬಹುದು. ಅರ್ಜಿ ಸಲ್ಲಿಸುವಾಗ ಡಿಜಿಟಲ್ ಸಿಗ್ನೇಚರ್ ಹಾಕಬೇಕಾಗುತ್ತದೆ.
ನಂತರ ನಿಮ್ಮ ಪಾಸ್ಪೋರ್ಟ್ ಗಾತ್ರದ ಫೋಟೋ, ಸಹಿ ಮತ್ತಿತರ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಇಮೇಜ್ಗಳನ್ನು ಅಪ್ಲೋಡ್ ಮಾಡಬೇಕು. ಇದಾದ ಬಳಿಕ ಅಪ್ಲಿಕೇಶನ್ ಫಾರ್ಮ್ ಅನ್ನು ದೃಢಪಡಿಸಲು ಮತ್ತೊಮ್ಮೆ ಒಟಿಪಿ ಜನರೇಟ್ ಆಗುತ್ತದೆ.
ಇದನ್ನೂ ಓದಿ: Cheaper Items: ಹೊಸ ಜಿಎಸ್ಟಿ ದರ: ಅಗ್ಗವಾಗಲಿರುವ ವಸ್ತುಗಳಿವು
ಇಲ್ಲಿ ನಿಮಗೆ ಎರಡು ರೀತಿಯ ಪಾನ್ ಕಾರ್ಡ್ ಅವಕಾಶ ಇರುತ್ತದೆ. ಒಂದು ಭೌತಿಕ ಪಾನ್ ಕಾರ್ಡ್. ಮತ್ತೊಂದು ಇ ಪಾನ್ ಕಾರ್ಡ್. ಎಲೆಕ್ಟ್ರಾನಿಕ್ ಪಾನ್ ಕಾರ್ಡ್ ಪಡೆಯಲು ಇಮೇಲ್ ವಿಳಾಸ ಕೊಡಬೇಕು. ಭೌತಿಕ ಪಾನ್ ಕಾರ್ಡ್ ಬೇಕೆಂದರೆ ಪಾನ್ ಡೇಟಾಬೇಸ್ನಲ್ಲಿ ನೀವು ಇತ್ತೀಚೆಗೆ ನೀಡಿರುವ ವಿಳಾಸಕ್ಕೆ ಪಾನ್ ಕಾರ್ಡ್ ಪೋಸ್ಟ್ ಮೂಲಕ ಬರುತ್ತದೆ.
ಆಫ್ಲೈನ್ ವಿಧಾನ:
ರಿಕ್ವೆಸ್ಟ್ ಫಾರ್ ನ್ಯೂ ಪಾನ್ ಕಾರ್ಡ್ ಹೆಸರಿನ ಫಾರ್ಮ್ ಅನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಂಡು, ಅದನ್ನು ಭರ್ತಿ ಮಾಡಬೇಕು. ಎರಡು ಪಾಸ್ಪೋರ್ಟ್ ಗಾತ್ರದ ಫೋಟೋ, ಐಡಿ ಪ್ರೂಫ್, ವಿಳಾಸದ ಪ್ರೂಫ್, ಪ್ಯಾನ್ ಪ್ರೂಫ್ ದಾಖಲೆಗಳನ್ನು ಸೇರಿಸಿ ಎನ್ಎಸ್ಡಿಎಲ್ ಫೆಸಿಲಿಟೇಶನ್ ಸೆಂಟರ್ಗೆ ಕಳುಹಿಸಬೇಕು. ಎರಡು ವಾರಗಳಲ್ಲಿ ಪಾನ್ ಕಾರ್ಡ್ ನಿಮ್ಮ ವಿಳಾಸಕ್ಕೆ ಬರುತ್ತದೆ.
Published On - 3:26 pm, Mon, 20 February 23