Microsoft Penalty: ಪೋಷಕರ ಅನುಮತಿ ಇಲ್ಲದೇ ಮಕ್ಕಳಿಂದ ಖಾಸಗಿ ಮಾಹಿತಿ ಪಡೆದ ಆರೋಪ; ಮೈಕ್ರೋಸಾಫ್ಟ್​ಗೆ ಬಿತ್ತು ದಂಡ

Allegedly Collecting Children's Personal Data: ಮೈಕ್ರೋಸಾಫ್ಟ್​ನ ಜನಪ್ರಿಯ ಎಕ್ಸ್​ಬಾಕ್ಸ್ ಗೇಮಿಂಗ್ ಸಿಸ್ಟಂ ಅನ್ನು ಬಳಸುವವರು ಸೈನ್ ಅಪ್ ಆಗಬೇಕು. ಈ ವೇಳೆ 13 ವರ್ಷದೊಳಗಿನ ಮಕ್ಕಳಿಂದ ಅವರ ಪೋಷಕರ ಅನುಮತಿ ಇಲ್ಲದೇ ವೈಯಕ್ತಿಕ ಮಾಹಿತಿಯನ್ನು ಮೈಕ್ರೋಸಾಫ್ಟ್ ಸಂಗ್ರಹಿಸಿದ ಆರೋಪ ಇದೆ.

Microsoft Penalty: ಪೋಷಕರ ಅನುಮತಿ ಇಲ್ಲದೇ ಮಕ್ಕಳಿಂದ ಖಾಸಗಿ ಮಾಹಿತಿ ಪಡೆದ ಆರೋಪ; ಮೈಕ್ರೋಸಾಫ್ಟ್​ಗೆ ಬಿತ್ತು ದಂಡ
ಮೈಕ್ರೋಸಾಫ್ಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 06, 2023 | 1:47 PM

ವಾಷಿಂಗ್ಟನ್: ಪೋಷಕರ ಅನುಮತಿ ಪಡೆಯದೆಯೇ ಮಕ್ಕಳಿಂದ ವೈಯಕ್ತಿಕ ಮಾಹಿತಿ ಪಡೆದ ಆರೋಪದ ಪ್ರಕರಣವೊಂದರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಮೈಕ್ರೋಸಾಫ್ಟ್ 20 ಮಿಲಿಯನ್ ಡಾಲರ್ (ಸುಮಾರು 165 ಕೋಟಿ ರೂ) ಮೊತ್ತದಷ್ಟು ದಂಡ ಕಟ್ಟಬೇಕು ಎಂದು ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ (FTC) ಹೇಳಿದೆ. ಈ ಬಗ್ಗೆ ಮೈಕ್ರೋಸಾಫ್ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದು ಮಾಧ್ಯಮಗಳಲ್ಲಿ ವರದಿಯಾಗಿಲ್ಲ.

ಮೈಕ್ರೋಸಾಫ್ಟ್ ಮಕ್ಕಳ ವೈಯಕ್ತಿಕ ಮಾಹಿತಿ ಹೇಗೆ ಪಡೆಯಿತು?

ಮೈಕ್ರೋಸಾಫ್ಟ್​ನ ಜನಪ್ರಿಯ ಎಕ್ಸ್​ಬಾಕ್ಸ್ ಗೇಮಿಂಗ್ ಸಿಸ್ಟಂ ಅನ್ನು ಬಳಸುವವರು ಸೈನ್ ಅಪ್ ಆಗಬೇಕು. ಈ ವೇಳೆ ಅವರಿಂದ ವೈಯಕ್ತಿಕ ಮಾಹಿತಿಯನ್ನು ಮೈಕ್ರೋಸಾಫ್ಟ್ ಸಂಗ್ರಹಿಸಿದೆ. ಎಕ್ಸ್​ಬಾಕ್ಸ್ ಬಳಸುವವರು ಅಪ್ರಾಪ್ತರಾಗಿದ್ದರೆ ವೈಯಕ್ತಿಕ ಮಾಹಿತಿ ಪಡೆಯಲು ಅವರ ಪೋಷಕರ ಅನುಮತಿ ಪಡೆಯಬೇಕಾಗುತ್ತದೆ, ಅಥವಾ ಪೋಷಕರಿಗೆ ನೋಟಿಫಿಕೇಶನ್ ನೀಡಬೇಕಾಗುತ್ತದೆ. ಮೈಕ್ರೋಸಾಫ್ಟ್ ಇದ್ಯಾವುದನ್ನೂ ಮಾಡಿಲ್ಲ. ಮಕ್ಕಳ ವೈಯಕ್ತಿಕ ಮಾಹಿತಿಯನ್ನು ಅನುಮತಿ ಇಲ್ಲದೇ ಪಡೆದದ್ದೂ ಅಲ್ಲದೇ ಆ ಮಾಹಿತಿಯನ್ನು ಹಾಗೇ ಉಳಿಸಿಟ್ಟುಕೊಂಡಿದೆ. ಇದು ಅಮೆರಿಕದ ಮಕ್ಕಳ ಆನ್​ಲೈನ್ ಖಾಸಗಿತನ ರಕ್ಷಣೆ ಕಾಯ್ದೆಯ (COPPA) ಉಲ್ಲಂಘನೆ ಎಂದು ಫೆಡರಲ್ ಟ್ರೇಡ್ ಕಮಿಷನ್ ಬಗೆದಿದೆ.

ಇದನ್ನೂ ಓದಿBBC: 40 ಕೋಟಿ ಆದಾಯ ಮುಚ್ಚಿಟ್ಟಿದ್ದು ಹೌದೆಂದು ತಪ್ಪೊಪ್ಪಿಕೊಂಡ ಬಿಬಿಸಿ; ಪರಿಷ್ಕೃತ ಐಟಿಆರ್ ಸಲ್ಲಿಸುವಂತೆ ಐಟಿ ಇಲಾಖೆ ಸೂಚನೆ

ಇಲ್ಲಿ ಮಕ್ಕಳೆಂದರೆ 13 ವರ್ಷದೊಳಗಿನ ವಯಸ್ಸಿನವರು. ಮಕ್ಕಳ ವೈಯಕ್ತಿಕ ಮಾಹಿತಿಯಲ್ಲಿ ಅವರ ಗೇಮಿಂಗ್ ಅವತಾರ್​ಗಳು, ಬಯೋಮೆಟ್ರಿಕ್ ಡಾಟಾ, ಆರೋಗ್ಯ ಮಾಹಿತಿ ಇತ್ಯಾದಿಗಳೂ ಒಳಗೊಂಡಿರುತ್ತವೆ. 2015ರಿಂದ 2020ರ ಅವಧಿಯಲ್ಲಿ ಎಕ್ಸ್​ಬಾಕ್ಸ್ ಗೇಮಿಂಗ್ ಕನ್ಸೋಲ್​ನಲ್ಲಿ ಖಾತೆ ರಚಿಸುವಾಗ ಮಕ್ಕಳಿಂದ ಮೈಕ್ರೋಸಾಫ್ಟ್ ಈ ಡಾಟಾಗಳನ್ನು ಸಂಗ್ರಹಿಸಿಟ್ಟುಕೊಂಡಿತ್ತು ಎಂಬುದು ಆರೋಪ.

ಮಕ್ಕಳ ಖಾಸಗಿತನದ ರಕ್ಷಣೆಗೆ ಅಮೆರಿಕದಲ್ಲಿದೆ ಕಠಿಣ ನಿಯಮಗಳು

ಮೈಕ್ರೋಸಾಫ್ಟ್​ನ ಎಕ್ಸ್​ಬಾಕ್ಸ್ ಗೇಮಿಂಗ್ ಕನ್ಸೋಲ್ ಸಿಸ್ಟಂ ಅನ್ನು ಬಳಸುವ ಮಕ್ಕಳ ಖಾಸಗಿ ಮಾಹಿತಿಯನ್ನು ಗೌಪ್ಯವಾಗಿಡಲು ಮೈಕ್ರೋಸಾಫ್ಟ್ ಕ್ರಮ ಕೈಗೊಳ್ಳಬೇಕೆಂದು ಎಫ್​ಟಿಸಿ ತನ್ನ ಆದೇಶದಲ್ಲಿ ತಿಳಿಸಿದೆ. ಮಕ್ಕಳ ಡಾಟಾವನ್ನು ಮೈಕ್ರೋಸಾಫ್ಟ್ ನೀಡುವ ಥರ್ಡ್ ಪಾರ್ಟಿ ಗೇಮಿಂಗ್ ಪಬ್ಲಿಶರ್​ಗಳಿಗೂ ಮಕ್ಕಳ ಆನ್​ಲೈನ್ ಪ್ರೈವೆಸಿ ಪ್ರೊಟೆಕ್ಷನ್ ಕಾಯ್ದೆ ಅನ್ವಯ ಆಗುತ್ತದೆ. ಎಕ್ಸ್​ಬಾಕ್ಸ್​ನಲ್ಲಿ ಪೋಷಕರು ತಮ್ಮ ಮಕ್ಕಳ ಖಾಸಗಿತನವನ್ನು ರಕ್ಷಿಸುವುದು ಸುಲಭವಾಗುತ್ತದೆ. ಮಕ್ಕಳಿಂದ ಮೈಕ್ರೋಸಾಫ್ಟ್ ಕಲೆಹಾಕುವ ಮಾಹಿತಿ ಸೀಮಿತವಾಗಿರುತ್ತದೆ ಎಂದು ಎಫ್​ಟಿಸಿಯ ಬ್ಯೂರೋ ಆಫ್ ಕನ್ಸೂಮರ್ ಪ್ರೊಟೆಕ್ಷನ್ ವಿಭಾಗದ ಡೈರೆಕ್ಟರ್ ಸ್ಯಾಮುಯಲ್ ಲೆವಿನೆ ಹೇಳಿದ್ದಾರೆ.

ಇದನ್ನೂ ಓದಿByju’s vs Lenders: ಸಾಲಗಾರರಿಂದ ಹಿಂಸೆ; ಅಮೆರಿಕದ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿನ ಬೈಜೂಸ್

ಅಮೆರಿಕದ ಈ ಕೋಪ್ಪ ಕಾಯ್ದೆ ಪ್ರಕಾರ 13 ವರ್ಷದೊಳಗಿನ ಮಕ್ಕಳಿಗೆಂದು ರೂಪಿಸಲಾದ ಆನ್​ಲೈನ್ ಸರ್ವಿಸ್ ಮತ್ತು ವೆಬ್​ಸೈಟ್​ಗಳು ಈ ಮಕ್ಕಳಿಂದ ವೈಯಕ್ತಿಕ ಮಾಹಿತಿ ಕಲೆಹಾಕುವ ಮುನ್ನ ಪೋಷಕರಿಗೆ ಅಲರ್ಟ್ ನೀಡಿ ಅವರಿಂದ ಅನುಮತಿ ಪಡೆಯಬೇಕು. ಆ ನಂತರವಷ್ಟೇ ಮಕ್ಕಳ ಮಾಹಿತಿ ಪಡೆದು ಅದನ್ನು ಬಳಕೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್