Customs Duty: ಆಮದು ಸುಂಕ ದರ ಪರಿಷ್ಕರಣೆ: ಉತ್ಪಾದನಾ ವಲಯಕ್ಕೆ ಪುಷ್ಟಿ; ಸಚಿವ ವೈಷ್ಣವ್; ಯಾವ್ಯಾವ ವಸ್ತುಗಳಿಗೆ ಎಷ್ಟು ಸುಂಕ?
Customs Duty Rationalization: ಮೊಬೈಲ್ ಫೋನ್ ಬಿಡಿಭಾಗ ಹಾಗೂ ಇತರ ಭಾಗಗಳಿಗೆ ಶೇ. 15ರವರೆಗೆ ಇದ್ದ ಆಮದು ಸುಂಕವನ್ನು ಸೊನ್ನೆಯವರೆಗೆ ಇಳಿಸಲಾಗಿದೆ. ಮೊಬೈಲ್ ಕಾಂಪೊನೆಂಟ್ಗಳ ಮೆಕ್ಯಾನಿಕ್ಸ್ ಪಾರ್ಟ್ಗಳಿಗೆ ಕಸ್ಟಮ್ಸ್ ಡ್ಯೂಟಿ ಶೂನ್ಯವಾಗಿದೆ. ಹಲವು ಬಿಡಿಭಾಗಗಳಿಗೆ ಶೇ. 15 ಇದ್ದ ಸುಂಕವನ್ನು ಶೇ. 10ಕ್ಕೆ ಇಳಿಸಲಾಗಿದೆ.

ನವದೆಹಲಿ, ಜನವರಿ 31: ಕೇಂದ್ರ ಸರ್ಕಾರ ಮೂರು ವಿಭಾಗಗಳಲ್ಲಿ ಮೊಬೈಲ್ ಫೋನ್ ಬಿಡಿಭಾಗಗಳಿಗೆ ಆಮದು ಸುಂಕಗಳನ್ನು (customs duty) ಪರಿಷ್ಕರಿಸಿದೆ. ಮೊಬೈಲ್ ತಯಾರಿಕೆಗೆ ಬಳಸಲಾಗುವ ಬಿಡಿಭಾಗಗಳಿಗೆ (mobile components) ಶೇ. 15ರಷ್ಟು ಇದ್ದ ಆಮದು ಸುಂಕವನ್ನು ಶೇ. 10ಕ್ಕೆ ಇಳಿಸಿದೆ. ಈ ಬಿಡಿಭಾಗಗಳ ಉಪಭಾಗಗಳಿಗೆ ಆಮದು ಸುಂಕವನ್ನು ಸಂಪೂರ್ಣ ನಿಲ್ಲಿಸಲಾಗಿದೆ. ಹಾಗೆಯೇ ಡೈ ಕಟ್ (die-cut parts) ಭಾಗಗಳಿಗೆ ಶೇ. 15ರಷ್ಟು ಇದ್ದ ಕಸ್ಟಮ್ಸ್ ಡ್ಯೂಟಿಯನ್ನು ಶೇ. 10ಕ್ಕೆ ಇಳಿಸಲಾಗಿದೆ.
ಯಾವ್ಯಾವುದಕ್ಕೆ ಆಮದು ಸುಂಕ ಪರಿಷ್ಕರಣೆ?
ಮೊಬೈಲ್ ತಯಾರಿಕೆಗೆ ಬಳಸುವ ಬಿಡಿಭಾಗ ಅಥವಾ ಮೆಕ್ಯಾನಿಕ್ಸ್: ಆಮದು ಸುಂಕ ಶೇ. 15ರಿಂದ ಶೇ. 10ಕ್ಕೆ ಇಳಿಕೆ
- ಬ್ಯಾಟರಿ ಕವರ್
- ಫ್ರಂಟ್ ಕವರ್
- ಮಿಡಲ್ ಕವರ್
- ಮೈನ್ ಲೆನ್ಸ್
- ಬ್ಯಾಕ್ ಕವರ್
- ಜಿಎಸ್ಎಂ ಆಂಟೆನಾ
- ಪಿಯು ಕೇಸ್ / ಸೀಲಿಂಗ್ ಗ್ಯಾಸ್ಕೆಟ್
- ಪಿಇ, ಪಿಪಿ, ಇಪಿಎಸ್, ಪಿಸಿ ಮತ್ತು ಇತರ ಪಾಲಿಮರ್ ಕೇಸ್ಗಳು
- ಸಿಮ್ ಸಾಕೆಟ್
- ಸ್ಕ್ರೂ
- ಪ್ಲಾಸ್ಟಿಕ್ ಮೆಕ್ಯಾನಿಕ್ಸ್
- ಇತರ ಮೆಟಲ್ ಮೆಕ್ಯಾನಿಕ್ಸ್
- ಸೈಡ್ ಕೀ
ಮೆಕ್ಯಾನಿಕ್ಸ್ ಭಾಗಗಳಿಗೆ ಆಮದು ಸುಂಕ ಸೊನ್ನೆಗೆ ಇಳಿಕೆ
ರೆಸಿನ್, ಮೆಶ್, ಅಡ್ಹಿಸಿವ್ (Adhesive), ಸ್ಪಾಂಜ್, ಫಿಲಂ, ಗ್ಯಾಸ್ಕೆಟ್, ಲೋಗೋ, ಸ್ಟೀಲ್ ಶೀಟ್, ಕವರ್ ಟೇಪ್, ಅಡ್ಹಿಸಿವ್ ಟೇಪ್ ಮತ್ತಿತರವು)
ಡೈ ಕಟ್ ಪಾರ್ಟ್
ಕಂಡಕ್ಟಿವ್ ಕ್ಲಾತ್, ಎಲ್ಸಿಡಿ ಕಂಡಕ್ಟಿವ್ ಫೋಮ್, ಎಲ್ಸಿಡಿ ಪೋಮ್, ಬಿಟಿ ಫೋಮ್, ಹೀಟ್ ಡಿಸಿಪೇಶನ್ ಸ್ಟಿಕರ್ ಬ್ಯಾಟರಿ ಕವರ್, ಸ್ಟಿಕರ್ ಬ್ಯಾಟರಿ ಸ್ಲಾಟ್, ಪ್ರೊಟೆಕ್ಟಿವ್ ಫಿಲಂ, ಎಲ್ಸಿಡಿ ಎಫ್ಪಿಸಿಗೆ ಮೈಲರ್, ಫಿಲಂ ಫ್ರಂಟ್ ಫ್ಲ್ಯಾಶ್
ಇದನ್ನೂ ಓದಿ: Infosys: ಇನ್ಫೋಸಿಸ್ ಸಂಸ್ಥೆಗೆ ಅಮೆರಿಕದ ಪ್ರಾಧಿಕಾರದಿಂದ ದಂಡ; ಶಾರ್ಟ್ ಪೇಮೆಂಟ್ ಕಾರಣ
ಸಚಿವ ಅಶ್ವಿನಿ ವೈಷ್ಣವ್ ಮೆಚ್ಚುಗೆ
ಕಸ್ಟಮ್ಸ್ ಡ್ಯೂಟಿ ಪರಿಷ್ಕರಣೆಯಿಂದ ಉದ್ಯಮ ವಲಯಕ್ಕೆ ಒಂದು ನಿಖರತೆ ಮತ್ತು ಸ್ಪಷ್ಟತೆ ಸಿಕ್ಕಂತಾಗಿದೆ. ಈ ಕ್ರಮದ ಮೂಲಕ ದೇಶದ ಮೊಬೈಲ್ ಫೋನ್ ತಯಾರಿಕೆಯ ಇಕೋಸಿಸ್ಟಂ ಅನ್ನು ಬಲಪಡಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Rationalization of customs duties brings much-needed certainty and clarity for the industry. Thanks to Hon’ble PM @narendramodi Ji and FM @nsitharaman Ji for strengthening the mobile phone manufacturing ecosystem through this measure. pic.twitter.com/cwP4MNksy4
— Ashwini Vaishnaw (@AshwiniVaishnaw) January 31, 2024
ಆಮದು ಸುಂಕ ಇಳಿಸಿದ ಸರ್ಕಾರದ ಕ್ರಮಕ್ಕೆ ಉದ್ಯಮ ವಲಯದಿಂದ ಸ್ವಾಗತ
‘ಭಾರತದ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ ಸ್ಪರ್ಧಾತ್ಮಕವಾಗಲು ಸರ್ಕಾರ ಮಾಡಿದ ನೀತಿ ಬದಲಾವಣೆ ಸ್ವಾಗತಾರ್ಹವಾಗಿದೆ. ಗಾತ್ರ ಹೆಚ್ಚಿಸುವುದು ಮತ್ತು ಸುಂಕ ಕಡಿಮೆ ಮಾಡುವುದು ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ರಫ್ತಿಗೆ ಜಾಗತಿಕ ಅಡ್ಡೆಯಾಗಿ ರೂಪುಗೊಳಿಸಲು ಸಹಾಯವಾಗುವುದು. ದೇಶದ ಮೊಬೈಲ್ ಫೋನ್ ಉದ್ಯಮವು ಪ್ರಧಾನಮಂತ್ರಿ ಕಚೇರಿ, ಹಣಕಾಸು ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯಕ್ಕೆ ಧನ್ಯವಾದ ಹೇಳಲು ಬಯಸುತ್ತದೆ’ ಎಂದು ಇಂಡಿಯನ್ ಸೆಲ್ಯೂಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ ಐಸಿಇಎ ಛೇರ್ಮನ್ ಪಂಕಜ್ ಮೋಹಿಂದ್ರೂ ಹೇಳಿದ್ದಾರೆ.
ಇದನ್ನೂ ಓದಿ: Import Duty: ಮೊಬೈಲ್ ಫೋನ್ ಬಿಡಿಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡಿದ ಸರ್ಕಾರ; ಉತ್ಪಾದನಾ ವಲಯಕ್ಕೆ ಖುಷಿ ಸುದ್ದಿ
‘ಮೊಬೈಲ್ ಫೋನ್ನ ಭಾಗಗಳು, ಮೆಕ್ಯಾನಿಕ್ಸ್ ಮತ್ತು ಡೈ ಕಟ್ ಪಾರ್ಟ್ಗಳಿಗೆ ಆಮದು ಸುಂಕವನ್ನು ಶೇ. 10ಕ್ಕೆ ಇಳಿಸಿರುವುದು, ಹಾಗು ಮೆಕ್ಯಾನಿಕ್ಸ್ ಇನ್ಪುಟ್ಗಳ ಮೇಲಿನ ಸುಂಕವನ್ನು ಸೊನ್ನೆಗೆ ಇಳಿಸಿರುವುದು ಸರ್ಕಾರದ ನೀತಿಯಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸಿದೆ. ರಫ್ತು ಆದ್ಯತೆಯ ಪ್ರಗತಿ ಹಾಗೂ ಸ್ಪರ್ಧಾತ್ಮಕತೆಗೆ ಸರ್ಕಾರ ಒತ್ತು ನೀಡಿರುವುದನ್ನು ಇದು ತೋರಿಸುತ್ತದೆ’ ಎಂದು ಐಸಿಇಎ ಮುಖ್ಯಸ್ಥರು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Wed, 31 January 24