AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infosys: ಇನ್ಫೋಸಿಸ್ ಸಂಸ್ಥೆಗೆ ಅಮೆರಿಕದ ಪ್ರಾಧಿಕಾರದಿಂದ ದಂಡ; ಶಾರ್ಟ್ ಪೇಮೆಂಟ್ ಕಾರಣ

Infosys Slapped With Fine: ಅಮೆರಿಕದಲ್ಲಿ ಇನ್ಫೋಸಿಸ್​ಗೆ ದಂಡ ವಿಧಿಸಲಾಗಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅಮೆರಿಕದ ನೇವಾಡದ ತೆರಿಗೆ ಇಲಾಖೆ ಜ. 25ರಂದು ಇನ್ಫೋಸಿಸ್​ಗೆ ದಂಡ ವಿಧಿಸಿ ನೋಟೀಸ್ ಕೊಟ್ಟಿದೆ. 2021-22ರ ಮಧ್ಯೆ ಎರಡು ಕ್ವಾರ್ಟರ್​ನಲ್ಲಿ ಶಾರ್ಟ್ ಪೇಮೆಂಟ್ ಮಾಡಿದ ಆರೋಪ ಇನ್ಫೋಸಿಸ್ ಮೇಲಿದೆ.

Infosys: ಇನ್ಫೋಸಿಸ್ ಸಂಸ್ಥೆಗೆ ಅಮೆರಿಕದ ಪ್ರಾಧಿಕಾರದಿಂದ ದಂಡ; ಶಾರ್ಟ್ ಪೇಮೆಂಟ್ ಕಾರಣ
ಇನ್ಫೋಸಿಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2024 | 2:09 PM

Share

ನವದೆಹಲಿ, ಜನವರಿ 31: ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಎನಿಸಿರುವ ಇನ್ಫೋಸಿಸ್​ಗೆ ಅಮೆರಿಕದ ತೆರಿಗೆ ಪ್ರಾಧಿಕಾರವೊಂದು ದಂಡ ವಿಧಿಸಿದೆ. ಸುಮಾರು ಏಳು ಲಕ್ಷ ಕೋಟಿ ರೂ ಸಮೀಪದಷ್ಟು ಮೌಲ್ಯದ ಇನ್ಫೋಸಿಸ್ ಸಂಸ್ಥೆಗೆ ಅಮೆರಿಕದ ನೆವಾಡ ತೆರಿಗೆ ಇಲಾಖೆ (Nevada department of Taxation) 18,702 ರೂನಷ್ಟು ದಂಡ ವಿಧಿಸಿದೆ. ಶಾರ್ಟ್ ಪೇಮೆಂಟ್ (Short Payment) ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ತೆರಿಗೆ ಅಧಿಕಾರಿಗಳು ಇನ್ಫೋಸಿಸ್​ಗೆ ದಂಡ ಹಾಕಿದ್ದಾರೆ. ಜನವರಿ 25ರಂದು ತನಗೆ ನೆವಾಡದ ತೆರಿಗೆ ಸಂಸ್ಥೆಯಿಂದ ನೋಟೀಸ್ ಬಂದಿರುವುದಾಗಿ ಇನ್ಫೋಸಿಸ್ ತನ್ನ ಸ್ಟಾಕ್ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ.

ಇನ್ಫೋಸಿಸ್ 2021ರ ವರ್ಷದ ನಾಲ್ಕನೇ ಕ್ವಾರ್ಟರ್​ನಿಂದ ಹಿಡಿದು 2022ರ ಮೊದಲ ಕ್ವಾರ್ಟರ್​ವರೆಗಿನ ಅವಧಿಯಲ್ಲಿ ಶಾರ್ಟ್ ಪೇಮೆಂಟ್ ನಿಯಮ ಉಲ್ಲಂಘಿಸಿರುವ ಆರೋಪ ಇದೆ. ‘ದಂಡದ ಮೊತ್ತ ಸಂಗ್ರಹಕ್ಕೆಂದು ಜನವರಿ 25ರಂದು ನೆವಾಡದ ಟ್ಯಾಕ್ಸೇಶನ್ ಡಿಪಾರ್ಟ್ಮೆಂಟ್ ನೋಟೀಸ್ ಕಳುಹಿಸಿದೆ. 2021ರ ನಾಲ್ಕನೇ ಕ್ವಾರ್ಟರ್​ನಿಂದ 2022ರ ಮೊದಲ ಕ್ವಾರ್ಟರ್​ಗೆ ಮಾರ್ಪಡಿಸಲಾದ ಬಿಸಿನೆಸ್ ಟ್ಯಾಕ್ಸ್​ನಲ್ಲಿ ಶಾರ್ಟ್ ಪೇಮೆಂಟ್ ಮಾಡಿರುವ ಆರೋಪ ಮಾಡಲಾಗಿದೆ.’ ಎಂದು ಇನ್ಫೋಸಿಸ್ ತಿಳಿಸಿದೆ.

ಇದನ್ನೂ ಓದಿ: Import Duty: ಮೊಬೈಲ್ ಫೋನ್ ಬಿಡಿಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡಿದ ಸರ್ಕಾರ; ಉತ್ಪಾದನಾ ವಲಯಕ್ಕೆ ಖುಷಿ ಸುದ್ದಿ

ಏನಿದು ಶಾರ್ಟ್ ಪೇಮೆಂಟ್?

ಇನ್ವಾಯ್ಸ್ ಆಗಿರುವ ಮೊತ್ತಕ್ಕಿಂತ ಕಡಿಮೆ ಹಣವನ್ನು ಪಾವತಿಸುವುದಕ್ಕೆ ಶಾರ್ಟ್ ಪೇಮೆಂಟ್ ಅನ್ನುವುದು. ಆದರೆ, ಇನ್ಫೋಸಿಸ್ ತೆರಿಗೆ ಪ್ರಾಧಿಕಾರದಿಂದ ನೋಟೀಸ್ ಪಡೆದಿದೆಯಾದರೂ ಶಾರ್ಟ್ ಪೇಮೆಂಟ್ ಆರೋಪವನ್ನು ಒಪ್ಪಿಲ್ಲ. ಲಕ್ಷಾಂತರ ಕೋಟಿ ರೂ ಮೌಲ್ಯದ ಕಂಪನಿಗೆ ಕೆಲವೇ ಸಾವಿರ ರೂ ದಂಡವೇನೂ ದೊಡ್ಡ ವಿಚಾರವಲ್ಲ. ಆದರೆ, ತೆರಿಗೆ ಕಳ್ಳತನವೆಂಬ ಪುಟ್ಟ ಕಳಂಕ ಮೆತ್ತಿಕೊಳ್ಳುವ ಆತಂಕವಂತೂ ಇದೆ.

ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಹೆಜ್ಜೆ ಇಡುವುದಾಗಿ ಇನ್ಫೋಸಿಸ್ ಹೇಳಿದೆ. ಈ ಬೆಳವಣಿಗೆಯಿಂದ ಸಂಸ್ಥೆಯ ಚಟುವಟಿಕೆಯ ಮೇಲೆ ಯಾವ ಪರಿಣಾಮ ಇಲ್ಲ ಎಂದೂ ಸ್ಪಷ್ಪಪಡಿಸಿದೆ.

ಇನ್ಫೋಸಿಸ್ ವಿರುದ್ಧ ನೋಟೀಸ್ ಇದೇ ಮೊದಲಲ್ಲ

ಇನ್ಫೋಸಿಸ್​ಗೆ ಶಾರ್ಟ್ ಪೇಮೆಂಟ್ ಆರೋಪದಲ್ಲಿ ದಂಡ ವಿಧಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ 2023ರ ಆಗಸ್ಟ್ ತಿಂಗಳಲ್ಲಿ ಅಮೆರಿಕದ ಫ್ಲೋರಿಡಾ ರಾಜ್ಯದ ಕಂದಾಯ ಇಲಾಖೆ ಇನ್ಫೋಸಿಸ್​ಗೆ 76.92 ಡಾಲರ್ ಹಣದ ದಂಡ ಹಾಕಿತ್ತು.

ಇದನ್ನೂ ಓದಿ: Finance Commission: 16ನೇ ಫೈನಾನ್ಸ್ ಕಮಿಷನ್ ಸದಸ್ಯರ ನೇಮಕ; ಏನಿರುತ್ತದೆ ಈ ಆಯೋಗದ ಪಾತ್ರ? ಯಾರಿದ್ದಾರೆ ಈ ಆಯೋಗದಲ್ಲಿ?

ಅದೇ ವರ್ಷ (2023) ಅಕ್ಟೋಬರ್ ತಿಂಗಳಲ್ಲಿ ಮಸಾಚುಸೆಟ್ಸ್​ನ ಪ್ರಾಧಿಕಾರವೊಂದು 1,101.96 ಡಾಲರ್ ದಂಡ ವಿಧಿಸಿತ್ತು.

ಅಮೆರಿಕದಲ್ಲಿ ಮಾತ್ರವಲ್ಲ ಭಾರತದಲ್ಲೂ ತೆರಿಗೆ ಇಲಾಖೆಯಿಂದ ಇನ್ಫೋಸಿಸ್​ಗೆ ದಂಡ ಬಿದ್ದಿರುವುದು ಇದೆ. 2023ರ ಸೆಪ್ಟೆಂಬರ್ ತಿಂಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆ 26.5 ಲಕ್ಷ ರೂ ಮೊತ್ತದ ಐಜಿಎಸ್​ಟಿ ಹಾಗೂ ದಂಡ ಮತ್ತು ಬಡ್ಡಿಗಾಗಿ ಡಿಮ್ಯಾಂಡ್ ನೋಟೀಸ್ ಕಳುಹಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು