Finance Commission: 16ನೇ ಫೈನಾನ್ಸ್ ಕಮಿಷನ್ ಸದಸ್ಯರ ನೇಮಕ; ಏನಿರುತ್ತದೆ ಈ ಆಯೋಗದ ಪಾತ್ರ? ಯಾರಿದ್ದಾರೆ ಈ ಆಯೋಗದಲ್ಲಿ?

Government Appoints 4 Members For 16th Finance Commission: ಕೇಂದ್ರ ಸರ್ಕಾರ 16ನೇ ಹಣಕಾಸು ಆಯೋಗಕ್ಕೆ ನಾಲ್ವರು ಸದಸ್ಯರನ್ನು ನೇಮಕ ಮಾಡಿದೆ. ನೀತಿ ಆಯೋಗ್​ನ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಈ ಆಯೋಗದ ಛೇರ್ಮನ್ ಆಗಿದ್ದಾರೆ. ಸೌಮ್ಯಾ ಕಾಂತಿ ಘೋಷ್, ಅಜಯ್ ನಾರಾಯಣ್ ಝಾ, ಆನೀ ಜಾರ್ಜ್ ಮ್ಯಾಥ್ಯೂ ಮತ್ತು ನಿರಂಜನ್ ರಾಜಾಧ್ಯಕ್ಷ ಅವರು ನೇಮಕಗೊಂಡ ನಾಲ್ವರು ಸದಸ್ಯರು.

Finance Commission: 16ನೇ ಫೈನಾನ್ಸ್ ಕಮಿಷನ್ ಸದಸ್ಯರ ನೇಮಕ; ಏನಿರುತ್ತದೆ ಈ ಆಯೋಗದ ಪಾತ್ರ? ಯಾರಿದ್ದಾರೆ ಈ ಆಯೋಗದಲ್ಲಿ?
ಅರವಿಂದ್ ಪನಗರಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2024 | 11:57 AM

ನವದೆಹಲಿ, ಜನವರಿ 31: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ತೆರಿಗೆ ಹಂಚಿಕೆ ವಿಚಾರವನ್ನು ನಿರ್ಧರಿಸುವ ಮತ್ತು ಶಿಫಾರಸು ಮಾಡುವ ಜವಾಬ್ದಾರಿ ಹೊಂದಿರುವ 16ನೇ ಹಣಕಾಸು ಆಯೋಗಕ್ಕೆ ನಾಲ್ವರು ಸದಸ್ಯರನ್ನು ಸರ್ಕಾರ ನೇಮಕ ಮಾಡಿದೆ. ನೀತಿ ಆಯೋಗ್​ನ ಮಾಜಿ ಉಪಾಧ್ಯಕ್ಷ (ವೈಸ್ ಛೇರ್ಮನ್) ಅರವಿಂದ್ ಪನಗರಿಯಾ (Arvind Panagariya) ಅವರು ಆ ಆಯೋಗದ ಮುಖ್ಯಸ್ಥರಾಗಿದ್ದಾರೆ. ಎಸ್​ಬಿಐ ಗ್ರೂಪ್​ನ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯ ಕಾಂತಿ ಘೋಷ್ (Soumya Kanti Ghosh) ಸೇರಿದಂತೆ ನಾಲ್ವರು ಸದಸ್ಯರನ್ನು ಈ ಆಯೋಗಕ್ಕೆ ಒಳಗೊಳ್ಳಲಾಗಿದೆ.

16ನೇ ಹಣಕಾಸು ಆಯೋಗದ ನೇತೃತ್ವ ಹೊಂದಿರುವ ಅರವಿಂದ್ ಪನಗರಿಯಾ ಅವರ ತಂಡಕ್ಕೆ ಒಬ್ಬರು ಕಾರ್ಯದರ್ಶಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಹಾಗೂ ಒಬ್ಬರು ಆರ್ಥಿಕ ಸಲಹೆಗಾರರು ಸಹಾಯವಾಗಿ ಇರಲಿದ್ದಾರೆ.

ಎಸ್​ಬಿಐ ಗ್ರೂಪ್​ನ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯಾ ಕಾಂತಿ ಘೋಷ್, ಮಾಜಿ ವೆಚ್ಚ ಕಾರ್ಯದರ್ಶಿ ಅಜಯ್ ನಾರಾಯಣ್ ಝಾ, ನಿವೃತ್ತ ಐಎಎಸ್ ಅಧಿಕಾರಿ ಆನೀ ಜಾರ್ಜ್ ಮ್ಯಾಥ್ಯೂ ಮತ್ತು ಅರ್ಥ ಗ್ಲೋಬಲ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಿರಂಜನ್ ರಾಜಾಧ್ಯಕ್ಷ ಅವರು 16ನೇ ಹಣಕಾಸು ಆಯೋಗದ ಸದಸ್ಯರಾಗಿರುತ್ತಾರೆ.

ಇದನ್ನೂ ಓದಿ: IMF: ಈ ಎರಡು ವರ್ಷ ಚೀನಾ, ಅಮೆರಿಕ ಮತ್ತು ಭಾರತದ ಆರ್ಥಿಕ ಬೆಳವಣಿಗೆ ಹೇಗೆ? ಐಎಂಎಫ್ ಹೊಸ ವರದಿಯಲ್ಲೇನಿದೆ?

ಈ ಪೈಕಿ ಸೌಮ್ಯಾ ಕಾಂತಿ ಘೋಷ್ ಅರೆಕಾಲಿಕ ಸದಸ್ಯರಾಗಿರುತ್ತಾರೆ. ಈ ಮೇಲಿನ ನಾಲ್ವರು ಸದಸ್ಯರಿರುವ ಹಣಕಾಸು ಆಯೋಗಕ್ಕೆ ಋತ್ವಿಕ್ ರಂಜನಮ್ ಪಾಂಡೆ ಸೇರಿದಂತೆ ಇತರ ಕೆಲವರು ಸಹಾಯವಾಗಿರುತ್ತಾರೆ.

‘ಛೇರ್ಮನ್ ಹಾಗೂ ಇತರ ಸದಸ್ಯರು ತಮ್ಮ ವರದಿ ಸಲ್ಲಿಸುವವರೆಗೆ ಅಥವಾ 2025ರ ಅಕ್ಟೋಬರ್ 31ರವರೆಗೆ ಅಧಿಕಾರ ಹೊಂದಿರುತ್ತಾರೆ’ ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ.

16ನೇ ಹಣಕಾಸು ಆಯೋಗದ ಸದಸ್ಯರಿವರು

ಛೇರ್ಮನ್: ಅರವಿಂದ್ ಪನಗರಿಯಾ

ಸದಸ್ಯರು: ಸೌಮ್ಯಾ ಕಾಂತಿ ಘೋಷ್, ಅಜಯ್ ನಾರಾಯಣ್ ಝಾ, ಆನೀ ಜಾರ್ಜ್ ಮ್ಯಾಥ್ಯೂ ಮತ್ತು ನಿರಂಜನ್ ರಾಜಾಧ್ಯಕ್ಷ.

ಹಣಕಾಸು ಆಯೋಗದ ಜವಾಬ್ದಾರಿಗಳೇನು?

ಹಣಕಾಸು ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹಣಕಾಸು ಸಂಬಂಧದ ಬಗ್ಗೆ ಸಲಹೆಗಳನ್ನು ನೀಡಲೆಂದು ಸ್ಥಾಪನೆಯಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ಸೂತ್ರವನ್ನು ಇದು ಶಿಫಾರಸು ಮಾಡುತ್ತದೆ. ಐದು ವರ್ಷದ ಅವಧಿಗೆ ಇದರ ಶಿಫಾರಸುಗಳು ಚಾಲನೆಯಲ್ಲಿರುತ್ತವೆ.

ಇದನ್ನೂ ಓದಿ: IBM: ಆಫೀಸ್ ಸಮೀಪ ಮನೆ ಮಾಡಿ, ಇಲ್ಲ ಕೆಲಸ ಬಿಟ್ಟುಹೋಗಿ: ಮ್ಯಾನೇಜರ್​ಗಳಿಗೆ ನಿರ್ದೇಶನ ನೀಡಿದ ಐಬಿಎಂ

14ನೇ ಹಣಕಾಸು ಆಯೋಗವು ವೈ ವಿ ರೆಡ್ಡಿ ಅವರ ನೇತೃತ್ವದಲ್ಲಿತ್ತು. ಈಗ ಚಾಲನೆಯಲ್ಲಿರುವ 15ನೇ ಹಣಕಾಸು ಆಯೋಗವನ್ನು ಎನ್ ಕೆ ಸಿಂಗ್ ಅವರು ಮುನ್ನಡೆಸಿದ್ದಾರೆ. ಇವೆರಡೂ ಆಯೋಗಗಳು ಒಟ್ಟಾರೆ ತೆರಿಗೆ ಲಭ್ಯತೆಯಲ್ಲಿ ರಾಜ್ಯ ಸರ್ಕಾರಗಳಿಗೆ ಶೇ. 41ರಷ್ಟು ಪಾಲು ಕೊಡಬೇಕೆಂದು ಶಿಫಾರಸು ನೀಡಿವೆ.

ಈಗ ಅರವಿಂದ್ ಪನಗರಿಯಾ ನೇತೃತ್ವದ 16ನೇ ಹಣಕಾಸು ಆಯೋಗ ತನ್ನ ತೆರಿಗೆ ಹಂಚಿಕೆ ಸೂತ್ರ ಶಿಫಾರಸು ಮಾಡಲು 2025ರ ಅಕ್ಟೋಬರ್ 31ರವರೆಗೆ ಕಾಲಾವಕಾಶ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್