Moonlighting: ಒಂದೇ ಬಾರಿಗೆ ಎರಡು ಕಂಪನಿಗಳಲ್ಲಿ ಕೆಲಸ ಮಾಡುವಂತಿಲ್ಲ, ತನ್ನ ಉದ್ಯೋಗಿಗಳಿಗೆ ಇನ್ಫೋಸಿಸ್ ಎಚ್ಚರಿಕೆ

| Updated By: ನಯನಾ ರಾಜೀವ್

Updated on: Sep 13, 2022 | 12:34 PM

ಒಂದೇ ಬಾರಿಗೆ ಎರಡು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಇನ್​ಫೋಸಿಸ್ ಸಂಸ್ಥೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.

Moonlighting: ಒಂದೇ ಬಾರಿಗೆ ಎರಡು ಕಂಪನಿಗಳಲ್ಲಿ ಕೆಲಸ ಮಾಡುವಂತಿಲ್ಲ, ತನ್ನ ಉದ್ಯೋಗಿಗಳಿಗೆ ಇನ್ಫೋಸಿಸ್ ಎಚ್ಚರಿಕೆ
Infosys
Follow us on

ಒಂದೇ ಬಾರಿಗೆ ಎರಡು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಇನ್​ಫೋಸಿಸ್ ಸಂಸ್ಥೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.

ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ತಮ್ಮ ಕಂಪನಿಯ ಮಾಲೀಕರ ಗಮನಕ್ಕೆ ತರದೇ, ಮತ್ತೊಂದು ಕಂಪನಿಯಲ್ಲಿ ಉದ್ಯೋಗ ಮಾಡುವುದನ್ನು ಮೂನ್​ಲೈಟಿಂಗ್ ಎನ್ನುತ್ತಾರೆ.

ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡು ವರ್ಷಗಟ್ಟಲೆ ನಿರುದ್ಯೋಗದ ಸಮಸ್ಯೆ ಎದುರಿಸಿದ್ದರು. ಇನ್ನೂ ಕೆಲವು ಕಂಪನಿಗಳಲ್ಲಿ ಸಂಬಳದ ಕಡಿತ ಮಾಡಲಾಗಿತ್ತು. ಆಗ ಕೆಲವು ಉದ್ಯೋಗಿಗಳು ಪಾರ್ಟ್​ ಟೈಂ ಉದ್ಯೋಗಕ್ಕಿಳಿದಿದ್ದರು.

ಈ ಕುರಿತು ಇನ್​ಫೋಸಿಸ್ ಕಂಪನಿಯು ಕಠಿಣ ನಿರ್ಧಾರ ತೆಗೆದುಕೊಂಡಿದೆ, ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ಒಂದೊಮ್ಮೆ ಇಂತಹ ವಿಚಾರ ಬೆಳಕಿಗೆ ಬಂದರೆ ಕೂಡಲೇ ಆ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಅಮೆರಿಕದಲ್ಲಿ ಹೆಚ್ಚುವರಿ ಆದಾಯಕ್ಕಾಗಿ ತಮ್ಮ ನಿಯಮಿತವಾದ ಉದ್ಯೋಗದ ಜತೆಗೆ ಹೆಚ್ಚುವರಿಯಾಗಿ ಎರಡನೇ ಉದ್ಯೋಗವನ್ನು ಆಶ್ರಯಿಸಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಉದ್ಯೋಗದ ಒಪ್ಪಂದದಲ್ಲಿ ನೌಕರನು ಒಂದೇ ಉದ್ಯೋಗ ಮಾಡಬೇಕು ಎನ್ನುವ ನಿಯಮಿದ್ದರೆ , ಆಗ ನೌಕರ ಇತರೆ ಕಂಪನಿಗಳಲ್ಲಿ ಕೆಲಸ ಮಾಡುವಂತಿಲ್ಲ. ಒಂದೊಮ್ಮೆ ಆ ನಿಯಮ ಉಲ್ಲಂಘಿಸಿ ಕೆಲಸ ಮಾಡಿದರೆ ಅದನ್ನು ವಂಚನೆ ಎಂದು ಕರೆಯಲಾಗುತ್ತದೆ.

ಮೂನ್​ಲೈಟಿಂಗ್​ನಿಂದ ಉದ್ಯೋಗಿಯು ಒಂದು ಉದ್ಯೋಗದ ಕಡೆಗೆ ಹೆಚ್ಚಿನ ಗಮನಕೊಡಲು ಸಾಧ್ಯವಾಗುವುದಿಲ್ಲ ಇದು ಮೂಲ ಕಂಪನಿಯ ಉತ್ಪಾದಕತೆ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಪ್ರಸ್ತುತ ವಾದವಾಗಿದೆ.

Published On - 12:26 pm, Tue, 13 September 22