Sensex: 2022ನೇ ಇಸವಿ ಕೊನೆ ಹೊತ್ತಿಗೆ ಸೆನ್ಸೆಕ್ಸ್ 75,000 ಪಾಯಿಂಟ್ಸ್ ತಲುಪಬಹುದು ಎನ್ನುತ್ತಿರುವ ವಿಶ್ಲೇಷಕರು

2022ನೇ ಇಸವಿಯ ಕೊನೆ ಹೊತ್ತಿಗೆ ಭಾರತದ ಷೇರು ಪೇಟೆ ಸೂಚ್ಯಂಕವಾದ ಸೆನ್ಸೆಕ್ಸ್ 75000 ಪಾಯಿಂಟ್ಸ್​ ಮುಟ್ಟಬಹುದು ಎಂದು ಮೋರ್ಗನ್ ಸ್ಟ್ಯಾನ್ಲಿಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

Sensex: 2022ನೇ ಇಸವಿ ಕೊನೆ ಹೊತ್ತಿಗೆ ಸೆನ್ಸೆಕ್ಸ್ 75,000 ಪಾಯಿಂಟ್ಸ್ ತಲುಪಬಹುದು ಎನ್ನುತ್ತಿರುವ ವಿಶ್ಲೇಷಕರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 10, 2022 | 5:36 PM

ಮೋರ್ಗನ್ ಸ್ಟ್ಯಾನ್ಲಿಯ ಈಕ್ವಿಟಿ ಸ್ಟ್ರಾಟೆಜಿಸ್ಟ್ ರಿಧಂ ದೇಸಾಯಿ ಅವರ ಪ್ರಕಾರ, 2022ರ ಕೊನೆಯ ಹೊತ್ತಿಗೆ ಸೆನ್ಸೆಕ್ಸ್​ (Sensex) 75,000 ಪಾಯಿಂಟ್ಸ್​ ಮುಟ್ಟಿರಲಿದೆ. ಆದರೆ ಕೆಲವು ಸಂಗತಿಗಳು ಅಂದುಕೊಂಂಡಂತೆ ಆಗಬೇಕು. ಅವರ ಅಂದಾಜಿನ ಬಗ್ಗೆಯೇ ಹೇಳಬೇಕು ಅಂದರೆ ಶೇ 35ಕ್ಕಿಂತ ಹೆಚ್ಚಿನ ಗಳಿಕೆ ಕಾಣಬೇಕು. ಈ ರೀತಿ ಬಿಎಸ್​ಇ- ಸೆನ್ಸೆಕ್ಸ್ 75 ಸಾವಿರ ಪಾಯಿಂಟ್ಸ್​ ಆಗಬೇಕು ಅಂದರೆ ಏನು ಸಂಭವಿಸಬೇಕು ಎಂಬುದನ್ನು ಪಟ್ಟಿ ಮಾಡಿದ್ದಾರೆ. ಅದು ಹೀಗಿದೆ: – ಭಾರತವನ್ನು ಜಾಗತಿಕ ಬಾಂಡ್​ ಸೂಚ್ಯಂಕದಲ್ಲಿ ಸೇರ್ಪಡೆ ಮಾಡುವುದರಿಂದ ಹನ್ನೆರಡು ತಿಂಗಳಲ್ಲಿ 2000 ಕೋಟಿ ಯುಎಸ್​ಡಿಯಷ್ಟು ಒಳಹರಿವು ಬರುತ್ತದೆ. – ಕೊವಿಡ್​-19 ಮತ್ತೆ ಕಾಣಿಸಿಕೊಳ್ಳಬಾರದು. – ಈಚಿನ ಏರಿಕೆಯಿಂದ ತೈಲ ಬೆಲೆಯು ಇಳಿಕೆ ಕಾಣಬೇಕು. – ದೀರ್ಘಾವಧಿಗೆ ಆರ್​ಬಿಐ ಹಣಕಾಸು ನೀತಿಯಲ್ಲಿ ಕಡಿಮೆ ಬಡ್ಡಿ ದರ ಮುಂದುವರಿಸಬೇಕು. – ಹಣಕಾಸು ವರ್ಷ 2022ರಿಂದ 24ಕ್ಕೆ ಗಳಿಕೆ ಬೆಳವಣಿಗೆ ಸಂಚಿತವಾಗಿ ವಾರ್ಷಿಕ ಶೇ 25ರಷ್ಟಾಗಬೇಕು.

ಈ ಮೇಲ್ಕಂಡದರ ಪೈಕಿ ಮೂಲ ಪ್ರಕರಣದಲ್ಲಿ ಅವರು ಶೇ 50ರಷ್ಟು ಸಂಭವನೀಯತೆಯನ್ನು ನೋಡುತ್ತಾರೆ. ಸೆನ್ಸೆಕ್ಸ್ ವರ್ಷಾಂತ್ಯದ ವೇಳೆಗೆ 62,000 ಪಾಯಿಂಟ್ಸ್ ಮಟ್ಟವನ್ನು ಮುಟ್ಟುತ್ತದೆ ಎಂದು ಅವರು ನಂಬುತ್ತಾರೆ. ಅಂದರೆ 2022ರ ಡಿಸೆಂಬರ್ ವೇಳೆಗೆ ಶೇ 16ರ ಸಂಭಾವ್ಯ ಏರಿಕೆ ಆಗಬಹುದು. ಆದರೂ ಈ ಗುರಿಯು ಹಿಂದಿನ ಗುರಿಗಿಂತ ಶೇ 11ರಷ್ಟು ಕಡಿಮೆಯಾಗಿದೆ. “ಈ ಮಟ್ಟವು ಬಿಎಸ್‌ಇ ಸೆನ್ಸೆಕ್ಸ್ 25-ವರ್ಷದ ಸರಾಸರಿ 20x ಇದ್ದು, ಹಿಂದಿನ P/E ಮಲ್ಟಿಪಲ್‌ನ 25xನಲ್ಲಿ ವಹಿವಾಟು ಮಾಡುತ್ತದೆ. ಐತಿಹಾಸಿಕ ಸರಾಸರಿಗಿಂತ ಪ್ರೀಮಿಯಂನಲ್ಲಿದ್ದು, ಭಾರತದಲ್ಲಿ ಮಧ್ಯಮ ಅವಧಿಯ ಬೆಳವಣಿಗೆ ಚಕ್ರದಲ್ಲಿ ಹೆಚ್ಚಿನ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ,” ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಮಾರುಕಟ್ಟೆ ಕರಡಿ ಹಿಡಿತಕ್ಕೆ ಸಿಲುಕಿದರೆ, ಅಂದರೆ ಈ ಸಾಧ್ಯತೆಯು ಐದರಲ್ಲಿ ಒಂದು ಸಂಭವನೀಯತೆ ಇರಲಿದ್ದು, ಸೆನ್ಸೆಕ್ಸ್ 45,000 ಪಾಯಿಂಟ್ಸ್​ಗೆ ಇಳಿಯಬಹುದು. ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ವೆಚ್ಚಗಳ ಕಾರಣದಿಂದಾಗಿ ಅಲ್ಪಾವಧಿಯಲ್ಲಿ ಮಾರ್ಜಿನ್ ಒತ್ತಡದ ಹೊರತಾಗಿಯೂ ಮೋರ್ಗನ್ ಸ್ಟಾನ್ಲಿ ವಿಶ್ಲೇಷಕರು ಹೊಸ ಲಾಭದ ಚಕ್ರವು ದೊಡ್ಡ ಪ್ರಮಾಣದಲ್ಲಿದೆ ಎಂದು ನಂಬುತ್ತಾರೆ. ಮತ್ತು ಮುಂದಿನ ಎರಡು ವರ್ಷಗಳಲ್ಲಿ ವಾರ್ಷಿಕವಾಗಿ ಶೇ 22ರಷ್ಟು (ಈ ಹಿಂದೆ ಶೇ 24) ಗಳಿಕೆಯನ್ನು ಅವರು ನಿರೀಕ್ಷಿಸುತ್ತಾರೆ.

(ಈ ಲೇಖನದಲ್ಲಿನ ಅಭಿಪ್ರಾಯ, ಶಿಫಾರಸು ಆಯಾ ಬ್ರೋಕರೇಜ್​ ಸಂಸ್ಥೆಯದೇ ಹೊರತು ಟಿವಿ9 ನೆಟ್​ವರ್ಕ್​ ಜವಾಬ್ದಾರಿ ಅಲ್ಲ)

ಇದನ್ನೂ ಓದಿ: Stock Market Investors Wealth: ಎರಡು ದಿನದಲ್ಲಿ ಹೂಡಿಕೆದಾರರ ಸಂಪತ್ತು 7.21 ಲಕ್ಷ ಕೋಟಿ ರೂ. ಹೆಚ್ಚಳ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್