ನವದೆಹಲಿ, ಆಗಸ್ಟ್ 9: ಜುಲೈ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೆ ಹರಿದು ಬಂದ ಹೂಡಿಕೆಯಲ್ಲಿ ಶೇ. 9ರಷ್ಟು ಕಡಿಮೆ ಆಗಿದೆ. ಆದರೆ, ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಥವಾ ಎಸ್ಐಪಿ ಮೂಲಕ ಆದ ಹೂಡಿಕೆಯಲ್ಲಿ ಶೇ 10ರಷ್ಟು ಹೆಚ್ಚಳವಾಗಿದೆ. ಎಎಂಎಫ್ಐನ ಇತ್ತೀಚಿನ ದತ್ತಾಂಶದ ಪ್ರಕಾರ ಮ್ಯೂಚುವಲ್ ಫಂಡ್ಗಳಲ್ಲಿ ಒಳಹರಿವು ಕಂಡ ಮಾಸಿಕ ಎಸ್ಐಪಿಗಳ ಪ್ರಮಾಣ ಜುಲೈನಲ್ಲಿ 23,332 ಕೋಟಿ ರೂ ಆಗಿದೆ. ಈಕ್ವಿಟಿ ಮಾರುಕಟ್ಟೆ ಇತಿಹಾಸದಲ್ಲಿ ಎಸ್ಐಪಿ ಒಂದು ತಿಂಗಳಲ್ಲಿ 23,000 ಕೋಟಿ ರೂ ಗಡಿ ಮುಟ್ಟಿದ್ದು ಇದೇ ಮೊದಲು. 2024ರ ಜೂನ್ ತಿಂಗಳಲ್ಲಿ ಎಸ್ಐಪಿ ಮೊತ್ತ 21,262 ಕೋಟಿ ರೂ ಆಗಿತ್ತು.
ಮ್ಯೂಚುವಲ್ ಫಂಡ್ಗಳ ಎಯುಎಂ ಅಥವಾ ನಿರ್ವಹಣೆಯ ಆಸ್ತಿ ಜೂನ್ನಲ್ಲಿ 60.89 ಲಕ್ಷ ಕೋಟಿ ರೂ ಇದ್ದದ್ದು ಜುಲೈನಲ್ಲಿ 64.69 ಲಕ್ಷ ಕೋಟಿ ರೂಗೆ ಏರಿದೆ. ಅಂದರೆ, ಎಯುಎಂನಲ್ಲಿ ಶೇ. 6ರಷ್ಟು ಹೆಚ್ಚಳ ಆಗಿದೆ. ಈಕ್ವಿಟಿ ಮ್ಯೂಚುವಲ್ ಫಂಡ್ಗಳಲ್ಲಿ ಜುಲೈನಲ್ಲಿ ಕಂಡ ಒಳಹರಿವಿನಲ್ಲಿ ಶೇ. 9ರಷ್ಟು ಇಳಿಕೆ ಆಗಿದೆ. ಆದರೆ, ಡೆಟ್ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಹೆಚ್ಚಾಗಿದೆ.
ಲಿಕ್ವಿಡ್ ಫಂಡ್ಗಳಿಗೆ ಜುಲೈನಲ್ಲಿ ಅತಿಹೆಚ್ಚು ಹೂಡಿಕೆ ಹರಿವು ಬಂದಿದೆ. ವರದಿ ಪ್ರಕಾರ ಕಳೆದ ತಿಂಗಳಲ್ಲಿ 70,060 ಕೋಟಿ ರೂನಷ್ಟು ಹೂಡಿಕೆಗಳು ಲಿಕ್ವಿಡ್ ಫಂಡ್ಗಳಿಗೆ ಬಂದಿದೆ. ಹಿಂದಿನ ತಿಂಗಳಾದ ಜೂನ್ನಲ್ಲಿ ಲಿಕ್ವಿಡ್ ಫಂಡ್ಗಳಿಂದ ಬರೋಬ್ಬರಿ 80,354 ಕೋಟಿ ರೂ ಮೊತ್ತದ ಹೂಡಿಕೆ ಹೊರ ಹೋಗಿತ್ತು. ಹೀಗಾಗಿ, ಜುಲೈನ ಈ ಡಾಟಾ ಗಮನಾರ್ಹ ಎನಿಸಿದೆ.
ಇದನ್ನೂ ಓದಿ: ಹಲ್ದೀರಾಮ್ಸ್, ಭಾರತದ ಅಗ್ರಗಣ್ಯ ಫ್ಯಾಮಿಲಿ ಬುಸಿನೆಸ್
ಇಲ್ಲಿ ಲಿಕ್ವಿಡ್ ಫಂಡ್ ಎಂದರೆ ಬಹಳ ಕಿರು ಅವಧಿಯ ಫಂಡ್ಗಳಾಗಿರುತ್ತವೆ. ಡೆಟ್, ಬಾಂಡ್ ಮಾರುಕಟ್ಟೆಗಳಲ್ಲಿ ಈ ಫಂಡ್ಗಳು ಹೂಡಿಕೆ ಮಾಡುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ