Online Gambling: ಆನ್​ಲೈನ್ ಜೂಜು: ಉದ್ಯಮಿಗೆ ಬಂದಿದ್ದು 5 ಕೋಟಿ ರೂ., ಕಳೆದುಕೊಂಡಿದ್ದು ಬರೋಬ್ಬರಿ 58 ಕೋಟಿ ರೂ.

ನಾಗ್ಪುರದ ಉದ್ಯಮಿಯೊಬ್ಬರು ಆನ್​ಲೈನ್ ಜೂಜಿ(Online Gambling)ನಲ್ಲಿ 58 ಕೋಟಿ ರೂ ಕಳೆದುಕೊಂಡಿರುವ ಘಟನೆ ನಡೆದಿದೆ.

Online Gambling: ಆನ್​ಲೈನ್ ಜೂಜು: ಉದ್ಯಮಿಗೆ ಬಂದಿದ್ದು 5 ಕೋಟಿ ರೂ., ಕಳೆದುಕೊಂಡಿದ್ದು ಬರೋಬ್ಬರಿ 58 ಕೋಟಿ ರೂ.
ಹಣ

Updated on: Jul 23, 2023 | 9:32 AM

ನಾಗ್ಪುರದ ಉದ್ಯಮಿಯೊಬ್ಬರು ಆನ್​ಲೈನ್ ಜೂಜಿ(Online Gambling)ನಲ್ಲಿ 58 ಕೋಟಿ ರೂ ಕಳೆದುಕೊಂಡಿರುವ ಘಟನೆ ನಡೆದಿದೆ. ಮೊದಲು 5 ಕೋಟಿ ರೂ. ಬಂದಿತ್ತು, ಹೆಚ್ಚು ಹಣ ಗಳಿಸಬಹುದೆನ್ನುವ ಆಸೆಯಲ್ಲಿ ಜೂಜಾಡಿ 58 ಲಕ್ಷ ರೂ. ಕಳೆದುಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು 14 ಕೋಟಿ ರೂ. ನಗದು, 4 ಕೆಜಿ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಉದ್ಯಮಿಯನ್ನು ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್ ಎಂದು ಗುರುತಿಸಲಾಗಿದ್ದು, ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾ ಸಿಟಿಯಲ್ಲಿರುವ ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸುವ ಮುನ್ನವೇ ಪರಾರಿಯಾಗಿದ್ದಾರೆ. ದುಬೈಗೆ ತೆರಳಿರಬಹುದು ಎಂದು ಅಂದಾಜಿಸಲಾಗಿದೆ. ಈ ಉದ್ಯಮಿ ಹಲವು ಉದ್ಯಮಿಗಳಿಗೆ ಆನ್​ಲೈನ್ ಜೂಜಾಡುವಂತೆ ಪ್ರೇರೇಪಿಸುತ್ತಿದ್ದ ಬಳಿಕ ಕೋಟಿಗಟ್ಟಲೆ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ.

ಮತ್ತಷ್ಟು ಓದಿ: ಚಿಕ್ಕಬಳ್ಳಾಪುರ: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ; ನಗರಸಭೆ ಸದಸ್ಯ, ಹೆಡ್ ಕಾನ್ಸ್​​ಟೇಬಲ್ ಬಂಧನ

ಹೆಚ್ಚು ಲಾಭ ಗಳಿಸಲು ಆನ್​ಲೈನ್​ನಲ್ಲಿ ಜೂಜಾಡುವಂತೆ ಉದ್ಯಮಿಯೊಬ್ಬರಿಗೆ ಜೈನ್ ಮನವರಿಕೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಉದ್ಯಮಿ ಖಾತೆಗೆ 8 ಲಕ್ಷ ಹಣ ಜಮಾ ಮಾಡಿ ಜೂಜು ಆರಂಭಿಸಿದ್ದರು. ಆರಂಭದಲ್ಲಿ 5 ಕೋಟಿ ರೂ ಗೆದ್ದಿದ್ದರು. ಬಳಿಕ 58 ಕೋಟಿ ರೂ ಕಳೆದುಕೊಂಡು ಅಪಾರ ನಷ್ಟ ಅನುಭವಿಸಿದ್ದಾರೆ.

ಉದ್ಯಮಿ ನಷ್ಟದ ಬಗ್ಗೆ ಅನುಮಾನಗೊಂಡು ತನ್ನ ಹಣವನ್ನು ಹಿಂತಿರುಗಿಸಲು ಒತ್ತಾಯಿಸಿದನು, ಆದರೆ ಆರೋಪಿಯು ಹಣವನ್ನು ಹಿಂದಿರುಗಿಸಲು ನಿರಾಕರಿಸಿದನು ಎಂದು ಅಧಿಕಾರಿ ಹೇಳಿದರು. ಉದ್ಯಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ವಂಚನೆ ಪ್ರಕರಣ ದಾಖಲಾಗಿದೆ.  ಗೊಂಡಿಯಾದಲ್ಲಿರುವ ಜೈನ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ಕಾರ್ಯಾಚರಣೆಯಲ್ಲಿ 14 ಕೋಟಿ ರೂಪಾಯಿ ನಗದು ಮತ್ತು ನಾಲ್ಕು ಕೆಜಿ ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ.

ಉದ್ಯಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯಡಿಯಲ್ಲಿ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸರು ಗೊಂಡಿಯಾದಲ್ಲಿರುವ ಜೈನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ