AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರೇಂದ್ರ ಮೋದಿ ಭಾರತ ಪುಟಿದೇಳುವಂತೆ ಮಾಡಿದ್ದಾರೆ: ಅಮೆರಿಕನ್ ಉದ್ಯಮಿ ಶ್ಲಾಘನೆ

DeviceThread co-founder Sandeep Bhat on Narendra Modi: ಕಳೆದ 10 ವರ್ಷದಲ್ಲಿ ಭಾರತದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ದೊಡ್ಡ ಮಟ್ಟದಲ್ಲಿ ಭಾರತ ಪ್ರಗತಿ ಹೊಂದುತ್ತಿರುವುದನ್ನು ತಳ್ಳಿಹಾಕಲು ಸಾಧ್ಯ ಇಲ್ಲ ಎಂದು ಅಮೆರಿಕದ ಡಿವೈಸ್ ಥ್ರೆಡ್ ಕಂಪನಿ ಸಂಸ್ಥಾಪಕ ಸಂದೀಪ್ ಭಟ್ ಹೇಳಿದ್ದಾರೆ. ಜಾಗತಿಕ ರಂಗದಲ್ಲಿ ಭಾರತ ಮೈಕೊಡವಿ ಎದ್ದು ನಿಂತಿದೆ ಎಂದರೆ ಅದಕ್ಕೆ ನರೇಂದ್ರ ಮೋದಿ ಕಾರಣ ಎಂದು ಹೇಳುವ ಸಂದೀಪ್ ಭಟ್, ತಾನು ವೈಯಕ್ತಿಕವಾಗಿ ಮೋದಿ ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ.

ನರೇಂದ್ರ ಮೋದಿ ಭಾರತ ಪುಟಿದೇಳುವಂತೆ ಮಾಡಿದ್ದಾರೆ: ಅಮೆರಿಕನ್ ಉದ್ಯಮಿ ಶ್ಲಾಘನೆ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 08, 2024 | 1:09 PM

Share

ನವದೆಹಲಿ, ಮೇ 8: ಭಾರತ ಮತ್ತೊಮ್ಮೆ ಮೈಕೊಡವಿ ಎದ್ದು ಜಾಗತಿಕ ರಂಗದಲ್ಲಿ ಛಾಪು ಮೂಡಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ಅಮೆರಿಕನ್ ಉದ್ಯಮಿ ಸಂದೀಪ್ ಭಟ್ (Sandeep Bhat) ಹೇಳಿದ್ದಾರೆ. ‘ಭಾರತದಲ್ಲಿರುವ ಭಾವನೆ ಅಥವಾ ಭಾರತದ ಬಗ್ಗೆ ಜಾಗತಿಕವಾಗಿ ಇರುವ ಭಾವನೆಯನ್ನು ಗಮನಿಸಿದರೆ ಭಾರತ ಜಾಗತಿಕ ರಂಗದಲ್ಲಿ ಮತ್ತೊಮ್ಮೆ ಏಳುವಂತೆ ಮೋದಿ ಮಾಡಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ,’ ಎಂದು ಭಟ್ ಅಭಿಪ್ರಾಯಪಟ್ಟಿದ್ದಾರೆ. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರವ ಡಿವೈಸ್ ಥ್ರೆಡ್ ಕಂಪನಿಯ ಸಹ-ಸಂಸ್ಥಾಪಕರಾದ ಸಂದೀಪ್ ಭಟ್ ತಾನು ವೈಯಕ್ತಿಕವಾಗಿ ಮೋದಿ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ

‘ಇದು ಸ್ಪಷ್ಟವಾಗಿ ನನ್ನ ವೈಯಕ್ತಿಕ ಭಾವನೆ. ವೈಯಕ್ತಿಕವಾಗಿ ನಾನು ನರೇಂದ್ರ ಮೋದಿ ಅವರ ಬಹುದೊಡ್ಡ ಅಭಿಮಾನಿಯಾಗಿ ಎನ್ನುವುದು ಹೌದು. ಮುಂಬರುವ ವರ್ಷಗಳಲ್ಲಿ ಅವರು ತಮ್ಮ ನಾಯಕತ್ವದಲ್ಲಿ ಭಾರತವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿದ್ದಾರೆ,’ ಎಂದು ಸಂದೀಪ್ ಭಟ್ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಈ ಷೇರುಗಳು ಶೇ. 90ರಷ್ಟು ಬೀಳುತ್ತವೆ, ಹುಷಾರ್: ಹೂಡಿಕೆದಾರ ಶಂಕರ್ ಶರ್ಮಾ ಎಚ್ಚರಿಸಿದ ಸ್ಟಾಕ್ಸ್ ಯಾವುವು?

ಸಂದೀಪ್ ಭಟ್ ಅವರು ಸಿಲಿಕಾನ್ ವ್ಯಾಲಿಯ ಭಾರತೀಯ ಅಮೆರಿಕನ್ ಉದ್ಯಮಿಗಳ ಸಂಘಟನೆಯಾದ TiE (ದಿ ಇಂಡ್​ಯುಎಸ್ ಆಂಟ್ರಪ್ರನ್ಯೂರ್ಸ್) ಸದಸ್ಯರಾಗಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಭಾರತದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಬಹಳ ದೊಡ್ಡ ಮಟ್ಟದಲ್ಲಿ ಭಾರತ ಪ್ರಗತಿ ಸಾಧಿಸುತ್ತಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದೂ ಡಿವೈಸ್ ಥ್ರೆಡ್ ಸಂಸ್ಥೆಯ ಸಂದೀಪ್ ಭಟ್ ತಿಳಿಸಿದ್ದಾರೆ.

‘ಸರ್ಕಾರ ಪ್ರಸ್ತುತಪಡಿಸಿರುವ ಕೆಲ ದೃಷ್ಟಿಕೋನ ಸರಿಯಾದ ದಿಕ್ಕಿನಲ್ಲಿ ಇದೆ. ಆದರೆ, ಅದರ ಸಮರ್ಪಕ ಅನುಷ್ಠಾನ ಅಗತ್ಯ ಇದೆ. ಕೆಲವೊಮ್ಮೆ ದೃಷ್ಟಿಕೋನಕ್ಕೂ ವಾಸ್ತವಕ್ಕೂ ಅಂತರ ಕಂಡು ಬರುತ್ತದೆ. ತಡೆಗಳನ್ನು ತೆಗೆಯುವ ಕೆಲಸ ಮುಂದುವರಿಸಬೇಕು.

‘ಉದಾಹರಣೆಗೆ, ಇಲ್ಲಿ (ಅಮೆರಿಕ) ಹಲವು ಕೆಲಸಗಳನ್ನು ಸಲೀಸಾಗಿ ಮಾಡಬಹುದು. ನಾನು ಹೊಸ ಬಿಸಿನೆಸ ಮಾಡಬೇಕೆಂದರೆ, ಹೊಸ ಕಾರ್ಪೊರೇಶನ್ ಆರಂಭಿಸಬೇಕೆಂದರೆ ಇಲ್ಲಿ ಬಹಳ ಬೇಗ ಮಾಡಬಹುದು. ಆ ಕಾರ್ಪೊರೇಶನ್ ಅನ್ನು ಮುಚ್ಚಬೇಕೆಂದರೂ ಬೇಗ ಮಾಡಲು ಸಾಧ್ಯ. ಆದರೆ, ಇಷ್ಟು ವೇಗದಲ್ಲಿ ಭಾರತದಲ್ಲಿ ಈ ಕೆಲಸ ಸಾಧ್ಯವಾಗುವುದಿಲ್ಲ’ ಎಂದು ಕಳೆದ ವಾರ ನಡೆದ ವಾರ್ಷಿಕ TiECon ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಇದನ್ನೂ ಓದಿ: 22 ಕ್ಯಾರೆಟ್ ಅಥವಾ 24 ಕ್ಯಾರೆಟ್ ಚಿನ್ನ; ಹೆಚ್ಚು ಆದಾಯ ತರುವುದು ಯಾವುದು? ಇಲ್ಲಿದೆ ಉತ್ತರ

ಪ್ರತಿಯೊಬ್ಬ ಉದ್ಯಮಿಯೂ ಭಾರತೀಯ ಮಾರುಕಟ್ಟೆಗೆ ಬರಲು ಬಯಸುತ್ತಾರೆ. ಆದರೆ, ದೇಶದಲ್ಲಿ ಉದ್ಯಮ ವ್ಯವಹಾರ ನಡೆಸಲು ಸುಲಭವಾಗಿರುವ ವಾತಾವರಣ ನಿರ್ಮಿಸಬೇಕು ಎಂದು ಸಂದೀಪ್ ಭಟ್ ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು