ಈ ಷೇರುಗಳು ಶೇ. 90ರಷ್ಟು ಬೀಳುತ್ತವೆ, ಹುಷಾರ್: ಹೂಡಿಕೆದಾರ ಶಂಕರ್ ಶರ್ಮಾ ಎಚ್ಚರಿಸಿದ ಸ್ಟಾಕ್ಸ್ ಯಾವುವು?

Ace investor Shankar Sharma's take on Stock Market: ಭಾರತದ ಕಾರ್ಪೊರೇಟ್ ವಲಯದಲ್ಲಿ ಮರ್ಚಂಟ್ ಬ್ಯಾಂಕ್​ಗಳು ವಿಲನ್​ಗಳಾಗಿವೆಯಾ? ಹೂಡಿಕೆದಾರ ಶಂಕರ್ ಶರ್ಮಾ ಪ್ರಕಾರ ಮರ್ಚಂಟ್ ಬ್ಯಾಂಕರ್​ಗಳು ಕಂಪನಿಗಳನ್ನು ಅನಗತ್ಯವಾಗಿ ಬಂಡವಾಳ ಹೆಚ್ಚಿಸಲು ಒತ್ತಡ ಹಾಕುತ್ತಿವೆ. ಈ ಬ್ಯಾಂಕ್​ಗಳ ತಾಳಕ್ಕೆ ಈ ಮೂರ್ಖ ಪ್ರೊಮೋಟರ್ಸ್ ಕುಣಿಯುತ್ತಿದ್ದಾರೆ. ಇದರಿಂದ ಕಂಪನಿಯ ಬ್ಯಾಲನ್ಸ್ ಶೀಟ್​ಗೆ ಹೊಡೆತ ಬೀಳುತ್ತದೆ. ಈ ರೀತಿ ಅನಗತ್ಯ ಬಂಡವಾಳ ಪೂರಣ ಪಡೆದ ಕಂಪನಿಗಳ ಷೇರು ಶೇ. 90ರಷ್ಟು ಕುಸಿಯುತ್ತವೆ ಎಂದು ಶಂಕರ್ ಶರ್ಮಾ ಭವಿಷ್ಯ ನುಡಿದಿದ್ದಾರೆ.

ಈ ಷೇರುಗಳು ಶೇ. 90ರಷ್ಟು ಬೀಳುತ್ತವೆ, ಹುಷಾರ್: ಹೂಡಿಕೆದಾರ ಶಂಕರ್ ಶರ್ಮಾ ಎಚ್ಚರಿಸಿದ ಸ್ಟಾಕ್ಸ್ ಯಾವುವು?
ಷೇರು ಮಾರುಕಟ್ಟೆ
Follow us
|

Updated on:May 07, 2024 | 4:29 PM

ನವದೆಹಲಿ, ಮೇ 7: ಭಾರತ ಷೇರು ಮಾರುಕಟ್ಟೆ (Share Market) ಕಳೆದ ಎರಡು ದಿನಗಳಿಂದ ಕುಸಿತ ಕಂಡಿದೆ. ಇದಕ್ಕೆ ಕೆಲವಾರು ಕಾರಣಗಳಿವೆ. ಅದರಲ್ಲಿ ಪ್ರಮುಖವಾದದು ಎಫ್​ಐಐಗಳು, ಅಥವಾ ವಿದೇಶೀ ಸಾಂಸ್ಥಿಕ ಹೂಡಿಕೆದಾರರು (FII) ಭಾರತೀಯ ಷೇರು ಮಾರುಕಟ್ಟೆಯಿಂದ ನಿರ್ಗಮಿಸುತ್ತಿರುವುದು. ಮೂರು ಟ್ರೇಡಿಂಗ್ ಸೆಷನ್​ಗಳಲ್ಲಿ ಎಫ್​​ಐಐಗಳು ಹೆಚ್ಚೂಕಡಿಮೆ ಒಂದು ಸಾವಿರ ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿವೆ. ಇದು ಸ್ಥಳೀಯ ರೀಟೇಲ್ ಹೂಡಿಕೆದಾರರನ್ನು ಗೊಂದಲವಾಗಿಸಿರಬಹುದು. ಹಾಗೆಯೇ, ಚುನಾವಣಾ ಮುಂಚಿನ ಗೊಂದಲಮಯ ವಾತಾವರಣ ಕೂಡ ಷೇರು ಕುಸಿಯುವಂತೆ ಮಾಡಬಹುದು. ಇದಲ್ಲೆದರ ಮಧ್ಯೆ ಕೆಲ ತಜ್ಞರು ಷೇರು ಮಾರುಕಟ್ಟೆಯಲ್ಲಿ ಭಾರೀ ವ್ಯತ್ಯಯ ಕಾಣುವ ದಿನಗಳು ಬರಲವೆ ಎಂದು ಎಚ್ಚರಿಸಿದ್ದಾರೆ.

ಶಂಕರ್ ಶರ್ಮಾ ಎಂಬ ಹೂಡಿಕೆದಾರರ ಪ್ರಕಾರ ಭಾರತೀಯ ಕಂಪನಿಗಳು ಅನಗತ್ಯವಾಗಿ ಬಂವಾಳ ತುಂಬುತ್ತಿವೆ. ಇದು ಅಪಾಯವನ್ನು ಮೈಮೇಲೆ ಎಳೆದಂತೆ ಎಂದಿದ್ದಾರೆ. ಈ ಬೆಳವಣಿಗೆಗೆ ಮರ್ಚಂಟ್ ಬ್ಯಾಂಕರ್ಸ್ ಮತ್ತು ಆಪರೇಟರ್ಸ್​ಗಳ ಸ್ವಾರ್ಥತೆ ಕಾರಣ ಎಂದು ಅವರು ದೂಷಿಸಿದ್ದಾರೆ.

ಇದನ್ನೂ ಓದಿ: ಎಸ್​ಬಿಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ; ಕಳೆದ ಒಂದು ವರ್ಷದಲ್ಲೇ ಶೇ. 47ರಷ್ಟು ಬೆಳವಣಿಗೆ

‘ಭಾರತೀಯ ಷೇರು ಮಾರುಕಟ್ಟೆಗೆ ಈ ಸ್ವಾರ್ಥ ಮರ್ಚಂಟ್ ಬ್ಯಾಂಕರ್ಸ್ ಮತ್ತು ಆಪರೇಟರ್ಸ್ ಬಹಳ ದೊಡ್ಡ ಅಪಾಯ ಒಡ್ಡುತ್ತಿದ್ದಾರೆ. ಹೆಚ್ಚುವರಿ ಬಂಡವಾಳ ತರಲು ಈ ಮೂರ್ಖ ಪ್ರೊಮೋಟರ್ಸ್​ಗೆ (ಕಂಪನಿ ಮಾಲೀಕರು) ಉತ್ತೇಜಿಸುತ್ತಿದ್ದಾರೆ. ಇದರಿಂದ ಈ ಕಂಪನಿಗಳ ಬ್ಯಾಲನ್ಸ್ ಶೀಟ್​ಗೆ ಭಾರೀ ಹೊಡೆತ ಬೀಳುತ್ತದೆ’ ಎಂದು ಶಂಕರ್ ಶರ್ಮಾ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಮುಂದಿನ ಬೇರ್ ಮಾರ್ಕೆಟ್​ನಲ್ಲಿ (ಷೇರು ಕುಸಿತದ ಸ್ಥಿತಿ) ಇಂಥ ಕಂಪನಿಗಳ ಷೇರುಬೆಲೆ ಶೇ. 90ರಷ್ಟು ಕುಸಿಯಬಹುದು ಎಂದೂ ಶಂಕರ್ ಶರ್ಮಾ ಎಚ್ಚರಿಸಿದ್ದಾರೆ. ಇಲ್ಲಿ ಬೇರೆ ಮಾರ್ಕೆಟ್ ಎಂದರೆ ಯಾವುದಾದರೂ ಷೇರು ಸೂಚ್ಯಂಕ ತನ್ನ ಗರಿಷ್ಠ ಮಟ್ಟದಿಂದ ಶೇ. 20ಕ್ಕಿಂತ ಹೆಚ್ಚು ಕುಸಿತ ಕಾಣುವುದು.

ಇದನ್ನೂ ಓದಿ: ರಿಟೈರ್ಮೆಂಟ್ ಪ್ಲಾನಿಂಗ್: ಈ ಮೂರು ವಿಧದ ಹಣಕಾಸು ವ್ಯವಸ್ಥೆ ನಿಮ್ಮದಿರಲಿ

ಯಾವುವು ಈ ಮರ್ಚಂಟ್ ಬ್ಯಾಂಕರ್ಸ್?

ಮರ್ಚಂಟ್ ಬ್ಯಾಂಕರ್ ಎಂಬುದು ಒಂದು ಕಂಪನಿಗೆ ಸಾಲದ ವ್ಯವಸ್ಥೆ ಸಿಗಲು ಸಹಾಯ ಮಾಡುವ ಹಣಕಾಸು ಮಧ್ಯವರ್ತಿ ಸಂಸ್ಥೆಯಾಗಿರುತ್ತದೆ. ಬಂಡವಾಳ ಎತ್ತುವುದು, ಹೂಡಿಕೆ ಸಂಗ್ರಹಿಸುವುದು ಇತ್ಯಾದಿ ಕಾರ್ಯಗಳಲ್ಲಿ ಸಹಾಯವಾಗುತ್ತವೆ. ಜೆಪಿ ಮಾರ್ಗನ್ ಚೇಸ್, ಗೋಲ್ಡ್​ಮ್ಯಾನ್ ಸ್ಯಾಕ್ಸ್, ಸಿಟಿ ಗ್ರೂಪ್ ಇತ್ಯಾದಿ ಸಂಸ್ಥೆಗಳು ಪ್ರಮುಖ ಮರ್ಚಂಟ್ ಬ್ಯಾಂಕ್​ಗಳಾಗಿವೆ. ಅವೆಂಡಸ್ ಕ್ಯಾಪಿಟಲ್, ಕೋಟಲ್ ಮಹೀಂದ್ರ ಕ್ಯಾಪಿಟಲ್, ಎಡಲ್​ವೇಸ್ ಫೈನಾನ್ಷಿಯಲ್ ಸರ್ವಿಸಸ್ ಇತ್ಯಾದಿ ಮರ್ಚಂಟ್ ಬ್ಯಾಂಕ್​ಗಳೂ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Tue, 7 May 24

ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?