AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಸಾಗರ ಯೋಜನೆಗಳಿಂದ 4.5 ಲಕ್ಷ ಕೋಟಿ ರೂ ಹೂಡಿಕೆ, 2,500ಕ್ಕೂ ಅಧಿಕ ಹಡಗುಗಳ ನಿರ್ಮಾಣ: ಪ್ರಧಾನಿ ನಿರೀಕ್ಷೆ

Narendra Modi's linkedin post: ಸರ್ಕಾರವು ಸಮಗ್ರ ಪ್ಯಾಕೇಜ್ ಮೂಲಕ ಸಾಗರೋದ್ಯಮದ ಬೆಳವಣಿಗೆಗೆ ಪುಷ್ಟಿ ಕೊಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಿಂಕ್ಡ್​ಇನ್​ನಲ್ಲಿ ಒಂದು ಪೋಸ್ಟ್ ಹಾಕಿರುವ ಅವರು, ಭಾರತ ಐತಿಹಾಸಿಕವಾಗಿ ಬಲಿಷ್ಠ ನೌಕಾಶಕ್ತಿ ಹೊಂದಿದ್ದ ಸಂಗತಿಯನ್ನು ಒತ್ತಿಹೇಳಿದ್ದಾರೆ. ಮುಂಬೈನಲ್ಲಿ ಇಂಡಿಯಾ ಮ್ಯಾರಿಟೈಮ್ ವೀಕ್​ನ ಭಾಗವಾಗಿ ಅಕ್ಟೋಬರ್ 29ರಂದು ನಡೆದ ಕಾರ್ಯಕ್ರಮದಲ್ಲೂ ಪ್ರಧಾನಿಗಳು ಮಾತನಾಡಿದ್ದರು.

ಭಾರತದ ಸಾಗರ ಯೋಜನೆಗಳಿಂದ 4.5 ಲಕ್ಷ ಕೋಟಿ ರೂ ಹೂಡಿಕೆ, 2,500ಕ್ಕೂ ಅಧಿಕ ಹಡಗುಗಳ ನಿರ್ಮಾಣ: ಪ್ರಧಾನಿ ನಿರೀಕ್ಷೆ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 30, 2025 | 5:36 PM

Share

ನವದೆಹಲಿ, ಅಕ್ಟೋಬರ್ 30: ಸಾಗರ ಕ್ಷೇತ್ರದಲ್ಲಿ ಸರ್ಕಾರ ತೆಗೆದುಕೊಂಡಿರುವ ವಿವಿಧ ಕ್ರಮ ಮತ್ತು ಸುಧಾರಣೆಗಳಿಂದಾಗಿ ಭಾರತವು ಹಡಗು ನಿರ್ಮಾಣ ಮತ್ತು ಸಾಗರ ನಾವೀನ್ಯತೆಯಲ್ಲಿ ಜಾಗತಿಕ ನಾಯಕರ ಸಾಲಿಗೆ ಸೇರಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಇಂಡಿಯಾ ಮ್ಯಾರಿಟೈಮ್ ವೀಕ್​ನಲ್ಲಿ (India Maritime Week) ನಿನ್ನೆ (ಬುಧವಾರ) ಪಾಲ್ಗೊಂಡು ಮಾತನಾಡಿದ್ದ ನರೇಂದ್ರ ಮೋದಿ, ಇಂದು ತಮ್ಮ ಲಿಂಕ್ಡ್ ಇನ್ ಪೋಸ್ಟ್​ನಲ್ಲಿ ಭಾರತದ ಸಾಗರೋದ್ಯಮದ ಶಕ್ತಿಯ ಬಗ್ಗೆ ವಿವರವಾಗಿ ಬರೆದಿದ್ದಾರೆ.

ಲೇಡಿಂಗ್ ಬಿಲ್​ನಿಂದ ಹಿಡಿದು ಇಂಡಿಯನ್ ಪೋರ್ಟ್ಸ್ ಬಿಲ್​ವರೆಗೆ ಭಾರತ ಐದು ಮಹತ್ವದ ಮಸೂದೆಗಳನ್ನು ತಂದಿದೆ. ಇದರಿಂದ ಸಾಗರ ವ್ಯಾಪಾರವನ್ನು ಸಲೀಸು ಮಾಡಲಾಗಿದೆ. ರಾಜ್ಯಗಳನ್ನು ಸಬಲೀಕರಿಸಲಾಗಿದೆ. ಸಾಗರ ಪ್ರದೇಶದ ಆಡಳಿತವನ್ನು ಆಧುನೀಕರಣಗೊಳಿಸಲಾಗಿದೆ. ಜಾಗತಿಕ ದರ್ಜೆಗೆ ಏರಿಸಲಾಗಿದೆ ಎಂದು ನರೇಂದ್ರ ಮೋದಿ ತಮ್ಮ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಹಡಗು ಕ್ಷೇತ್ರದ ಹೂಡಿಕೆಗೆ ಇದು ಸೂಕ್ತ ಸಮಯ; ಮುಂಬೈನಲ್ಲಿ ಪ್ರಧಾನಿ ಮೋದಿ

ಸಾಗರ ಕ್ಷೇತ್ರದ ಬೆಳವಣಿಗೆಗೆ ಚುರುಕು ಮುಟ್ಟಿಸಲು ಸರಕಾರವು 70,000 ಕೋಟಿ ರೂ ಸಮಗ್ರ ಪ್ಯಾಕೇಜ್​ಗೆ ಅನುಮೋದನೆ ನೀಡಿದೆ. ಈ ಪ್ಯಾಕೇಜ್ ಅಡಿಯಲ್ಲಿ ವಿವಿಧ ಸ್ಕೀಮ್​ಗಳಿಂದ 4.5 ಲಕ್ಷ ಕೋಟಿ ರೂ ಮೊತ್ತದ ಹೂಡಿಕೆ ಹರಿದುಬರಬಹುದು. 2,500ಕ್ಕೂ ಅಧಿಕ ಹಡಗುಗಳನ್ನು ನಿರ್ಮಿಸಲು ಸಾಧ್ಯವಾಗಬಹುದು. ಈ ಕ್ರಮದಿಂದ ಹಡಗು ನಿರ್ಮಾಣ ಮತ್ತು ಸಾಗರ ನಾವೀನ್ಯತೆಯಲ್ಲಿ ಜಾಗತಿಕ ನಾಯಕರ ಸಾಲಿಗೆ ಭಾರತವೂ ಸೇರಬಲ್ಲುದು ಎಂದು ಪ್ರಧಾನಿಗಳು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ವಿವರಿಸಿದ್ದಾರೆ.

ಬಲಿಷ್ಠ ನೌಕಾಶಕ್ತಿ ಹೊಂದಿದ್ದ ಚೋಳರು, ಮರಾಠರ ನಾಡು

ನರೇಂದ್ರ ಮೋದಿ ತಮ್ಮ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ಭಾರತದ ಐತಿಹಾಸಿಕ ನೌಕಾಶಕ್ತಿ ಪ್ರಾಬಲ್ಯವನ್ನು ಉಲ್ಲೇಖಿಸಿದ್ದಾರೆ. ಪ್ರಬಲ ನೌಕಾಶಕ್ತಿಯನ್ನು ಹೊಂದಿದ್ದ ಚೋಳರು ಮತ್ತು ಮರಾಠರ ನಾಡು ನಮ್ಮದು. ಸಾಗರಗಳು ಅವಕಾಶಗಳಿಗೆ ಸೇತುವೆಯಾಗಬಲ್ಲುವು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

2014ರಲ್ಲಿ ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಭಾರತದ ಸಾಗರ ಮತ್ತು ನೌಕಾಶಕ್ತಿಯಲ್ಲಿ ಗಣನೀಯ ಹೆಚ್ಚಳ ಆಗಿರುವುದನ್ನು ಅಂಕಿ ಅಂಶ ಸಮೇತವಾಗಿ ಪ್ರಧಾನಿಗಳು ವಿವರಿಸಿದ್ದಾರೆ. ಅವರು ಪ್ರಸ್ತಾಪಿಸಿದ ಕೆಲ ಮಹತ್ವದ ಅಂಕಿ ಅಂಶಗಳು ಈ ಕೆಳಕಾಣಿಸಿದಂತಿವೆ:

ಇದನ್ನೂ ಓದಿ: ಅಸ್ಸಾಮ್​ಗೆ ಒಂದೇ ಒಂದು ಇಂಡಸ್ಟ್ರಿ ಬಂದಿದ್ದಕ್ಕೆ ಹೀಗಾಡ್ತಿದಾರೆ; ಖರ್ಗೆಗೆ ಶರ್ಮಾ ತರಾಟೆ

  • ಭಾರತದ ಬಂದರು ಸಾಮರ್ಥ್ಯ 2014ರ ನಂತರ 1,400ರಿಂದ 2,762 ಎಂಎಂಟಿಪಿಎಗೆ ಏರಿದೆ.
  • ಸರಕುಗಳ ನಿರ್ವಹಣೆಯು 972 ಎಂಎಂಟಿಯಿಂದ 1,594 ಎಂಎಂಟಿಗೆ ಏರಿದೆ.
  • ಭಾರತದ ಕೌಶಲ್ಯವಂತ ನಾವಿಕರ (skilled seafarers) ಸಂಖ್ಯೆ 1.25 ಲಕ್ಷದಿಂದ 3 ಲಕ್ಷಕ್ಕೆ ಏರಿದೆ. ಇದು ವಿಶ್ವದ ಶೇ 12 ನಾವಿಕರ ಸಂಖ್ಯೆ.
  • ಭಾರತಕ್ಕೆ ಜೋಡಿತವಾದ ಹಡಗುಗಳ ಸಂಖ್ಯೆ 1,205ರಿಂದ 1,549ಕ್ಕೆ ಏರಿದೆ.
  • ವಿಳಿಂಜಮ್ ಪೋರ್ಟ್ ಭಾರತದ ಮೊದಲ ಡೀಪ್ ವಾಟರ್ ಟ್​ರಾನ್ಸ್​ಶಿಪ್ಮೆಂಟ್ ಹಬ್ ಆಗಿದೆ.
  • ಕಾಂಡ್ಲ ಪೋರ್ಟ್ ಈ ದೇಶದಲ್ಲಿ ಮೊದಲ ಗ್ರೀನ್ ಹೈಡ್ರೋಜನ್ ಸೌಲಭ್ಯ ಹೊಂದಿದೆ.
  • ಜೆಎನ್​ಪಿಟಿ ತನ್ನ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದ್ದು ಪೋರ್ಟ್ ಇತಿಹಾಸದಲ್ಲೇ ಅತಿದೊಡ್ಡ ವಿದೇಶೀ ಹೂಡಿಕೆಯನ್ನು ಆಕರ್ಷಿಸಿದೆ.
  • ಮಹಾರಾಷ್ಟ್ರದ ವಾಧವನ್ ಪೋರ್ಟ್ ಪ್ರಾಜೆಕ್ಟ್ 76,000 ಕೋಟಿ ರೂ ಹೂಡಿಕೆ ಹೊಂದಿದ್ದು, ವಿಶ್ವದ ಕೆಲವೇ ಕೆಲ ಡೀಪ್ ಡ್ರಾಫ್ಟ್ ಪೋರ್ಟ್​​ಗಳಲ್ಲಿ ಒಂದೆನಿಸಿದೆ.
  • ಭಾರತದಲ್ಲಿ ಬಹಳ ಸುದೀರ್ಘ ಕರಾವಳಿ ಪ್ರದೇಶ ಇದೆ.
  • ಜಾಗತಿಕವಾಗಿ ಬಹಳ ಮುಖ್ಯವಾದ ಟ್ರೇಡ್ ರೂಟ್​ಗಳು ಭಾರತದ ಸಮುದ್ರ ಭಾಗದಲ್ಲಿ ಸಾಗುತ್ತವೆ.
  • ಭಾರತದಲ್ಲಿ ವಿಶ್ವದರ್ಜೆಯ ಬಂದರುಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ