ಪ್ರಧಾನಿ ನರೇಂದ್ರ ಮೋದಿ ಹೊಸ ವಾಟ್ಸಾಪ್ ಚಾನಲ್; ಒಂದೇ ದಿನದಲ್ಲಿ 10 ಲಕ್ಷ ಫಾಲೋಯರ್ಸ್

|

Updated on: Sep 20, 2023 | 6:27 PM

PM Narendra Modi Whatsapp Channel: ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಹೊಸ ವಾಟ್ಸಾಪ್ ಚಾನಲ್​ಗೆ ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಸಿಕ್ಕಿದ್ದಾರೆ. ಹೊಸ ಸಂಸತ್ ಭವನದ ಬಗ್ಗೆ ಅವರು ಹಾಕಿದ ಮೊದಲ ಪೋಸ್ಟ್​ಗೆ ಲಕ್ಷಕ್ಕೂ ಹೆಚ್ಚು ಮಂದಿ ರಿಯಾಕ್ಟ್ ಮಾಡಿದ್ದಾರೆ. ಇದು ನರೇಂದ್ರ ಮೋದಿ ಅವರ ಜನಪ್ರಿಯತೆಗೆ ಕನ್ನಡಿ ಹಿಡಿದಂತಿದೆ. ವಾಟ್ಸಾಪ್ ಚಾನಲ್ಸ್ ಎಂದರೆ ಏನು, ಇದನ್ನು ಬಳಸುವುದು ಹೇಗೆ ಎಂಬ ವಿವರ ಇಲ್ಲಿದೆ...

ಪ್ರಧಾನಿ ನರೇಂದ್ರ ಮೋದಿ ಹೊಸ ವಾಟ್ಸಾಪ್ ಚಾನಲ್; ಒಂದೇ ದಿನದಲ್ಲಿ 10 ಲಕ್ಷ ಫಾಲೋಯರ್ಸ್
ನರೇಂದ್ರ ಮೋದಿ
Follow us on

ನವದೆಹಲಿ, ಸೆಪ್ಟೆಂಬರ್ 20: ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಗೆ ಕನ್ನಡಿ ಹಿಡಿಯುಂತೆ ಅವರ ಹೊಸ ವಾಟ್ಸಾಪ್ ಚಾನಲ್ಸ್​ಗೆ (Whatsapp Channels) ಭರ್ಜರಿ ಸ್ಪಂದನೆ ಸಿಕ್ಕಿದೆ. ಒಂದೇ ದಿನದಲ್ಲಿ ಪ್ರಧಾನಿಯವರ ವಾಟ್ಸಾಪ್ ಚಾನಲ್​ಗೆ 10 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಬಂದಿದ್ದಾರೆ. ಸೆಪ್ಟೆಂಬರ್ 19, ನಿನ್ನೆಯಷ್ಟೇ ಮೋದಿ ಅವರು ಚಾನಲ್ಸ್ ಸೇರಿದ್ದರು. ಜನರ ಜೊತೆ ಸಂಪರ್ಕದಲ್ಲಿರಲು ಮತ್ತು ಸಂವಾದ ನಡೆಸಲು ಪ್ರಧಾನಿಗಳು ಸಾಧ್ಯವಿರುವ ಎಲ್ಲಾ ಸಂವಹನ ಮಾಧ್ಯಮಗಳನ್ನು ಬಳಸುತ್ತಿದ್ದಾರೆ. ವಾಟ್ಸಾಪ್​ನಿಂದ ಹಿಡಿದು ರೇಡಿಯೋವರೆಗೂ ಅವರು ನಿಯಮಿತವಾಗಿ ಪೋಸ್ಟ್ ಮಾಡುತ್ತಿರುತ್ತಾರೆ.

ಪ್ರಧಾನಿಗಳು ನಿನ್ನೆ ವಾಟ್ಸಾಪ್ ಚಾನಲ್​ನಲ್ಲಿ ಹಾಕಿದ ಮೊದಲ ಪೋಸ್ಟ್ ಹೊಸ ಸಂಸತ್ ಭವನದ್ದಾಗಿತ್ತು. ಕಟ್ಟಡದ ಚಿತ್ರವನ್ನು ಲಗತ್ತಿಸಿದ ಅವರು, ‘ವಾಟ್ಸಾಪ್ ಕಮ್ಯೂನಿಟಿಯ ಭಾಗವಾಗಲು ಖುಷಿ ಆಗುತ್ತಿದೆ. ನಮ್ಮ ನಡುವಿನ ಸಂವಾದವನ್ನು ಮುಂದುವರಿಸಲು ಇದು ಒಂದು ಹೆಜ್ಜೆ ಮುಂದೆ ತರುತ್ತದೆ. ಈ ಸಂಪರ್ಕವನ್ನು ಹೀಗೆ ಜೀವಂತವಾಗಿರಿಸೋಣ. ಹೊಸ ಸಂಸದತ್ ಭವನದ ಚಿತ್ರ ಇಲ್ಲಿದೆ’ ಎಂದು ಬರೆದಿದ್ದಾರೆ.

ನರೇಂದ್ರ ಮೋದಿ ಅವರ ಆ ಮೊದಲ ಪೋಸ್ಟ್​ಗೆ ಸುಮಾರು ಒಂದೂವರೆ ಲಕ್ಷದಷ್ಟು ಮಂದಿ ರಿಯಾಕ್ಷನ್ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಅವರ ಚಾನಲ್ ಅನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 10 ಲಕ್ಷ ಗಡಿದಾಟಿ ಹೋಗಿದೆ.

ಇದನ್ನೂ ಓದಿ: ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ ಆಧಾರ್, ಪ್ಯಾನ್ ಲಿಂಕ್ ಮಾಡುವುದಕ್ಕೆ ಸೆಪ್ಟೆಂಬರ್ 30 ಡೆಡ್​ಲೈನ್

ನೀವು ಪ್ರಧಾನಿ ನರೇಂದ್ರ ಮೋದಿ ಅವರ ವಾಟ್ಸಾಪ್ ಚಾನಲ್ಸ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ: whatsapp.com/channel/0029Va8IaebCMY0C8oOkQT1F

ಏನಿದು ವಾಟ್ಸಾಪ್ ಚಾನಲ್ಸ್?

ಈಗಿರುವ ವಾಟ್ಸಾಪ್ ಕಮ್ಯೂನಿಟಿ ರೀತಿಯದ್ದೇ ಮತ್ತೊಂದು ಫೀಚರ್ ಈ ವಾಟ್ಸಾಪ್ ಚಾನಲ್ಸ್. ಸದ್ಯ ಪ್ರಾಯೋಗಿಕವಾಗಿ ಇದನ್ನು ಅನಾವರಣಗೊಳಿಸಲಾಗಿದೆ. ಎಲ್ಲರಿಗೂ ಇದು ಇನ್ನೂ ಲಭ್ಯ ಇಲ್ಲ. ಮುಂಬರುವ ದಿನಗಳಲ್ಲಿ ಇದು ಎಲ್ಲರಿಗೂ ಸಿಗಬಹುದು.

ಯಾರು ಬೇಕಾದರೂ ಪ್ರತ್ಯೇಕವಾಗಿ ಚಾನಲ್ಸ್ ಆರಂಭಿಸಬಹುದು. ಟೆಕ್ಸ್ಟ್, ಫೋಟೋ, ವಿಡಿಯೋ, ಪೋಲ್ ಇತ್ಯಾದಿಯನ್ನು ಇದರಲ್ಲಿ ಪೋಸ್ಟ್ ಮಾಡಬಹುದು. ಹಾಗೆಯೇ, ಯಾರು ಬೇಕಾದರೂ ಯಾವ ಚಾನಲ್ ಅನ್ನು ಫಾಲೋ ಮಾಡಬಹುದು. ಆದರೆ, ಇದು ಏಕ ಸಂವಾದಿಯಾಗಿರುತ್ತದೆ. ಅಂದರೆ ಚಾನಲ್ ಅಡ್ಮಿನ್ ಮಾತ್ರ ಅದರಲ್ಲಿ ಪೋಸ್ಟ್ ಮಾಡಬಹುದು. ಫಾಲೋ ಮಾಡುತ್ತಿರುವವರು ಈ ಪೋಸ್ಟ್​ಗೆ ಉತ್ತರಿಸಲು ಆಗುವುದಿಲ್ಲ. ಚಾನಲ್ ಜೊತೆ ಸಂವಾದಿಸಲು ಸಾಧ್ಯವಿಲ್ಲ. ಪೋಲ್​ನಲ್ಲಿ ಪಾಲ್ಗೊಳ್ಳಬಹುದು, ಇಮೋಜಿ ರಿಯಾಕ್ಷನ್ ಕೊಡಬಹುದು ಅಷ್ಟೇ. ವಾಟ್ಸಾಪ್ ಕಮ್ಯೂನಿಟಿಯಲ್ಲಿಯೂ ಇದೇ ರೀತಿಯ ಫೀಚರ್​ಗಳಿವೆ.

ಆದರೆ, ವಾಟ್ಸಾಪ್ ಚಾನಲ್ ಅನ್ನು ನೀವು ಫಾಲೋ ಮಾಡಿದರೆ ನಿಮ್ಮ ಫೋನ್ ನಂಬರ್ ಬೇರೆ ಯಾರಿಗೂ ಗೊತ್ತಾಗುವುದಿಲ್ಲ. ಚಾನಲ್ ಅಡ್ಮಿನ್​ಗೂ ಕೂಡ ನಿಮ್ಮ ಫೋನ್ ನಂಬರ್ ಗೊತ್ತಾಗುವುದಿಲ್ಲ. ಅಷ್ಟರಮಟ್ಟಿಗೆ ಇದು ಗೌಪ್ಯತೆ ಹೊಂದಿರುತ್ತದೆ. ಈ ವಿಚಾರದಲ್ಲಿ ವಾಟ್ಸಾಪ್ ಕಮ್ಯೂನಿಟಿಗಿಂತ ಚಾನಲ್ಸ್ ಭಿನ್ನ ಎನಿಸುತ್ತದೆ.

ಇದನ್ನೂ ಓದಿ: World’s Best Hotel: ಇಟಲಿಯ ಪಸ್ಸಾಲಾಕ್ವ ವಿಶ್ವದ ಅತ್ಯುತ್ತಮ ಹೋಟೆಲ್; ಟಾಪ್ 50 ಪಟ್ಟಿಯಲ್ಲಿ ಭಾರತದ ಏಕೈಕ ಹೋಟೆಲ್

ವಾಟ್ಸಾಪ್ ಚಾನಲ್ ಆರಂಭಿಸುವುದು ಹೇಗೆ?

ಈ ಫೀಚರ್ ಇನ್ನೂ ಎಲ್ಲರಿಗೂ ನೀಡಿಲ್ಲ. ನಿಮಗೆ ಈ ಫೀಚರ್ ಲಭ್ಯವಾಗಿದೆಯಾ ಎಂಬುದನ್ನು ನೋಡಲು ವಾಟ್ಸಾಪ್​ನ ಇತ್ತೀಚಿನ ಆವೃತ್ತಿಗೆ ಅಪ್​ಡೇಟ್ ಆಗಬೇಕು.

  • ವಾಟ್ಸಾಪ್ ವೆಬ್ ಓಪನ್ ಮಾಡಿದರೆ ಚಾನಲ್ ಐಕಾನ್ ಕಾಣುತ್ತದೆ.
  • ಅದನ್ನು ಕ್ಲಿಕ್ ಮಾಡಿ ಪ್ಲಸ್ ಚಿಹ್ನೆ (+) ಮೇಲೆ ಕ್ಲಿಕ್ ಮಾಡಿ ಚಾನಲ್ ಕ್ರಿಯೇಟ್ ಮಾಡಬಹುದು.

ಚಾನಲ್ ಹೆಸರು, ವಿವರ, ಐಕಾನ್ ಇತ್ಯಾದಿಯನ್ನು ಸೇರಿಸಿ ನಿಮ್ಮದೇ ಹೊಸ ವಾಟ್ಸಾಪ್ ಚಾನಲ್ ಆರಂಭಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ