ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳಿಗೆ ಆಧಾರ್, ಪ್ಯಾನ್ ಲಿಂಕ್ ಮಾಡುವುದಕ್ಕೆ ಸೆಪ್ಟೆಂಬರ್ 30 ಡೆಡ್ಲೈನ್
Deadline To Submit Aadhaar For Savings Schemes: ಸುಕನ್ಯ ಸಮೃದ್ಧಿ ಯೋಜನೆ, ಪಿಪಿಎಫ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಮತ್ತು ಪ್ಯಾನ್ ನಂಬರ್ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆಧಾರ್ ಸಲ್ಲಿಸದೇ ಈಗಾಗಲೇ ಯೋಜನೆ ಪಡೆದಿರುವವರು ಆಧಾರ್ ಸಲ್ಲಿಸಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ಇದೆ. ಆ ಗಡುವು ಬಳಿಕ ಇನ್ನೂ ಯಾರಾದರೂ ಆಧಾರ್ ಸಲ್ಲಿಸಿಲ್ಲವಾದರೆ ಯೋಜನೆಯ ಹಣ ಫ್ರೀಜ್ ಆಗುತ್ತದೆ.
ನವದೆಹಲಿ, ಸೆಪ್ಟೆಂಬರ್ 20: ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC), ಹಿರಿಯ ನಾಗರಿಕರ ಸೇವಿಂಗ್ಸ್ ಸ್ಕೀಮ್ (NCSS) ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿರುವವರ ಗಮನಕ್ಕೆ ಈ ಸುದ್ದಿ. ನೀವು ಯಾವುದಾದರೂ ಉಳಿತಾಯ ಯೋಜನೆಗಳನ್ನು ಮಾಡಿಸಿದ್ದರೆ, ಆದಷ್ಟೂ ಬೇಗ ಅವಕ್ಕೆ ನಿಮ್ಮ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡಿ. ಸೆಪ್ಟೆಂಬರ್ 30ರವರೆಗೂ ಗಡುವು ಇದ್ದು ಕೇವಲ 9 ದಿನ ಮಾತ್ರ ಬಾಕಿ ಇದೆ.
ಕೇಂದ್ರ ಹಣಕಾಸು ಸಚಿವಾಲಯ 2023ರ ಮಾರ್ಚ್ 31ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ಪಿಪಿಎಫ್, ಎನ್ಎಸ್ಸಿ ಮತ್ತಿತರ ಸ್ಮಾಲ್ ಸೇವಿಂಗ್ ಸ್ಕೀಮ್ಗಳಿಗೆ ಆಧಾರ್ ಮತ್ತು ಪ್ಯಾನ್ ಅನ್ನು ಸಲ್ಲಿಸುವುದು ಕಡ್ಡಾಯ. ಹೊಸದಾಗಿ ಸ್ಕೀಮ್ ಪಡೆಯುವವರು ಮಾತ್ರವಲ್ಲ, ಈಗಾಗಲೇ ಆ ಯೋಜನೆಗಳನ್ನು ಮಾಡಿಸಿದ್ದವರೂ ಕೂಡ ಆಧಾರ್ ಮತ್ತು ಪ್ಯಾನ್ ಅನ್ನು ಸಲ್ಲಿಸಬೇಕಾಗುತ್ತದೆ. ಸೆಪ್ಟೆಂಬರ್ 30ರೊಳಗೆ ನೀವು ಸ್ಕೀಮ್ ಪಡೆದಿರುವ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖಾ ಕಚೇರಿಗೆ ಹೋಗಿ ಆಧಾರ್ ನಂಬರ್ ಅನ್ನು ನೀಡಬೇಕಾಗುತ್ತದೆ.
ಇದನ್ನೂ ಓದಿ: World’s Best Hotel: ಇಟಲಿಯ ಪಸ್ಸಾಲಾಕ್ವ ವಿಶ್ವದ ಅತ್ಯುತ್ತಮ ಹೋಟೆಲ್; ಟಾಪ್ 50 ಪಟ್ಟಿಯಲ್ಲಿ ಭಾರತದ ಏಕೈಕ ಹೋಟೆಲ್
ಆಧಾರ್ ಸಲ್ಲಿಸದಿದ್ದರೆ ಏನಾಗುತ್ತದೆ?
ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಮತ್ತು ಪ್ಯಾನ್ ನಂಬರ್ ಅನ್ನು ನೀಡದೇ ಇದ್ದರೆ ಹೂಡಿಕೆ ಸ್ಥಗಿತಗೊಳ್ಳುತ್ತದೆ. ಅಂದರೆ ಈ ಸ್ಕೀಮ್ಗಳಲ್ಲಿ ತೊಡಗಿಸಿರುವ ನಿಮ್ಮ ಹಣ ಫ್ರೀಜ್ ಆಗುತ್ತದೆ. ಅದನ್ನು ನೀವು ವಿತ್ಡ್ರಾ ಮಾಡಲು ಆಗುವುದಿಲ್ಲ. ಬಡ್ಡಿ ಹಣವೂ ಜಮೆ ಆಗುವುದಿಲ್ಲ. ನೀವು ಯೋಜನೆಯಲ್ಲಿ ಹಣ ಠೇವಣಿ ಇಡುವುದಕ್ಕೂ ನಿರ್ಬಂಧ ಇರುತ್ತದೆ.
ಸಣ್ಣ ಉಳಿತಾಯ ಯೋಜನೆಗಳು ಸಾಕಷ್ಟು ಜನಪ್ರಿಯವಾಗುತ್ತಿವೆ. ಈ ಹಿಂದೆ ಸ್ಕೀಮ್ಗಳನ್ನು ಪಡೆಯಲು ಆಧಾರ್ ಕಡ್ಡಾಯ ಇರಲಿಲ್ಲ. ಬಹಳಷ್ಟು ಮಂದಿ ಆಧಾರ್ ಸಲ್ಲಿಸದೆಯೇ ಯೋಜನೆ ಆರಂಭಿಸಿರುವುದುಂಟು. ಇದೀಗ ಆಧಾರ್ ಮತ್ತು ಪ್ಯಾನ್ ಸಲ್ಲಿಸುವುದು ಕಡ್ಡಾಯಪಡಿಸಲಾಗಿದೆ.
ಇದನ್ನೂ ಓದಿ: ಪಿಎಂ ಕಿಸಾನ್ ರಿನ್ ಪೋರ್ಟಲ್ಗೆ ಚಾಲನೆ; ಏನಿದು ರೈತರ ಹೊಸ ಪ್ಲಾಟ್ಫಾರ್ಮ್?
ನಿಮ್ಮ ಆಧಾರ್ಗೆ ಪ್ಯಾನ್ ನಂಬರ್ ಲಿಂಕ್ ಮಾಡಿದ್ದರೆ, ಕೇವಲ ಆಧಾರ್ ನಂಬರ್ ಮಾತ್ರವೇ ಕೊಟ್ಟರೂ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ