ಆರ್​ಸಿಬಿಗೆ ನವಿ ಯುಪಿಐ ಮತ್ತೊಮ್ಮೆ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್; ಈ ಬಾರಿ ಫಾಸ್ಟೆಸ್ಟ್ ಮೊಮೆಂಟ್ ಗೇಮ್

Navi UPI continues to be official payments partner for RCB: ಕಳೆದ ಬಾರಿಯ ಐಪಿಎಲ್ ಸೀಸನ್​ನಲ್ಲಿ ಬೆಂಗಳೂರು ರಾಯಲ್ ಚಾಲೆಂಜ್ಸ್ ತಂಡಕ್ಕೆ ಪೇಮೆಂಟ್ಸ್ ಪಾರ್ಟ್ನರ್ ಆಗಿದ್ದ ನವಿ ಯುಪಿಐ ಈ ಸೀಸನ್​ನಲ್ಲೂ ಪಾರ್ಟ್ನರ್ ಆಗಿ ಮುಂದುವರಿದಿದೆ. ಈ ಬಾರಿ ನವಿ ಆ್ಯಪ್ ‘ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್’ ಪ್ರಶಸ್ತಿಯನ್ನು ಪರಿಚಯಿಸುತ್ತಿದೆ. ಪಂದ್ಯಕ್ಕೆ ತಿರುವು ಕೊಡುವ ಕ್ಷಣಕ್ಕೆ ಕಾರಣರಾದ ಆಟಗಾರನಿಗೆ ಈ ಪ್ರಶಸ್ತಿ ಸಿಗುತ್ತದೆ.

ಆರ್​ಸಿಬಿಗೆ ನವಿ ಯುಪಿಐ ಮತ್ತೊಮ್ಮೆ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್; ಈ ಬಾರಿ ಫಾಸ್ಟೆಸ್ಟ್ ಮೊಮೆಂಟ್ ಗೇಮ್
ನವಿ ಯುಪಿಐ
Image Credit source: Navi UPI

Updated on: Mar 26, 2026 | 4:10 PM

ಬೆಂಗಳೂರು, ಮಾರ್ಚ್ 26: ಹೊಸ ಮಾಲೀಕರನ್ನು ಪಡೆದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಫ್ರಾಂಚೈಸಿಯು ತನ್ನ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್ ಆಗಿ ನವಿ ಯುಪಿಐ (Navi UPI App) ಅನ್ನು ಉಳಿಸಿಕೊಂಡಿದೆ. 2026ರ ಐಪಿಎಲ್ ಸೀಸನ್​ನಲ್ಲಿ ನವಿ ಯುಪಿಐ ‘ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್’ (Fastest Moment of the Match powered by Navi UPI) ಪ್ರಶಸ್ತಿಯನ್ನು ಪರಿಚಯಿಸಲಿದೆ.

ಪಂದ್ಯಕ್ಕೆ ತಿರುವು ಕೊಟ್ಟಂತಹ ಅತ್ಯಂತ ನಿರ್ಣಾಯಕವಾದ, ಬಹಳ ಪರಿಣಾಮಕಾರಿ ಕ್ಷಣಕ್ಕೆ ಕಾರಣವಾದ ಆಟಗಾರನನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಪಡೆದ ಆಟಗಾರನ ಅಕೌಂಟ್​ಗೆ ನವಿ ಯುಪಿಐ ಮೂಲಕ ತತ್​ಕ್ಷಣವೇ 50,000 ರೂ ಹಣ ಹಾಕಲಾಗುತ್ತದೆ.

‘ಈ ಸೀಸನ್​ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ಜೊತೆ ನಮ್ಮ ಪಾರ್ಟ್ನರ್​ಶಿಪ್ ಮುಂದುವರಿಸಲು ಸಂತೋಷವಾಗಿದೆ. ಕ್ರಿಕೆಟ್ ಎಂಬುದು ಕ್ಷಣಗಳ ಒಂದು ಆಟ. ಪಂದ್ಯದ ಫಲಿತಾಂಶವನ್ನೇ ಬದಲಿಸುವ ಅತ್ಯಂತ ವೇಗದ ಮತ್ತು ಅತ್ಯಂತ ನಿರ್ಣಾಯಕ ಕ್ಷಣ ಆಗಿರುತ್ತದೆ. ನವಿ ಯುಪಿಐ ಎಷ್ಟು ತ್ವರಿತವಾಗಿ ಕೆಲಸ ಮಾಡುತ್ತದೆ ಎಂದರೆ, ಅದನ್ನು ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಹೋಲಿಸಬಹುದು’ ಎಂದು ನವಿ ಲಿಮಿಟೆಡ್​ನ ಎಂಡಿ ಮತ್ತು ಸಿಇಒ ಆದ ರಾಜೀವ್ ನರೇಶ್ ಹೇಳಿದ್ದಾರೆ.

ಇದನ್ನೂ ಓದಿ: Petrol Diesel Prices: ಭಾರತದಲ್ಲಿ ನಯಾರಾ ಪೆಟ್ರೋಲ್ ದರ ಹೆಚ್ಚಳ; ಲೀಟರ್​ಗೆ 5 ರೂ ಬೆಲೆ ಏರಿಕೆ

ಆರ್​ಸಿಬಿ ಸಿಇಒ ರಾಜೇಶ್ ವಿ ಮೆನನ್ ಕೂಡ ಹೇಳಿಕೆ ನೀಡಿದ್ದು, ‘ಆರ್​ಸಿಬಿಯ ವೇಗ ಮತ್ತು ಪರಿಣಾಮದ ಗುಣವು ಫಾಸ್ಟೆಸ್ಟ್ ಮೊಮೆಂಟ್ ಆಫ್ ಮ್ಯಾಚ್​ಗೆ ಸರಿ ಹೊಂದುತ್ತದೆ’ ಎಂದಿದ್ದಾರೆ.

ಇನ್ನು, ನವಿ ಯುಪಿಐನ ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್ ಪ್ರಶಸ್ತಿಯು ಆರ್​ಸಿಬಿ ಆಡುವ ಎಲ್ಲಾ ಪಂದ್ಯಗಳಲ್ಲೂ ಇರುತ್ತದೆ. ಇದರಲ್ಲಿ ನವಿ ಯುಪಿಐ ಬಳಕೆದಾರರ ಪಾಲ್ಗೊಳ್ಳುವಿಕೆಗೆ ಅವಕಾಶ ಇದೆಯಾ ಇಲ್ಲವಾ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ, ನವಿ ಯುಪಿಐ ಬಳಕೆದಾರರಿಗೆ ಐಪಿಎಲ್ ಪಂದ್ಯಗಳಲ್ಲಿ ಇತರ ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶಗಳಿವೆ.

ನವಿ ಆ್ಯಪ್​ನಲ್ಲಿ ಪವರ್​ಪ್ಲೇ ಸ್ಪರ್ಧೆ ಇದ್ದು, ಅದರಲ್ಲಿ ಭಾಗವಹಿಸುವವರು ಯುಪಿಐ ಟ್ರಾನ್ಸಾಕ್ಷನ್ ಮಾಡಿದರೆ ಆರ್​ಸಿಬಿ ಆಟಗಾರರ ಡಿಜಿಟಲ್ ಕಾರ್ಡ್​ಗಳನ್ನು ಸಂಗ್ರಹಿಸಬಹುದು. ಆರ್​ಸಿಬಿ ಜೆರ್ಸಿಗಳು ಮತ್ತು ಆಟಗಾರರಿಂದ ಸಹಿಹಾಕಲಾದ ಕ್ರಿಕೆಟ್ ಬ್ಯಾಟುಗಳನ್ನು ಗೆಲ್ಲಲು ಅವಕಾಶ ಸಿಗುತ್ತದೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ

ಬೆಂಗಳೂರಿನಲ್ಲಿ ನಡೆಯುವ ಆರ್​ಸಿಬಿ ಮ್ಯಾಚುಗಳಲ್ಲಿ ಟಿಕೆಟ್ ಮಾರಾಟವು ಸಾರ್ವಜನಿಕರಿಗೆ ಲಭ್ಯವಾಗುವ 24 ಗಂಟೆ ಮುಂಚೆ ನವಿ ಯುಪಿಐ ಬಳಕೆದಾರರಿಗೆ ಖರೀದಿಗೆ ಲಭ್ಯ ಇರುತ್ತದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us