AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NDTV: ಅದಾನಿ ಗ್ರೂಪ್ ಆಸಕ್ತಿ ತೋರಿದ ಬೆನ್ನಲ್ಲೇ ಜಿಗಿದ ಎನ್​ಡಿಟಿವಿ ಷೇರು ಮೌಲ್ಯ; ಒಂದೇ ದಿನ ಶೇ 20ರಷ್ಟು ಏರಿಕೆ

ಕಳೆದ ಒಂದು ವರ್ಷದ ಅಂಕಿಅಂಶಗಳನ್ನು ಗಮನಿಸಿದರೆ ಎನ್​ಡಿಟಿವಿ ಷೇರು ನಾಲ್ಕು ಪಟ್ಟು (ಶೇ 400) ಏರಿಕೆಯಾಗಿರುವುದು ಅರಿವಾಗುತ್ತದೆ.

NDTV: ಅದಾನಿ ಗ್ರೂಪ್ ಆಸಕ್ತಿ ತೋರಿದ ಬೆನ್ನಲ್ಲೇ ಜಿಗಿದ ಎನ್​ಡಿಟಿವಿ ಷೇರು ಮೌಲ್ಯ; ಒಂದೇ ದಿನ ಶೇ 20ರಷ್ಟು ಏರಿಕೆ
ಗೌತಮ್ ಅದಾನಿ ಮತ್ತು ಎನ್​ಡಿಟಿವಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 24, 2022 | 4:05 PM

ಮುಂಬೈ: ದೇಶದ ದೈತ್ಯ ಉದ್ಯಮ ಸಮೂಹ ಎನಿಸಿರುವ ‘ಅದಾನಿ ಗ್ರೂಪ್’ ಎನ್​ಡಿಟಿವಿ ಖರೀದಿಗೆ ಪ್ರಸ್ತಾವ ಮುಂದಿಟ್ಟಿದೆ. ಈ ಸುದ್ದಿ ಬಹಿರಂಗಗೊಂಡ ಬೆನ್ನಲ್ಲೇ ಹೂಡಿಕೆದಾರರು ಎನ್​ಡಿಟಿವಿ ಷೇರುಗಳ ಖರೀದಿಗೆ ಮುಗಿಬಿದ್ದರು. ಒಂದೇ ದಿನ ಎನ್​ಡಿಟಿವಿ ಕಂಪನಿಯ ಷೇರುಮೌಲ್ಯ 20 ರೂಪಾಯಿಯಷ್ಟು ರಷ್ಟು ಏರಿಕೆ ಕಂಡಿದ್ದು, ಒಂದು ವರ್ಷದ ಗರಿಷ್ಠ ಮಟ್ಟವನ್ನು (₹ 388.20) ಮುಟ್ಟಿತು. ಅದಾನಿ ಗ್ರೂಪ್ ಕಂಪನಿಯು ಎನ್​ಡಿಟಿವಿಯಲ್ಲಿ ಶೇ 29.18ರಷ್ಟು ಷೇರು ಪಡೆದುಕೊಳ್ಳಲಿದೆ. ಹೆಚ್ಚುವರಿಯಾಗಿ ಶೇ 26ರಷ್ಟು ಷೇರು ಖರೀದಿಗೆ ಪ್ರಸ್ತಾವ ಮುಂದಿಟ್ಟಿದೆ.

ಎನ್​ಡಿಟಿವಿಯಲ್ಲಿ ಅದಾನಿ ಗ್ರೂಪ್ ಪಾಲು ಪಡೆಯಬಹುದು ಎಂಬ ಮಾತು ಕಳೆದ ಒಂದು ವರ್ಷದಿಂದ ಷೇರುಪೇಟೆಯಲ್ಲಿ ಓಡಾಡುತ್ತಿತ್ತು. ಕಳೆದ ಒಂದು ವರ್ಷದ ಅಂಕಿಅಂಶಗಳನ್ನು ಗಮನಿಸಿದರೆ ಎನ್​ಡಿಟಿವಿ ಷೇರು ನಾಲ್ಕು ಪಟ್ಟು (ಶೇ 400) ಏರಿಕೆಯಾಗಿರುವುದು ಅರಿವಾಗುತ್ತದೆ.

ಸಾಮಾನ್ಯವಾಗಿ ಯಾವುದೇ ಕಂಪನಿಯ ಷೇರುಮೌಲ್ಯ ಈ ಪ್ರಮಾಣದಲ್ಲಿ ಏರಿಕೆ ಕಂಡು ಬಂದರೆ ಬ್ರೋಕರೇಜ್ ಕಂಪನಿಗಳು ಖರೀದಿ, ಸಂಗ್ರಹ, ಕಾಪು ಅಥವಾ ಮಾರಾಟದ (Buy, Accumulate, Hold, Sell) ಶಿಫಾರಸುಗಳನ್ನು ಪ್ರಕಟಿಸುತ್ತವೆ. ಆದರೆ ಎನ್​ಡಿಟಿವಿ ಬಗ್ಗೆ ಖರೀದಿದಾರರು ಆಸಕ್ತಿ ತೋರಿಸುತ್ತಿದ್ದರೂ ಬ್ರೋಕರೇಜ್ ಕಂಪನಿಗಳು ಯಾವುದೇ ಶಿಫಾರಸು ಪ್ರಕಟಿಸದಿರುವುದು ಅಚ್ಚರಿ ಮೂಡಿಸಿದೆ.

‘ಎನ್​ಡಿಟಿವಿ ಷೇರು ಮೌಲ್ಯ ಕೇವಲ ಸುದ್ದಿಯೊಂದನ್ನು ಆಧರಿಸಿ, ಕೃತಕವಾಗಿ ಮೇಲೇರಿದೆ. ಯಾವಾಗ ಬೇಕಾದರೂ ಅದು ಕುಸಿಯಬಹುದು’ ಎಂಬ ಎಚ್ಚರಿಕೆಯ ಮಾತುಗಳು ಷೇರು ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ದಲ್ಲಾಳಿಗಳ ವಲಯದಲ್ಲಿ ಚಾಲ್ತಿಯಲ್ಲಿದೆ.

‘ಅದಾನಿ ಗ್ರೂಪ್ ಈಗಾಗಲೇ ಬ್ಲೂಮ್​ಬರ್ಗ್​ ಕ್ವಿಂಟ್​ನಲ್ಲಿ ಶೇ 49ರಷ್ಟು ಪಾಲು ಖರೀದಿಸಿದೆ. ಒಂದು ವೇಳೆ ಎನ್​ಡಿಟಿವಿಯಲ್ಲಿಯೂ ಅವರು ಪಾಲು ತೆಗೆದುಕೊಂಡರೆ ಎರಡೂ ಕಂಪನಿಗಳನ್ನು ಒಗ್ಗೂಡಿಸಿ ಮುನ್ನಡೆಸುವ ಯೋಜನೆ ರೂಪಿಸುತ್ತಾರೆ. ಆದರೆ ಅದಾನಿ ಗ್ರೂಪ್​ನ ಪ್ರಸ್ತಾವವನ್ನು ಎನ್​ಡಿಟಿವಿ ಏಕಪಕ್ಷೀಯ ಎಂದಿರುವುದರಿಂದ ಮುಂದೆ ಏನಾಗುತ್ತದೆ ಎಂಬ ಸ್ಪಷ್ಟನೆ ಇಲ್ಲ. ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಇದ್ದರೆ ಮಾತ್ರ ಎನ್​ಡಿಟಿವಿ ಕಡೆ ಉತ್ಸಾಹ ತೋರಿ. ಇಲ್ಲದಿದ್ದರೆ ಈ ಸ್ಟಾಕ್ ಅವಾಯ್ಡ್ ಮಾಡಿ’ ಎಂಬ ಷೇರು ದಲ್ಲಾಳಿಯೊಬ್ಬರ ಹೇಳಿಕೆಯನ್ನು ‘ಮನಿಕಂಟ್ರೋಲ್’ ಜಾಲತಾಣ ಪ್ರಕಟಿಸಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ (52 ವಾರ) ಎನ್​ಡಿಟಿವಿ ಷೇರು ಕನಿಷ್ಠ ₹ 71.70 ಮತ್ತು ಗರಿಷ್ಠ ₹ 388.20 ಮುಟ್ಟಿದೆ. ಇಂದು ಒಂದೇ ದಿನ ₹ 373.60ಯಿಂದ ₹ 388.20 ನಡುವೆ ಹೊಯ್ದಾಡಿತು. ಸದ್ಯಕ್ಕೆ ಎನ್​ಡಿಟಿವಿ ಷೇರು ಏರುಮುಖವಾಗಿಯೇ ಇದೆ. ಮುಂಬೈ ಷೇರುಪೇಟೆ (ಬಿಎಸ್​ಇ) ಮತ್ತು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ (ಎನ್​ಎಸ್​ಇ) ಬುಧವಾರ ಹೆಚ್ಚು ಏರಿಳಿತ ತೋರಲಿಲ್ಲ.

Published On - 4:05 pm, Wed, 24 August 22

ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ