
ನವದೆಹಲಿ, ಆಗಸ್ಟ್ 11: ಕೇಂದ್ರ ಸರ್ಕಾರ ವಿವಿಧ ತಿದ್ದುಪಡಿ ಮತ್ತು ಸಲಹೆಗಳನ್ನು ಸೇರಿಸಿ ರೂಪಿಸಿ ಮಂಡಿಸಲಾಗಿರುವ ಹೊಸ ಆದಾಯ ತೆರಿಗೆ ಮಸೂದೆಗೆ (Income tax bill) ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಈ ಹಿಂದೆ ಇದ್ದ ಆದಾಯ ತೆರಿಗೆ ಮಸೂದೆಯ ಬದಲು ಹೊಸ ಮಸೂದೆಯನ್ನು ರೂಪಿಸಲಾಗಿದೆ. 1961ರ ಆದಾಯ ತೆರಿಗೆ ಕಾಯ್ದೆಯ ಬದಲು ಇದು ಜಾರಿಗೆ ಬರುತ್ತದೆ. ಹೊಸ ಮಸೂದೆಯಲ್ಲಿ ಕ್ಲಿಷ್ಟಕರ ಕಾನೂನು ಪರಿಭಾಷೆಯನ್ನು ಸರಳಗೊಳಿಸಲಾಗಿದೆ. ಅನವಶ್ಯಕ ಕಾನೂನುಗಳನ್ನು ನಿವಾರಿಸಲಾಗಿದೆ.
ಮನೆ ಆಸ್ತಿಯಿಂದ ಬಂದ ಆದಾಯಕ್ಕೆ ಇರುವ ತೆರಿಗೆಗೆ ಸಂಬಂಧಿಸಿದ ಎರಡು ಪ್ರಮುಖ ಕಾನೂನುಗಳ ಬಗ್ಗೆ ಹೊಸ ಐಟಿ ಮಸೂದೆಯಲ್ಲಿ ಮಹತ್ವದ ಸ್ಪಷ್ಟೀಕರಣ ಕೊಡಲಾಗಿದೆ. ವಾಸಸ್ಥಳ ಆಸ್ತಿಯ ವಾರ್ಷಿಕ ಮೌಲ್ಯದಿಂದ ಶೇ. 30ರಷ್ಟು ಇರುವ ಸ್ಟ್ಯಾಂಡರ್ಡ್ ಡಿಡಕ್ಷನ್ ಸಂಬಂಧದ ಒಂದು ಕಾನೂನು. ಹಾಗೆಯೇ, ಮನೆ ನಿರ್ಮಾಣಕ್ಕೆ ತೆಗೆದುಕೊಳ್ಳಲಾದ ಹೋಮ್ ಲೋನ್ನಲ್ಲಿ ನಿರ್ಮಾಣಪೂರ್ವದ ಬಡ್ಡಿಗೆ ಟ್ಯಾಕ್ಸ್ ಡಿಡಕ್ಷನ್ ಲಭ್ಯತೆ ಸಂಬಂಧ ಮತ್ತೊಂದು ಕಾನೂನು ಬಗ್ಗೆ ಹೊಸ ಮಸೂದೆಯಲ್ಲಿ ವಿವರಣೆ ಕೊಡಲಾಗಿದೆ. ಈ ಹಿಂದಿನ ಮಸೂದೆಯಲ್ಲಿ ಈ ಎರಡು ಕಾನೂನುಗಳ ಬಗ್ಗೆ ಸರಿಯಾದ ವಿವರಣೆ ಇರಲಿಲ್ಲ.
ಇದನ್ನೂ ಓದಿ: ಗ್ರಾಹಕರ ಕ್ಲೇಮ್ ಸೆಟಲ್ಮೆಂಟ್: ಬ್ಯಾಂಕುಗಳಿಗೆ ಆರ್ಬಿಐ ಕರಡು ನಿಯಮಗಳಿವು…
ಹೊಸ ಆದಾಯ ತೆರಿಗೆ ಮಸೂದೆಯಲ್ಲಿನ 22ನೇ ಭಾಗದ 1ಎನಲ್ಲಿ ಈ ಬಗ್ಗೆ ಸ್ಪಷ್ಟತೆ ಕೊಡಲಾಗಿದೆ. ಮನೆ ಆಸ್ತಿಯಿಂದ ಬರುವ ವಾರ್ಷಿಕ ಆದಾಯಕ್ಕೆ ಪ್ರಾಪರ್ಟಿ ಟ್ಯಾಕ್ಸ್ ಮೊತ್ತವನ್ನು ಕಡಿಮೆ ಮಾಡಿದ ಬಳಿಕ ಉಳಿಯುವ ವಾರ್ಷಿಕ ಮೌಲ್ಯದ ಹಣಕ್ಕೆ ಶೇ. 30ರಷ್ಟು ಡಿಡಕ್ಷನ್ ಪಡೆಯಬಹುದು ಎಂದು ತಿಳಿಸಲಾಗಿದೆ.
22(2) ನಿಯಮವು ನಿರ್ಮಾಣಪೂರ್ವ ಬಡ್ಡಿ ವೆಚ್ಚಕ್ಕೆ ಡಿಡಕ್ಷನ್ ಅವಕಾಶ ಕೊಡುತ್ತದೆ. ಸ್ವಂತ ವಾಸಕ್ಕೆ ಹಾಗೂ ಬಾಡಿಗೆ ಕೊಟ್ಟ ವಾಸಸ್ಥಳಕ್ಕೆ ಈ ಡಿಡಕ್ಷನ್ ಲಭ್ಯ ಇರುತ್ತದೆ ಎಂದು ಈ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
ನಿಮ್ಮ ವಾಸಸ್ಥಳ ಕಟ್ಟಡದಿಂದ ವರ್ಷಕ್ಕೆ 2 ಲಕ್ಷ ರೂ ಬಾಡಿಗೆ ಆದಾಯ ಪಡೆಯುತ್ತೀರಿ ಎಂದಿಟ್ಟುಕೊಳ್ಳಿ. ಆ ಮನೆಗೆ ಪ್ರಾಪರ್ಟಿ ಟ್ಯಾಕ್ಸ್ 5,000 ರೂ ಕಟ್ಟಿರುತ್ತೀರಿ ಎಂದು ಭಾವಿಸೋಣ. ಈಗ ನಿಮ್ಮ ಬಾಡಿಗೆ ಆದಾಯ ಮೌಲ್ಯ 1,95,000 ರೂ ಆಗುತ್ತದೆ. ಇದಕ್ಕೆ ಶೇ. 30ರಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಲಭ್ಯ ಇರುತ್ತದೆ. ಈ ಮೇಲಿನ ಉಲ್ಲೇಖದಲ್ಲಿ ಅದು 58,500 ರೂ ಆಗುತ್ತದೆ.
ಇದನ್ನೂ ಓದಿ: ಮ್ಯುಚುವಲ್ ಫಂಡ್ ಕಂಪನಿಗಳು ಟ್ರಾನ್ಸಾಕ್ಷನ್ ಶುಲ್ಕ, ಕಮಿಷನ್ ಕೊಡಬೇಕಿಲ್ಲ: ಸೆಬಿ ಕ್ರಮ
ಮನೆಯ ಮೈಂಟೆನೆನ್ಸ್ ಇತ್ಯಾದಿ ವೆಚ್ಚಕ್ಕೆ ಈ ಡಿಡಕ್ಷನ್ ನೀಡಲಾಗುತ್ತದೆ. ಅಂದರೆ, 1,95,000 – 58,500 = 1,36,500 ರೂ ಆಗುತ್ತದೆ.
ನೀವು ಮನೆ ಮೇಲೆ ಸಾಲ ತೆಗೆದುಕೊಂಡಿದ್ದರೆ ಅದಕ್ಕೆ ಬಡ್ಡಿ ಮೊತ್ತವೇ ಒಂದು ವರ್ಷದಲ್ಲಿ 70,000 ರೂ ಆಗಿದ್ದರೆ ಆಗ ಅದನ್ನೂ ಕಳೆಯಬೇಕಾಗುತ್ತದೆ. ಅಂದರೆ, 1,36,500 – 70,0000 = 66,500. ನಿಮ್ಮ ಬಾಡಿಗೆ ಆದಾಯವು 2,00,000 ರೂ ಬದಲು 66,500 ರೂಗೆ ಇಳಿಯುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ