Govt Banks: ಸರ್ಕಾರಿ ಬ್ಯಾಂಕುಗಳ ಕಾರ್ಯಸಾಧನೆ ಹೇಗಿದೆ? ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರಿಂದ ಅವಲೋಕನ
Nirmala Sitharaman Chairs Meeting With PSBs: ವಿವಿಧ ಹಣಕಾಸು ಮಾನದಂಡಗಳ ವಿಚಾರದಲ್ಲಿ ಸರ್ಕಾರಿ ಬ್ಯಾಂಕುಗಳ ಕಾರ್ಯಸಾಧನೆ ಹೇಗಿದೆ ಎಂದು ಅವಲೋಕಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆ ನಡೆಸಿದ್ದಾರೆ.
ನವದೆಹಲಿ: ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ (Public Sector Banks) ಕಾರ್ಯಸಾಧನೆ ಹೇಗಿದೆ ಎಂದು ಪರಾಮರ್ಶಿಸಲು ಕೆಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 6ರಂದು ಸಭೆ ನಡೆಸಿದರು. ಮ್ಯಾಕ್ರೋ ಟ್ರೆಂಡ್ಗಳು ಹೇಗಿವೆ, ಬ್ಯುಸಿನೆಸ್ ಸೆಂಟಿಮೆಂಟ್ಗಳು ಎಷ್ಟು ಉತ್ತಮಗೊಂಡಿವೆ, ಟ್ವಿನ್ ಬ್ಯಾಲೆನ್ಸ್ ಶೀಟ್ ಅನುಕೂಲತೆ ಎಷ್ಟಿದೆ ಇವೇ ಮುಂತಾದ ಹಣಕಾಸು ಆರೋಗ್ಯ ಮಾನದಂಡಗಳ ವಿಚಾರದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು. ಹಣಕಾಸ ಸಚಿವೆಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 12 ಸರ್ಕಾರಿ ಬ್ಯಾಂಕುಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಪ್ರಾಧಿಕಾರದ ನಿಯಮಗಳಿಗೆ ಬದ್ಧವಾಗಿ ಬ್ಯಾಂಕುಗಳು ರಿಸ್ಕ್ ಮ್ಯಾನೇಜ್ಮೆಂಟ್ ಹಾಗೂ ವ್ಯವಹಾರ ಬ್ಯುಸಿನೆಸ್ ಬೇಸ್ ಹೆಚ್ಚಿಸಲು ಗಮನ ವಹಿಸಬೇಕು ಎಂದು ಈ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಸೂಚಿಸಿದರೆನ್ನಲಾಗಿದೆ.
ಜಾಗತಿಕ ಬ್ಯಾಂಕಿಂಗ್ ಸೆಕ್ಟರ್ ಬೆಳವಣಿಗೆಗಳು ಹಿನ್ನಡೆ ತರುತ್ತಿದ್ದರೂ ಭಾರತದಲ್ಲಿ ವ್ಯಾವಹಾರಿಕ ನೋಟ ಉತ್ತಮ ಸ್ಥಿತಿಯಲ್ಲಿದೆ. ಅದ್ಯತಾ ವಲಯಕ್ಕೆ ಕೊಡಲಾಗುವ ಸಾಲವು ನಿಗದಿತ ಗುರಿಯನ್ನು ಮೀರಿದೆ. ಸಣ್ಣ ಹಾಗೂ ಅತಿಸಣ್ಣ ರೈತರು, ಕಿರು ಉದ್ದಿಮೆಗಳೂ ಸೇರಿದಂತೆ ಉಪ ವಿಭಾಗಗಳಲ್ಲೂ ಈ ಸಾಲದ ಗುರಿ ಮುಟ್ಟಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರಿ ಬ್ಯಾಂಕ್ಗಳ ಮುಖ್ಯಸ್ಥರಿಗೆ ತಿಳಿಸಿದರು.
ಇದನ್ನೂ ಓದಿ: Digital Economy: ಡಿಜಿಟಲ್ ಇಂಡಿಯಾ ಏನು ಫಲಕೊಟ್ಟಿದೆ? ಡಿಜಿಟಲ್ ಎಕನಾಮಿ ಎಷ್ಟಿದೆ?; ಅಮೂಲಾಗ್ರ ಅಧ್ಯಯನಕ್ಕೆ ಸರ್ಕಾರ ಮುಂದು?
ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ ಸಾಲದ ಗುಣಮಟ್ಟ ಉತ್ತಮಗೊಂಡಿದೆ. ಒಟ್ಟು ಅನುತ್ಪಾದಕ ಸಾಲ (ಗ್ರಾಸ್ ಎನ್ಪಿಎ) ಶೇ. 4.97 ಇದೆ. ನಿವ್ವಳ ಎನ್ಪಿಎ ಶೇ. 1.24ಕ್ಕೆ ಇಳಿದಿದೆ. ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರಿ ಬ್ಯಾಂಕುಗಳು 1.05 ಲಕ್ಷ ಕೋಟಿ ರೂನಷ್ಟು ನಿವ್ವಳ ಲಾಭ ಪಡೆದಿದ್ದವು ಎಂಬ ಸಂಗತಿಯನ್ನು ಈ ಸಭೆಯ ಮುಂದಿಟ್ಟರು ಸಚಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ