
ನವದೆಹಲಿ, ಮಾರ್ಚ್ 21: ಸರ್ಕಾರದ ವಹಿವಾಟುಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಏಜೆನ್ಸಿ ಬ್ಯಾಂಕುಗಳೂ ಮಾರ್ಚ್ 31, ಭಾನುವಾರದಂದು ತೆರೆದಿರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ದೇಶನ ನೀಡಿದೆ. ಹಣಕಾಸು ವರ್ಷದ ಕೊನೆಯಲ್ಲಿ ಸರ್ಕಾರ ಎಲ್ಲಾ ಪಾವತಿ ಮತ್ತು ಸ್ವೀಕೃತಿಗಳ ಲೆಕ್ಕ ಕಲೆಹಾಕಬೇಕಾಗುತ್ತದೆ. ಹೀಗಾಗಿ, ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ಬ್ಯಾಂಕುಗಳು ಸರ್ಕಾರಕ್ಕೆ ವರ್ಷದ ಕೊನೆಯಲ್ಲಿ ದತ್ತಾಂಶ ಒದಗಿಸಬೇಕು. ಈ ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ 31 ಭಾನುವಾರ ಇದೆ. ಭಾನುವಾರ ಬ್ಯಾಂಕುಗಳಿಗೆ ಸಾರ್ವತ್ರಿಕ ರಜಾ ದಿನವಾದರೂ ಆವತ್ತು ತೆರೆದಿರಬೇಕಾಗುತ್ತದೆ.
ಸರ್ಕಾರದ ಪರವಾಗಿ ಅಥವಾ ಏಜೆಂಟ್ಗಳಾಗಿ ಬ್ಯಾಂಕಿಂಗ್ ಚಟುವಟಿಕೆ ನಡೆಸಲು ಕೆಲ ಬ್ಯಾಂಕುಗಳಿಗೆ ಅಧಿಕಾರ ನೀಡಲಾಗಿರುತ್ತದೆ. ಅಂಥ ಬ್ಯಾಂಕುಗಳನ್ನು ಏಜೆನ್ಸಿ ಬ್ಯಾಂಕುಗಳೆನ್ನಲಾಗುವುದು. ಸರ್ಕಾರದ ಪಾವತಿಗಳ ಹಂಚಿಕೆ, ತೆರಿಗೆ ಸಂಗ್ರಹ ಇತ್ಯಾದಿ ಕಾರ್ಯಗಳನ್ನು ಈ ಏಜೆನ್ಸಿ ಬ್ಯಾಂಕುಗಳು ಮಾಡುತ್ತವೆ. ಪಿಪಿಎಫ್ ಇತ್ಯಾದಿ ಸರ್ಕಾರಿ ಉಳಿತಾಯ ಯೋಜನೆಗಳನ್ನು ಈ ಬ್ಯಾಂಕುಗಳ ಮೂಲಕ ಮಾಡಲಾಗುತ್ತದೆ.
ಇದನ್ನೂ ಓದಿ: ಅಮೆರಿಕದ ಫೆಡ್ ರಿಸರ್ವ್ ಸಭೆ ಬಳಿಕ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ
ಇದನ್ನೂ ಓದಿ: ಮೈಕ್ರೋಸಾಫ್ಟ್ನ ಎಐ ವಿಭಾಗಕ್ಕೆ ಟ್ಯಾಕ್ಸಿ ಚಾಲಕನ ಮಗ ಮುಸ್ತಫಾ ಸಿಇಒ; ಎಐ ತಂತ್ರಜ್ಞಾನದ ನಿಪುಣ ಈತ
ಆದಾಯ ತೆರಿಗೆ ಇಲಾಖೆ ಕೂಡ ವರ್ಷದ ಕೊನೆಯ ಮೂರು ದಿನಗಳಂದು ರಜೆಗಳನ್ನು ರದ್ದು ಮಾಡಿದೆ. ಮಾರ್ಚ್ 29ರಿಂದ 31ರವರೆಗೆ ದೇಶಾದ್ಯಂತ ಎಲ್ಲಾ ಆದಾಯ ತೆರಿಗೆ ಕಚೇರಿಗಳು ತೆರೆದಿರುತ್ತವೆ. ಮಾರ್ಚ್ 29 ಶುಕ್ರವಾರ ಮತ್ತು ಮಾರ್ಚ್ 31, ಭಾನುವಾರ ಸಾರ್ವತ್ರಿಕ ರಜೆಗಳಿವೆ. ಆದರೆ, ಈ ಎರಡೂ ದಿನಗಳ ರಜೆಯನ್ನು ರದ್ದು ಮಾಡಲಾಗಿದೆ. ಮಾರ್ಚ್ 26ರಿಂದ 31ರವರೆಗೆ ಐಟಿ ಕಚೇರಿಗಳಿಗೆ ರಜೆ ಇರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ