ಯುಎಸ್ ಮತ್ತು ಯುರೋಪಿಯನ್ನಂತಹ ಮಾರುಕಟ್ಟೆಗಳಲ್ಲಿ 5G ಮಾರಾಟ ನಿಧಾನಗೊಂಡ ಕಾರಣ ಹಾಗೂ ಮೊಬೈಲ್ ಮೂಲಸೌಕರ್ಯದಲ್ಲಿ ಹೂಡಿಕೆ ಕಡಿಮೆಯಾದ ಕಾರಣ ವೆಚ್ಚ ಕಡಿಮೆ ಮಾಡಲು ಮತ್ತು ಉಳಿತಾಯವನ್ನು ಹೆಚ್ಚಿಸಲು ನೋಕಿಯಾ (Nokia Layoff) ತನ್ನ 14 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಸಿಬ್ಬಂದಿ ವೆಚ್ಚದಲ್ಲಿ 10% ರಿಂದ 15% ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ನೋಕಿಯಾ ತನ್ನ ಮುಂದಿನ ಅಂದರೆ 2024, 2025ರಲ್ಲಿ ಎಷ್ಟು ಉಳಿತಾಯ ಮಾಡಬೇಕು ಎಂಬುದನ್ನು ಲೆಕ್ಕಚಾರ ಹಾಕಿಕೊಂಡಿದೆ. ಈ ಕಾರಣಕ್ಕೆ ಈಗಿನಿಂದಲೇ ಉಳಿತಾಯಕ್ಕಾಗಿ ಉದ್ಯೋಗಿಗಳ ವಜಾದ ನಿರ್ಧಾರವನ್ನು ತೆಗೆದುಕೊಂಡಿದೆ.
ಮುಂದಿನ ವರ್ಷ € 400 ಮಿಲಿಯನ್ (₹ 33,30,61,60,000.00) ಮತ್ತು 2025 ರಲ್ಲಿ ಹೆಚ್ಚುವರಿ €300 ಮಿಲಿಯನ್ (₹ 24,97,94,70,000) ಉಳಿತಾಯ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದೆ. ನೋಕಿಯಾದ ವರದಿ ವಿಭಿನ್ನ ಮಾಹಿತಿಯನ್ನು ನೀಡಿದೆ. ಒಂದು ವರದಿಯಲ್ಲಿ ಮೂರನೇ ತ್ರೈಮಾಸಿಕದಲ್ಲಿ ಹೊಂದಾಣಿಕೆಯ ಕಾರ್ಯಾಚರಣೆಯ ಲಾಭವು €424 ಮಿಲಿಯನ್ (₹ 35,30,43,17,600.00) ಆಗಿತ್ತು. ಆದರೆ ಬ್ಲೂಮ್‌ಬರ್ಗ್ ಸಮೀಕ್ಷೆಯ ಪ್ರಕಾರ 545.2 ಮಿಲಿಯನ್‌ಗೆ (₹ 45,39,60,23,480.00) ಹೋಲಿಸುತ್ತದೆ.
ನಾವು 2023ರ ನಿವ್ವಳ ಮಾರಾಟ ಶ್ರೇಣಿಯಲ್ಲಿ ತುಂಬಾ ಕೆಳ ಹಂತದಲ್ಲಿದ್ದೇವೆ. ಇದನ್ನು ಹೇಗಾದರು ಮಾರ್ಜಿನ್ ಶ್ರೇಣಿಗೆ ತರಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೆಕ್ಕಾ ಲುಂಡ್‌ಮಾರ್ಕ್ ತಿಳಿಸಿದ್ದಾರೆ. ಕಂಪನಿಯು ಈ ಬಗ್ಗೆ ಜುಲೈನಲ್ಲಿ ಡೌನ್‌ಗ್ರೇಡ್ ವಿಚಾರಣೆ ನಡೆಸಿತ್ತು. ಜತೆಗೆ ಈ ಬಗ್ಗೆ ವರದಿಯನ್ನು ಕೂಡ ನೀಡಿತ್ತು. ಇದರ ಪ್ರಕಾರ ಕಂಪನಿಯು ತುಂಬಾ ಲಾಭದಾಯಕವಾಗಿಲ್ಲ ಹಾಗೂ ಮುಂದಿನ ಎರಡು ವರ್ಷಗಳಿಗೆ ಅಗತ್ಯವಾಗಿ ಉಳಿತಾಯ ಮಾಡಬೇಕಿದೆ. ಇದಕ್ಕಾಗಿ ಉಳಿತಾಯ ಕಡೆ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಗಮನ ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಉದ್ಯೋಗಕಡಿತಕ್ಕೆ ನಿರ್ಧರಿಸಿದ ಶಿಯೋಮಿ; 3ನೇ ಸ್ಥಾನಕ್ಕೆ ಬಿದ್ದಿದ್ದಕ್ಕೆ ತಲೆದಂಡವಾ?
US ಮತ್ತು ಯುರೋಪಿಯನ್ನ ಮಾರುಕಟ್ಟೆಗಳ ನಿರ್ವಾಹಕರ ಬಂಡವಾಳ ವೆಚ್ಚವನ್ನು ಕಡಿಮೆ ಮಾಡಲು ಹಾಗೂ ದಾಸ್ತಾನುಗಳನ್ನು ಸರಿಹೊಂದಿಸಲು 5G ಉಪಕರಣಗಳ ತಯಾರಕರು ಹೆಣಗಾಡುತ್ತಿದ್ದಾರೆ. ನಮ್ಮ ಪ್ರತಿಸ್ಪರ್ಧಿಗಳು ಮುಂದೆ ಹೋಗುತ್ತಿದ್ದಾರೆ. ಈ ಕಾರಣಕ್ಕೆ ನಮ್ಮ ವೆಚ್ಚ ಕಡಿಮೆ ಆಗಬೇಕಿದೆ. ಜತೆಗೆ ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕಿದೆ ಎಂದು ನೋಕಿಯಾ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:44 am, Thu, 19 October 23