ಸ್ಮಾರ್ಟ್​​ಫೋನ್ ಪ್ರಿಯರ ಹುಚ್ಚು ಹಿಡಿಸಿದೆ Nothing Phone (1): ಫಸ್ಟ್​ ಲುಕ್ ರಿಲೀಸ್

ಈ ಹೊಸ ಸ್ಮಾರ್ಟ್‌ಫೋನ್ ಆಪಲ್‌ ಐಫೋನ್‌ ಜತೆಗೆ ಸ್ಪರ್ಧಿಸಲಿದೆ ಎಂದು ಸ್ವತ: ಕಾರ್ಲ್‌ ಹೇಳಿದ್ದಾರೆ. ಚೈನೀಸ್ ಮೂಲದ ಸ್ವೀಡಿಷ್ ಇಂಟರ್ನೆಟ್ ಉದ್ಯಮಿ ಕಾರ್ಲ್ 2013 ರಲ್ಲಿ ಪೀಟ್ ಲಾವ್ ಜೊತೆಗೆ ಒನ್‌ಪ್ಲಸ್ ಕಂಪನಿ ಆರಂಭಿಸಿದ್ದರು ಮತ್ತು ಒನ್‌ಪ್ಲಸ್‌ನ ಗ್ಲೋಬಲ್ ನಿರ್ದೇಶಕರಾಗಿದ್ದರು. ಆದರೆ, ಸೆಪ್ಟೆಂಬರ್ 2020 ರಲ್ಲಿ ಸಂಸ್ಥೆಯನ್ನು ತೊರೆದು “ನಥಿಂಗ್” ಎಂಬ ಹೊಸ ಹಾರ್ಡ್‌ವೇರ್ ಉದ್ಯಮವನ್ನು ಪ್ರಾರಂಭಿಸಿದ್ದರು. ಇದೀಗ ಹೊಸ ಫೋನನ್ನೇ ಬಿಡುಗಡೆ ಮಾಡಲ ಹೊರಟಿದ್ದಾರೆ.

ಸ್ಮಾರ್ಟ್​​ಫೋನ್ ಪ್ರಿಯರ ಹುಚ್ಚು ಹಿಡಿಸಿದೆ Nothing Phone (1): ಫಸ್ಟ್​ ಲುಕ್ ರಿಲೀಸ್
Nothing Phone (1)
Edited By:

Updated on: Oct 08, 2026 | 12:54 PM

ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿರುವ ಐಫೋನ್, ಶವೋಮಿ (Xiaomi), ಸ್ಯಾಮ್​ಸಂಗ್ ನಂತಹ ಪ್ರಸಿದ್ಧ ಬ್ರ್ಯಾಂಡ್​ಗಳಿಗೆ ಈಗ ನಡುಕ ಶುರುವಾಗಿದೆ. ಇದಕ್ಕೆ ಕಾರಣ ನಥಿಂಗ್. ಹೌದು, ಒನ್‍ ಪ್ಲಸ್‍ (OnePlus) ಕಂಪನಿಯ ಸಹಸ್ಥಾಪಕ ಕಾರ್ಲ್‍ ಪೇ ಒಡೆತನದ ನಥಿಂಗ್‍ ಕಂಪನಿ ತನ್ನ ಮೊಟ್ಟ ಮೊದಲ ಸ್ಮಾರ್ಟ್​​ಫೋನ್‍ ನಥಿಂಗ್ ಫೋನ್ 1 (Nothing Phone 1) ಅನ್ನು ಹೊರತರುತ್ತಿದ್ದು, ಫೋನ್‍ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದೀಗ ಈ ಫೋನಿನ ಬಿಡುಗಡ ದಿನಾಂಕ ಕೂಡ ಬಹಿರಂಗವಾಗಿದೆ. ಮುಂದಿನ ತಿಂಗಳು ಜುಲೈ 12 ರಂದು ರಾತ್ರಿ 8:30ಕ್ಕೆ ಈ ಸ್ಮಾರ್ಟ್​​ಫೋನ್ ಜಾಗತೀಕ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನಿನ ಫಸ್ಟ್ ಲುಕ್ ಇದೀಗ ಹೊರಬಿದ್ದಿದೆ. ಇದರ ವಿನ್ಯಾಸವು ಅರೆ-ಪಾರದರ್ಶಕವಿರುವ ಬಿಳಿ-ಬಣ್ಣದ ಹಿಂಭಾಗದ ಪ್ಯಾನೆಲ್, ಫ್ಲಾಟ್ ಎಡ್ಜ್ಜ ಅಂಚುಗಳು ಮತ್ತು ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ವೈಶಿಷ್ಟ್ಯಗಳನ್ನು ಹೊಂದಿರುವುದನ್ನು ತೋರಿಸುತ್ತಿದೆ.

ಈ ಹೊಸ ಸ್ಮಾರ್ಟ್‌ಫೋನ್ ಆಪಲ್‌ ಐಫೋನ್‌ ಜತೆಗೆ ಸ್ಪರ್ಧಿಸಲಿದೆ ಎಂದು ಸ್ವತ: ಕಾರ್ಲ್‌ ಹೇಳಿದ್ದಾರೆ. ಚೈನೀಸ್ ಮೂಲದ ಸ್ವೀಡಿಷ್ ಇಂಟರ್ನೆಟ್ ಉದ್ಯಮಿ ಕಾರ್ಲ್ 2013 ರಲ್ಲಿ ಪೀಟ್ ಲಾವ್ ಜೊತೆಗೆ ಒನ್‌ಪ್ಲಸ್ ಕಂಪನಿ ಆರಂಭಿಸಿದ್ದರು ಮತ್ತು ಒನ್‌ಪ್ಲಸ್‌ನ ಗ್ಲೋಬಲ್ ನಿರ್ದೇಶಕರಾಗಿದ್ದರು. ಆದರೆ, ಸೆಪ್ಟೆಂಬರ್ 2020 ರಲ್ಲಿ ಸಂಸ್ಥೆಯನ್ನು ತೊರೆದು “ನಥಿಂಗ್” ಎಂಬ ಹೊಸ ಹಾರ್ಡ್‌ವೇರ್ ಉದ್ಯಮವನ್ನು ಪ್ರಾರಂಭಿಸಿದ್ದರು. ಇದೀಗ ಹೊಸ ಫೋನನ್ನೇ ಬಿಡುಗಡೆ ಮಾಡಲ ಹೊರಟಿದ್ದಾರೆ.

ಇನ್ನು ನಥಿಂಗ್ ಫೋನ್ (1) ಬಿಡುಗಡೆಯಾದರೆ ಅದು ಒನ್‌ಪ್ಲಸ್‌ನೊಂದಿಗೆ ಸ್ಪರ್ಧಿಸಲಿದೆ ಎಂಬ ವದಂತಿಗಳಿಗೆ ಬ್ರೇಕ್‌ ಹಾಕಿರುವ ಕಾರ್ಲ್ ಹೊಸ ಫೋನ್‌ ಆಪಲ್‌ ಸಾಧನಗಳೊಂದಿಗೆ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಐಫೋನ್ ನೊಂದಿಗೆ ಸ್ಪರ್ಧಿಸಲು ನೋಡುತ್ತಿರುವ ಕಾರಣ, Nothing Phone 1 ಸ್ಮಾರ್ಟ್‌ಫೋನ್ ಬೆಲೆಯ ದುಬಾರಿಯಾಗಬಹುದು ಎಂದು ಹೇಳಲಾಗಿದೆ. ಆದರೆ, ಇಲ್ಲಿಯವರೆಗೆ ಇದರ ಬೆಲೆಯ ಬಗ್ಗೆ ಯಾವುದೇ ವದಂತಿಗಳಿಲ್ಲ.

ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು ಆಂಡ್ರಾಯ್ಡ್ ಫೋನ್‍ ಆಗಿದ್ದು, ನಥಿಂಗ್‍ ಆಪರೇಟಿಂಗ್‍ ಸಿಸ್ಟಂ (ಓಎಸ್‍) ಹೊಂದಿರುತ್ತದೆ. ತನ್ನದೇ ಆದ ಹೊಸ ರೀತಿಯ ವಿನ್ಯಾಸ ಹೊಂದಿರಲಿದೆ. ಅಂದರೆ ನಥಿಂಗ್‍ ಇಯರ್ ಬಡ್‍ ರೀತಿ ಪಾರದರ್ಶಕ ವಿನ್ಯಾಸ ಹೊಂದಿರಲಿದೆ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್‍ ಪ್ರಿಯರು ಬಯಸುವ ಕ್ವಾಲ್‍ ಕಾಂ ಸ್ನಾಪ್‍ ಡ್ರಾಗನ್‍ ಪ್ರೊಸೆಸರ್ ಹೊಂದಿರುತ್ತದೆ. ನಥಿಂಗ್‍ಗೆ ಕ್ವಾಲ್‍ ಕಾಂ ಕೂಡ ಹೂಡಿಕೆದಾರ ಎಂಬುದು ವಿಶೇಷ.

ಅಂತೆಯೆ ನಥಿಂಗ್ ಫೋನ್ (1) 4500mAh ಬ್ಯಾಟರಿಯನ್ನು ಬಳಸುವ ಸಾಧ್ಯತೆಯಿದೆ ಆದರೆ ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಇರುತ್ತದೆಯೇ ಅಥವಾ ಇಲ್ಲವೇ ಎಂಬ ವಿವರಗಳು ಸ್ಪಷ್ಟವಾಗಿಲ್ಲ. ಕ್ಯಾಮೆರಾಗಳು 50-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 8-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ತೃತೀಯ ಸಂವೇದಕವನ್ನು ಒಳಗೊಂಡಿರುವ ಸಾಧ್ಯತೆಯಿದೆ. ಮುಂಭಾಗದಲ್ಲಿ, ನಥಿಂಗ್ ಫೋನ್ (1) ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುವ ಸಾಧ್ಯತೆಯಿದೆ.

“ನಥಿಂಗ್ ಓಎಸ್ ಶುದ್ಧ ಆಂಡ್ರಾಯ್ಡ್‌ನ ಉತ್ತಮ ವೈಶಿಷ್ಟ್ಯಗಳಳೊಂದಿಗೆ, ಆಪರೇಟಿಂಗ್ ಸಿಸ್ಟಮನ್ನು ಕೇವಲ ಅಗತ್ಯಗಳಿಗಣುಸಾರವಾಗಿ ಬಳಸುತ್ತದೆ, ಅಲ್ಲಿ ಪ್ರತಿ ಬೈಟ್‌ಗೆ ಒಂದು ಉದ್ದೇಶವಿದೆ. ಇದು ವೇಗದ, ಸುಗಮ ಮತ್ತು ವೈಯಕ್ತಿಕ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಒಂದು ಸುಸಂಬದ್ಧ ಇಂಟರ್ಫೇಸ್, ಹಾರ್ಡ್‌ವೇರ್ ಬೆಸ್ಪೋಕ್ ಫಾಂಟ್‌ಗಳು, ಬಣ್ಣಗಳು, ಚಿತ್ರಾತ್ಮಕ ಅಂಶಗಳು ಮತ್ತು ಧ್ವನಿಗಳ ಮೂಲಕ ಸಾಫ್ಟ್‌ವೇರ್‌ನೊಂದಿಗೆ  ಸಂಯೋಜಿಸುತ್ತದೆ,” ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

 

Published On - 6:55 am, Sat, 18 June 22

TV9 Web

TV9 Kannada

Read More
Loading...
Unable to load recommendations.
Follow Us