Infosys: ಇನ್ಫೋಸಿಸ್ ಮುಂದಿನ ಅಧ್ಯಕ್ಷರು ಸ್ಥಾಪಕೇತರ ಸದಸ್ಯರು; ನಂದನ್ ನೀಲೇಕಣಿ

ಒಂದು ಕೆಲಸಕ್ಕೆ ಅರ್ಹ ವ್ಯಕ್ತ ಎಂದಾದಲ್ಲಿ ಅಂಥ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶ ದೊರೆಯಬೇಕು. ಪ್ರತಿಭೆ ಮತ್ತು ಸ್ಪರ್ಧಾತ್ಮಕತೆ ಎಲ್ಲದಕ್ಕಿಂತಲೂ ಮಿಗಿಲಾದುದು ಎಂದು ನಾರಾಯಣಮೂರ್ತಿ ಹೇಳಿದ್ದರು.

Infosys: ಇನ್ಫೋಸಿಸ್ ಮುಂದಿನ ಅಧ್ಯಕ್ಷರು ಸ್ಥಾಪಕೇತರ ಸದಸ್ಯರು; ನಂದನ್ ನೀಲೇಕಣಿ
ಇನ್ಫೋಸಿಸ್
Follow us
| Updated By: ಗಣಪತಿ ಶರ್ಮ

Updated on:Dec 15, 2022 | 11:59 AM

ನವದೆಹಲಿ: ಐಟಿ ಕಂಪನಿ ಇನ್ಫೋಸಿಸ್​​ (Infosys) ನಿರ್ದೇಶಕರ ಮಂಡಳಿಗೆ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗುವವರು ಸ್ಥಾಪಕೇತರ ಸದಸ್ಯರಾಗಿರಲಿದ್ದಾರೆ ಎಂದು ಕಂಪನಿಯ ಅಧ್ಯಕ್ಷ, ಸಹ ಸಂಸ್ಥಾಪಕರಲ್ಲೊಬ್ಬರಾಗಿರುವ ನಂದನ್ ನೀಲೇಕಣಿ (Nandan Nilekani) ತಿಳಿಸಿದ್ದಾರೆ. ಉತ್ತಮ ವ್ಯಕ್ತಿಗಳಾಗಿದ್ದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರೆಯಬೇಕು ಎಂದು ಕಂಪನಿಯ ಸ್ಥಾಪಕ ಎನ್​.ಆರ್. ನಾರಾಯಣಮೂರ್ತಿ (NR Narayana Murthy) ಹೇಳಿಕೆ ನೀಡಿದ ಬೆನ್ನಲ್ಲೇ ನೀಲೇಕಣಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಬೆಂಗಳೂರಿನಲ್ಲಿರುವ ಇನ್ಫೋಸಿಸ್ ಪ್ರಧಾನ ಕಚೇರಿಯಲ್ಲಿ ಸ್ಥಾಪಕರ ಸಮಿತಿ ಉದ್ದೇಶಿಸಿ ಮಾತನಾಡುವ ವೇಳೆ ನೀಲೇಕಣಿ ಈ ವಿಚಾರ ತಿಳಿಸಿದ್ದಾರೆ.

ಇನ್ಫೋಸಿಸ್ ಸ್ಥಾಪಕರ ಮತ್ತು ಪ್ರವರ್ತಕರ ಮುಂದಿನ ಪೀಳಿಗೆಗೆ ಅವಕಾಶ ನೀಡದಿರುವುದು ತಪ್ಪೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಾರಾಯಣ ಮೂರ್ತಿ, ಉತ್ತಮ ವ್ಯಕ್ತಿಗಳಾಗಿದ್ದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರೆಯಬೇಕು ಎಂದು ಹೇಳಿದ್ದರು.

ತಾವು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟರೆ ಮುಂದೇನು ಎಂಬುದಕ್ಕೆ ಪ್ಲಾನ್ ಬಿ ಸಿದ್ಧಪಡಿಸಿಲ್ಲ. ಮುಂದಿನ ಅಧ್ಯಕ್ಷರು ಸ್ಥಾಪಕೇತರ ಸದಸ್ಯರಾಗಿರಲಿದ್ದಾರೆ. ಅಗತ್ಯಕ್ಕಿಂತಲೂ ಹೆಚ್ಚು ಕಾಲ ಅಧ್ಯಕ್ಷನಾಗಿ ಮುಂದುವರಿಯುವುದಿಲ್ಲ ಎಂದು ನೀಲೇಕಣಿ ತಿಳಿಸಿರುವುದಾಗಿ ‘ಲೈವ್​ಮಿಂಟ್ ಡಾಟ್​ಕಾಂ’ ವರದಿ ಮಾಡಿದೆ.

ಇದನ್ನೂ ಓದಿ: Infosys: ಉದ್ಯೋಗಿಗಳನ್ನೆಲ್ಲ ಕಚೇರಿಗೆ ಕರೆಸಿಕೊಳ್ಳಲು ಸಿದ್ಧವಾಗುತ್ತಿದೆ ಇನ್ಫೋಸಿಸ್; ವರದಿ

ಇನ್ಫೋಸಿಸ್ ಮಂಡಳಿ ಈ ಹಿಂದೆಲ್ಲಾ ಸ್ಥಾಪಕ ಸದಸ್ಯರನ್ನೇ ಅಧ್ಯಕರನ್ನಾಗಿ ಆಯ್ಕೆ ಮಾಡುತ್ತಾ ಬಂದಿತ್ತು. ನೀಲೇಕಣಿ ಇನ್ಫೋಸಿಸ್​ಗೆ ಮರಳಿದ ಬಳಿಕ ಸಹ ಅಧ್ಯಕ್ಷರ ಸ್ಥಾನದಲ್ಲಿ ಬದಲಾವಣೆ ಮಾಡಿದ್ದರು.

ನೀಲೇಕಣಿ 2009ರ ಜುಲೈನಲ್ಲಿ ಇನ್ಫೋಸಿಸ್​ ಸಹ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು. ಕೇಂದ್ರ ಸರ್ಕಾರದ ಆಧಾರ್ ಗುರಿತಿನಚೀಟಿ ಯೋಜನೆಗಾಗಿ ಅವರು ಇನ್ಫೋಸಿಸ್ ಸಹ ಅಧ್ಯಕ್ಷ ಸ್ಥಾನ ತೊರೆದಿದ್ದರು. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಅಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದರು.

ಇನ್ಫೋಸಿಸ್ ವಾರ್ಷಿಕ ಆದಾಯ 22ನೇ ಹಣಕಾಸು ವರ್ಷದಲ್ಲಿ 1.24 ಟ್ರಿಲಿಯನ್ ರೂ. ಆಗಿದೆ.

ನಾರಾಯಣಮೂರ್ತಿ ಹೇಳಿದ್ದೇನು?

ಇನ್ಫೋಸಿಸ್​ 40 ವರ್ಷ ಪೂರೈಸಿರುವ ಸಂದರ್ಭದಲ್ಲಿ ಮಾತನಾಡಿದ ನಾರಾಯಣಮೂರ್ತಿ, ಒಂದು ಕೆಲಸಕ್ಕೆ ಅರ್ಹ ಎಂದಾದಲ್ಲಿ ಅಂಥ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶ ದೊರೆಯಬೇಕು. ಅರ್ಹರಲ್ಲದವರಿಗೆ ಪ್ರಮುಖ ನಿರ್ವಹಣಾ ಹುದ್ದೆ ದೊರೆತರೆ ಎಂಬ ಭೀತಿ ನನಗೆ ಈ ಹಿಂದೆ ಇತ್ತು. ಆದರೆ ಪ್ರತಿಭೆ ಮತ್ತು ಸ್ಪರ್ಧಾತ್ಮಕತೆ ಎಲ್ಲದಕ್ಕಿಂತಲೂ ಮಿಗಿಲಾದುದು ಎಂದು ಹೇಳಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:12 am, Thu, 15 December 22