
ನವದೆಹಲಿ, ಜೂನ್ 11: ಅನಿವಾಸಿ ಭಾರತೀಯರಿಂದ (NRI) ಅವರ ದೇಶಗಳ ಕರೆನ್ಸಿಯನ್ನು ಆಕರ್ಷಿಸುವ ಸಲುವಾಗಿ ಆರ್‌ಬಿಐ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಿದ ಬೆನ್ನಲ್ಲೇ ಭಾರತದ ಹಲವು ಬ್ಯಾಂಕುಗಳು ಎನ್‌ಆರ್‌ಐ ಠೇವಣಿಗಳ (FCNR-B) ದರಗಳನ್ನು ಗಣನೀಯವಾಗಿ ಹೆಚ್ಚಿಸತೊಡಗಿವೆ. ಸರ್ಕಾರಿ ಸ್ವಾಮ್ಯದ ಎಸ್ಬಿಐನಿಂದ ಹಿಡಿದು ಖಾಸಗಿಯ ಯೆಸ್ ಬ್ಯಾಂಕ್ವರೆಗೆ ಹಲವು ಬ್ಯಾಂಕುಗಳು ವಿದೇಶೀ ಕರೆನ್ಸಿಗಳ ಠೇವಣಿ ದರಗಳನ್ನು ಏರಿಸಿವೆ. ಕೆಲ ಠೇವಣಿಗಳಿಗೆ ಶೇ. 7.1ರವರೆಗೂ ಬಡ್ಡಿ ಆಫರ್ ಮಾಡಲಾಗಿದೆ.
ಯೆಸ್ ಬ್ಯಾಂಕ್ (Yes Bank) ತನ್ನ ವಿದೇಶಿ ಕರೆನ್ಸಿ ಅನಿವಾಸಿ (FCNR-B) ಠೇವಣಿಗಳ ಮೇಲಿನ ಬಡ್ಡಿದರವನ್ನು ಗಣನೀಯವಾಗಿ ಹೆಚ್ಚಿಸಿದೆ. ಗರಿಷ್ಠ ಶೇ. 6.6 ರವರೆಗೆ ಬಡ್ಡಿದರವನ್ನು ಆಫರ್ ಮಾಡುತ್ತಿದೆ. ಅದರ ಹೊಸ ದರಗಳು ಈ ಕೆಳಗಿನಂತಿವೆ:
ಇದನ್ನೂ ಓದಿ: ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷದ ಡೆಪಾಸಿಟ್ಗಳಿಗೆ ಬಡ್ಡಿದರವನ್ನು ಶೇ. 7.1ಕ್ಕೆ ಏರಿಸಿದೆ. ಐದು ವರ್ಷದ ಡೆಪಾಸಿಟ್ಗೆ ಬಡ್ಡಿದರ ಶೇ. 7 ನಿಗದಿ ಮಾಡಿದೆ.
ಇನ್ನು, ಎಚ್ಡಿಎಫ್ಸಿ ಬ್ಯಾಂಕ್ ತನ್ನ ಎನ್‌ಆರ್‌ಐ ಗ್ರಾಹಕರ ಡೆಪಾಸಿಟ್ಗಳಿಗೆ ಶೇ. 6 ಬಡ್ಡಿ ಆಫರ್ ಮಾಡುತ್ತಿದೆ. ಇತರ ಹಲವು ಬ್ಯಾಂಕುಗಳು ಕೂಡ ತಮ್ಮ ಠೇವಣಿ ದರಗಳನ್ನು ಹೆಚ್ಚಿಸಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ಅನಿವಾಸಿ ಭಾರತೀಯ ಹೂಡಿಕೆದಾರರನ್ನು ಆಕರ್ಷಿಸಲು ಕೆಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಎಫ್‌ಸಿಎನ್‌ಆರ್ (FCNR) ಠೇವಣಿಗಳ ಮೇಲಿನ ಹೆಡ್ಜಿಂಗ್ ವೆಚ್ಚವನ್ನು (ವಿದೇಶಿ ಕರೆನ್ಸಿ ವಿನಿಮಯ ದರ ಏರಿಳಿತದ ಅಪಾಯದ ವೆಚ್ಚ) ಆರ್‌ಬಿಐ ಭರಿಸುವ ನಿರ್ಧಾರವೂ ಸೇರಿದೆ. ಇದರಿಂದಾಗಿ ಬ್ಯಾಂಕುಗಳಿಗೆ ಆಗುವ ವೆಚ್ಚ ಕಡಿಮೆಯಾಗಿದ್ದು, ಆ ಲಾಭವನ್ನು ಬ್ಯಾಂಕುಗಳು ಹೆಚ್ಚಿನ ಬಡ್ಡಿಯ ರೂಪದಲ್ಲಿ ಎನ್‌ಆರ್‌ಐ ಗ್ರಾಹಕರಿಗೆ ವರ್ಗಾಯಿಸುತ್ತಿವೆ.
ಇದನ್ನೂ ಓದಿ: ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ
ಆರ್ಬಿಐನ ಈ ಕ್ರಮದಿಂದ ದೇಶದ ಫಾರೆಕ್ಸ್ ಮಾರುಕಟ್ಟೆಗೂ ಅನುಕೂಲವಾಗುತ್ತದೆ. ಬಹಳ ಮುಖ್ಯವಾದ ವಿದೇಶಿ ಕರೆನ್ಸಿ ಸಂಪತ್ತು ಸಂಗ್ರಹ ಹೆಚ್ಚುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ