AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI Payment: ಈ ಹತ್ತು ದೇಶಗಳಲ್ಲಿರುವ ಅನಿವಾಸಿ ಭಾರತೀಯರಿಗೂ ಸಿಗಲಿದೆ ಯುಪಿಐ ಪಾವತಿ ಸೌಲಭ್ಯ; ಇಲ್ಲಿದೆ ಪಟ್ಟಿ

ಪ್ರಾಯೋಗಿಕವಾಗಿ 10 ದೇಶಗಳಲ್ಲಿ ಅನಿವಾಸಿ ಭಾರತೀಯರಿಗೆ ಯುಪಿಐ ಸೌಲಭ್ಯ ಒದಗಿಸಲಾಗುತ್ತದೆ ಎಂದು ಎನ್​ಸಿಪಿಐ ಹೇಳಿದೆ. 10 ದೇಶಗಳ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಗಳಲ್ಲಿ ಯುಪಿಐ ಸೌಲಭ್ಯ ದೊರೆಯಲಿದೆ.

UPI Payment: ಈ ಹತ್ತು ದೇಶಗಳಲ್ಲಿರುವ ಅನಿವಾಸಿ ಭಾರತೀಯರಿಗೂ ಸಿಗಲಿದೆ ಯುಪಿಐ ಪಾವತಿ ಸೌಲಭ್ಯ; ಇಲ್ಲಿದೆ ಪಟ್ಟಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Jan 12, 2023 | 11:19 AM

ನವದೆಹಲಿ: ದೇಶದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಭಾರಿ ಯಶಸ್ಸು ಕಾಣುತ್ತಿರುವ ಯುಪಿಐ ಪಾವತಿ ವ್ಯವಸ್ಥೆ (UPI Payment) ಸೌಲಭ್ಯ ಇನ್ನು ಮುಂದೆ ಅನಿವಾಸಿ ಭಾರತೀಯರಿಗೂ (NRI) ಸಿಗಲಿದೆ. 10 ದೇಶಗಳಲ್ಲಿರುವ ಅನಿವಾಸಿ ಭಾರತೀಯರಿಗೆ ಯುಪಿಐ ಪಾವತಿ ಸೌಲಭ್ಯ ದೊರೆಯಲಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ (NCPI) ತಿಳಿಸಿದೆ. ನಾನ್ ರೆಸಿಡೆಂಟ್ ರುಪೀ (NRE) ಅಥವಾ ನಾನ್ ರೆಸಿಡೆನ್ಸ್ ಆರ್ಡಿನರಿ (NRO) ಬ್ಯಾಂಕ್ ಖಾತೆಗಳ ಮೂಲಕ ಅನಿವಾಸಿ ಭಾರತೀಯರು ಯುಪಿಐ ಪಾವತಿ ಸೌಲಭ್ಯ ಪಡೆಯಬಹುದಾಗಿದೆ ಎಂದು ಎನ್​​ಸಿಪಿಐ ಹೇಳಿದೆ. ಭಾರತೀಯ ಮೊಬೈಲ್ ಸಂಖ್ಯೆ ಪಡೆಯದೆಯೇ ಅನಿವಾಸಿ ಭಾರತೀಯರಿಗೆ ಯುಪಿಐ ಪಾವತಿ ಸೌಲಭ್ಯ ಏಪ್ರಿಲ್ 30ರ ವೇಳೆಗೆ ದೊರೆಯಲಿದೆ ಎಂದು ಈ ಹಿಂದೆ ಎನ್​ಸಿಪಿಐ ಹೇಳಿತ್ತು.

ಪ್ರಾಯೋಗಿಕವಾಗಿ 10 ದೇಶಗಳಲ್ಲಿ ಅನಿವಾಸಿ ಭಾರತೀಯರಿಗೆ ಯುಪಿಐ ಸೌಲಭ್ಯ ಒದಗಿಸಲಾಗುತ್ತದೆ ಎಂದು ಎನ್​ಸಿಪಿಐ ಹೇಳಿದೆ. 10 ದೇಶಗಳ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಗಳಲ್ಲಿ ಯುಪಿಐ ಸೌಲಭ್ಯ ದೊರೆಯಲಿದೆ. ಮುಂದಿನ ದಿನಗಳಲ್ಲಿ ಹೆಚ್ಚು ದೇಶಗಳನ್ನು ಈ ವ್ಯಾಪ್ತಿಗೆ ತರಲಾಗುವುದು ಎಂದು ಎನ್​ಸಿಪಿಐ ತಿಳಿಸಿದೆ.

ಈ ದೇಶಗಳಲ್ಲಿ ಸಿಗಲಿದೆ ಯುಪಿಐ ಸೌಲಭ್ಯ

ಅಮೆರಿಕ, ಯುಕೆ, ಸಿಂಗಾಪುರ, ಕೆನಡಾ, ಆಸ್ಟ್ರೇಲಿಯಾ, ಒಮಾನ್, ಕತಾರ್, ಯುಎಇ, ಸೌದಿ ಅರೇಬಿಯಾ ಮತ್ತು ಹಾಂಗ್​ಕಾಂಗ್​ನಲ್ಲಿ ಅನಿವಾಸಿ ಭಾರತೀಯರಿಗೆ ಯುಪಿಐ ಸೌಲಭ್ಯ ಸಿಗಲಿದೆ. ಈ ದೇಶಗಳಲ್ಲಿರುವ ಅನಿವಾಸಿ ಭಾರತೀಯರು ಅಥವಾ ಭಾರತೀಯ ಮೂಲದವರು ಎನ್​ಆರ್​ಇ ಖಾತೆಗಳ ಮೂಲಕ ಪಾವತಿ ಮಾಡಬಹುದು ಎಂದು ಎನ್​ಸಿಪಿಐ ಹೇಳಿದೆ.

ಇದನ್ನು ಓದಿ: UPI Payment: ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆ ಅಳವಡಿಕೆಗೆ ಹಲವು ದೇಶಗಳ ಒಲವು

ಹಲವು ದೇಶಗಳು ಯುಪಿಐ ಪಾವತಿ ವಿಧಾನ ಅಳವಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಈ ಕುರಿತು ಎನ್​ಸಿಪಿಐ ಸಿಇಒ ಮತ್ತು ಎಂಡಿ ದಿಲೀಪ್ ಆಸ್ಬೇ ಮಾಹಿತಿ ನೀಡಿದ್ದರು. ಯುಪಿಐ ವ್ಯವಸ್ಥೆ ಅಳವಡಿಸಿಕೊಳ್ಳಲು ಬಯಸುವ ದೇಶಗಳಿಗೆ ಭಾರತ ತಂತ್ರಾಂಶ ಮತ್ತಿತರ ತಂತ್ರಜ್ಞಾನ ನೆರವು ಒದಗಿಸುತ್ತದೆ ಎಂದೂ ಅವರು ಹೇಳಿದ್ದರು. ಸಿಂಗಾಪುರದ ಪೇ ನೌ ಮತ್ತು ಭಾರತದ ಯುಪಿಐ ನಡುವೆ ಸಮನ್ವಯತೆ ತರುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂಬ ಕುರಿತೂ ಇತ್ತೀಚೆಗೆ ವರದಿಯಾಗಿತ್ತು.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:19 am, Thu, 12 January 23

ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ