Budget 2023: ಸಿಂಗಲ್ ಬ್ಯುಸಿನೆಸ್ ಐಡಿಯಾಗಿ ಪ್ಯಾನ್; ಸಿಂಗಲ್ ವಿಂಡೋ ಸಿಸ್ಟಂ ಎಂಬ ಗೇಮ್ ಚೇಂಜರ್

ಸದ್ಯ ಇರುವ ವ್ಯವಸ್ಥೆಯಲ್ಲಿ ಇಪಿಎಫ್ಒ, ಇಸಿಐಸಿ, ಜಿಎಸ್ಟಿಎನ್, ಟಿಐಎನ್, ಟಿಎಎನ್, ಪಿಎಎನ್ (ಪ್ಯಾನ್) ಮೊದಲಾದ 13 ಬ್ಯುಸಿನೆಸ್ ಐಡಿಗಳಿವೆ. ವಿವಿಧ ಸರ್ಕಾರಿ ಇಲಾಖೆಗಳ ಅನುಮೋದನೆಗಾಗಿ ಉದ್ಯಮಿಗಳು ಈ ಐಡಿಗಳನ್ನು ಬಳಸುತ್ತಿದ್ದಾರೆ. ಈ 13 ಐಡಿ ಬದಲು ಪ್ಯಾನ್ ಅನ್ನು ಮಾತ್ರವೇ ಐಡಿಯಾಗಿ ಬಳಸಲಾಗುವಂತೆ ಈಗ ಬದಲಾವಣೆ ತರಲಾಗುತ್ತಿದೆ.

Budget 2023: ಸಿಂಗಲ್ ಬ್ಯುಸಿನೆಸ್ ಐಡಿಯಾಗಿ ಪ್ಯಾನ್; ಸಿಂಗಲ್ ವಿಂಡೋ ಸಿಸ್ಟಂ ಎಂಬ ಗೇಮ್ ಚೇಂಜರ್
ಪ್ಯಾನ್ ಕಾರ್ಡ್
Follow us
TV9 Web
| Updated By: Ganapathi Sharma

Updated on: Jan 12, 2023 | 12:36 PM

ನವದೆಹಲಿ: ಉದ್ಯಮ ಪೂರಕ ವಾತಾವರಣ ನಿರ್ಮಾಣಕ್ಕೆ (Ease of doing business) ಮತ್ತು ವಿವಿಧ ಅನುಮೋದನೆಗಳಿಗೆ ಏಕಗವಾಕ್ಷಿ ವ್ಯವಸ್ಥೆಯಾಗಿರುವ ನ್ಯಾಷನಲ್ ಸಿಂಗಲ್ ವಿಂಡೋ ಸಿಸ್ಟಂನಲ್ಲಿ (National Single Window System) ಕೆಲ ಮಹತ್ವದ ಸುಧಾರಣೆಗಳನ್ನು ತರಲು ಸರ್ಕಾರ ಮುಂದಾಗಿದೆ. ಕೆಲ ಮಾಧ್ಯಮಗಳ ವರದಿಗಳ ಪ್ರಕಾರ ಈ ಬಾರಿಯ ಕೇಂದ್ರೀಯ ಬಜೆಟ್ (Union budget 2023-24) ನಲ್ಲಿ ಪ್ಯಾನ್ ನಂಬರ್ (PAN) ಅನ್ನು ಸಿಂಗಲ್ ಅಥವಾ ಏಕಮಾತ್ರ ಬ್ಯುಸಿನೆಸ್ ಐಡಿಯಾಗಿ (Single Business ID) ಬಳಸಲಾಗುವಂತೆ ಕಾನೂನು ರೂಪಿಸುವ ನಿರೀಕ್ಷೆ ಇದೆ. ಈ ಮೂಲಕ ಒಂದು ಸಂಸ್ಥೆಯು ವಿವಿಧ ಸರ್ಕಾರಿ ಇಲಾಖೆಗಳಿಂದ ಅನುಮೋದನೆಗಳನ್ನು ಪಡೆಯಲು ತನ್ನ ಪ್ಯಾನ್ ನಂಬರ್ ಅನ್ನು ಐಡಿಯಾಗಿ ಬಳಸಬಹುದಾಗಿದೆ.

ಸದ್ಯ ಇರುವ ವ್ಯವಸ್ಥೆಯಲ್ಲಿ ಇಪಿಎಫ್ಒ, ಇಸಿಐಸಿ, ಜಿಎಸ್ಟಿಎನ್ (GSTN), ಟಿಐಎನ್, ಟಿಎಎನ್, ಪಿಎಎನ್ (ಪ್ಯಾನ್) ಮೊದಲಾದ 13 ಬ್ಯುಸಿನೆಸ್ ಐಡಿಗಳಿವೆ. ವಿವಿಧ ಸರ್ಕಾರಿ ಇಲಾಖೆಗಳ ಅನುಮೋದನೆಗಾಗಿ ಉದ್ಯಮಿಗಳು ಈ ಐಡಿಗಳನ್ನು ಬಳಸುತ್ತಿದ್ದಾರೆ. ಈ 13 ಐಡಿ ಬದಲು ಪ್ಯಾನ್ ಅನ್ನು ಮಾತ್ರವೇ ಐಡಿಯಾಗಿ ಬಳಸಲಾಗುವಂತೆ ಈಗ ಬದಲಾವಣೆ ತರಲಾಗುತ್ತಿದೆ. ಪ್ಯಾನ್ ನಂಬರ್ ಅನ್ನು ಇಪಿಎಫ್ಒ, ಟಿಎಎನ್ ಇತ್ಯಾದಿ ಇತರ ಬ್ಯುಸಿನೆಸ್ ಐಡಿಗಳೊಂದಿಗೆ ಮ್ಯಾಪಿಂಗ್ ಮಾಡಲಾಗುತ್ತದೆ. ಹೀಗಾಗಿ, ಪ್ಯಾನ್ ನಂಬರ್ ಮಾತ್ರವೇ ಐಡಿಯಾಗಿ ಬಳಸಲು ಸಾಧ್ಯವಾಗುತ್ತದೆ.

ಏನಿದು ಪ್ಯಾನ್?

ಪ್ಯಾನ್ ಎಂದರೆ ಪರ್ಮನೆಂಟ್ ಅಕೌಂಟ್ ನಂಬರ್. 10 ಅಂಕಿಗಳಿರುವ (ಅಕ್ಷರ ಮತ್ತು ಸಂಖ್ಯೆಗಳ ಮಿಶ್ರಣ) ಕಾರ್ಡ್ ಇದು. ಬ್ಯಾಂಕ್ ಖಾತೆ ಆರಂಭಿಸಲು ಮತ್ತಿತರ ಕಾರ್ಯಕ್ಕಾಗಿ ಆಧಾರ್ ಜೊತೆ ಮತ್ತೊಂದು ಪ್ರಮುಖ ದಾಖಲೆಯಾಗಿ ಪ್ಯಾನ್ ಕಾರ್ಡ್ ಕೊಡಲಾಗುತ್ತದೆ. ಈಗ ಆಧಾರ್ ಜೊತೆ ಪ್ಯಾನ್ ಅನ್ನು ಜೋಡಿಸುವುದು ಕಡ್ಡಾಯ ಮಾಡಲಾಗಿದೆ. 50 ಸಾವಿರಕ್ಕೂ ಹೆಚ್ಚು ಮೊತ್ತದ ಯಾವುದೇ ವಹಿವಾಟು ಮಾಡಬೇಕಿದ್ದರೂ ಪ್ಯಾನ್ ದಾಖಲೆ ಸಲ್ಲಿಸುವುದು ಅವಶ್ಯಕ. ವ್ಯಕ್ತಿಗಳು ವೈಯಕ್ತಿಕವಾಗಿ ಪ್ಯಾನ್ ಕಾರ್ಡ್ ಜೊಂದಿರಬೇಕು. ಹಾಗೆಯೇ ವ್ಯವಹಾರ ಸಂಸ್ಥೆಗಳೂ ಕೂಡ ಪ್ರತ್ಯೇಕ ಪ್ಯಾನ್ ಹೊಂದಿರಬೇಕು.

ನ್ಯಾಷನಲ್ ಸಿಂಗಲ್ ವಿಂಡೋ ಸಿಸ್ಟಂ

ಸರ್ಕಾರಿ ಇಲಾಖೆಗಳಿಂದ ಹೆಚ್ಚು ತೊಡಕಿಲ್ಲದೇ ಉದ್ಯಮಗಳು ಸುಗಮವಾಗಿ ಸಾಗುವಂತಾಗಲು ಸರ್ಕಾರ ನಿರಂತರವಾಗಿ ಸುಧಾರಣೆಗಳನ್ನು ತರುವ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಾಷನಲ್ ಸಿಂಗಲ್ ವಿಂಡೋ ಸಿಸ್ಟಂ ಮಹತ್ವದ ಹೆಜ್ಜೆಯಾಗಿದೆ. ಸದ್ಯ ಇದು ಪ್ರಾಯೋಗಿಕ ಹಂತದಲ್ಲಿದ್ದು, ಸಕಾರಾತ್ಮಕ ಎನಿಸುವಷ್ಟು ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: Budget 2023: ಬಜೆಟ್​ ಮೇಲೆ ಚಳಿ ಪ್ರಭಾವ; ಗೋಧಿ, ಅಕ್ಕಿ, ಖಾದ್ಯತೈಲದ ಬೆಲೆ ಇಳಿಕೆ ಸಾಧ್ಯತೆ

ಹೂಡಿಕೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಂದ ಅನುಮೋದನೆಗಳನ್ನು ಪಡೆಯಲು ಎನ್ಎಸ್ಡಬ್ಲ್ಯೂಎಸ್ ಒಂದು ರೀತಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯಾಗಿದೆ. ತಮ್ಮ ವ್ಯವಹಾರಗಳಿಗೆ ಯಾವೆಲ್ಲಾ ಅನುಮೋದನೆಗಳ ಅವಶ್ಯಕತೆ ಇದೆ ಎಂಬುದನ್ನು ಇಲ್ಲಿಯೇ ಕಂಡುಕೊಂಡು, ಅರ್ಜಿಯನ್ನೂ ಸಲ್ಲಿಸಿ ಬಹಳ ಕ್ಷಿಪ್ರವಾಗಿ ಅನುಮೋದನೆ ಪಡೆಯಬಹುದು. ಮೊದಲಾದರೆ ಸರ್ಕಾರಿ ಇಲಾಖೆಗಳ ಕಚೇರಿಗಳಿಗೆ ಹೋಗಿ ಅಲ್ಲಿ ಅರ್ಜಿ ಭರ್ತಿ ಮಾಡಿ ಅನುಮೋದನೆ ಪಡೆಯಬೇಕಿತ್ತು. ಕೆಲವೊಮ್ಮೆ ಬೇರೆ ಬೇರೆ ರಾಜ್ಯಗಳ ಇಲಾಖೆಗಳ ಅನುಮೋದನೆ ಪಡೆಯಲು ಆ ರಾಜ್ಯಗಳಿಗೆ ಹೋಗಬೇಕಿತ್ತು. ಈಗ ಎಲ್ಲವೂ ಒಂದೇ ಕಡೆ ಕೂಡ ಈ ಕೆಲಸ ಮಾಡಬಹುದು.

ನ್ಯಾಷನಲ್ ಸಿಂಗಲ್ ವಿಂಡೋ ಸಿಸ್ಟಂನಲ್ಲಿ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗು 27 ಕೇಂದ್ರೀಯ ಸರ್ಕಾರಿ ಇಲಾಖೆಗಳು ಜೋಡಿತವಾಗಿವೆ. ಸದ್ಯದಲ್ಲೇ ಇನ್ನೂ ಐದು ರಾಜ್ಯಗಳು ಇದರ ಅಡಿಗೆ ಬರುತ್ತವೆ. ಇಷ್ಟೂ ರಾಜ್ಯಗಳು ಮತ್ತು ಇಲಾಖೆಗಳ ಅನುಮೋದನೆಯನ್ನು ಎನ್ ಎಸ್ ಡಬ್ಲ್ಯೂ ಎಸ್ ಪ್ಲಾಟ್ ಫಾರ್ಮ್ ನಲ್ಲೇ ಪಡೆಯಬಹುದು.

ನ್ಯಾಷನಲ್ ಸಿಂಗಲ್ ವಿಂಡೋ ಸಿಸ್ಟಂ ಕಾರ್ಯಕ್ಷಮತೆ ಶೇ. 99.32

ಕೇಂದ್ರ ವಾಣಿಜ್ಯ ಸಚಿವ ಪೀಯುಶ್ ಗೋಯಲ್ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ ನ್ಯಾಷನಲ್ ಸಿಂಗಲ್ ವಿಂಡೋ ಸಿಸ್ಟಂನಲ್ಲಿ ಪ್ರಾಯೋಗಿಕ ಹಂತದಲ್ಲಿ 76 ಸಾವಿರ ಅರ್ಜಿಗಳು ಸಂದಾಯವಾಗಿವೆ. ಅವುಗಳ ಪೈಕಿ 48 ಸಾವಿರ ಅರ್ಜಿಗಳಿಗೆ ಅನುಮೋದನೆ ಸಿಕ್ಕಿವೆ. ತಾಂತ್ರಿಕ ಸಮಸ್ಯೆಗಳಿಂದ ಅನುಮೋದನೆ ಪಡೆಯದೇ ಉಳಿದ ಅರ್ಜಿಗಳ ಸಂಖ್ಯೆ 514 ಮಾತ್ರ. ಈ ವ್ಯವಸ್ಥೆ ಶೇ. 99.32ರಷ್ಟು ಪರಿಣಾಮಕಾರಿಯಾಗಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದರು.

ಇದನ್ನೂ ಓದಿ: Budget 2023: 35 ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಳ ಸಾಧ್ಯತೆ; ಯಾವ್ಯಾವುದರ ಬೆಲೆ ಹೆಚ್ಚಾಗಲಿದೆ?

ಈಗ ಪ್ಯಾನ್ ಅನ್ನು ಸಿಂಗಲ್ ಬ್ಯುಸಿನೆಸ್ ಐಡಿಯಾಗಿ ಮಾಡುವುದರಿಂದ ಅರ್ಜಿಗಳ ಡೂಪ್ಲಿಕೇಶನ್ ತಪ್ಪುತ್ತದೆ. ಒಂದು ವಿವಿಧ ಇಲಾಖೆಗಳ ಅನುಮೋದನೆಗೆ ವಿವಿಧ ಬ್ಯುಸಿನೆಸ್ ಐಡಿಗಳನ್ನು ನೀಡುವ ಗೊಂದಲ ತಪ್ಪುತ್ತದೆ. ಎಲ್ಲಾ ಬ್ಯುಸಿನೆಸ್ ಐಡಿಗಳಿಗೂ ಪ್ಯಾನ್ ಅನ್ನು ಮ್ಯಾಪಿಂಗ್ ಮಾಡಲಾಗುವುದರಿಂದ ವ್ಯವಸ್ಥೆ ಸರಳಗೊಳ್ಳುತ್ತದೆ. ಹಾಗೆಯೇ ಒಂದು ಸಂಸ್ಥೆಯ ಪ್ಯಾನ್ ನಂಬರಿನಲ್ಲಿ ಆ ಕಂಪನಿಯ ವಿಳಾಸ, ನಿರ್ದೇಶಕರು ಇತ್ಯಾದಿ ಹಲವು ಮಾಹಿತಿಯು ಪ್ಯಾನ್ ಡಾಟಾಬೇಸ್ ನಲ್ಲಿ ಅಡಕವಾಗಿರುತ್ತದೆ. ಪ್ಯಾನ್ ಅನ್ನು ಐಡಿಯಾಗಿ ಬಳಸಿ ಆನ್ಲೈನಿನಲ್ಲಿ ಅರ್ಜಿ ತುಂಬುವಾಗ ಇಂಥ ಹಲವು ಮಾಹಿತಿ ಸ್ವಯಂ ಆಗಿಯೇ ಭರ್ತಿ ಆಗಿರುತ್ತದೆ. ಹೀಗಾಗಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡ ತುಸು ಚುರುಕಾಗಿ ಆಗಿ ಹೋಗುತ್ತದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ