Budget 2023: ಬಜೆಟ್​ ಮೇಲೆ ಚಳಿ ಪ್ರಭಾವ; ಗೋಧಿ, ಅಕ್ಕಿ, ಖಾದ್ಯತೈಲದ ಬೆಲೆ ಇಳಿಕೆ ಸಾಧ್ಯತೆ

Food Inflation: ಉತ್ತರ ಭಾರತದಲ್ಲಿ ಚಳಿಗಾಲದ ಮುಖ್ಯ ಬೆಳೆಯಾದ ಗೋಧಿ ಈ ವರ್ಷ ಬಂಪರ್ ಫಸಲು ಕೊಡಬಹುದು ಎಂದು ನಿರೀಕ್ಷಿಸಲಾಗಿದೆ.

Budget 2023: ಬಜೆಟ್​ ಮೇಲೆ ಚಳಿ ಪ್ರಭಾವ; ಗೋಧಿ, ಅಕ್ಕಿ, ಖಾದ್ಯತೈಲದ ಬೆಲೆ ಇಳಿಕೆ ಸಾಧ್ಯತೆ
ಈ ಬಾರಿ ಬಂಪರ್ ಗೋಧಿ ಫಸಲು ನಿರೀಕ್ಷಿಸಲಾಗಿದೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 11, 2023 | 9:08 AM

ಬೆಂಗಳೂರು: ಈ ವರ್ಷ ಭಾರತದಾದ್ಯಂತ ಚಳಿಯ ಪ್ರಮಾಣ (Winter) ವಾಡಿಕೆಗಿಂತಲೂ ಹೆಚ್ಚಾಗಿದೆ. ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆಏರಿಕೆಯಿಂದ (Food Inflation) ತತ್ತರಿಸಿರುವ ದೇಶಕ್ಕೆ ಇದು ವರದಾನವಾಗಬಲ್ಲದು ಎಂದೇ ಕೃಷಿ ಅರ್ಥಶಾಸ್ತ್ರಜ್ಞರು ಹಾಗೂ ಕೃಷಿ ಹವಾಮಾನ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಚಳಿಗಾಲದ ಮುಖ್ಯ ಬೆಳೆಯಾದ ಗೋಧಿ ಈ ವರ್ಷ ಬಂಪರ್ ಫಸಲು ಕೊಡಬಹುದು ಎಂದು ನಿರೀಕ್ಷಿಸಲಾಗಿದೆ. ಹಲವು ರಾಜ್ಯಗಳ ಆರ್ಥಿಕ ವಿದ್ಯಮಾನಗಳ ಮೇಲೆ ಪರಿಣಾಮ ಬೀರುವ ಸಾಸಿವೆ ಬೆಳೆಯ ಇಳುವರಿಯೂ ಹೆಚ್ಚಾಗಲಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಕೇಂದ್ರ ಮತ್ತು ಹಲವು ರಾಜ್ಯಗಳ ಬಜೆಟ್ (Budget 2023)​ ಸಿದ್ಧತೆ ಪ್ರಕ್ರಿಯೆ ಚುರುಕಾಗಿರುವ ಸಂದರ್ಭದಲ್ಲಿ ವರದಿಯಾಗಿರುವ ಈ ವಿದ್ಯಮಾನಗಳು ಹಣಕಾಸು ಸಚಿವಾಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ದೇಶದ ಒಟ್ಟಾರೆ ಆಹಾರ ಉತ್ಪಾದನೆಯಲ್ಲಿ ಚಳಿಗಾಲದ ಬೆಳೆಗಳು ಅರ್ಧದಷ್ಟು ಪಾಲು ಹೊಂದಿವೆ. ಚಳಿಗಾಲದ ಬೆಳೆ ಸೊಂಪಾಗಿ ಬಂದರೆ ಆಹಾರ ಹಣದುಬ್ಬರ ಕಡಿಮೆಯಾಗುವುದರೊಂದಿಗೆ ಆಹಾರದ ಬೆಲೆಗಳು ಇಳಿಮುಖವಾಗಬಹುದು. ಬೆಲೆಏರಿಕೆಯಿಂದ ಕಂಗಾಲಾಗಿರುವ ಮಧ್ಯಮ ವರ್ಗಕ್ಕೆ ಇದೊಂದು ವರದಾನವೇ ಆಗಬಹುದು ಎಂದು ಹೇಳಲಾಗಿದೆ. ಕಳೆದ ವರ್ಷ ಪ್ರಮುಖ ಆಹಾರ ಬೆಳೆಗಳಾದ ಅಕ್ಕಿ ಮತ್ತು ಗೋಧಿ ಹವಾಮಾನ ವೈಪರಿತ್ಯದಿಂದಾಗಿ ನಿರೀಕ್ಷಿತ ಇಳುವರಿ ನೀಡಿರಲಿಲ್ಲ. ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಒಟ್ಟಾರೆ ಜಾಗತಿಕ ಆಹಾರ ಪೂರೈಕೆ ಸರಪಳಿಯ ಕೊಂಡಿ ಕಳಚಿತ್ತು. ಭಾರತದ ಮೇಲೆಯೂ ಪರಿಣಾಮ ಬೀರಿದ್ದ ಈ ಬೆಳವಣಿಗೆಗಳು ಆಹಾರ ಹಣದುಬ್ಬರಕ್ಕೆ ಕಾರಣವಾಗಿತ್ತು.

ಗೋಧಿಯನ್ನು ಗಮನಾರ್ಹ ಪ್ರಮಣದಲ್ಲಿ ಬೆಳೆಯುವ ರಾಜ್ಯಗಳಾದ ಪಂಜಾಬ್, ಮಧ್ಯಪ್ರದೇಶ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ಇದು ಗೋಧಿಗೆ ಮಾತ್ರವಲ್ಲದೇ ಇತರ ಪ್ರಮುಖ ಬೆಳಗಳಾದ ಬಾರ್ಲಿ, ಜೋಳ, ಕಾಳುಗಳು ಮತ್ತು ಖಾದ್ಯತೈಲಗಳಿಗೆ ಬಳಕೆಯಾಗುವ ಎಣ್ಣೆಬೀಜಗಳಿಗೂ ಪೂರಕ ಎಂದು ಕೃಷಿ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗೋಧಿ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳದ ನಿರೀಕ್ಷೆ

‘ಈ ವರ್ಷ ದೇಶದಲ್ಲಿ ಸುಮಾರು 11.5 ಕೋಟಿ ಟನ್​ಗಳಷ್ಟು ಗೋಧಿ ಉತ್ಪಾದನೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಬೆಳೆಯ ಉತ್ತಮ ಬೆಳವಣಿಗೆಗೆ ಚಳಿಯು ಪೂರಕ ವಾತಾವರಣ ಕಲ್ಪಿಸಿಕೊಟ್ಟಿದೆ. ಕಳೆದ ವರ್ಷ ಗೋಧಿಯ ಬೆಲೆ ಹೆಚ್ಚಾಗಿದ್ದರಿಂದ ರೈತರು ಬೆಳೆ ಪ್ರದೇಶವನ್ನೂ ವಿಸ್ತರಿಸಿದ್ದಾರೆ. 2022ರ ಮಾರ್ಚ್​ ತಿಂಗಳಲ್ಲಿ ಬೀಸಿದ್ದ ಬಿಸಿಗಾಳಿಯಿಂದ ಕಳೆದ ವರ್ಷದ ಇಳುವರಿ ಕಡಿಮೆಯಾಗಿತ್ತು. ಕಳೆದ ವರ್ಷ ಕೇವಲ 10.6 ಕೋಟಿ ಟನ್ ಇಳುವರಿಯಷ್ಟೇ ಬಂದಿತ್ತು. 2021ರಲ್ಲಿ ಭಾರತದಲ್ಲಿ ಉತ್ಪಾದನೆಯಾಗಿದ್ದ ಗೋಧಿಯ ಪ್ರಮಾಣ 10.9 ಕೋಟಿ ಟನ್. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡರೆ ಈ ವರ್ಷದ (2023) ಉತ್ತಮ ಇಳುವರಿಯು ಆರ್ಥಿಕತೆಯ ಚೇತರಿಕೆಗೆ ಏಕೆ ಮುಖ್ಯ ಎನ್ನುವುದು ಅರ್ಥವಾಗುತ್ತದೆ’ ಎನ್ನುತ್ತಾರೆ ‘ಐಗ್ರೇನ್’ ಇಂಡಿಯಾದ ವಿಶ್ಲೇಷಕ ರಾಹುಲ್ ಚೌಹಾಣ್.

ಕಳೆದ ಮಳೆ ವೈಪರಿತ್ಯದಿಂದಾಗಿ ಭತ್ತದ ಉತ್ಪಾದನೆಯೂ ಶೇ 6ರಷ್ಟು ಕಡಿಮೆಯಾಗಿತ್ತು. ಗೋಧಿ ಮತ್ತು ಭತ್ತದ ಉತ್ಪಾದನೆ ಕಡಿಮೆಯಾಗುವ ವರ್ಷಗಳಲ್ಲಿ ಒಟ್ಟಾರೆಯಾಗಿ ಎಲ್ಲ ಬಗೆಯ ಆಹಾರ ವಸ್ತುಗಳ ಬೆಲೆಗಳೂ ಹೆಚ್ಚಾಗುತ್ತವೆ. ಭಾರತದಲ್ಲಿ ಎದುರಾಗಿದ್ದ ಆಹಾರ ಹಣದುಬ್ಬರಕ್ಕೆ ಜಾಗತಿಕ ವಿದ್ಯಮಾನಗಳೊಂದಿಗೆ ಸ್ಥಳೀಯವಾಗಿ ಇಳುವರಿ ಕಡಿಮೆಯಾಗಿದ್ದೂ ಮುಖ್ಯ ಕಾರಣವಾಗಿತ್ತು.

ಕಳೆದ ನವೆಂಬರ್​ನಲ್ಲಿ ಗೋಧಿ ಬೆಲೆ ಏಕಾಏಕಿ 19.67ರಷ್ಟು ಹೆಚ್ಚಾಗಿ ದಾಖಲೆ ಬರೆದಿತ್ತು. ಇದೀಗ ಉತ್ತಮ ಇಳುವರಿಯ ಭರವಸೆ ಸಿಕ್ಕಿರುವುರಿಂದ ಗೋಧಿ ಬೆಲೆಯು ಶೇ 4.67ರಷ್ಟು ಕಡಿಮೆಯಾಗಿದೆ. ಬಜೆಟ್​ಗೆ ಮುನ್ನ ಇಂಥದ್ದೊಂದು ಬೆಳವಣಿಗೆ ದಾಖಲಾಗಿರುವುದು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೆ ನೆಮ್ಮದಿ ತಂದಿದೆ.

ಈ ವರ್ಷ ರೈತರು 3.32 ಕೋಟಿ ಹೆಕ್ಟೇರ್​ಗಳಲ್ಲಿ ಗೋಧಿಯನ್ನು ಬೆಳೆದಿದ್ದರು. ವಾಡಿಕೆಯಂತೆ ನಮ್ಮ ದೇಶದಲ್ಲಿ 3.02 ಕೋಟಿ ಹೆಕ್ಟೇರ್​ ಪ್ರದೇಶದಲ್ಲಿ ಗೋಧಿ ಬಿತ್ತುವುದು ವಾಡಿಕೆ. ಈ ಲೆಕ್ಕಾಚಾರದಂತೆ ಒಟ್ಟಾರೆ ಶೇ 9ರಷ್ಟು ಹೆಚ್ಚಿನ ವಿಸ್ತೀರ್ಣದಲ್ಲಿ ಗೋಧಿ ಬೆಳೆದಂತೆ ಆಗಿದೆ ಎಂದು ಕೃಷಿ ಇಲಾಖೆಯ ದಾಖಲೆಗಳು ಹೇಳುತ್ತವೆ.

ಆಮದು ಮೇಲಿನ ಅವಲಂಬಲನೆಗೆ ಕಡಿವಾಣ

ಈ ವರ್ಷ ಎಣ್ಣೆಕಾಳುಗಳ ಇಳುವರಿಯೂ ಸುಧಾರಿಸುವ ನಿರೀಕ್ಷೆಯಿರುವುದರಿಂದ ಆಮದು ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಈ ವರ್ಷ ರೈತರು 10.5 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆದಿದ್ದಾರೆ. ವಾಡಿಕೆಯಂತೆ 7.6 ಕೋಟಿ ಹೆಕ್ಟೇರ್​ಗಳಲ್ಲಿ ಮಾತ್ರ ಎಣ್ಣೆಕಾಳು ಬಿತ್ತನೆ ಮಾಡಲಾಗುತ್ತಿತ್ತು. ಲಾಕ್​ಡೌನ್​ ನಂತರ ಕೆಲಸಗಳನ್ನು ಕಳೆದುಕೊಂಡು ನಗರಗಳಿಂದ ಹೊರಬಿದ್ದಿದ್ದ ಹಲವು ಯುವಕರು ಮತ್ತು ಕೃಷಿಯತ್ತ ಮುಖ ಮಾಡಿದ್ದಾರೆ. ಕರ್ನಾಟಕದಲ್ಲಿಯೂ ಬೀಳುಬಿದ್ದಿದ್ದ ಎಷ್ಟೋ ಜಮೀನುಗಳು ಮತ್ತೆ ಹಸನಾಗಿದೆ. ಈ ವರ್ಷ ಪ್ರಕೃತಿಯ ವರವೂ ಸಿಕ್ಕಿದ್ದರಿಂದ ಬಂಪರ್ ಇಳುವರಿ ನಿರೀಕ್ಷಿಸಲಾಗಿದೆ.

‘ಭಾರತದಲ್ಲಿ ಕೃಷಿ ಉತ್ಪನ್ನಗಳ ಇಳುವರಿಯ ಮೇಲೆ ಹವಾಮಾನ ಗಮನಾರ್ಹ ಪರಿಣಾಮ ಬೀರುತ್ತದೆ. ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ತಂಪು ವಾತಾವರಣ ಇರುವುದು ಉತ್ತಮ ಇಳುವರಿಗೆ ಅತ್ಯಗತ್ಯ’ ಎಂಬ ಹವಾಮಾನ ಇಲಾಖೆಯ ನಿವೃತ್ತ ವಿಜ್ಞಾನಿ ಎ.ಕೆ.ಸಹ್​ನಾಯ್ ಅವರ ಅಭಿಪ್ರಾಯವನ್ನು ‘ಹಿಂದೂಸ್ತಾನ್ ಟೈಮ್ಸ್’ ಜಾಲತಾಣ ಪ್ರಕಟಿಸಿದೆ.

ಇದನ್ನೂ ಓದಿ: Union Budget 2023: ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್; ನಿರ್ಮಲಾ ಸೀತಾರಾಮನ್

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 am, Wed, 11 January 23

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ